ಗೋಪಾಲ್ ವಿರುದ್ಧ ಹೇಳಿಕೆ ನೀಡದಂತೆ ಜಯಾಗೆ ಕೋರ್ಟ್ ತಾಕೀತು
ಚೆನ್ನೈ : ರಾಜ್ ಅಪಹರಣ ಬಿಕ್ಕಟ್ಟಿನ ಸಂಧಾನಕಾರರಾಗಿರುವ ನಕ್ಕೀರನ್ ಗೋಪಾಲ್ ಅವರ ವಿರುದ್ದ ಯಾವುದೇ ಮಾನನಷ್ಟ ಆರೋಪಗಳನ್ನು ಮಾಡದಿರುವಂತೆ ತಮಿಳುನಾಡು ಹೈಕೋರ್ಟ್, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಬುಧವಾರ ತಾಕೀತು ಮಾಡಿದೆ.
ಈ ಸಂಬಂಧ ಮಧ್ಯಂತರ ತಡೆಯಾಜ್ಞೆ ಮತ್ತು ನೋಟಿಸ್ ಅನ್ನು ಜಾರಿ ಮಾಡಿರುವ ನ್ಯಾಯಮೂರ್ತಿ ಎ. ರಾಮಮೂರ್ತಿಅವರು, ಮೂರು ವಾರದೊಳಗೆ ಉತ್ತರಿಸುವಂತೆ ಜಯಾಗೆ ಸೂಚಿಸಿದ್ದಾರೆ. ಗೋಪಾಲ್ ಒಬ್ಬ ವೀರಪ್ಪನ್ ಏಜೆಂಟ್ ಹಾಗೂ ಮೋಸಗಾರ ಎಂದು ಜಯಲಲಿತಾ ಅವರು ಮಾಡಿದ ಟೀಕೆಗೆ 15 ಲಕ್ಷ ರುಪಾಯಿ ಪರಿಹಾರ ನೀಡಬೇಕೆಂದು ಗೋಪಾಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕರ್ನಾಟಕದಲ್ಲಿ ವಾಸಿಸುತ್ತಿರುವ 10 ಲಕ್ಷ ತಮಿಳರ ಹಿತಾಸಕ್ತಿಯ ದೃಷ್ಟಿಯಿಂದ ಎರಡೂ ರಾಜ್ಯಗಳ ಅಧಿಕೃತ ಸಂಧಾನಕಾರರಾಗಿ ತಾವು ಕೆಲಸ ಮಾಡುತ್ತಿರುವುದಾಗಿ ಗೋಪಾಲ್ ಹೇಳಿದ್ದಾರೆ.












Click it and Unblock the Notifications