ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ ಕಾಡಿನ ಪ್ರೀತಿಯ ದ್ಯೋತಕ

By Staff
|
Google Oneindia Kannada News

Karwar forestದಿಗಂತದ ಅಂಚಿನವರೆಗೂ ಮೈಚಾಚಿ ಮಲಗಿರುವ ಕಡು ನೀಲಿ ಕಡಲು. ಹಸಿರ ಹೊತ್ತ ಭಾರೀ ಬೆಟ್ಟಕ್ಕೆ ಘಟ್ಟದ ದಾರಿ. ಅಂಗೈಗೆ ಎಟು-ಕೀ-ತು ಎಂ-ಬ ಭ್ರಮೆ ಹುಟ್ಟಿಸುವ -ಬಣ್ಣ -ಬಣ್ಣದ ಬಾನು, ಸು-ತ್ತ ದಟ್ಟ ಕಾ-ಡು. ಇವೆಲ್ಲವುಗಳ ನಡುವೆ ಹೆಪ್ಪು ಗಟ್ಟಿದ ಮೌನಕ್ಕೆ ಸವಾಲೊಡ್ಡುವಂ-ತೆ ಹಕ್ಕಿಗಳ ಇಂಚರ, ಇವಕ್ಕೆ ಮಾರು-ತ್ತರ ನೀಡಿದಂ-ತೆ ಮಂದ ಮಾರು-ತದಿಂದ ಮಲಯ ಮಾರು-ತ ರಾಗ. ಇವೆಲ್ಲಕ್ಕೂ ದೈವಿಕ-ತೆ ಆರೋಪಿಸುವಂ-ತೆ ಕೇಳಿಸುವ ದೇವಾಲಯದ ಗಂಟೆ ಸದ್ದು. ಇದೇನಿದು ...ರೇ ಮಾತಿನ ಮಂಟಪ ಎಂದು ಮೂಗು ಮುರಿಯಬೇಡಿ. ಒಂದೇ ಒಂದು ಬಾರಿ ಉ-ತ್ತರಕನ್ನಡ ಜಿಲ್ಲೆಯ ಹೊನ್ನಾವರದ -ಬಳಿಯಿರುವ ಕರಿಕಾನಮ್ಮನ ಬೆಟ್ಟಕ್ಕೆ -ಬನ್ನಿ. ಆ ಮೇಲೆ ಮಾ-ತನಾಡಿ...

ಹೌದು, ಅದು ಸೂರ್ಯ ರಶ್ಮಿ ನೆಲವನ್ನೂ ಸೋಕದಷ್ಟು , ಹಗಲಿನಲ್ಲೇ ಕ-ತ್ತಲ ಭ್ರಮೆ ಕವಿಸುವಷ್ಟು ದಟ್ಟವಾದ ಅರಣ್ಯವನ್ನು ಹೊ-ತ್ತ ಬೆಟ್ಟ. ಅದರ ಶೃಂಗದಲ್ಲೊಂದು ದೇವಸ್ಥಾನ. ಅದರ ಒಡತಿಯೇ ನಮ್ಮ ಕರಿಕಾನಮ್ಮ. ಇದು ದೇವಸ್ಥಾನವಾದರೂ, -ಕಾ-ಡಿನ ಮಕ್ಕಳಾದ ಉ-ತ್ತರ ಕನ್ನಡದ ಜನ ಇದನ್ನು ಅಮ್ಮನ ಮನೆ ಎಂದೇ ಕರೆಯುತ್ತಾರೆ. ಇದು ಇಲ್ಲಿಯ ಜನರ ಕಾಡಿನ ಪ್ರೀತಿಯ ದ್ಯೋತಕ ಕೂಡಾ.

ದಟ್ಟವಾದ ಕಾಡಿನ ನಡುವೆ ವನ ದೇವ-ತೆ-ಯಂ-ತೆ ಕಂಗೊಳಿಸುವ ಈ ದೇವಿ ಕರಿಕಾನಮ್ಮ ಎಂದೇ ಪ್ರಸಿ-ದ್ಧಿ. ಇದಕ್ಕೆ ಐತಿಹಾಸಿಕ ಮಹ-ತ್ವ ಕೂಡಾ ಇದೆ. ಇದು ಯೋಗಿಗಳ ತಾಣ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಪರಮಾನಂದರು, ಶ್ರೀ ಶಿವಾನಂದರು ಅನುಷ್ಠಾನ ನಡೆಸಿದ್ದೂ ಇಲ್ಲೆ. ಬೆಟ್ಟದ ಬದಿಯಲ್ಲೇ ಮತ್ತೊಂದು ಬೆಟ್ಟದ ಶೃಂಗವಿದೆ. ಅದು ಒಂ-ದಡಕೆ ದೇವರು ಎಂದು ಕರೆಸಿಕೊಳ್ಳುವ ವಿಶಿಷ್ಟ ದೇವರ ಸ್ಥಾನ. ಅಡಿಕೆ ಬೆಟ್ಟದ ಗಾ-ತ್ರದ ಒಂದು ನಿರಾವರಣ ಲಿಂಗವಿದೆ. ಇದರ ಮೇಲೆ ನೀರು -ಸು-ಪ್ತ-ವಾ-ಗಿ ಹನಿ ಹನಿಯಾಗಿ ತೊಟ್ಟಿಕ್ಕುತ್ತದೆ. ಇದು ಆಸ್ತಿಕರಿಗೆ ಶಿವನಿಗೆ ಅಭಿಷೇಕದ ನೆನಪನ್ನು ಮೀಟು- ತ್ತ-ದೆ. ಇದನ್ನು ಶಿವನ ಉದ್ಭವ ಲಿಂಗ ಎಂದೂ ಹೇಳಲಾಗು-ತ್ತದೆ. ಇದರೊಟ್ಟಿಗೆ ಇಲ್ಲಿರುವ ಅಡಕೆ ಮರವೊಂದರಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಒಂದೇ ಅಡಿಕೆ ಕಾಯಿ ಬಿಡು-ತ್ತದೆ ಎಂ-ಬುದು ಸ್ಥಳೀಯರ ಅಂಬೋಣ. ಕರಿಕಾನಮ್ಮನ ಮನೆಯಿಂದ ಒಂದಡಕೆ ದೇವರಿಗೆ ಕಾಲ್ನಡಿಗೆಯೇ ಗತಿ. ಒಂದು ಮೈಲಿಯಷ್ಟೇ.

