123437new delhiಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg123437new delhiನವದೆಹಲಿಯಲ್ಲಿ ದಾಟು ಚಿತ್ರ ಪ್ರದರ್ಶನ/movies/headlines/2009/01/06-daatu-movie-show-karnataka-sangha-new-delhi.htmlರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು 33922http://kannada.oneindia.com/img/2009/01/06-daatu-movie-poster.jpg123437new delhiದೆಹಲಿ ಕನ್ನಡಿಗರಿಗೆ ದಾಟು ಚಿತ್ರದ ಅನುಭವ/movies/headlines/2009/01/0111-daatu-movie-an-overview-caste-conversion.htmlನವದೆಹಲಿ, ಜ. 11: ಚಲನಚಿತ್ರ ಮಾಧ್ಯಮವು ಸಮಾಜಕ್ಕೆ ಹೊಸ ದಿಕ್ಕು ತೋರಿಸುವ, ಬದಲಾವಣೆಗೆ ಕಾರಣವಾಗಬಹುದಾದ ಮಾಧ್ಯಮವಾಗಿದ್ದು, ಅದನ್ನು ಕೆ. ಶಿವರುದ್ರಯ್ಯ ಅವರು ಮಾನವೀಯ ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಶನಿವಾರದಂದು ಇಲ್ಲಿ ಹೇಳಿದರು.ಅವರು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ದೆಹಲಿಯಲ್ಲಿನ ಕರ್ನಾಟಕ ವಾರ್ತಾ ಕೇಂದ್ರವು ಇಂದು 34008http://kannada.oneindia.com/img/2009/01/11-daatu-dks.jpg123437new delhiಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ/news/2009/01/15/hubli-dharwad-city-corporation-committee-new-delhi.htmlಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)34082http://kannada.oneindia.com/img/2009/01/15-hubli-dharwad-councillors.jpg123437new delhiಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg522864cauveryನರನಾರಿ ನೀರುಪುಢಾರಿ/literature/short-story/2009/0711-cauvery-dispute-and-politics-premashekhara.html* ಪ್ರೇಮಶೇಖರ, ನವದೆಹಲಿ ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. 37927http://kannada.oneindia.com/img/2009/07/11-premashekhara1.jpg522864cauveryಕೆಆರ್ಎಸ್ ಗೆ ಶೋಭಾ, ಸಿಎಂ ಬಾಗಿನ ಅರ್ಪಣೆ/news/2009/07/24/bsy-shobha-offer-bagina-to-krs-kabini-reservoirs.htmlಮೈಸೂರು, ಜು. 24 : ಕೃಷ್ಣರಾಜಸಾಗರ ಸಂಪೂರ್ಣ ಭರ್ತಿಯಾಗಿದ್ದು, ನಾಡಿನ ಜೀವನಾಡಿ ಕಾವೇರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ರಾಮಚಂದ್ರೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ ವೈ ರಾಘವೇಂದ್ರ ಉಪಸ್ಥಿತರಿದ್ದರು. ಗುರುವಾರ ರಾತ್ರಿ ವೇಳೆಗೆ ಜಲಾಶಯದ ನೀರಿನ ಮಟ್ಟ 38183http://kannada.oneindia.com/img/2009/07/24-bsy-kaveri-puje1.jpg522864cauveryತಮಿಳುನಾಡಿಗೆ ಕಾವೇರಿ ನೀರು : ಓಕೆ ಅಂದ ಸಿಎಂ/news/2009/07/24/no-problem-in-releasing-water-to-tamilnadu-bsy.htmlಮೈಸೂರು, ಜು. 24 : ರಾಜ್ಯದಲ್ಲಿ ಸಾಕಷ್ಟು ಮಳೆ ಆಗಿರುವುದರಿಂದ ಜೀವನಾಡಿ ಕಾವೇರಿ ನದಿ ತುಂಬಿ ಹರಿಯತೊಡಗಿದೆ. ಇದರಿಂದ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.ಕೆಆರ್ಎಸ್ ಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಮುಂಗಾರುಮಳೆ ಸ್ವಲ್ಪ ಕೋಪಿಸಿಕೊಂಡಂತೆ ಕಂಡರೂ ನಂತರದ ದಿನಗಳಲ್ಲಿ ಉತ್ತಮ 38195http://kannada.oneindia.com/img/2009/07/24-yediyurappa2.jpg522864cauveryತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!/literature/my-karnataka/2009/0805-thiruvalluvar-yeddyurappa-karunanidhi.htmlಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರುನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ 38437http://kannada.oneindia.com/img/2009/08/05-bsy-invites-karuna1.jpg522864cauveryಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?/literature/my-karnataka/2009/0806-around-thiruvalluvar-statue-installation.html* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ 38468http://kannada.oneindia.com/img/2009/08/06-thiruvalluvar1.jpgnews"> ನರನಾರಿ ನೀರುಪುಢಾರಿ | Cauvery dispute | Kannada short story | Premashekhara | KRS - ಸಣ್ಣಕಥೆ : ನರನಾರಿ ನೀರುಪುಢಾರಿ. - Kannada Oneindia

