• search
 • Live TV
keyboard_backspace

ಚನ್ನಪಟ್ಟಣ ಆಟಿಕೆ ತಯಾರಕರಿಗೆ ಮೈಸೂರು ರಾಣಿ ಕೊಟ್ಟ ಉಡುಗೊರೆ ಏನು ?

ಬೆಂಗಳೂರು, ಫೆಬ್ರವರಿ 16: ಕರುನಾಡಿನ ಪ್ರಗತಿಯನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಮೈಸೂರು ಒಡೆಯರದ್ದು. ಅನ್ನದಾತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಂಸ್ಥಾನದ ವಜ್ರ -ಚಿನ್ನಾಭರಣಗಳನ್ನು ಅಡವಿಟ್ಟು ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ ಹಿರಿಮೆ ಒಡೆಯ ಸಂಸ್ಥಾನದ್ದು. ಮೈಸೂರು ರಾಜಮನೆತನದ ಸೊಸೆಯಾಗಿ ಬಂದಿರುವ ತ್ರಿಶಿಕಾ ಕುಮಾರಿ ದೇವಿ ಸಂಸ್ಥಾನದ ಕೀರ್ತಿಯನ್ನು ಪ್ರಜಾಪ್ರಭುತ್ವ ಆಳ್ವಿಕೆ ಕಾಲದಲ್ಲೂ ಶಾಶ್ವತವಾಗಿ ನೆಲೆಯೂರುವ ಮಹತ್ಕಾರ್ಯ ಮಾಡಿದ್ದಾರೆ. ಅವರ ಹೃದಯ ವೈಶಾಲ್ಯತೆ ಒಡೆಯರ ಸಂಸ್ಥಾನವನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡಿದ್ದಾರೆ. ಹಾಗಾದರೆ ಅವರು ಮಾಡಿದ ಅಂತಹ ಕಾರ್ಯವಾದರೂ ಏನು? .

ಚನ್ನಪಟ್ಟಣ ಆಟಿಕೆಗಳು :

ಚನ್ನಪಟ್ಟಣ ಆಟಿಕೆಗಳು :

ರಾಜ್ಯದ ಕಲಾ ವೈಭವವನ್ನು ಸಾರುವ ಚನ್ನಪಟ್ಟಣ ಮರದ ಆಟಿಕೆಗಳ ಪಾತ್ರ ಕೂಡ ಇದೆ. ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದ ಚನ್ನಪಟ್ಟಣದ ಮರದ ಆಟಿಕೆಗಳು ಅಳಿವಿನಂಚಿಗೆ ತಲುಪಿಸಿದ್ದು ಪ್ಲಾಸ್ಟಿಕ್ ಆಟಿಕೆಗಳು. ಕಡಿಮೆ ಬೆಲೆಗೆ ಹಾಗೂ ತಂತ್ರಜ್ಞಾನ ಮೈಗೂಡಿಸಿಕೊಂಡು ಬಂದ ಪ್ಲಾಸ್ಟಿಕ್ ಆಟಿಕೆಗಳಿಗೆ ಬಹುದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಅದರಲ್ಲೂ ಚೀನಾದ ಆಟಿಕೆಗಳದ್ದೇ ಕಾರುಬಾರು. ಇದರ ಪೈಪೋಟಿ ಎದುರಿಸಲಾರದೇ ಚನ್ನಪಟ್ಟಣ ಆಟಿಕೆ ತಯಾರಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆಟಿಕೆ ತಯಾರಿಸುವುದನ್ನೇ ಜೀವನೋಪಾಯವಾಗಿ ಅವಲಂಬಿಸಿರುವ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಕೋವಿಡ್ ಮಾರಿ ಹೊಡೆತ:

ಕೋವಿಡ್ ಮಾರಿ ಹೊಡೆತ:

ಇನ್ನು ಇತ್ತೀಚೆಗೆ ಪ್ರಕಟವಾದ ವರದಿಗಳ ಪ್ರಕಾರ ಚನ್ನಪಟ್ಟಣ ಆಟಿಕೆ ತಯಾರಕರು ಕರೋನಾ ಹೊಡೆತಕ್ಕೆ ಸಿಲುಕಿ ಜರ್ಜರಿತರಾಗಿದ್ದಾರೆ. ವ್ಯಾಪಾರ ವಿಲ್ಲದೇ ಇಡೀ ಉದ್ಯಮ ಸೊರಗಿದೆ. ಆಟಿಕೆಗಳನ್ನು ಖರೀದಿ ಮಾಡುವರು ಇಲ್ಲದ ಕಾರಣ ತಯಾರಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಸರ್ಕಾರದ ಯಾವ ಯೋಜನೆಗಳು ಆಟಕೆ ತಯಾರಿಕರ ಪಾಲಿಗೆ ಅನ್ವಯಿಸಲಿಲ್ಲ. ಹೀಗಾಗಿ ಇನ್ನೇನು ಆಟಿಕೆಗಳ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಹೊಸದೊಂದು ಬೆಳವಣಿಗೆಯಾಗಿದೆ. ಅದಕ್ಕೆ ಕಾರಣಕರ್ತರು ಮೈಸೂರಿನ ಒಡೆಯರ ಸಂಸ್ಥಾನದ ಮಹಾರಾಣಿ ತ್ರಿಶಿಕಾ ಕುಮಾರಿ ದೇವಿ.