ಹೋಗುವ ಬಗೆ ಹೇಗೆ? ಕರಿಕಾನು ಬೆಟ್ಟ ಹೊನ್ನಾವರದಿಂದ 17 ಕಿಮೀ. ದೂರದಲ್ಲಿದೆ. ಬೆಟ್ಟದ ತಪ್ಪಲಲ್ಲಿರುವ ಅರೆ ಅಂಗಡಿವರೆಗೂ ಡಾಂಬರಿನ ರಸ್ತೆ. ಅಲ್ಲಿಂದ ಮುಂದೆ ಕಡಿದಾದ ಘಟ್ಟದ ದಾರಿ. ಮೊದಲು ಕಚ್ಚಾರಸ್ತೆಯಾಗಿದ್ದರೂ, ಈಗ ಅದು ಟಾರು ಕಂಡಿದೆ. ಮಳೆಗಾಲದಲ್ಲೂ ಬೆಟ್ಟದ ತುದಿಯವರೆಗೂ ಬ ಸ್ಸು -ಕಾರುಗಳಲ್ಲೇ ಹೋಗಬಹುದಾದಷ್ಟು ಅನುಕೂಲವಿದೆ. ದೇವಾಲಯದ ಅರ್ಚಕರ ಕುಟುಂಬಕ್ಕೆ ಮೊದಲೇ ತಿಳಿಸಿ ಬಿಟ್ಟರೆ, ಸಕಾಲಕ್ಕೆ ಬಿಸಿ ಬಿಸಿಯಾದ ಅಪ್ಪಟ ಹವ್ಯಕ ಶೈಲಿಯ ಊಟ ಹಾಜರ್‌. ಒಟ್ಟಿನಲ್ಲಿ ಇಲ್ಲಿ ದೇವಸ್ಥಾನಕ್ಕೆ ಆಕರ್ಷಣೆ ಬಂದಿರುವುದು ಅದಿರುವ ಸ್ಥಳ.

ಇಲ್ಲಿಂದ ನಿಂತು ನೋಡಿದರೆ, ದೂರದ ಹೊನ್ನಾವರ, ಕುಮಟಾಗಳೂ ಗೋಚರಿಸುತ್ತವೆ. ಬೆಟ್ಟಕ್ಕೆ ಇದಿರಾಗಿ ಕಾಣುವ ನೀಲಿ ಸಮುದ್ರದಲ್ಲಿನ ಕುರ್ವೆ (ನಡುಗಡ್ಡೆ) ಹಸಿರಂಗಿ ತೊಟ್ಟಷ್ಟು ಚಂದವಾಗಿ ಕಾಣುತ್ತೆ. ಸೂರ್ಯಾಸ್ತವಂತೂ ಖುಷಿ ಕೊಡುವ ಸಂಗತಿ. ಇವೆಲ್ಲವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಇಲ್ಲಿನ ಪ್ರಕೃತಿಯ ಮಧ್ಯೆ ಮಲಗುವ ಅವಕಾಶವಿದೆ. ಹಗಲು ಹೊತ್ತಿನಲ್ಲೇ ಇಲ್ಲಿ ಕೆಲವೊಮ್ಮೆ ವನ್ಯ ಜೀವಿಗಳನ್ನು ಕಾಣುವ ಭಾಗ್ಯ ದೊರಕುತ್ತದೆ. ಕೆಚ್ಚಿದ್ದರೆ, ರಾತ್ರಿ ಇಲ್ಲಿಯೇ ಉಳಿದುಕೊಳ್ಳಬಹುದು. ಬೇಡವೆಂದಾದಲ್ಲಿ, ಕುಮಟಾ ಹೊನ್ನಾವರದ ಹೊಟೇಲುಗಳಲ್ಲಿ ತಂಗಿ, ಉತ್ತರಕನ್ನಡ ಜಿಲ್ಲೆಯ ಪ್ರವಾಸ ಮುಂದುವರಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X