ನರನಾರಿ ನೀರುಪುಢಾರಿ

A kannada short story by Premashekhara
* ಪ್ರೇಮಶೇಖರ, ನವದೆಹಲಿ

ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. ಉಳಿದವರು "ನಮಗೇ ಇಲ್ಲ ನಿನಗೇನು ಕೊಡೋಣ? ಮಳೆಹನಿ ಕಂಡು ವರ್ಷಗಳೇ ಆಗಿಹೋದವು" ಅಂದರು. ಅವನವರನ್ನು ದೂಷಿಸಲಿಲ್ಲ. ಅವರ ಕಷ್ಟ ಅವನ ಕಣ್ಣೆದುರಿಗೇ ಇತ್ತು. ಅವರಿಗಾಗಿ ಮರುಗಿದ. ಈ ಬೆಂಗಾಡಿನ ಒಂದು ಜೀವವನ್ನಾದರೂ ನೀರುನೆರಳು ಯಥೇಚ್ಛವಾಗಿರುವ ತನ್ನೂರಿಗೆ ಕರೆದುಕೊಂಡುಹೋಗುವ ತನ್ನ ನಿರ್ಧಾರದ ಬಗ್ಗೆ ಅವನಿಗೆ ಹೆಮ್ಮೆಯೆನಿಸಿತು.

ಮೂಡಣ ಬೆಟ್ಟಗಳ ಸೀಮೆಯ ಹೆಣ್ಣೇ ಆ ವಂಶಕ್ಕೆ ಸೊಸೆಯಾಗಿ ಬರಬೇಕೆಂದು ಹಿಂದೆ ಯಾರೋ ಹುಟ್ಟುಹಾಕಿದ ಸಂಪ್ರದಾಯವೋ ಅಥವಾ ವಿಧಿಸಿದ ಕಟ್ಟಳೆಯೋ ಅಥವಾ ಕೊಟ್ಟ ಶಾಪವೋ ಅಂತೂ ಅವನ ಮನೆತನದ ವಿವಾಹವಯಸ್ಕ ಗಂಡುಗಳೆಲ್ಲಾ ಮೂಡಣ ಬೆಟ್ಟಸೀಮೆಯ ಹಾದಿ ಹಿಡಿಯುತ್ತಿದ್ದರು. ಅವನ ತಂದೆ ತಾತ ಮುತ್ತಾತರೆಲ್ಲಾ ಆ ಹಾದಿ ಹಿಡಿದಿದ್ದರು. ಆ ಮನೆತನದ ಗಂಡುಗಳ ತಾಯಂದಿರೆಲ್ಲಾ ಮೂಡಣ ಸೀಮೆಯ ಸ್ತ್ರೀಯರಾಗಿರುತ್ತಿದ್ದರು. ಹಾಗೇ ಅವರೆಲ್ಲರೊಡನೆ ಹಸೆಮಣೆ ಏರುವ ಸುಯೋಗವೂ ಮೂಡಣ ಸೀಮೆಯ ಕನ್ಯೆಯರದೇ ಆಗಿತ್ತು. ತನ್ನ ಹಿರೀಕರೆಲ್ಲರೂ ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಆ ಪುರಾತನ ಸಂಪ್ರದಾಯವನ್ನು ಮುಂದುವರಿಸುವುದು ಅವನ ಕರ್ತವ್ಯವಾಗಿತ್ತು. ಮೂಡಣ ಸೀಮೆಯ ಸ್ತ್ರೀಯ ಮಡಿಲಲ್ಲಾಡಿ ಬೆಳೆದ ಅವನೆದೆಯಲ್ಲೀಗ ಅದೇ ಮೂಡಣ ಸೀಮೆಯ ಕನ್ಯಾಮಣಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ಮುದ್ದಿಸುವ ಬಯಕೆ ಉದಿಸಿತ್ತು.

ಮಧ್ಯಾಹ್ನದ ರಣಬಿಸಿಲು. ಸುತ್ತಲೂ ಒಂದು ನರಪಿಳ್ಳೆಯೂ ಇಲ್ಲ. ಹಕ್ಕಿಗಳ ಕಲರವವೂ ಇಲ್ಲ. ಜೀವದ ಕುರುಹೇ ಇಲ್ಲ. ಅವನು ಸುಸ್ತಾಗಿ ನಿಂತುಬಿಟ್ಟ. ಅವನಮ್ಮ ಹೇಳಿದ್ದ ಊರು ತಲುಪಲು ಇನ್ನೊಂದು ಹರದಾರಿಯಷ್ಟೇ. ಅಲ್ಲಿಯವರೆಗೆ ನಡೆಯುವುದೂ ತನ್ನಿಂದಾಗದು ಎಂದವನಿಗೆ ಅನಿಸಿಬಿಟ್ಟಿತು. ತಲೆಯೆತ್ತಿ ಮೇಲೆ ನೋಡಿದ. ಉರಿಯುತ್ತಾ ಸಾಗಿದ್ದ ಸೂರ್ಯನಿಗೆ ಹೆದರಿ ಬಿಳೀ ಮೋಡವೊಂದು ಎಲ್ಲೋ ದೂರದಲ್ಲಿ ಮುದುರಿ ನಡೆದಿತ್ತು.

