ಕೇಂದ್ರ ಸಚಿವ ಪಿ.ಆರ್. ಕುಮಾರಮಂಗಳಂ ನಿಧನ
ನವದೆಹಲಿ: ಕೆಲಕಾಲದಿಂದ ಅಸ್ವಸ್ಥರಾಗಿದ್ದ ಕೇಂದ್ರ ಇಂಧನ ಖಾತೆ ಸಚಿವ ಪಿ.ಆರ್. ಕುಮಾರಮಂಗಳಂ ಬುಧವಾರ ಮುಂಜಾನೆ 4.40ಕ್ಕೆ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು .
ತೀವ್ರ ಜ್ವರದ ಕಾರಣವಾಗಿ ಆಗಸ್ಟ್ 12 ರಂದು ಎಐಐಎಂಎಸ್‌ಗೆ ಕುಮಾರಮಂಗಳಂ ಅವರನ್ನು ದಾಖಲು ಮಾಡಲಾಗಿತ್ತು. ವೈದ್ಯಕೀಯ ತಪಾಸಣೆಯ ನಂತರ ಅವರು ಲ್ಯುಕೇಮಿಯಾದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಸಂಸತ್ತಿನಲ್ಲಿ ತಮ್ಮ ಮಾತುಗಾರಿಕೆಯಿಂದ ಗಮನ ಸೆಳೆಯುತ್ತಿದ್ದ ಕುಮಾರಮಂಗಳಂ, ತಮಿಳುನಾಡಿನ ತಿರುಚನಾಪಳ್ಳಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಅವರು, ವಾಜಪೇಯಿ ಮಂತ್ರಿಮಂಡಲದ ಜನಪ್ರಿಯ ಮಂತ್ರಿಗಳಲ್ಲಿ ಒಬ್ಬರಾಗಿದ್ದರು.
ಪ್ರಧಾನಿ ಸಂತಾಪ : ಕುಮಾರಮಂಗಳಂ ಅವರ ನಿಧನಕ್ಕೆ ಪ್ರಧಾನಿ ಎ.ಬಿ. ವಾಜಪೇಯಿ ತೀವ್ರ ಶೋಕ ಹಾಗೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದೇಶ ಯುವ ನಾಯಕರೊಬ್ಬರನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ನಾನು ಗೆಳೆಯನೊಬ್ಬನನ್ನು ಕಳೆದುಕೊಂಡಿದ್ದೇನೆ ಎಂದು ಪ್ರಧಾನಿ ಶೋಕಿಸಿದ್ದಾರೆ.
(ಐಎ-ಎ--ನ್-ಎ-ಸ್)












Click it and Unblock the Notifications