ಉಕ್ಕಿ ಹರಿಯುತಿಹಳಿಲ್ಲಿ ಕಾವೇರಿ
ಮಡಿಕೇರಿ : ಕಾವೇರಿ ಈಗ ಮತ್ತೆ ಕಾವು ಏರಿ ಹರಿಯುತ್ತಿದ್ದಾಳೆ. ತಲಕಾವೇರಿಯ ಸುತ್ತ ಮುತ್ತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಲ್ಲಿ ಕಾವೇರಿ ಮೈದುಂಬಿ ಹರಿಯತೊಡಗಿದ್ದಾಳೆ. ಕೊಡಗು ಜಿಲ್ಲೆಯಾದ್ಯಂತ ಎಲ್ಲೆಡೆ ಸೊಗಸಾಗಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ತೀವ್ರವಾಗಿದೆ. ಕರಾವಳಿಯಲ್ಲಿ ಚುರುಕಾಗಿದೆ. ಸುರಿವ ಮಳೆ, ಹರಿವ ನದಿಗೆ ಅಂದ ನೀಡಿದೆ.
ರಭಸದಿಂದ ಹರಿಯುತಿರುವ ಕಾವೇರಿ ಕೆಲವೆಡೆ ಸೇತುವೆಯ ಮೇಲ್ಭಾಗದಲ್ಲೂ ಉಕ್ಕಿ ಹರಿಯುತ್ತಿದ್ದರೆ, ಸುರಿಯುತಿಹ ಮಳೆ ಕೆಲವೆಡೆ ಮನೆ ಕುಸಿತಕ್ಕೆ ಕಾರಣವಾಗಿದೆ. 48 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 5 ಸೆಂಟಿ ಮೀಟರ್, ಮಡಿಕೇರಿಯಲ್ಲಿ 8, ಸೋಮವಾರಪೇಟೆಯಲ್ಲಿ 7 ಹಾಗೂ ವೀರರಾಜಪೇಟೆಯಲ್ಲಿ 5 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಕಾವೇರಿ ಹಾಗೂ ಕಬಿನಿ ನದಿಗಳು ತುಂಬಿ ಹರಿಯುತ್ತಿವೆ.












Click it and Unblock the Notifications