ಅವನು ಅತ್ತಲೇ ನೋಡಿದ. ಕೈಬೀಸಿ ಕರೆದ. "ನಾನಿದ್ದೇನೆ, ಹೆದರಿಕೆ ಯಾಕೆ? ಬಾ" ಅಂದ. ಮೋಡ ಗಕ್ಕನೆ ನಿಂತಿತು. ಅಂಥಾ ಪ್ರೇಮಪೂರಿತ ಆಹ್ವಾನವನ್ನು ಅದೆಂದೂ ಕೇಳಿರಲಿಲ್ಲ.
ಹಾಳಾದ್ದು, ಒಂದ್ ಹನೀನಾದ್ರೂ ಸುರಿಸಬಾರದಾ?'
ಇದರ ಮನೆ ಹಾಳಾಗ. ಹಂಗೇ ಹೊರಟ್‌ಹೋಗೋದ್ ನೋಡು.'

ಅದರ ಕಿವಿಗೆ ಬಿದ್ದಿದ್ದದೆಲ್ಲಾ ಇಂಥದೇ ಬೈಗಳುಗಳು. ಅದರ ಕಷ್ಟವನ್ನು ಯಾರೂ ಅರಿತಿರಲಿಲ್ಲ. ಸಹಾನುಭೂತಿ ತೋರಿರಲಿಲ್ಲ. ಹೀಗಿರುವಾಗ ಈಗ ಈ ಪರಿಯ ಪ್ರೇಮಲ ಆಹ್ವಾನ! ಮೋಡಕ್ಕೆ ಕುಣಿದಾಡುವಂತಾಯಿತು. ಒಂದೇ ಉಸಿರಿನಲ್ಲಿ ಅವನತ್ತ ಓಡಿತು. ಆದರೆ ಅದರ ಬಂಧುಬಾಂಧವರೆಲ್ಲಾ ಅಡ್ಡ ನಿಂತರು. ಅಮ್ಮ ಗದರಿದಳು, ಅಪ್ಪ ಕಪಾಲಕ್ಕೆ ಬಾರಿಸಿಯೇ ಬಿಟ್ಟ. ಅಣ್ಣತಮ್ಮ, ಅಕ್ಕತಂಗಿಯರಂತೂ "ಥೂ ನಾಚಿಕೆಯಿಲ್ಲದವಳು" ಎಂದು ಹೀಗಳೆದರು. ಗಂಡ, ಅದೆಲ್ಲೋ ಇದ್ದವ ಓಡಿ ಬಂದವನೇ ಮುಂದಲೆ ಹಿಡಿದು ದಬದಬ ಬಾರಿಸಿಯೇಬಿಟ್ಟ. "ಒಂದ್ ಹೆಜ್ಜೆ ಮುಂದಿಟ್ರೆ ಹುಟ್ಟಿಲ್ಲಾ ಅನ್ನಿಸಿಬಿಡ್ತೀನಿ" ಎಂದು ಅರಚಿದ.

ಇದಾವುದನ್ನೂ ಲೆಕ್ಕಿಸುವ ಸ್ಥಿತಿಯಲ್ಲಿ ಮೋಡ ಇರಲಿಲ್ಲ. ಹುಟ್ಟಿದಾಗಿನಿಂದಲೂ ಕೇಳಲು ಕಾತರಿಸಿದ್ದ ಪ್ರೇಮದ ಆಹ್ವಾನ ಕಿವಿಗೆ ಬಿದ್ದಾಗ ಅದನ್ನು ಧಿಕ್ಕರಿಸುವುದು ಅದಕ್ಕೆ ಸಾಧ್ಯವಾಗಲೇ ಇಲ್ಲ. ಎಲ್ಲರ ಹಿಡಿತಗಳಿಂದಲೂ ತಪ್ಪಿಸಿಕೊಂಡು, ಎಲ್ಲ ತಡೆಗಳನ್ನೂ ಹರಿದುಕೊಂಡು ಅದು ಕೆಳಗೆ ಓಡೋಡಿ ಬಂತು. ಸಾಕಷ್ಟು ದೂರ ಅದನ್ನು ಅಟ್ಟಿಸಿಕೊಂಡು ಬಂದ ಅದರ ಮನೆಯವರೆಲ್ಲರೂ ಕಾಲು ಕುಸಿದು ನಿಂತರು. ಶಾಪ ಹಾಕಿದರು: "ಅವನ ಬಳಿಗೇ ಹೋಗುತ್ತೀಯಲ್ಲ, ಹೋಗು. ನಿನ್ನಿಂದೆಂದೂ ಅವನಿಗೆ ಸುಖವಿರದಿರಲಿ. ನಿನ್ನಿಂದಾಗಿ ಅವನು ದಿಕ್ಕುದೆಸೆ ಮನೆಮಠ ಕಳೆದುಕೊಂಡು ಊರೂರು ಅಲೆಯಲಿ. ನಿನಗೆಂದೂ ನೆಮ್ಮದಿಯ ನೆಲೆಯಿಲ್ಲದಿರಲಿ. ಸದಾ ಅವನ ತಲೆಯ ಮೇಲೇ ನೀರಾಗಿ ಸುರಿಯುತ್ತಿರು."

