Get Updates
Get notified of breaking news, exclusive insights, and must-see stories!

DVS ಬೆನ್ನು ಬಿಡದ ಅಶ್ಲೀಲ ವಿಡಿಯೋ ಅಸಲಿಯೋ ಅಥವಾ ನಕಲಿಯೋ?

ಬೆಂಗಳೂರು, ಸೆ. 20: ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ತನ್ನ ವಿರುದ್ಧ ಯುವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಎರಡು ತಿಂಗಳ ಹಿಂದೆಯೇ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ತಂದಿದ್ದರು. ತಡೆಯಾಜ್ಞೆ ತಂದ ನಾಲ್ಕೇ ದಿನಕ್ಕೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು! ಅದಾಗಲೇ ಗೌಡರ ಬೆನ್ನತ್ತಿದ್ದ ವಿಡಿಯೋ ಈಗ ಬಹಿರಂಗಗೊಂಡಿತೇ? ಇನ್ನೂ ಈ ಸಿಡಿ ಅಸಲಿಯೋ ನಕಲಿಯೋ? ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಕುರಿತು ಹೇಳಿದ ಸತ್ಯವೇನು?

ಬಿಜೆಪಿ ನಾಯಕರೊಬ್ಬರಿಗೆ ಸೇರಿದ ಅಶ್ಲೀಲ ವಿಡಿಯೋ ಕಾಲ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದು ವಾಟ್ಸಪ್‌ಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೇಂದ್ರ ಮಾಜಿ ಸಚಿವ ಡಿ. ವಿ. ಸದಾನಂದಗೌಡ ಅವರು "ಇದೊಂದು ಡೀಪ್ ಫೇಕ್ ವಿಡಿಯೋ, ನನ್ನ ನಕಲಿ ವಿಡಿಯೋ ಮಾಡಿ ನನ್ನ ನಿಷ್ಕಳಂಕ ವ್ಯಕ್ತಿತ್ವ ಹಾಳು ಮಾಡಲು ವಿರೋಧಿಗಳು ಇದನ್ನು ನಿರ್ಮಿಸಿದ್ದಾರೆ. ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಡಿ.ವಿ. ಸದಾನಂದಗೌಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Morphed Video of DV Sadananda Gowdas goes viral; is it original or fake?

ಸರಣಿ ಟ್ವೀಟ್ ಮಾಡಿರುವ ಗೌಡರು ಈ ಬಗ್ಗೆ ಮಾಡಿರುವ ಬಗ್ಗೆ ಮಾಹಿತಿ ಇದ್ದರೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನು ಫಾರ್ವಡ್ ಮಾಡುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಡೀಪ್ ಫೇಕ್ ವಿಡಿಯೋ, ಇದನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಕೋರಿ ತಮ್ಮ ಆಪ್ತ ತಮ್ಮೇಗೌಡರ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ, ಉತ್ತರ ವಿಭಾಗದ ಡಿಸಿಪಿ ಹಾಗೂ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎರಡು ತಿಂಗಳ ಹಿಂದೆಯೇ ಬೆನ್ನತ್ತಿದ್ದು ಇದೇ ಸಿಡಿ ಭೂತವೇ?: ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರೇ ಸ್ವತಃ ತನಗೆ ಸಂಬಂಧಿಸಿದ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಆದೇಶವನ್ನು ಕಳೆದ ಜು. 02 ರಂದೇ ಪಡೆದಿದ್ದರು. ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡುವ ಸಾಧ್ಯತೆಯಿದೆ. ಚುನಾವಣೆ ಹಾಗೂ ಕ್ಯಾಬಿನೆಟ್ ವಿಸ್ತರಣೆ ಇರುವ ಸಂದರ್ಭದಲ್ಲಿ ನನ್ನ ಮರ್ಯಾದೆ ಹಾಳು ಮಾಡುವ ಕೃತ್ಯ ಮಾಡುವ ಸಾಧ್ಯತೆ ಇರುವುದರಿಂದ ನಾನು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದೇನೆ. ಮಾಧ್ಯಮ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ. ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಆಧಾರ ರಹಿತ ವರದಿ ಪ್ರಕಟಿಸಬಾರದು ಎಂದು ನ್ಯಾಯಾಲಯದಿಂದ ಆದೇಶ ಪಡೆದಿದ್ದೇನೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜು. 2 ರಂದೇ ಹಂಚಿಕೊಂಡಿದ್ದರು.

Morphed Video of DV Sadananda Gowdas goes viral; is it original or fake?

