ಬೆಂಕಿಯನ್ನು ಉಸಿರಾಡುವ ಕಲೆಗಿಂತ ಆರಿಸುವ ಕಲೆ ಮುಖ್ಯ

ಹಲವು ವರ್ಷಗಳ ಕಠಿಣ ಸಾಧನೆ ಮಾಡಿದ ಬಳಿಕ ಮಾಸ್ಟರ್ ಹೆಂಜಿನ್ ಬಾಯಿಯ ಮೂಲಕ ಬೆಂಕಿಯನ್ನು ಉಸಿರಾಡುವ ಕಲೆಯನ್ನು ಸಿದ್ಧಿಸಿಕೊಂಡ.

'ನಾನು ನನ್ನ ಜೀವಮಾನದ ಅವಧಿಯಲ್ಲಿ ಈ ರೀತಿಯ ಮಹಾನ್ ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಸಾಧ್ಯವೇ?' ಎಂದು ಮಾಸ್ಟರ್‌ ಹೆಂಜಿನ್‌ನನ್ನು ಶಿಷ್ಯ ಮೊಂಡೈ ಪ್ರಶ್ನಿಸಿದ.

ಅದಕ್ಕೆ ಮಾಸ್ಟರ್, 'ಬಾಯಿಯಿಂದ ಬೆಂಕಿಯನ್ನು ಉಸಿರಾಡುವುದು ಬಹಳ ಸುಲಭ. ಆದರೆ ಆ ಬೆಂಕಿಯನ್ನು ಆರಿಸುವುದನ್ನು ಕಲಿಯುವುದೇ ಝೆನ್‌ನ ಮುಖ್ಯ ಉದ್ದೇಶ' ಎಂದ.

Zen Stories How To Learn Breathe Fire From Mouth

ನಾವು ನಮ್ಮ ಸಿಟ್ಟು, ಕೋಪವನ್ನು ಇನ್ನೊಬ್ಬರ ಮೇಲೆ ಪ್ರದರ್ಶಿಸುವುದು ಬಹಳ ಸುಲಭ. ಅದಕ್ಕೆ ನಾವು ಯಾವುದೇ ಜ್ಞಾನ ಪಡೆಯಬೇಕಿಲ್ಲ. ಆದರೆ ಝೆನ್ ಕಲಿಕೆಯ ಮುಖ್ಯ ಉದ್ದೇಶ ನಾವು ಸಿಟ್ಟನ್ನು ಹೇಗೆ ನಿಯಂತ್ರಿಸುವುದು ಎಂದು. ತನ್ನ ಕೋಪವನ್ನು ನಿಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದ ವ್ಯಕ್ತಿ ಇತರರ ಕೋಪವನ್ನೂ ತಣಿಸಬಲ್ಲ ಎನ್ನುವುದು ಈ ಝೆನ್ ಕಥೆಯ ಅರ್ಥ.

ಹಕ್ಕಿ ಸತ್ತಿದೆಯೋ, ಬದುಕಿದೆಯೋ?

ಒಬ್ಬ ಯುವಕ ಒಮ್ಮೆ ಝೆನ್ ಗುರುವನ್ನು ಪರೀಕ್ಷಿಸಲು ನಿರ್ಧರಿಸಿದ. ಪುಟ್ಟ ಹಕ್ಕಿಯೊಂದನ್ನು ಹಿಡಿದು ಅದನ್ನು ಮುಷ್ಠಿಯಲ್ಲಿಟ್ಟುಕೊಂಡು ಗುರುವಿನ ಬಳಿ ಹೋದ. ಹಕ್ಕಿ ಬದುಕಿದೆ ಎಂದರೆ ಅದನ್ನು ಹಾಗೆಯೇ ಹಿಸುಕಿ ಸಾಯಿಸುವುದು, ಸತ್ತಿದೆ ಎಂದರೆ ಮುಷ್ಠಿ ತೆರೆದು ಹಕ್ಕಿಯನ್ನು ಹಾರಿಬಿಡುವುದು ಎಂದು ಆತ ತೀರ್ಮಾನಿಸಿಕೊಂಡಿದ್ದ.

ಬೆನ್ನ ಹಿಂದೆ ಕೈಕಟ್ಟಿಕೊಂಡು, 'ಗುರುಗಳೇ, ನನ್ನ ಮುಷ್ಠಿಯೊಳಗೆ ಇರುವ ಹಕ್ಕಿ ಬದುಕಿದೆಯೋ, ಸತ್ತಿದೆಯೋ?' ಎಂದು ಯುವಕ ಕೇಳಿದ.

'ನಿನ್ನ ಕೈಯಲ್ಲೇ ಉತ್ತರ ಇದೆ!' ಎಂದು ಗುರು ಶಾಂತವಾಗಿ ಉತ್ತರಿಸಿ ಎದ್ದುಹೋದ.

(ಝೆನ್ ಕಥೆ ಸಂಗ್ರಹ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+