ಶಾಪ ನಿಜವಾಗಿಯೇಬಿಟ್ಟಿತು. ಬಿಳೀಮೋಡ ಗಕ್ಕನೆ ಕಾಳಿಯಾಗಿಬಿಟ್ಟಿತು. ನೀರಾಗಿ ಕರಗಿತು. ಅವನ ತಲೆಯ ಮೇಲೆ ಸುರಿಯತೊಡಗಿತು.

ಅವನು ಬೆಚ್ಚಿದ. ಮುಂದೆ ಓಡಿದ, ಹಿಂದೆ ಹಾರಿದ, ಎಡಕ್ಕೆ ಹೊರಳಿದ, ಬಲಕ್ಕೆ ಬಿದ್ದ. ಅವನ ತಲೆಯ ಮೇಲಿನ ಜಲಪಾತ ನಿಲ್ಲಲಿಲ್ಲ. ಅವನು ಹೋದೆಡೆ ತಾನೂ ಹೊರಟಿತು. ಕಂಡ ಒಂದು ಗುಡಿಸಲಿನೊಳಗೆ ನುಗ್ಗಿದ. ತಲೆಯ ಮೇಲಿನ ನೀರಧಾರೆ ನಿಲ್ಲಲಿಲ್ಲ. ಅಲ್ಲಿದ್ದ ವೃದ್ಧ ದಂಪತಿಗಳು ಮಡಕೆ ಕುಡಿಕೆ ಪಾತ್ರೆ ಪರಡಿಗಳಲ್ಲೆಲ್ಲಾ ನೀರು ತುಂಬಿಸಿಕೊಂಡರು. ನಾವು ವೃದ್ಧರು, ಮುಚ್ಚಿಕೊಳ್ಳಲು ನಮ್ಮಲ್ಲೇನಿದೆ ಎಂದುಕೊಂಡು ನಾಚಿಕೆ ಬಿಟ್ಟು ಬಟ್ಟೆ ಬಿಚ್ಚಿ ಸ್ನಾನ ಮಾಡಿದರು. ಅವನ ತಲೆಯ ಮೇಲಿನ ನೀರಧಾರೆ ಸುರಿಯುತ್ತಲೇ ಇತ್ತು. ಅರೆಗಳಿಗೆಯಲ್ಲಿ ಗುಡಿಸಲ ತುಂಬಾ ನೀರೋ ನೀರು.

"ಅಕ್ಕಿರಾಗಿಯೆಲ್ಲಾ ನೆನೆದುಹೋಯಿತು. ಅಯ್ಯೋ ಮಾಡುವುದೇನು?" ಮುದುಕಿ ಅತ್ತಳು.
"ಸೌದೆಯೆಲ್ಲಾ ಒದ್ದೆಯಾಗಿಹೋಯಿತು. ಇನ್ನು ನಾನು ಕೊಡಲಿ ಹಿಡಿದು ಹೋಗಬೇಕೇ? ಇದೆಲ್ಲಿಯ ಗ್ರಹಚಾರ." ಮುದುಕ ಹಲುಬಿದ. ಇಬ್ಬರೂ ಸೇರಿ ಸಿಕ್ಕಿದ್ದರಲ್ಲಿ ಅವನಿಗೆ ಬಡಿದರು. "ತೊಲಗಾಚೆ!" ಓಡಿಸಿದರು. ಅವನು ದಿಕ್ಕೆಟ್ಟು ಓಡಿದ. ತಲೆಯ ಮೇಲಿನ ನೀರಧಾರೆ ನಿಲ್ಲಲಿಲ್ಲ. ಅದೀಗ ಜಾಸ್ತಿಯಾಗಿತ್ತು. ಅವನ ದುರ್ಗತಿ ಕಂಡು ಮೋಡ ಬಿಕ್ಕಿಬಿಕ್ಕಿ ಅಳತೊಡಗಿತ್ತು.

