ಪ್ರಮುಖರ ಗೈರು ಹಾಜರಿಯಲ್ಲಿ ಅರ್ಜು-ನ ಪ್ರಶಸ್ತಿ ಪ್ರದಾನ ಸಮಾರಂಭ

ನವದೆಹಲಿ : -ಕ-ರ್ನಾ-ಟಕ-ದ ಈಜುಗಾರ್ತಿ ನಿಷಾ ಮಿಲ್ಲೆಟ್‌, ಅಂಗವಿಕಲ ಅಥ್ಲೀಟ್‌ ವೆಂಕಟರವಣಪ್ಪ ಹಾಗೂ ಗಾಲ್ಫರ್‌ ಚಿರಂಜೀವ್‌ ಮಿ-ಲ್ಖಾಸಿಂಗ್‌, ಬ್ಯಾಡ್‌ಮಿಂಟನ್‌ ಸ್ಟಾರ್‌ -ಪಿ. ಗೋಪಿಚಂ-ದ್‌ ಸೇರಿದಂತೆ 27 ಕ್ರೀಡಾ ಪಟುಗಳಿಗೆ ರಾಷ್ಟ್ರಪತಿ ಕೆ.ಆರ್‌. ನಾರಾಯಣ್‌ ರಾಷ್ಟ್ರದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಗಳನ್ನು ವಿತರಿಸಿದರು.

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಈ ಸಮಾರಂಭ ಪ್ರತಿ ವರ್ಷದಷ್ಟು ರಂಗಾಗಿರಲಿಲ್ಲ. ಸಿಡ್ನಿ ಒಲಂಪಿಕ್ಸ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿರುವ ಹಾಕಿ ಫಾರ್ವರ್ಡ್‌ ಆಟಗಾರ ಧನರಾಜ್‌ ಪಿಳ್ಳೈ ಹಾಗೂ ನಾಯಕ ರಮಣ್‌ದೀಪ್‌ ಸಿಂಗ್‌ ಕೊರತೆ ಸಭೆಯ ಮೆರುಗು ಮಾಸಲು ಕಾರಣವಾಗಿತ್ತು. ಅಥ್ಲೀಟ್‌ಗಳಾದ ಗುಲಬ್‌ ಚಂದ್‌ ಮತ್ತು ಗುರ್‌ಮೀತ್‌ ಕೌರ್‌, ಜಕಾರ್ತದಲ್ಲಿ ನಡೆಯುತ್ತಿರುವ ಟ್ರಾಕ್‌ ಮತ್ತು ಫೀಲ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಲು ತೆರಳಿದ್ದು, ತಾವೇ ಸ್ವತಃ ಪ್ರಶಸ್ತಿ ಸ್ವೀಕರಿಸುವ ಭಾಗ್ಯದಿಂದ ವಂಚಿತರಾದರು.

ಖೇಲ್‌ ರತ್ನ, ದ್ರೋಣಾಚಾರ್ಯ ಪ್ರಶಸ್ತಿ : ರಾಜೀವ್‌ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಧನರಾಜ್‌ ಪಿಳ್ಳೈ ಪರವಾಗಿ ಅವರ ತಾಯಿ ಅಂಡಾಳಮ್ಮ ಪ್ರಶಸ್ತಿ ಸ್ವೀಕರಿಸಿದರು. ಬ್ಯಾಂಕಾಕ್‌ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ ಭಾರತದ ಹೆಸರಾಂತ ಹೆವಿವೇಯ್ಟ್‌ ಚಾಂಪಿಯನ್‌ ಹವಾ ಸಿಂಗ್‌ ಆಗಸ್ಟ್‌ 14ರಂದು ನಿಧನರಾಗಿದ್ದು, ಅವರಿಗೆ ಸಿಕ್ಕಿರುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪತ್ನಿ ಅಂಗೂರಿ ದೇವಿ ಸ್ವೀಕರಿಸಿದರು. ಅಥ್ಲೀಟ್‌ ಕೆನೆತ್‌ ಓವನ್‌ ಬೋಸೆನ್‌ ಹಾಗೂ ವೇಯ್ಟ್‌ ಲಿಫ್ಟರ್‌ ಅಜಯ್‌ ಸಿರೋಹಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಇನ್ನಿಬ್ಬರು. ಗುರು ದ್ರೋಣಾಚಾರ್ಯರ ಪ್ರತಿಮೆ, ನೆನಪಿನ ಕಾಣಿಕೆಯ ಸಹಿತ 2.5 ಲಕ್ಷ ರುಪಾಯಿ ಬಹುಮಾನ ನೀಡಲಾಯಿತು.

ಹಿರಿಯರಿಗೆ ಖುಷಿ : ಗಾಲ್ಫರ್‌ ಚಿರಂಜೀವ್‌ ಮಿಲ್ಕ ಸಿಂಗ್‌ ಹೇಳುವಂತೆ, ಇದು ಅವರ ಬದುಕಲ್ಲಿ ಮರೆಯಲಾಗದ ಅನುಭವ. ಅವರ ತಂದೆ, ಒಲಂಪಿಯನ್‌ ಮಿಲ್ಖಾಸಿಂಗ್‌, ‘ಇದು ಗಾಲ್ಫ್‌ಗೆ ಸಂದಿರುವ ಗೌರವ. ಮಾಜಿ ಆಟಗಾರರಿಗೂ ಪ್ರಶಸ್ತಿ ನೀಡಲು ಕ್ರೀಡಾ ಸಚಿವಾಲಯ ನಿರ್ಧರಿಸಿರುವುದು ಅಭಿನಂದನಾರ್ಹ’ ಎಂದರು. ಒಲಂಪಿಯನ್‌ ಹಾಗೂ ಹಿರಿಯ ಹಾಕಿ ಆಟಗಾರ ವಿ.ಜೆ. ಫಿಲಿಪ್ಸ್‌ಗೆ ತಡವಾಗಿಯಾದರೂ ತಮ್ಮ ಶ್ರಮ, ಸೇವೆಯನ್ನು ಸರ್ಕಾರ ಗುರುತಿಸಿರುವುದಕ್ಕೆ ಸಂತೋಷವಾಗಿದೆ.

ಪ್ರಶಸ್ತಿ ಪಡೆದ ಏಕೈಕ ಅಂಗವಿಕಲ ಪಟು : ಈ ಬಾರಿ ಅರ್ಜುನ ಪ್ರಶಸ್ತಿ ಪಡೆದ ಏಕೈಕ ಅಂಗವಿಕಲ ಕ್ರೀಡಾ ಪಟು ವೆಂಕಟರವಣಪ್ಪ. ಅರ್ಜುನನ ಕಂಚಿನ ಪ್ರತಿಮೆ, ನೆನಪಿನ ಕಾಣಿಕೆ ಹಾಗೂ 1.5 ಲಕ್ಷ ರುಪಾಯಿ ಅವರಿಗೆ ಸಿಕ್ಕಿತು. ಅಮೃತಸರದ ಗುರುನಾನಕ್‌ ದೇವ್‌ ವಿಶ್ವವಿದ್ಯಾಲಯ ಸತತ 3ನೇ ಬಾರಿಗೆ ಮೌಲಾನ ಅಬುಲ್‌ ಕಲಮ್‌ ಆಜಾದ್‌ ಟ್ರೋಫಿ ಪಡೆಯಿತು.

(ಯುಎನ್‌ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+