ಅದಾಗಲೇ ಸಿಡಿ ಸ್ಫೋಟ ಗಾಳಿ ಸುದ್ದಿ: ಯಾವಾಗ ನ್ಯಾಯಾಲಯದ ಮೊರೆ ಹೋಗಿ ಪ್ರತಿಬಂಧಕಾಜ್ಞೆ ತಂದರೋ ಅದಾಗಲೇ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡರಿಗೆ ಸೇರಿದ್ದ ವಿಡಿಯೋ ಸ್ಫೋಟಗೊಳ್ಳಲಿದೆ ಎಂಬ ಗಾಳಿಮಾತುಗಳು ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದವು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟದಿಂದ ಹೈರಾಣ ಆಗಿದ್ದ ಬಿಜೆಪಿ ಪಕ್ಷದಲ್ಲಿಯೇ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.

ಸಚಿವ ಸ್ಥಾನದಿಂದ ಕೆಳಗೆ ಇಳಿದಿದ್ದ ಡಿವಿಎಸ್: ವಿಪರ್ಯಾಸವೆಂದರೆ ಡಿ.ವಿ. ಸದಾನಂದಗೌಡರು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದು ಮೂರು ದಿನ ಕಳೆದಿರಲಿಲ್ಲ. ಕೇಂದ್ರ ನಾಯಕರ ಸೂಚನೆ ಮೇರೆಗೆ ಕೇಂದ್ರದ ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವಾಗಲೂ ಗೌಡರ ಸಿಡಿ ಮಾತು ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿತ್ತು. ಆದರೆ ಯಾವ ಸಿಡಿ- ವಿಡಿಯೋ, ಅಡಿಯೋ ಬಹಿರಂಗವಾಗಿರಲಿಲ್ಲ. ಇದೀಗ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬಿಡುಗಡೆಯಾಗಿರುವ "ಸೆಕ್ಸ್ ವಿಡಿಯೋ ಚಾಟ್ " ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇದು ಡೀಪ್ ಫೇಕ್ ವಿಡಿಯೋ ಎಂದು ಡಿ.ವಿ. ಸದಾನಂದಗೌಡ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಏಳಿಗೆ ಸಹಿಸದ ವಿರೋಧಿಗಳು ನನ್ನ ಹೋಲುವ ಚಿತ್ರ ಮಾಡಿ ತೇಜೋವಧೆ ಮಾಡಿದ್ದ, ಈ ಕುರಿತು ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಕಳೆದ ಜುಲೈನಲ್ಲಿಯೇ ಸಿಡಿ ಪ್ರಹಸನದ ಆರೋಪಕ್ಕೆ ಡಿ.ವಿ. ಸದಾನಂದಗೌಡರು ಸಚಿವ ಸ್ಥಾನ ಕಳೆದುಕೊಂಡರೇ ಎಂಬ ಪ್ರಶ್ನೆ ಮೂಡಿದೆ.

Morphed Video of DV Sadananda Gowdas goes viral; is it original or fake?

ನಿಜವಾಗಿಯೂ ಡೀಪ್ ಫೇಕ್ ವಿಡಿಯೋ?: ಇನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ಚಾಟ್ ವಿಡಿಯೋ ಡೀಪ್ ಫೇಕ್ ವಿಡಿಯೋ ಎಂದು ಖುದ್ದು ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಇದೊಂದು ನಕಲಿ ವಿಡಿಯೋ ಎಂದು ಡಿವಿಎಸ್ ತನ್ನ ಆಪ್ತರ ಮೂಲಕ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಕೋರಿದ್ದಾರೆ. ಈ ವಿವಾದಿತ ವಿಡಿಯೋ ಡೀಪ್ ಫೇಕ್ ಅಥವಾ ಮಾರ್ಫಿಂಗ್ ಎಂಬುದರ ಬಗ್ಗೆ ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ವಿವರ ಇಲ್ಲಿದೆ.