ಬೆಟ್ಟದ ಏರುದಾರಿಯಲ್ಲಿ ಅವನು ಏದುತ್ತಾ ಓಡಿದ. ಅವನು ಓಡಿದೆಡೆ ತೊರೆಯೊಂದು ಹರಿಯಿತು. ವರ್ಷದಿಂದ ನೀರು ಕಾಣದ ಮಂದಿ ದೇವರೇ ಇವನನ್ನು ತಮ್ಮ ಬಳಿಗೆ ಕಳಿಸಿರಬೇಕೆಂದು ತಿಳಿದು ಅವನನ್ನು ಹಿಡಿದು ನಿಲ್ಲಿಸಿ ತಂತಮ್ಮ ಮಡಿಕೆ ಕುಡಿಕೆಗಳನ್ನು ತಂದು ಅವನ ಮುಂದಿಟ್ಟರು. ಅವನ ಸುತ್ತಲೂ ಸಾರ್ವಜನಿಕ ನಲ್ಲಿಗಳ ಮುಂದಿನ ದೃಶ್ಯವೊಂದು ಸೃಷ್ಟಿಯಾಯಿತು. ಅವನ ನೀರು ಮುಗಿದುಹೋಗಬಹುದೆಂದೂ, ಮುಗಿಯುವುದರೊಳಗೆ ಆದಷ್ಟು ನೀರು ಹಿಡಿದುಕೊಂಡುಬಿಡಬೆಕೆಂದು ಅವರೆಲ್ಲಾ ಆತುರ ಪಟ್ಟರು. ಎಷ್ಟು ಕೊಡಗಳು ತುಂಬಿದರೂ ಅವನ ನೆತ್ತಿಯ ಮೇಲಿನ ನೀರು ಸುರಿಯುತ್ತಲೇ ಇತ್ತು. ಅವರಿಗೀಗ ನೆಮ್ಮದಿ. ಅವನನ್ನು ಕರೆದುಕೊಂಡುಹೋಗಿ ತಮ್ಮೂರ ಕೆರೆ ಏರಿಯ ಮೇಲೆ ನಿಲ್ಲಿಸಿದರು. ಅದು ಸ್ವಲ್ಪ ದೊಡ್ಡದಿತ್ತು. ಅರ್ಧದಿನದಲ್ಲಿ ಅದು ತುಂಬಿತು. ಪಕ್ಕದ ಹಳ್ಳಿಗೆ ಸುದ್ಧಿ ಹೋಯಿತು. ಅಲ್ಲಿನ ಜನ ಓಡೋಡಿ ಬಂದರು... ಈ ಊರಿನಲ್ಲಿ ನಡೆದದ್ದೇ ಅಲ್ಲೂ... ಆಮೇಲೆ ಇನ್ನೊಂದು ಊರು... ಮತ್ತೊಂದು ಊರು... ಮಗದೊಂದು ಊರು... ಒಂದುವಾರದಲ್ಲಿ ಅ ಪ್ರದೇಶದ ಕೆರೆಕುಂಟೆಗಳೆಲ್ಲಾ ತುಂಬಿ ತುಳುಕಿದವು. ಪುಟ್ಟ ನದಿಯೊಂದು ಆ ಬೆಟ್ಟಪ್ರದೇಶದಲ್ಲಿ ಹುಟ್ಟಿ ಕೆಳಗಿನ ಬಯಲಿನತ್ತ ಹರಿಯತೊಡಗಿತು.

ಅವನಿಗೀಗ ಯಾರೂ ದಿಕ್ಕಿರಲಿಲ್ಲ. ತಮ್ಮೂರ ಕೆರೆಕುಂಟೆಗಳೆಲ್ಲಾ ತುಂಬಿದ ಮೇಲೆ ಜನ ಅವನನ್ನು ನಿರ್ಲಕ್ಷಿಸಿಬಿಟ್ಟಿದ್ದರು. ಅವನು ತಲೆತಗ್ಗಿಸಿ ನಡೆಯತೊಡಗಿದ, ಬೆನ್ನ ದಿಂದೆ ತೊರೆಯೊಂದನ್ನು ಹರಿಸುತ್ತಾ. ಹಸಿವು ನೀರಡಿಕೆಯಾದಾಗ ನಾಲಿಗೆಯಲ್ಲಿ ಹೊರಚಾಚಿ ತಲೆಯ ಮೇಲಿಂದ ಧುಮ್ಮಿಕ್ಕುತ್ತಿದ್ದ ಜಲಧಾರೆಗೆ ಒಡ್ಡುತ್ತಿದ್ದ. ತಕ್ಷಣ ಮೋಡ ಸುತ್ತಲ ಗಿಡಮರ ಬಳ್ಳಿ ಗಾಳಿಯಿಂದ ಸಾರಸತ್ವವನ್ನು ಸೆಳೆದು ತನ್ನ ನೀರನ್ನು ಜೀವಜಲವನ್ನಾಗಿಸಿಬಿಡುತ್ತಿತ್ತು. ಹಸಿವೆಂದೂ ಅವನನ್ನು ಕಾಡಿಸಬಾರೆದೆಂದು ಅದು ಪಣ ತೊಟ್ಟಿತ್ತು. ತಾ ಕಂಡ ನಾಡುಗಳ ಬಗ್ಗೆ, ಚಿತ್ರವಿಚಿತ್ರ ಸ್ವಾರಸ್ಯಗಳ ಬಗ್ಗೆ ಅವನಿಗೆ ಹೇಳುತ್ತಿತ್ತು. ತಾನು ಒಂಟಿ ಎಂದವನಿಗೆ ಅನಿಸಲೇ ಇಲ್ಲ. ಬಾಳಸಂಗಾತಿಯನ್ನರಸಿ ತಾನೀ ಮೂಡಣ ದೇಶಕ್ಕೆ ಬಂದದ್ದು ಅವನಿಗೆ ಮರೆತೇಹೋಯಿತು. ತಾನೆಲ್ಲಿಯವನು ಎಂಬುದನ್ನೂ ಅವನು ಮರೆತುಬಿಟ್ಟ. ಮೋಡ ಅವನನ್ನು ವಿಶ್ವಮಾನವನನ್ನಾಗಿಸಿಬಿಟ್ಟಿತ್ತು. ಹೀಗೇ ಮೋಡ ಹೇಳುವ ಕಥೆಗಳನ್ನು ಕೇಳುತ್ತಾ ಊರೂರಿಗೆ ನೀರು ಹರಿಸುತ್ತಾ ಬದುಕು ಕಳೆದುಬಿಡಬೇಕೆಂದು ನಿರ್ಧರಿಸಿದ. ಒಮ್ಮೆ ಸಹಾರಾದ ಕಡೆಗೂ ಹೋದರೆ ಹೇಗೆ ಎಂದೂ ಅಂದುಕೊಂಡ.

ಆದರೆ ಲೋಕದ ವ್ಯಾಪಾರ ಬೇರೆಯದೇ ಆಗಿತ್ತು. ಬೆಟ್ಟದಲ್ಲಿ ನದಿಯೊಂದು ಹುಟ್ಟಿ ಇಳಿದು ಬಂದು ಕೆಳಗಿನ ಬಯಲಲ್ಲಿ ಹರಿಯತೊಡಗಿದ್ದು ಎಲ್ಲರಿಗೂ ಕುತೂಹಲ ಮೂಡಿಸಿತು. ನದೀಮೂಲವನ್ನರಸಿ ಹೊರಟವರು ಅವನಿದ್ದೆಡೆ ಬಂದು ತಲುಪಿದರು. ತಮ್ಮ ಕಣ್ಣುಗಳನ್ನೇ ನಂಬದಾದರು. ರಾಜಧಾನಿಗೆ ಸುದ್ಧಿ ಹೋಯಿತು. ಪೋಲೀಸರ ದಂಡು ಬಂದು ಅವನನ್ನು ನೇರವಾಗಿ ಕನ್ನಂಬಾಡಿಗೆ ಕರೆದುಕೊಂಡುಹೋಯಿತು. ಮುಖ್ಯಮಂತ್ರಿಗಳು ತಮ್ಮ ಬಾಜಾಭಜಂತ್ರಿಯೊಂದಿಗೆ ಆಗಮಿಸಿದರು.

"ನೀರಧಾರೆಯನ್ನು ಸ್ವಲ್ಪ ಹೊತ್ತು ನಿಲ್ಲಿಸು. ನಾನೊಂದು ಭಾಷಣ ಮಾಡಿ ನಂತರ ನಲ್ಲಿಯನ್ನು ತಿರುಗಿಸುವಂತೆ ನಿನ್ನ ಕಿವಿಯನ್ನು ತಿರುಗಿಸುತ್ತೇನೆ. ತಕ್ಷಣ ನೀನು ನೀರು ಹರಿಸಲು ಆರಂಭಿಸು" ಅಂದರು. ಅವನಿಗೇನೂ ಅರ್ಥವಾಗಲಿಲ್ಲ. ಪಿಳಿಪಿಳಿ ಕಣ್ಣುಬಿಟ್ಟ. ಮೋಡ ಅವಡುಗಚ್ಚಿತು. "ಮನೆಹಾಳ" ಎಂದು ಮುಖ್ಯಮಂತ್ರಿಯನ್ನು ಬೈದಿತು. ಆದರೆ ಮುಖ್ಯಮಂತ್ರಿಗಳಿಗೆ ಅದು ಕೇಳಿಸಲಿಲ್ಲ. ಅವರು ಮತ್ತೆಮತ್ತೆ ಅವನಿಗೆ ಅದನ್ನೇ ಹೇಳಿದರು. ಕೊನೆಯಲ್ಲಿ "ಇವನವ್ವನ" ಎಂದು ಬೈದರು. "ಏನಾದರೂ ಮಾಡಿ" ಎಂದು ಪಕ್ಕದಲ್ಲಿದ್ದ ನೀರಾವರಿ ಮಂತ್ರಿಗಳಿಗೆ ಹೇಳಿದರು. ನೀರಾವರಿ ಮಂತ್ರಿಗಳು ನಾಕು ಜನರನ್ನು ಕರೆದು ಪಿಸುಗಿಟ್ಟಿದರು. ಆ ಜನ ಒಂದು ದೊಡ್ಡ ಪರದೆ ತಂದು ಅವನನ್ನು ಮರೆಮಾಡಿದರು. ಮುಖ್ಯಮಂತ್ರಿಗಳ ಭಾಷಣ ಆರಂಭವಾಯಿತು.

