ದಾಂಡೇಲಿ ವಿದ್ಯುತ್ ಘಟಕ: ಗೊಂದಲದಲ್ಲಿ ಮುಗಿದ ಸಭೆ
ಕಾರವಾರ: ದಾಂಡೇಲಿ ಕಿರು ಜಲ ವಿದ್ಯತ್ ಯೋಜನೆ ಕುರಿತು ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ಪರಿಸರವಾದಿಗಳಿಗೂ, ಅಭಿವೃದ್ಧಿ ಪರರ ನಡುವೆ ಕಾವೇರಿದ ಚರ್ಚೆ ನಡೆಯಿತು.
ದಾಂಡೇಲಿಯ ಬಳಿ ಮೌಳಂಗಿ (ಜೋಯಿಡಾ ತಾಲೂಕು) ಎಂಬಲ್ಲಿ ಖಾಸಗಿ ಕಂಪೆನಿ ನಿರ್ಮಿಸಲು ಉದ್ದೇಶಿಸಿರುವ 18 ಮೆಗಾವ್ಯಾಟ್ ಸಾಮರ್ಥ್ಯದ (9 ಮೆಗಾವ್ಯಾಟಿನ 2 ಘಟಕಗಳು) ಜಲವಿದ್ಯುತ್ ಯೋಜನೆಯ ಕುರಿತು ಜನಾಭಿಪ್ರಾಯ ಪಡೆಯಲು ಈ ಸಭೆ ಏರ್ಪಾಡಾಗಿತ್ತು. ಜಿಲ್ಲಾಧಿಕಾರಿ ಅತುಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕೆಲ ಪರಿಸರವಾದಿಗಳು ಸಭೆ ನಡೆಸುವುದನ್ನೇ ಆಕ್ಷೇಪಿಸಿದರು. ಯೋಜನೆಯ ಪ್ರವರ್ತಕರು ಜನರಿಗೆ ಮತ್ತು ಸರಕಾರಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ವಂಚಿಸುತ್ತಿದ್ದಾರೆ ಆದ್ದರಿಂದ ವಿಚಾರಣೆ ರದ್ದುಪಡಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. ಎರಡೂ ಕಡೆಯ ವಾದ ವಿವಾದಗಳನ್ನು ದಾಖಲಿಸುತ್ತಿರುವುದರಿಂದ ಸಭೆಯನ್ನು ಮುಂದೂಡುವುದು ಅಥವಾ ರದ್ದುಪಡಿಸುವುದು ಅನಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಯೋಜನಾ ಪ್ರವರ್ತಕರು ಯೋಜನೆಯ ಬಗ್ಗೆ ವಿವರಿಸಿ ಯೋಜನಾ ಪ್ರದೇಶದ ಸಾಮಾಜಿಕ ಮತ್ತು ಪರಿಸರ ಸೇರಿದಂತೆ ಅನೇಕ ವಲಯಗಳ ಸಮಗ್ರ ಅಧ್ಯಯನ ನಡೆಸಲಾಗಿದೆ. ಇದರ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುತೇವೆ ಎಂದು ಹೇಳಿಕೊಂಡರು. ಯೋಜನಾ ಪ್ರದೇಶ ಯಾವ ತಾಲ್ಲೂಕಿನಲ್ಲಿ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸಿತು. ಈ ಪ್ರಶ್ನೆಗೆ ಪ್ರವರ್ತಕರು ಉತ್ತರಿಸಲು ತಡವರಿಸಿದರು. ನಂತರ ಪ್ರಶ್ನೆ ಕೇಳಿದವರು, ಯೋಜನೆ ಜೋಯಿಡಾ ತಾಲ್ಲೂಕಿಗೆ ಸೇರುತ್ತದೆ. ದಾಂಡೇಲಿಗಲ್ಲ ಎಂದು ತಿಳಿಸಿದರು.
ಪರಿಸರವಾದಿಗಳು ಒಬ್ಬೊಬ್ಬರಾಗಿ ಯೋಜನೆಯ ನ್ಯೂನತೆಗಳನ್ನು ಎತ್ತಿ ತೋರಿಸಿದರು. ಯೋಜನೆಗಾಗಿ ನಡೆಸಲಾದ ಪರಿಸರ ಅಧ್ಯಯನ ವರದಿ, ಮೂಲತಃ ಕಿರುವತ್ತಿ ಬಳಿಯ ಬೇಡ್ತಿ ನದಿಯ ನೀರನ್ನು ತಟ್ಟೀಹಳ್ಳಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದ್ದ ಕರ್ನಾಟಕ ವಿದ್ಯತ್ ನಿಗಮದ ಯೋಜನೆಗಾಗಿ ನಡೆಸಿದ್ದು ಅದನ್ನೇ ಯಥಾವತ್ತಾಗಿ ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಆ ಯೋಜನೆಯ ವರದಿಯ ಎರಡನೇ ಪುಟ ಇಲ್ಲಿ ನಾಲ್ಕನೇ ಪುಟದಲ್ಲಿ ಪ್ರಾರಂಭವಾಗುತ್ತದೆ. ಮಂದಿನ 65 ಪುಟಗಳೂ ಮಕ್ಕಿಕಾಮಕ್ಕಿ.
ಕಿರುವತ್ತಿ ಬಳಿಯ ಬೇಡ್ತಿ ನದಿಯ ನೀರನ್ನು ತಟ್ಟೀಹಳ್ಳಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವರದಿ ಇದೆಂಬುದಕ್ಕೆ ಕೆಲ ಸ್ಯಾಂಪಲ್‌ಗಳು ಇಲ್ಲಿವೆ ನೋಡಿ.
- ಈ ಯೋಜನಾ ಪ್ರದೇಶದ ಶೇ. 29 ಭಾಗ ಮಾತ್ರ ಉತ್ತರಕನ್ನಡ ಜಿಲ್ಲೆಯಲ್ಲಿ ದ್ದು, ಉಳಿದದ್ದು ಧಾರವಾಡ ಜಿಲ್ಲೆಯಲ್ಲಿ ದೆ ಎಂದಿದೆ. ಆದರೆ ವಾಸ್ತವವಾಗಿ ದಾಂಡೇಲಿ ಕಿರುಜಲ ವಿದ್ಯುತ್ ಯೋಜನೆ ಸಂಪೂರ್ಣವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಇದೆ.
- ಪರಿಸರ ಸಂರಕ್ಷಣೆಗಾಗಿ ಯೋಜನಾ ಪ್ರದೇಶದ ಭಾಗಗಳಾದ ಶಿಗ್ಗಾಂವ, ಕಲಘಟಗಿ, ಯಲ್ಲಾಪುರ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ವಿವರವಾಗಿ ಸೂಚಿಸಲಾಗಿದೆ. ಆದರೆ ಯೋಜನೆ ಪ್ರದೇಶ ಬಹುತೇಕ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿಯೇ ಬರುತ್ತದೆ. ಸ್ವಲ್ಪ ಭಾಗ ಮಾತ್ರ ಹಳಿಯಾಳ ತಾಲೂಕಿನಲ್ಲಿ ಬರುತ್ತದೆ.
- ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರು ಇರುವುದಿಲ್ಲ ಎಂದು ವರದಿಯಲ್ಲಿದೆ. ಆದರೆ ಕಾಳಿ ನದಿಯ ಸ್ಥಿತಿ ಇದಕ್ಕೆ ತದ್ವಿರುದ್ಧ.
1 ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications