Get Updates
Get notified of breaking news, exclusive insights, and must-see stories!

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಹೀಗೆ ಹಲವು ಸಂಗತಿಗಳನ್ನು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಆಶೀಸರ ಬಯಲಿಗೆಳೆದರು. ಗಣೇಶ್‌ ಭಟ್‌ ಉಪ್ಪೋಣಿ ಎರಡೂ ಯೋಜನಾ ವರದಿಗಳನ್ನು ಪ್ರದರ್ಶಿಸಿ ಸಮರ್ಥಿಸಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಿದ್ದ ವರದಿಯ ಲೋಪದೊಷಗಳನ್ನು ಪಟ್ಟಿ ಮಾಡಿದ ಪರಿಸರವಾದಿಗಳು ಜನತೆ ಮತ್ತು ಸರಕಾರವನ್ನು ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿರುವ ಆಪಾದನೆ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕೆಂದರು.

ಉದ್ಯೋಗ ಬೇಕು : ಆಕ್ಷೇಪಗಳಿಗೆ ಉತ್ತರಿಸುವಂತೆ ಜಿಲ್ಲಾಧಿಕಾರಿ ನೀಡಿದ ರೂಲಿಂಗ್‌ಗೆ ಪ್ರವರ್ತಕರ ಬಳಿ ಉತ್ತರವೇ ಇರಲಿಲ್ಲ.

ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕುಗಳಿಂದ ಬಂದಿದ್ದ ಕೆಲವು ತಂಡಗಳ ಜನರು ತಮ್ಮ ನಿರುದ್ಯೋಗ ತೊಲಗಬೇಕಾದರೆ ಇಂಥ ಯೋಜನೆ ಬೇಕು ಎಂದು ಸ್ವಾಗತ ಕೋರಿದರು. ಇನ್ನೂ ಕೆಲವರು ಪರಿಸರವಾದಿಗಳ ಆಕ್ಷೇಪವನ್ನು ತೀವ್ರವಾಗಿ ತಳ್ಳಿಹಾಕಿ ನಮಗೆ ಕೆಲಸ ಬೇಕು ಹಾಗಾಗಿ ಯೋಜನೆ ಬೇಕು ಎಂದರು. ಒಂದು ಹಂತದಲ್ಲಿ ಪರಿಸರವಾದಿಗಳ ವಿರುದ್ಧ ಧಿಕ್ಕಾರವೂ ಕೇಳಿಬಂತು. ನಿರುದ್ಯೋಗ ನಿವಾರಣೆಗೆ ಯೋಜನೆಯೇ ಮದ್ದು ಎಂಬಂತೆ ಮಾತನಾಡಿದರು.

ದಾಂಡೇಲಿಯ ವೇಣುಗೋಪಾಲ ಎಂಬ ಪರಿಸರವಾದಿ ವಾಸ್ತವ ಪರಿಸ್ಥಿತಿಯನ್ನು ಮುಂದಿಟ್ಟರು. ಯೋಜನಾ ಕಾಮಗಾರಿಯ ಸಂದರ್ಭದಲ್ಲಿ 4 ವರ್ಷ 1500 ಜನರಿಗೆ ಉದ್ಯೋಗ ದೊರಕಬಹುದು. ನಂತರ ಉದ್ಯೋಗ ಹಿಡಿಯುವವರ ಸಂಖ್ಯೆ ಕೇವಲ 150 ಎಂದು ತಿಳಿಸಿದ್ದು, ನಿರುದ್ಯೋಗದ ಮಂತ್ರ ಜಪಿಸಿದವರಿಗೆ ತಣ್ಣೀರೆರಚಿತು.

ಒಂದು ಹಂತದಲ್ಲಿ ಅಭಿವೃದ್ಧಿ ಪರ ಮಾತನಾಡುವವರು ಸಂಪೂರ್ಣ ರಾಜಕೀಯ ಪಕ್ಷಗಳ ಮುಖವಾಣಿಯಂತೆ ಮಾತನಾಡಿದರು. ಯೋಜನೆಗ ಕಾರಣರಾದ ಸಚಿವ ಆರ್‌.ವಿ. ದೇಶಪಾಂಡೆ ಮತ್ತು ಪ್ರವರ್ತಕರಿಗೆ ಕೃತಜ್ಞತೆಯನ್ನೂ ಅರ್ಪಿಸಿದರು. ಕಾಳಿ ಕೊಳ್ಳದ ಎಲ್ಲ ಯೋಜನೆಗಳನ್ನೂ ಕರ್ನಾಟಕ ವಿದ್ಯುತ್‌ ನಿಗಮವೇ ನಡೆಸುತ್ತಿರುವುದರಿಂದ ಈ ಯೋಜನೆಯನ್ನು ಕೆಪಿಸಿಗೇ ನೀಡಬೇಕೆಂದು ನಿಗಮದ ಅಧಿಕಾರಿಗಳು ಸಭೆಗೆ ತಿಳಿಸಿದರು.

ವಿಚಾರಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಸ್‌. ಬಿ. ಗಂಜಿಗಟ್ಟಿ ಅವರು ಚರ್ಚೆಯ ವಿಷಯಗಳನ್ನು ತಜ್ಞರ ಉನ್ನತ ಮಟ್ಟದ ಸಭೆಯ ಮುಂದಿಡಲಾಗುವುದು ಎಂದರು. ಸಭೆಯಲ್ಲಿ ಮಾಜಿ ಸಂಸದ ಬಿ.ಪಿ. ಕದಂ, ಜಿಲ್ಲಾಪಂಚಾಯತ್‌ ಉಪಾಧ್ಯಕ್ಷ ವಿಲಾಸ್‌ ನಾಯ್ಕ, ಪರಿಸರ ವಿಚಾರಣಾ ಸಮಿತಿ ಸದಸ್ಯರಾದ ವನಿತಾ ನಾಯ್ಕ, ಎಲ್‌.ವಿ. ಶಾನಭಾಗ, ಮೊದಲಾದವರು ಹಾಜರಿದ್ದರು.

backಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+