"ನನ್ನ ಅಕ್ಕತಂಗಿಯರೇ, ಅಣ್ಣತಮ್ಮಂದಿರೇ... ನನ್ನ ದೇಹದ ಕಣಕಣವೂ ನಿಮ್ಮ ಸೇವೆಗಾಗಿ. ನಾನು ಮುಖ್ಯಮಂತ್ರಿಯಾದರೆ ನಾಡಿನ ಭಾಗ್ಯದ ಬಾಗಿಲನ್ನೇ ತೆರೆಯುವುದಾಗಿ ಚುನಾವಣೆಯ ಸಮಯದಲ್ಲಿ ನಾನು ನಿಮಗೆ ಆಶ್ವಾಸನೆ ಕೊಟ್ಟಿದ್ದು ನೆನಪಿದೆಯೇ? ಆ ಮಾತನ್ನೀಗ ನಾನು ಉಳಿಸಿಕೊಂಡಿದ್ದೇನೆ. ವರುಣದೇವನನ್ನು ಒಲಿಸಿಕೊಂಡು ನೀರಿನ ಅಕ್ಷಯಪಾತ್ರೆಯನ್ನು ನಿಮಗಾಗಿ ತಂದಿದ್ದೇನೆ. ಇನ್ನು ಮುಂದೆ ನೀರಿನ ಕೊರತೆ ನಿಮ್ಮನ್ನೆಂದೂ ಬಾಧಿಸಲಾರದು. ಇದೋ ನೋಡಿ..." ಎನ್ನುತ್ತಾ ಪರದೆಯನ್ನು "ಝಂಗ್" ಎಂದು ಸರಿಸಿದರು. ಜನ ಚಪ್ಪಾಳೆ ತಟ್ಟಿದರು. ನೀರು ಒಂದೇಸಮನೆ ಕನ್ನಂಬಾಡಿಯತ್ತ ಹರಿಯುವುದನ್ನೇ ನೋಡಿ ಬೆರಗಾದರು.

