• search

ವೈರಲ್ ವಿಡಿಯೋ: ಅಜ್ಜಿಯೊಂದಿಗೆ ಬರಾಕ್ ಒಬಾಮಾ ಡಾನ್ಸ್ ಡಾನ್ಸ್!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕೀನ್ಯಾ, ಜುಲೈ 21: ದೊಡ್ಡಣ್ಣ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಯಾವಾಗಲೂ 'ಜನರ ಅಧ್ಯಕ್ಷ' ಎಂದೇ ಕರೆಸಿಕೊಂಡವರು. ದೊಡ್ಡ ಪದವಿಯ ಯಾವ ಹಮ್ಮಿಲ್ಲದೆ ಸದಾ ಸರಳವಾಗಿ, ಎಲ್ಲರೊಂದಿಗೆ ಬೆರೆಯುತ್ತ ಎಂಥವರಿಗೂ ಇಷ್ಟವಾಗುವವರು. ಅವರು ತಮ್ಮ ಅಜ್ಜಿಯೊಂದಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ, ನೊಬೆಲ್ ಪುರಸ್ಕೃತ ದಿ.ನೆಲ್ಸನ್ ಮಂಡೇಲಾ ಅವರ 100 ನೇ ಹುಟ್ಟುಹಬ್ಬಕ್ಕಾಗಿ ಕೀನ್ಯಾಕ್ಕೆ ತೆರಳಿದ್ದ ಒಬಾಮಾ, ಮಂಡೇಲಾ ಅವರ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ತಮ್ಮ ಅಜ್ಜಿಯೊಂದಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

  ತಲೈವಾ ರಜನಿಕಾಂತ್ ರನ್ನೇ ಮೋಡಿ ಮಾಡಿದ ಈ ಪೋರ ಯಾರು?!

  ವಯೋವೃದ್ಧೆ ಅಜ್ಜಿಯನ್ನು ಖುರ್ಚಿಯಿಂದ ಏಳಿಸಿ, ಆಕೆಯ ಕೈಹಿಡಿದು ಅವರೂ ಹೆಜ್ಜೆಹಾಕಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಎರಡು ಭಾರಿ ಅಮೆರಿಕದ ಅಧ್ಯಕ್ಷರಾಗಿ ಉನ್ನತ ಹುದ್ದೆಯನ್ನು ಅನುಭವಿಸಿದರೂ ಯಾವ ಅಹಂಕಾರವಿಲ್ಲದೆ, ತಮ್ಮ ಸಾಂಪ್ರದಾಯಿಕ ಬುಡಕಟ್ಟು ನೃತ್ಯಕ್ಕೆ ಹೆಜ್ಜೆ ಹಾಕಿದ ಒಬಾಮಾ ವರ್ತನೆಗೆ ಶ್ಲಾಘನೆಯ ಮಹಾಪೂರ ಹರಿದುಬರುತ್ತಿದೆ.

  Viral video: Barack Obama dancing with granny in Kenya

  ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿದೆ. ಹೀಗೆ ತಮ್ಮ ಅಧಿಕಾರ, ಹುದ್ದೆ ಎಲ್ಲವನ್ನೂ ಮರೆತು, ಎಲ್ಲರೊಡನೆ ಎಲ್ಲರಂತಾಗಿ ಬೆರೆವ ಒಬಾಮ ಅವರ ವ್ಯಕ್ತಿತ್ವ ಸ್ಫೂರ್ತಿ ಸೆಲೆಯೇ ಸರಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  While in India we are debating whether or not Congress president Rahul Gandhi did the right thing by hugging Prime Minister Narendra Modi during the no-confidence motion debate in the Lok Sabha on Friday, a video of former American president Barack Obama dancing with his grandmother in Kenya went viral.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more