ಕುವೈತ್‌ನಲ್ಲಿ ಜನಪ್ರಿಯವಾಗುತ್ತಿರುವ ಭಾರತೀಯ ಚಿತ್ರಗಳು
ದುಬೈ : ಕುವೈತ್‌ನಲ್ಲೀಗ ಭಾರತೀಯ ಚಿತ್ರಗಳ ಭರಾಟೆ. ತುಂಬಿದ ಗೃಹಗಳ ಪ್ರದರ್ಶನ ನೀಡುತ್ತಿರುವ ಚಿತ್ರಗಳು ಪಶ್ಚಿಮ ದೇಶಗಳ ಮತ್ತು ಅರೆಬಿಕ್ ಚಿತ್ರಗಳಿಗೆ ವ್ಯಾಪಕ ಪೈಪೋಟಿ ನೀಡುತ್ತಿವೆ.
ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗುತ್ತಿರುವ ಭಾರತೀಯ ಸುಂದರಿಯರು ಚಿತ್ರರಂಗಕ್ಕೆ ಬರುತ್ತಿರುವುದು ವಿದೇಶಿ ಮಹಿಳೆಯರು ಭಾರತೀಯ ಚಿತ್ರಗಳತ್ತ ಗಮನಹರಿಸಲು ಸಾಧ್ಯವಾಗಿದೆ. ಇಷ್ಟಲ್ಲದೆ ಯೋರೋಪ್ ದೇಶಗಳಲ್ಲಿ ಅಪಾರ ವೆಚ್ಚ ಮಾಡಿ ಚಿತ್ರಗಳನ್ನು ಚಿತ್ರೀಕರಿಸುವುದು ಹಾಗೂ ಚಿತ್ರಗಳ ಗುಣಮಟ್ಟ ವನ್ನು ಅತ್ಯುತ್ತಮವಾಗಿ ಕಾಯ್ದಕೊಳ್ಳುವುದೂ ಕೂಡ ಆಕರ್ಷಣೆಯ ಕೇಂದ್ರ ಬಿಂದು. ಇತ್ತೀಚಿನ ಅನೇಕ ಭಾರತೀಯ ಚಿತ್ರಗಳು ಅತ್ಯಂತ ಹೆಚ್ಚು ವೆಚ್ಚದಲ್ಲಿ ಚಿತ್ರೀಕರಣವಾಗುತ್ತಿರುವುದು ಇನ್ನೊಂದು ಪ್ರಮುಖ ಅಂಶವಾಗಿ ಪರಿಗಣಿತವಾಗಿದೆ.
ಕುವೈತ್‌ನ ಸುದ್ದಿ ಸಂಸ್ಥೆಯಾಂದರ ಪ್ರಕಾರ ದಿನದಿಂದ ದಿನಕ್ಕೆ ಭಾರತೀಯ ಚಿತ್ರ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಂತೂ ಅನೇಕ ದಿನಗಳವರೆಗೆ ತುಂಬಿದ ಗೃಹಗಳಿಂದ ಪ್ರದರ್ಶಿತವಾಗುವ ಸಿನಿಮಾಗಳಿಗೆ ಬೇಗ ಟಿಕೆಟ್ ಸಿಗುವುದೇ ಕಷ್ಟ. ಅದರಲ್ಲೂ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸುವ ಚಿತ್ರಗಳಿಗೆ ಇನ್ನೂ ಬೇಡಿಕೆ ಹೆಚ್ಚು.
ಮಹಿಳೆಯರೇ ಪ್ರಮುಖ ಪ್ರೇಕ್ಷಕರು : ಕುವೈತ್‌ನ ರಾಷ್ಟ್ರೀಯ ಸಿನಿಮಾ ಕಂಪನಿಯ ಪ್ರಕಾರ ಭಾರತೀಯ ಚಿತ್ರಗಳಿಗೆ ಮಹಿಳೆಯರೇ ಪ್ರಮುಖ ಪ್ರೇಕ್ಷಕರು. ಇದಕ್ಕೆ ವಿಶ್ವ ಸುಂದರಿಗಳು ಚಿತ್ರಗಳಲ್ಲಿ ನಟಿಸುತ್ತಿರುವುದು ಕಾರಣ ಹಾಗಾಗಿ ಭಾರತೀಯ ಚಿತ್ರಗಳು ದಾಖಲೆ ಪ್ರಮಾಣದಲ್ಲಿ ಹಣ ಗಳಿಸುತ್ತಿವೆ. ಆದ್ದರಿಂದ ಪ್ರಮುಖ ನಗರಗಳ ಮುಖ್ಯ ಚಿತ್ರಮಂದಿರಗಳಲ್ಲಿ ಚಿತ್ರಗಳು ವೀಕ್ಷಣೆಗೆ ಲಭ್ಯವಿವೆ. ಪ್ರತಿವರ್ಷ ಕನಿಷ್ಠ 52 ಹೊಸ ಭಾರತೀಯ ಚಿತ್ರಗಳು ಕುವೈತ್‌ನಲ್ಲಿ ಪ್ರದರ್ಶಿತವಾಗುತ್ತವೆ. ಅಂದರೆ ಸರಾಸರಿ ವಾರಕ್ಕೊಂದು ಚಿತ್ರ ವೀಕ್ಷಕರಿಗೆ ಲಭ್ಯ.
ಈ ನಡುವೆ ಕೆಲವರು ಭಾರತೀಯ ಚಿತ್ರಗಳ ಚಿತ್ರ ಮತ್ತು ಹಾಡುಗಳ ಕ್ಯಾಸೆಟ್‌ಗಳನ್ನೂ ಇಟ್ಟಿದ್ದಾರೆ. ವೀಕ್ಷಕರಲ್ಲಿ ವಯಸ್ಸಿನ ತಾರತಮ್ಯವಿಲ್ಲ. ಹದಿಹರೆಯದ ಬಹುತೇಕ ಜನರ ಮಲಗುವ ಕೋಣೆಗಳು ಭಾರತೀಯ ಚಿತ್ರಗಳ ನಾಯಕ, ನಾಯಕಿಯರ ಪೋಸ್ಟರ್‌ಗಳಿಂದ ತುಂಬಿವೆ. ಭಾರತೀಯ ಚಲನಚಿತ್ರಗಳ ವೈವಿಧ್ಯತೆ ಕುವೈತ್ ಮತ್ತು ಗಲ್ಫ್ ದೇಶಗಳ ನಾಗರಿಕರ ಪ್ರಮುಖ ಆಕರ್ಷಣೆಯಾಗಿದೆ. ಡ್ಯಾನ್ಸ್, ರೊಮ್ಯಾನ್ಸ್, ಹಿಂಸೆ ಮತ್ತು ಕತೆಯನ್ನೂ ಕೂಡ ಹಾಡಿ ಹೊಗಳುವ ಪ್ರೇಕ್ಷಕರುಂಟು ಎಂದು ವರದಿಯಾಂದು ಹೇಳಿದೆ. ಇಲ್ಲಿನ 13ರ ಹರೆಯದ ಇಬ್ಬರು ಅವಳಿ ಸಹೋದರಿಯರು ಇಂಟರ್‌ನೆಟ್‌ನಲ್ಲಿ ಭಾರತೀಯ ಚಿತ್ರಗಳ ಲೇಟೆಸ್ಟ್ ಸುದ್ಧಿಯನ್ನು ನೋಡುವುದಾಗಿ ತಿಳಿಸಿದ್ದಾರೆ. ಅವರಿಗೆ ಭಾರತಕ್ಕೆ ಭೇಟಿ ನೀಡಿ ನೆಚ್ಚಿನ ನಟನಟಿಯರನ್ನು ನೋಡುವ ತವಕವಂತೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications