ತಮ್ಮೂರಿನ ಕ್ರಿಕೆಟ್‌ ಕಲಾವಿದನ ಜೊತೆ ಎನ್‌ಆರ್‌ಐ ಮಕ್ಕಳು ಕಳೆದ ಕ್ಷಣಗಳು...

ಲಂಡನ್‌ : 'ರಾಹುಲ್‌... ರಾಹುಲ್‌ ಈ ಲೈನ್‌ ಅಂಡ್‌ ಲೆಂಗ್ತ್‌ ಸರಿಯಾಗಿದೆಯಾ?" ಇಲ್ಲಿನ ಭಾರತೀಯ ಮೂಲದ ಹತ್ತು ವರ್ಷದ ಹುಡುಗ ತನ್ನ ಬೌಲಿಂಗ್‌ನ್ನು ಮೊನಚು ಮಾಡಿಕೊಳ್ಳಲು ಕೇಳಿದ್ದು ಹೀಗೆ. ಈ ರಾಹುಲ್‌ ಬೇರಾರೂ ಅಲ್ಲ ಕರ್ನಾಟಕದ ಕಲಾ ದಾಂಡಿಗ(ಧಾಂಡಿಗ ಅಲ್ಲ) ರಾಹುಲ್‌ ದ್ರಾವಿಡ್‌. ಇಂಗ್ಲೆಂಡಿನಲ್ಲಿರುವ ಭಾರತದ ಬಾಲಕರಿಗೆ ಗುರುವಾರ ಮರೆಯಲಾರದ ದಿನ. ಮಧ್ಯಾಹ್ನವಿಡೀ ಇಂಡಿಯನ್‌ ಜಿಮ್‌ಖಾನ ಕ್ಲಬ್‌ನಲ್ಲಿ ಸುಮಾರು 30 ಬಾಲಕರಿಗೆ ದ್ರಾವಿಡ್‌ ತರಬೇತಿ.

'ಸಿಕ್ಕಾಪಟ್ಟೆ ಜೋರಾಗಿ ಬೌಲ್‌ ಮಾಡಬೇಡಪ್ಪ" : ಕೆಂಟ್‌ ತಂಡದ ಪರವಾಗಿ ಕೌಂಟಿ ಕ್ರಿಕೆಟ್‌ ಆಡುತ್ತಿರುವ ದ್ರಾವಿಡ್‌ ಬಿಡುವಿನ ಈ ಅವಧಿಯನ್ನು ಭಾರತದ ಮಕ್ಕಳ ಜೊತೆ ಕಳೆದರು. ಗೋಫೋರ್‌ಐ ಡಾಟ್‌ ಕಾಂನ ಮೂಲಕ ಶಿಬಿರಕ್ಕೆ ಬಾಲಕರನ್ನು ಆಯ್ಕೆ ಮಾಡಲಾಗಿತ್ತು. ಈ ವೆಬ್‌ಸೈಟಿನಲ್ಲಿ ದ್ರಾವಿಡ್‌ ಪೋರ್ಟಲ್‌ ಸಹ ಇದೆ. ಮಟಮಟ ಮಧ್ಯಾಹ್ನದಲ್ಲಿ ಹುಡುಗರಿಂದ ನೆಟ್‌ಪ್ರಾಕ್ಟೀಸ್‌. ದ್ರಾವಿಡ್‌ ಅಂಪೈರ್‌ ಕಾರ್ಯ ನಿರ್ವಹಿಸಿದರು. 'ಸಿಕ್ಕಾಪಟ್ಟೆ ಜೋರಾಗಿ ಬೌಲ್‌ ಮಾಡಬೇಡಪ್ಪ" ಅಂತ ಬಾಲಕನ್ಬೊಬನನ್ನು ದ್ರಾವಿಡ್‌ ಛೇಡಿಸುತ್ತಿದ್ದರು. ಅದರಿಂದ ಹುರಿದುಂಬಿತನಾದ ಹುಡುಗನ ಧಾಳಿ ಮತ್ತಷ್ಟು ಚುರುಕಾಗತೊಡಗಿತು. ಆಟದ ಬಗೆಗೆ ಮಹತ್ತ್ವಾಕಾಂಕ್ಷೆ ಇರುವ ಹುಡುಗರು ತಮ್ಮ ಲೋಪ ದೋಷಗಳೇನು ಎಂದು ದ್ರಾವಿಡ್‌ ಅವರನ್ನು ಕೇಳಿ, ಸರಿಪಡಿಸಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತು ಆಟ. ನಂತರ ದ್ರಾವಿಡ್‌ ಸುತ್ತುಗಟ್ಟಿದ ಹುಡುಗರು ವಿವಿಧ ಮಾದರಿಯ ಪುಟ್ಟ- ಸುಂದರ ಪುಸ್ತಕಗಳ ಪುಟಗಳನ್ನು ತೆರೆದು ಅವರ ಮುಂದೆ ಹಿಡಿದರು. ಪ್ರತಿಯಾಂದು ಪುಸ್ತಕದಲ್ಲೂ ದ್ರಾವಿಡ್‌ ಸಹಿ ಮಾಡಿದರು. ಕೆಲ ಹೊತ್ತು ಹರಟೆ ಹೊಡೆದು ಬಾಲಕರಿಗೆ ಉಪಯುಕ್ತ ಸಲಹೆಗಳನ್ನೂ ಕೊಟ್ಟರು.

ಆಟಗಾರರ ಪ್ರಭಾವ ಅವರ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ : ಗುರುವಾರ ಬೆಳಗ್ಗೆ ಮತ್ತೊಂದೆಡೆ, ಪೂರ್ವ ಲಂಡನ್‌ ಗಡಿಯಲ್ಲಿರುವ ಇಲ್‌ಫೋರ್ಡ್‌ನಲ್ಲಿ ಪಾಕ್‌ನ ಶಾಹಿದ್‌ ಆಫ್ರಿದಿ ಮತ್ತು ಮೊಯಿನ್‌ ಖಾನ್‌ 30 ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡಿದರು. ಕ್ರಿಕೆಟಿಗರಾಗುವ ಕನಸು ಹೊತ್ತಿರುವ ಬಾಲಕರನ್ನು ಹಾಗೂ ಅನುಭವಿ ಕ್ರಿಕೆಟಿಗರನ್ನು ಒಂದೆಡೆ ಸೇರಿಸುವುದರಿಂದ ಭಾವೀ ಕ್ರಿಕೆಟಿಗರಿಗೆ ಒಮ್ಮೆಲೇ ಸಾಕಷ್ಟು ತರಬೇತಿ ನೀಡಲು ಸಾಧ್ಯವಾಗದಿರಬಹುದು. ಆದರೆ ಆಗಾಗ ಈ ರೀತಿ ಶಿಬಿರಗಳನ್ನು ಆಯೋಜಿಸುವುದರಿಂದ ಬಾಲಕರಿಗೆ ಒಳ್ಳೆ ಮಾರ್ಗದರ್ಶನ, ಸಲಹೆಗಳು ಸಿಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಆಟಗಾರರ ಪ್ರಭಾವ ಅವರ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ ಎನ್ನುತ್ತಾರೆ ಗೋಫೋರ್‌ಐ ಡಾಟ್‌ ಕಾಂನ ಕಾರ್ಯ ನಿರ್ವಾಹಕ ಅಧಿಕಾರಿ ಲೋಕೇಶ್‌ ಶರ್ಮ.

ತಮ್ಮ ದೇಶದ ಕಲೆಗಾರನೊಂದಿಗೆ ಕಾಲ ಕಳೆದ ಮರೆಯಲಾಗದ ಅನುಭವವನ್ನು ಹುಡುಗರು ಮನೆಗೆ ಕಟ್ಟಿಕೊಂಡು ಹೋದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+