ಡೀಪ್ ಫೇಕ್ 30 ಸೆಕೆಂಡ್ ಮೇಲೆ ಮಾಡೋಕೆ ಆಗಲ್ಲ: ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸೆಕ್ಸ್ ಚಾಟ್ ವಿಡಿಯೋ ಡೀಪ್ ಫೇಕ್ ನಿಂದ ತಯಾರಿಸಿದ್ದಲ್ಲ. ಯಾಕೆಂದರೆ 30 ಸೆಕೆಂಡಿಗೂ ಅಧಿಕ ಸಮಯಕ್ಕೆ ಡೀಪ್ ಫೇಕ್ ಮಾಡುವುದು ಕಷ್ಟ. ಡೀಪ್ ಫೇಕ್ ಮಾಡಿದ್ರೂ 30 ಸೆಕೆಂಡ್ ಮೇಲೆ ಮಾಡಲು ಸಾಧ್ಯವಿಲ್ಲ. ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ಆಗಿರುವ ವಿಡಿಯೋಗೆ ಸಂಬಂಧಸಿದ ಮೂಲ ವಿಡಿಯೋ ಅತ್ಯಗತ್ಯ. ಯಾವುದೇ ಪ್ರಯೋಗಾಲಯಕ್ಕೆ ಹೋದರೂ ಹಲವರ ಮೊಬೈಲ್‌ಗಳಿಗೆ ಫಾರ್ವರ್ಡ್ ಆಗಿರುವ ವಿಡಿಯೋ ನೀಡಿದರೆ, ಎಡಿಟೆಡ್ ವಿಡಿಯೋ ಎಂಬ ಅಭಿಪ್ರಾಯ ಸರ್ವೆ ಸಾಮಾನ್ಯ. ಆದರೆ, ಎಡಿಟೆಡ್ ವಿಡಿಯೋದಲ್ಲಿರುವ ವ್ಯಕ್ತಿ, ಸಂವಹನ ಸತ್ಯ ಎಂದೇ ಇರುತ್ತದೆ. ಅದು ಡೀಫ್ ಫೇಕ್ ಎಂತ ಭಾವಿಸುವುದು ತಪ್ಪಾಗುತ್ತದೆ. ಎಡಿಟೆಡ್ ಎಂಬುದನ್ನು ಮುಂದಿಟ್ಟುಕೊಂಡು ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕುತ್ತಾರೆ. ಇದನ್ನು ಡಿಜಿಟಲ್ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ವಾಸ್ತವಾಂಶ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

Morphed Video of DV Sadananda Gowdas goes viral; is it original or fake?

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಅಭಿಪ್ರಾಯ ನೋಡಿ ಹೇಳುವುದಾದರೆ ಇದು ಮೇಲ್ನೋಟಕ್ಕೆ ನಕಲಿ ವಿಡಿಯೋ ಅಲ್ಲ. ಮೂಲ ವಿಡಿಯೂ ನೂ ಅಲ್ಲ. ಮೂಲ ವಿಡಿಯೋ ಇಲ್ಲದಿದ್ದರೆ ಸಾಮಾನ್ಯವಾಗಿ ಇದನ್ನು ಎಡಿಟೆಡ್ ವಿಡಿಯೋ ಅಂತಲೇ ತನಿಖಾ ಸಂಸ್ಥೆಗಳು ಪರಿಗಣಿಸುತ್ತವೆ. ಆದರೆ, ಅದರಲ್ಲಿರುವ ವ್ಯಕ್ತಿಗಳ ಚಿತ್ರಗಳನ್ನು ಡೀಪ್ ಫೇಕ್ ಮಾಡಿದರೂ 30 ಸೆಕೆಂಟ್ ಮೀರಿ ಮಾಡಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ 3.42 ನಿಮಿಷ ಇರುವುದರಿಂದ ಇದರಲ್ಲಿರುವರನ್ನು ಡೀಪ್ ಫೇಕ್ ಮಾಡಲು ಸಾಧ್ಯವಿಲ್ಲ ಎಂದೇ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Morphed Video of DV Sadananda Gowdas goes viral; is it original or fake?

ವಿಶೇಷ ಎಂದರೆ ಡಿವಿಎಸ್ ಅವರಿಗೆ ಈ ವಿಡಿಯೋ ಬಿಡುಗಡೆ ಬಗ್ಗೆ ಮೊದಲೇ ಸುಳಿವು ಸಿಕ್ಕಿತಾ? ಇದೇ ವಿಡಿಯೋ ಕೇಂದ್ರ ವರಿಷ್ಠರ ಗಮನಕ್ಕೆ ಹೋಗಿ ಡಿವಿಎಸ್ ಅವರ ಕೇಂದ್ರ ಸಚಿವ ಸ್ಥಾನ ಕಳಚಿತೇ? ಇದೀಗ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ವಿಡಿಯೋ ಬಿಡುಗಡೆ ಆಗಿರುವುದು ಕೂಡ ಹಲವಾಗು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಎಲ್ಲದಕ್ಕೂ ಪೊಲೀಸರ ತನಿಖೆ ತೆರೆ ಎಳೆಯಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+