ಸುದ್ಧಿ ಎಲ್ಲೆಡೆ ಹರಡಿತು. ಪಕ್ಕದ ಮೆಟ್ಟೂರಿನಿಂದ ಜನಗಳ ಒಂದು ದೊಡ್ಡ ಗುಂಪು ಬಂದಿತು. "ಅವನನ್ನು ನಮ್ಮೂರಿಗೆ ಕಳಿಸಿಕೊಡಿ" ಎಂದು ಕೇಳಿತು. "ನಮ್ಮ ಕನ್ನಂಬಾಡಿ ಮೊದಲು ತುಂಬಲಿ. ಆಮೇಲೆ ನೋಡೋಣ" ಅಂದರು ಮುಖ್ಯಮಂತ್ರಿಯವರು ಮುಗುಮ್ಮಾಗಿ. ಮೆಟ್ಟೂರಿಗರು ಕೇಳಬೇಕಲ್ಲ. ಗಲಾಟೆ ಎಬ್ಬಿಸಿದರು. ಮುಖ್ಯಮಂತ್ರಿ ಜಪ್ಪಯ್ಯ ಅನ್ನಲಿಲ್ಲ. ಅಷ್ಟರಲ್ಲಿ ಮೆಟ್ಟೂರಿಗರಲ್ಲಿ "ಅಣ್ಣ ಡಿಎಂಕೆ" ಮತ್ತು "ತಂಬಿ ಡಿಎಂಕೆ" ಎಂಬ ಎರಡು ಗುಂಪುಗಳಾದವು. ಮೆಟ್ಟೂರಿಗೆ ನಾವು ನೀರು ತರುತ್ತೇವೆ, ನಾವು ತರುತ್ತೇವೆ ಎಂದು ಎರಡೂ ಗುಂಪಿನವರೂ ತಮ್ಮತಮ್ಮಲ್ಲೇ ಜಗಳಾಡತೊಡಗಿದರು. ಮೆಟ್ಟೂರಿಗರಿಗೆ ಮೆಟ್ಟುಗಳೇನು ಹೊಸದೇ? ಅವನ್ನೇ ಹಿಡಿದು ಬಡಿದಾಡಿದರು. ಅವನ ಪಂಚೆಯನ್ನು ಇವನು ಹರಿದ, ಇವನ ಬನಿಯನ್ನನ್ನು ಅವನು ಕಿತ್ತ. ಒಂದಿಬ್ಬರು ಸತ್ತೂಹೋದರು. ಗಲಾಟೆಗಳ ಚಿತ್ರಗಳನ್ನು ಪ್ರಕಟಿಸಿದ ಮೆಟ್ಟೂರಿನ ಕೆಲವು ಪತ್ರಿಕೆಗಳು ಘಟನೆಯನ್ನು ವಿರೂಪಗೊಳಿಸಿ "ಕನ್ನಂಬಾಡಿ'ಗಳಿಂದ ಮೆಟ್ಟೂರಿಗರ ಮೇಲೆ ಹಲ್ಲೆ, ಸಾವುನೋವು" ಎಂಬ ತಲೆಬರಹ ಕೊಟ್ಟವು. ಕನ್ನಂಬಾಡಿಯ ಜನರ ವರ್ತನೆಯನ್ನು ಖಂಡಿಸಿ ಮೆಟ್ಟೂರಿನಲ್ಲಿ ಬಂದ್ ಆಚರಿಸಲಾಯಿತು. ಇಷ್ಟೆಲ್ಲಾ ನಡೆಯುವಾಗ ಕನ್ನಂಬಾಡಿ ತುಂಬಿ ಹೆಚ್ಚಿನ ನೀರು ಹೊರಹರಿದುಹೋಗಿ ಮೆಟ್ಟೂರೂ ತುಂಬಿ ತುಳುಕಾಡಿತು. ಅದಂತೂ ಯಾರ ಗಮನಕ್ಕೂ ಬರಲೇ ಇಲ್ಲ. ಗಮನಿಸುವ ಸ್ಥಿತಿಯಲ್ಲೂ ಯಾರೂ ಇರಲಿಲ್ಲ.

ಮೆಟ್ಟೂರಿನ ಕೆಲವು ಬುದ್ಧಿವಂತರು ಒಂದಾಗಿ ಹೋರಾಡಿರೋ ಎಂದು ಅಣ್ಣತಂಬಿ ಡಿಎಂಕೆಗಳಿಗೆ ಬುದ್ಧಿ ಹೇಳಿದರು. ಅಣ್ಣತಂಬಿಗಳು ಆ ಮಾತನ್ನು ಕೇಳಿದವು. ಅವರವರ ನಡುವಿನ ಜಗಳ ನಿಂತಿತು. ಎಲ್ಲರೂ ಒಂದಾಗಿ ಮೇಲಿರುವ (ಅಂದರೆ ದಿಲ್ಲಿಯಲ್ಲಿ! ಸ್ವರ್ಗದಲ್ಲಲ್ಲ) ಮೇಜರ್ ಪುಢಾರಿಗಳಿಗೆ ಮನವಿ ಮಾಡಿಕೊಂಡರು. ಅವರೊಂದು ಟ್ರಿಬ್ಯೂನಲ್ ರಚಿಸಿದರು. ಆಮೇಲೆಲ್ಲಾ ಬರೀ ರಾಜಕೀಯ...

ತನ್ನಪಾಡಿಗೆ ತಾನು ಹೆಣ್ಣು ಹುಡುಕಿಕೊಂಡು ಹೋಗುತ್ತಿದ್ದ ಅವನು ಹೀಗೆ ಪುಢಾರಿಗಳ ಕೈಗೆ ಸಿಕ್ಕಿ ಒಂದು ಬಗೆಹರಿಸಲಾಗದ ಸಮಸ್ಯೆಯಾಗಿಹೋದ. ಪುಢಾರಿಗಳ ಕೈಗೆ ಸಿಕ್ಕಿದ ಯಾವುದು, ಯಾವನು, ಯಾವಳು ತಾನೆ ಮರ್ಯಾದೆಯಾಗಿ ಉಳಿಯಲು ಸಾಧ್ಯ? ಮತ್ತೆ... ಮ್... ಮತ್ತೆ... ಪುಢಾರಿಗಳ ಕೈಗೆ ಸಿಕ್ಕಿಹೋದವನ ಬಗ್ಗೆ ನಾನು ಮುಂದೇನು ತಾನೆ ಹೇಳಲು ಸಾಧ್ಯ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+