ರಾಣಿ ಮಹತ್ಕಾರ್ಯ :

ರಾಣಿ ಮಹತ್ಕಾರ್ಯ :

ನಾಡಿನ ಕಲಾ ವೈಭವ ಸಾರುವ ಚನ್ನಪಟ್ಟಣ ಆಟಿಕೆಗಳಿಂದ ಬರುವ ಕೀರ್ತಿಯನ್ನು ಅನುಭವಿಸುವ ಆಳುವ ಸರ್ಕಾರಗಳು ಬೊಂಬೆ ತಯಾರಕರ ಸಂಕಷ್ಟ ಕೇಳಿದ್ದೇ ಇಲ್ಲ. ಜಗತ್ ಖ್ಯಾತಿಯ ಚನ್ನಪಟ್ಟಣ ಮರದ ಆಟಿಕೆ ತಯಾರಕರ ನೆರವಿಗೆ ಸ್ವತಃ ತ್ರಿಶಿಕಾ ಕುಮಾರಿ ದೇವಿ ನಿಂತಿದ್ದಾರೆ. ಪರಿಸರ ಸ್ನೇಹಿ ಆಟಿಕೆಗಳನ್ನು ಉತ್ತೇಜಿಸಿ ಅದರ ತಯಾರಕರಿಗೆ ಬದುಕು ಕಟ್ಟಿಕೊಡುವ ಉದ್ದೇಶದಿಂದ ತ್ರಿಶಿಕಾ ಕುಮಾರಿ ದೇವಿ " ದಿ ಲಿಟಲ್ ಬಂಟಿಗ್ " ಎಂಬ ವೆಬ್ ತಾಣಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಚನ್ನಪಟ್ಟಣ ಮರದ ಆಟಿಕೆಗಳನ್ನು ಮಾರಾಟ ಮಾರಾಟ ಮಾಡಲಿಕ್ಕೆ ಬಹು ದೊಡ್ಡ ವೇದಿಕೆ ಕಲ್ಪಿಸಿದ್ದಾರೆ. ಇದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಆಟಿಕೆ ತಯಾರಿಕೆಯು ತಲೆಮಾರುಗಳಿಂದ ಅನೇಕ ಕುಟುಂಬಗಳಿಗೆ ಜೀವನೋಪಾಯವನ್ನು ಒದಗಿಸಿದೆ. ಅವರು ತಯಾರಿಸಿದ ಆಟಿಕೆಗಳಿಗೆ ತರಕಾರಿಗಳಿಂದ ತಯಾರಿಸಿದ ಬಣ್ಣಗಳನ್ನು ಲೇಪಿಸುವುದು. ಈ ಮೂಲಕ ಗೋ ಗ್ರೀನ್ ಕಲ್ಪನೆಯೊಂದಿಗೆ ಈ ಆಟಿಕೆಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ದಿ ಲಿಟಲ್ ಬಂಟಿಂಗ್ ವೇದಿಕೆ ಆರಂಭಿಸಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಭೇಟಿ ಮಾಡಿ ಚರ್ಚೆ:

ಭೇಟಿ ಮಾಡಿ ಚರ್ಚೆ:

ಚನ್ನಪಟ್ಟಣ ಆಟಿಕೆ ತಯಾರಿಸುವ, ಜೀವನೋಪಾಯವಾಗಿ ಸ್ವೀಕರಿಸಿರುವ ಕುಟುಂಬಗಳನ್ನು ಸಂಪರ್ಕಿಸಿ ಸುದೀರ್ಘ ಅಧ್ಯಯನದ ಬಳಿಕವೇ ಈ ರಾಜ ಮನೆತನದ ಸೊಸೆ , ಅಳಿವು ಅಂಚಿಗೆ ತಲುಪುತ್ತಿರುವ ಈ ಆಟಿಕೆಗಳ ರಕ್ಷಣೆಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಗೃಹ ಕೈಗಾರಿಕೋದ್ಯಮ ಪುನರುಜ್ಜೀವನಗೊಳಿಸುವ ಜತೆಗೆ ಜೀವನೋಪಾಯ ಕಸುಬು ಆಗಿ ಸ್ವೀಕರಿಸಿರುವರಿಗೆ ಹೊಸ ಜೀವನ ಕಟ್ಟಿಕೊಡುವ ಉದ್ದೇಶದೊಂದಿಗೆ ಈ ಯೋಜನೆ ಕಾರ್ಯಗತಗೊಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಮ್ಮೊಂದಿಗೆ ಸಹಕರಿಸುವ ಉದ್ಯಮಗಳು, ನಮ್ಮಂತೆಯೇ ಮೌಲ್ಯ ಹೊಂದಿರುವ ಮಕ್ಕಳ ಉತ್ಪನ್ನ ತಯಾರಿಸುತ್ತಿದ್ದು, ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತ್ರಿಶಿಕಾ ಕುಮಾರಿ ದೇವಿ ಸಂತಸ ಹಂಚಿಕೊಂಡಿದ್ದಾರೆ.

ಏಪ್ರಿಲ್ ನಲ್ಲಿ ಗುಡ್ ನ್ಯೂಸ್ :

ಏಪ್ರಿಲ್ ನಲ್ಲಿ ಗುಡ್ ನ್ಯೂಸ್ :

ಇನ್ನು ಚನ್ನಪಟ್ಟಣ ಆಟಿಕೆಗಳು ಮತ್ತು ಕರಕುಶಲ ವಸ್ತುಗಳನ್ನು ಉತ್ತೇಜಿಸುವ ನಮ್ಮ ಪ್ರಯತ್ನ ನನ್ನ ವಿಶೇಷ ಸಂಗ್ರಹದೊಂದಿಗೆ ಪ್ರಾರಂಭವಾಗಲಿದೆ. ಅದು ಚನ್ನಪಟ್ಟಣದಲ್ಲಿ ತಯಾರಾಗುವ ಮಕ್ಕಳ ಆಟಿಕೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಿದೆ ಎಂದು ತ್ರಿಶಿಕಾ ಕುಮಾರಿ ಹೇಳಿಕೊಂಡಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಚನ್ನಪಟ್ಟಣ ಆಟಿಕೆಗಳಿಗೆ ರಾಸಾಯನಿಕ ಮುಕ್ತ ತರಕಾರಿಗಳಿಂದ ತಯಾರಿಸಿದ ಬಣ್ಣದ ಲೇಪನ ಜತೆಗೆ ಜಾಗತಿಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ತ್ರಿಶಿಕಾ ಕುಮಾರಿ ದೇವಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದು ಎಲ್ಲರ ಹಾರೈಕೆ.

  ಬಿಪಿಎಲ್‌ ಕಾರ್ಡ್ ರದ್ದು ವಿಚಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಪ್ರತಿಕ್ರಿಯೆ | BLP Card | Oneindia Kannada
  ಸರಳ ಜೀವನ :

  ಸರಳ ಜೀವನ :

  ಮೈಸೂರು ಸಂಸ್ಥಾನದ ಕುಡಿ ಯದುವೀರ ಒಡೆಯರ್ ಸಾಮಾನ್ಯರಂತೆ ಸರಳ ಜೀವನ ಮಾಡುವ ಮೂಲಕ ಸುದ್ದಿಯಾಗಿದ್ದರು. ಗರ್ಭಿಣಿ ಪತ್ನಿಯನ್ನು ಸಾಮಾನ್ಯರಂತೆ ರೈಲಿನಲ್ಲಿ ಕರೆ ತಂದಿದ್ದರು. ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ತ್ರಿಶಿಕಾ ಕುಮಾರಿ ದೇವಿ, ಚನ್ನಪಟ್ಟಣ ಆಟಿಕೆ ತಯಾರಕರಿಗೆ ಹೊಸ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ. ಜೀವನ ಪರ್ಯಂತ ಸಿಂಹಾಸನದಲ್ಲಿ ಕೂರುವ ಅವಕಾಶ ವಿದ್ದರೂ, ನಾಡಿನ ಹಾಗೂ ಸಮುದಾಯದ ಪ್ರಗತಿಗೆ ಕಾಳಜಿ ವಹಿಸಿ ಅವರು ಮಾಡುತ್ತಿರುವ ಈ ಕಾರ್ಯ ಒಡೆಯರ ಸಂಸ್ಥಾನದ ಕೀರ್ತಿಯನ್ನು ಶಾಶ್ವತವಾಗಿ ಉಳಿಸುವಂತೆ ಮಾಡಿದೆ.

  English summary
  Mysuru Maharani Trishika Kumari Devi launches "The Little Bunting" startup to Save Channapatna Toys. Read on.
  Related News
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X