ಮುಕ್ತ ಟೆಂಡರ್: ಖಜಾನೆಗೆ 34 ಕೋಟಿ ರುಪಾಯಿ ಉಳಿತಾಯ
ಬೆಂಗಳೂರು : ಇತ್ತೀಚೆಗೆ ಹೊರಡಿಸಲಾದ ಮುಕ್ತ ಟೆಂಡರ್ ಸಂಬಂಧದ ಸುಗ್ರೀವಾಜ್ಞೆಯಿಂದ ಬೊಕ್ಕಸಕ್ಕೆ ಸುಮಾರು 34 ಕೋಟಿ ರುಪಾಯಿ ಉಳಿತಾಯವಾಗಲಿದೆ ಎಂದು ಭಾರಿ ನಿರಾವರಿ ಸಚಿವ ಎಚ್. ಕೆ. ಪಾಟೀಲ್ ಬುಧವಾರ ತಿಳಿಸಿದ್ದಾರೆ.
ಯುಕೆಪಿ ನಾಲೆ ಕಾಮಗಾರಿಗೆ ಸಂಬಂಧಿಸಿದಂತೆ, 11ನೇ ಕಿಲೋಮೀಟರ್‌ನಿಂದ 35ನೇ ಕಿಲೋಮೀಟರ್‌ವರೆಗಿನ ನಾಲಾ ನಿರ್ಮಾಣಕ್ಕೆ ಕಾಮಗಾರಿಯನ್ನು ಈ ಮುಂಚೆ 80 ಕೋಟಿ ರುಪಾಯಿಗಳಿಗೆ ನಿಗದಿಪಡಿಸಲಾಗಿತ್ತು. ಈಗಿನ ಮುಕ್ತ ಟೆಂಡರ್ ನೀತಿಯಿಂದ ಕಾಮಗಾರಿಗೆ 46 ಕೋಟಿ ನಿಗದಿಪಡಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ವಿವರಿಸಿದ್ದಾರೆ.
ಕಾಮಗಾರಿಗೆ ಹೆಚ್ಚುವರಿ ಅಂದಾಜು ವೆಚ್ಚ ಎಂದು ಈ ಮುಂಚೆ ವಿವಿಧ ಹಂತಗಳ ಎಂಜಿನಿಯರ್‌ಗಳು ಹೆಚ್ಚುವರಿ ಹಣ ನಿಗದಿಗೊಳಿಸಬಹುದಿತ್ತು, ಈಗ ಆ ನೀತಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಈಗಿನ ನಿಯಮದಂತೆ ಎಲ್ಲರಿಗೂ ಟೆಂಡರ್ ವಿವರಗಳು ದೊರೆಯುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಉಂಟಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೇಮಾವತಿ ಗುತ್ತಿಗೆ ತನಿಖೆ : ಹೇಮಾವತಿ ತುಂಡುಗುತ್ತಿಗೆ ಕಳಪೆ ಕಾಮಗಾರಿಗಳಲ್ಲಿ ಭಾಗಿಯಾಗಿರುವ 50 ಎಂಜಿನಿಯರ್‌ಗಳಿಗೆ ಸರಕಾರ ನೋಟಿಸ್ ನೀಡಿದೆ ಎಂದು ಸಚಿವರು ಹೇಳಿದ್ದಾರೆ. ಗುಣಮಟ್ಟ ಪರಿಕ್ಷಿಸದೆ 50 ಸಾವಿರದೊಳಗಿನ ಕಾಮಗಾರಿಗೆ ಗುಣಮಟ್ಟ ಪರೀಕ್ಷಿಸದಂತೆ ಸುತ್ತೋಲೆ ಹೊರಡಿಸಿದ ಮುಖ್ಯ ಎಂಜಿನಿಯರ್‌ಗೆ ಸರಕಾರ ಷೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications