97543ಸಣ್ಣಕಥೆನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ/literature/short-story/2008/0905-hell-today-kannada-fiction-guruprasad.htmlಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅನೇಕಾರು ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ತಮ್ಮ ಅಪ್ರಕಟಿತ ಕಥಾ ಕಣಜಕ್ಕೆ ಅವರು ಇಟ್ಟಿರುವ ಹೆಸರು "ಸಿನಿಮಾ ಮಾಡಲಾಗದ ಕಥೆಗಳು". ಈ ಕಥಾ ಗುಚ್ಛದಿಂದ ಆಯ್ದ ಒಂದು ಮುತ್ತು "ನರಕದಲ್ಲಿ ಇಂದು.." ಈ ಕತೆಯನ್ನು ಸೆಲ್ಯುಲ್ಯಾಡ್ ಗೆ ತರಬಹುದಾ? ಯಾವುದಕ್ಕೂ ನಿರ್ದೇಶಕರಿಗೇ ಎರಡು ಸಾಲು ಬರೆಯಿರಿ. ಕಥೆಗಾರ : ಗುರುಪ್ರಸಾದ್, ಬೆಂಗಳೂರು ಈಗ 976http://kannada.oneindia.com/img/2009/07/21-guruprasad3.jpg97543ಸಣ್ಣಕಥೆಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97543ಸಣ್ಣಕಥೆಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg97543ಸಣ್ಣಕಥೆಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg97543ಸಣ್ಣಕಥೆಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg38571ಕನ್ನಡ ಸಾಹಿತ್ಯಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg38571ಕನ್ನಡ ಸಾಹಿತ್ಯವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg38571ಕನ್ನಡ ಸಾಹಿತ್ಯಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ/literature/music/2009/0317-kannada-poet-putina-gokula-nirgamana-lyrics.htmlಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು. ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ 35283http://kannada.oneindia.com/img/2009/03/17-putina2.jpg38571ಕನ್ನಡ ಸಾಹಿತ್ಯಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg38571ಕನ್ನಡ ಸಾಹಿತ್ಯಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg178863ಅತ್ಯಾಚಾರಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178863ಅತ್ಯಾಚಾರಮನೆಕೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ/movies/bollywood/2009/06/15-shiney-ahuja-arrested-for-alleged-rape.htmlಮುಂಬೈ, ಜೂ. 15 : ಇದೊಂದು ನಾಚಿಕೆಗೇಡಿನ ಪ್ರಸಂಗ. ಮಾಡೆಲ್ ರಂಗದಿಂದ ಬಾಲಿವುಡ್ ಗೆ ಪ್ರವೇಶ ಪಡೆದಿದ್ದ ಶೈನಿ ಅಹುಜಾ ಎಂಬ ನಟ ಮನೆಕೆಲಸದ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ ಭೀಕರ ಘಟನೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿ ಪೊಲೀಸ್ ಠಾಣೆಗೆ ದೂರು 37335http://kannada.oneindia.com/img/2009/06/15-shiney-ahuja1.jpg178863ಅತ್ಯಾಚಾರನನ್ನ ಪತಿ ಅಮಾಯಕ : ಅನುಪಮಾ ಶೈನಿ/movies/controversy/2009/06/16-this-is-rubbish-my-husband-is-innocent-anupama.htmlಮುಂಬೈ, ಜೂ. 16 : ಮನೆಕೆಲಸದ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ನಿಜ ಎಂದು ಒಪ್ಪಿಕೊಂಡಿರುವ ಬಾಲಿವುಡ್ ನಟ ಶೈನಿ ಅಹುಜಾ ಪರಸ್ಪರ ಸಮ್ಮತಿಯ ಮೇರೆಗೆ ಘಟನೆ ನಡೆದಿತ್ತು ಎಂದು ಮುಂಬೈ ಪೊಲೀಸರಿಗೆ ವಿಚಾರಣೆಯಲ್ಲಿ ಹೇಳಿದ್ದಾನೆ. ಆದರೆ, ಇತ್ತ ಶೈನಿ ಪತ್ನಿ ಅನುಪಮ ಮಾತ್ರ ನನ್ನ ಪತಿ ಅಮಾಯಕ, ಶ್ರೀರಾಮಚಂದ್ರ ಇದ್ದ ಹಾಗೆ. ಈ ವರೆಗಿನ ಎಲ್ಲ 37370http://kannada.oneindia.com/img/2009/06/16-shiney-anu-ahuja1.jpg178863ಅತ್ಯಾಚಾರಅತ್ಯಾಚಾರಿ ಶೈನಿ ಅಹುಜಾಗೆ ಡಿಎನ್ ಎ ಪರೀಕ್ಷೆ/movies/controversy/2009/06/18-mumbai-shiney-ahuja-to-undergo-dna-test.htmlಮುಂಬೈ, ಜೂ. 18 : ಮನೆಗೆಲಸದ ಯುವತಿಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಬಾಲಿವುಡ್ ನಟ ಶೈನಿ ಅಹುಜಾನನ್ನು ಮುಂಬೈ ಪೊಲೀಸರು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿಗೆ 18 ವರ್ಷ ಎಂದು ಹೇಳಲಾದರೂ ಅವರ ತನಿಖೆ ನಡೆಸುತ್ತಿರುವ ಪೊಲೀಸರು ಆಕೆಯ ವಿದ್ಯಾಭ್ಯಾಸ ಮಾಡಿದ ಶಾಲೆಗೆ ತೆರಳಿ ವಯಸ್ಸಿನ 37432http://kannada.oneindia.com/img/2009/06/18-shiney-ahuja1.jpg178863ಅತ್ಯಾಚಾರಅತ್ಯಾಚಾರ ಸಮಯದಲ್ಲಿ ಶೈನಿ ಮಧ್ಯ ಸೇವಿಸಿಲ್ಲ/movies/controversy/2009/06/23-shiney-was-not-under-the-influence-of-alcohol.htmlಮುಂಬೈ, ಜೂ. 23 : ಮನೆ ಕೆಲಸದ ಯವತಿಯನ್ನು ಅತ್ಯಾಚಾರ ಕೃತ್ಯ ನಡೆಸಿದ ಸಂದರ್ಭದಲ್ಲಿ ಬಾಲಿವುಡ್ ನಟ ಶೈನಿ ಅಹುಜಾ ಮಧ್ಯಪಾನವಾಗಲಿ ಇಲ್ಲವೆ ಮಾದಕ ವಸ್ತುಗಳನ್ನಾಗಲಿ ಸೇವಿಸಿರಲಿಲ್ಲ ಎಂದು ಇತ್ತೀಚೆಗೆ ನಡೆಸಿದ ವೈದ್ಯಕೀಯ ವರದಿಯಿಂದ ಸ್ಪಷ್ಟವಾಗಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಡಿಎನ್ಎ ಪರೀಕ್ಷೆ ನಡೆಸಲಾಗಿದೆ, ಅದರ ಬಗ್ಗೆ ವರದಿ ಬರಬೇಕಿದೆ. ಶೈನಿ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಲಾಗಿದ್ದು, 37534http://kannada.oneindia.com/img/2009/06/23-shiney-ahuja1.jpgnews"> ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 3) | Kraurya, Kannada short story by Prem Shekhar - ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 3) - Kannada Oneindia

ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 3)

* ಪ್ರೇಮಶೇಖರ, ಪಾಂಡಿಚೆರಿ

(ಕಥೆಯ ಮುಂದುವರಿದಿದೆ...)

ಗಾಬರಿಯಲ್ಲಿ "ಇದೇನ್ರೀ ಇದೂ? ಇದೇನು ಮಾಡ್ತಿದೀರಿ ನೀವು?" ಎಂದರಚಿದೆ. ಕುಳ್ಳ ನನ್ನ ಪಕ್ಕೆಗೆ ತಿವಿದ. "ತೆಪ್ಪಗೆ ಕೂರು ಮುದಿಯ." ನನ್ನ ಕಣ್ಣ ಮುಂದೆ ಚಾಕು ಆಡಿಸಿದ. ಅವನ ಕೈಯಲ್ಲೂ ಚಾಕು ಕಂಡು ನನಗೆ ಉಸಿರು ಸಿಕ್ಕಿಕೊಂಡಿತು. ಮುಂದೆ ಹೆಂಗಸು ಕುಸುಕಿದಳು. "ಯಾಕ್ರಣ್ಣಾ ಹೀಗೆ ಮಾಡ್ತಿದಿರೀ? ಒಳ್ಳೇವ್ರು ಅಂತ ಜತೆಲಿ ಬಂದ್ರೆ ನೀವು..." ಕುಳ್ಳ ಅವಳ ಮಾತನ್ನು ಅಲ್ಲಿಗೇ ಕತ್ತರಿಸಿದ: "ನಾವು ಒಳ್ಳೇವ್ರೇ ಕಣಮ್ಮ. ನಮಗಿಲ್ಲಿ ಒಂದೆರಡು ನಿಮಿಷದ ಕೆಲಸ ಇದೆ ಅಷ್ಟೇ. ಅದಾದ ಕೂಡ್ಲೇ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ."

ಕರಿಯ ಡ್ರೈವರ್‌ನ ಕುತ್ತಿಗೆಯ ಮೇಲೆ ಚಾಕು ಒತ್ತಿದ. "ನಡಿ ಮುಂದಕ್ಕೆ. ಹ್ಞೂ." ಅಬ್ಬರಿಸಿದ. ಮೋಡಗಳ ಮರೆಯಿಂದ ಹೊರಬರುತ್ತಿದ್ದ ಚಂದ್ರನ ಮಾಸಲು ಬೆಳಕಿನಲ್ಲಿ ಚಾಕು ಹಿಡಿದ ಬೆರಳುಗಳು ಬೆಳ್ಳಗೆ ಬಿಳಿಚಿಕೊಂಡಿದ್ದವು. ಡ್ರೈವರ್ ಸಣ್ಣಗೆ ನರಳಿದ. ಮತ್ತೊಮ್ಮೆ "ಹ್ಞೂಂ" ಎಂಬ ಅಬ್ಬರದ ಆಣತಿ ಕಿವಿಗೆ ಬೀಳುತ್ತಿದ್ದಂತೇ ಕಾರು ನಿಧಾನವಾಗಿ ಮುಂದೆ ಸರಿಯಿತು. ನಾನು ದಿಗ್ಭ್ರಮೆಯಲ್ಲಿ ಕುಸಿಯುತ್ತಿದ್ದಂತೇ ಮತ್ತೊಂದು ಆಜ್ಞೆ: "ಇಲ್ಲಿ ಎಡಕ್ಕೆ ತಿರುಗಿಸು. ಹೆಡ್‌ಲೈಟ್ ಆಫ್ ಮಾಡು."

ವಾಹನ ಮುಖ್ಯರಸ್ತೆ ಬಿಟ್ಟು ಎಡಕ್ಕೆ ಹೊರಳಿತು. ಭಾರಿಭಾರಿ ಹೆಬ್ಬಂಡೆಗಳು ಗಿಡಿದು ಕೂತಿದ್ದ ಕಲ್ಲುಬೆಟ್ಟಗಳೆರಡರ ನಡುವಿನ ಇರುಕಿನಂತಹ ಏರುಹಾದಿಯಲ್ಲಿ ಚಲಿಸಿತು. "ನಿಮಗೆ ಹಣ ಬೇಕಿದ್ರೆ ತಗೊಳ್ಳಿ. ಅದಕ್ಕಾಗಿ ನೀವು ನಮಗ್ಯಾರಿಗೂ ತೊಂದರೆ ಕೊಡೋದು ಬೇಡ." ಸಾವರಿಸಿಕೊಂಡು ಮತ್ತೆ ಬಾಯಿ ತೆರೆದೆ. ಮರುಕ್ಷಣ ಕುಳ್ಳನ ಎಡಗೈ ನನ್ನ ಹಣೆಗೆ ಛಟ್ಟನೆ ಬಾರಿಸಿತು. "ಬಾಯಿ ಮುಚ್ಚೋ ಮುದುಕಾ. ಹೇಳಿದ್ದು ಅರ್ಥ ಆಗ್ಲಿಲ್ವಾ? ಬೀಜ ಚಚ್‌ಹಾಕಿಬಿಡ್ತೀನಿ ನೋಡು." ಅರಚಿದ. "ಅವರನ್ಯಾಕ್ರಣ್ಣಾ ಹೊಡಿತಿದ್ದೀರಾ? ಅಯ್ಯೋ ದೇವ್ರೇ ಎಂಥಾ ಕಷ್ಟಕ್ಕೆ ಸಿಕ್ಕೊಂಡ್ವಪ್ಪಾ." ಹೆಂಗಸು ದನಿಯೆತ್ತಿ ಅಳತೊಡಗಿದಳು.

ಕುಳ್ಳನ ದನಿ ತಕ್ಷಣ ಮೃದುವಾಯಿತು: "ನಿಮಗೇನೋ ಆಗೋದಿಲ್ಲ ಸುಮ್ನಿರಮ್ಮ. ಈ ತರಲೆ ಮೇಷ್ಟ್ರು ಮತ್ತೆ ಮತ್ತೆ ಬಾಲ ಬಿಚ್ತಾ ಇದಾನೆ. ಅದಕ್ಕೇ ಒಂದು ಬಾರಿಸಬೇಕಾಯ್ತು." ಮತ್ತೆ ಉಸಿರೆತ್ತಿದರೆ ಅದು ಅರ್ಥಹೀನ ಹುಚ್ಚುಸಾಹಸವಾಗುತ್ತದೆ ಎಂದರಿವಾಯಿತು. ಇವರ ಉದ್ದೇಶವೇನೆಂದು ಸ್ಪಷ್ಟವಾಗದೇ ಆತಂಕ ನೆರೆಯ ನೀರಿನಂತೆ ಏರತೊಡಗಿತು. ಹೆದ್ದಾರಿಯಲ್ಲಿ ಸುಳಿದಾಡುವ ವಾಹನಗಳಿಗೆ ಹೆದರಿ ಅಲ್ಲಿ ನಮ್ಮನ್ನು ದರೋಡೆ ಮಾಡದೇ ಗುಡ್ಡಗಳಿಂದ ಮರೆಯಾದ ನಿರ್ಜನ ಸ್ಥಳಕ್ಕೆ ಕರೆದೊಯ್ಯುತ್ತಿರಬಹುದೆಂಬ ಊಹೆಯೊಂದನ್ನು ಬಿಟ್ಟರೆ ಮತ್ತೇನೂ ಹೊಳೆಯಲಿಲ್ಲ. ಯಾವುದನ್ನೂ ಕಾದು ನೋಡುವಾ ಎಂದುಕೊಂಡು ಸುಮ್ಮನೆ ಕುಳಿತೆ. ನಾನು ಮತ್ತೆ ಬಾಯಿ ತೆರೆಯದಂತೆ ಕುಳ್ಳನ ಚಾಕು ನನ್ನ ಭುಜದ ಮೇಲಿತ್ತು. ಕರಿಯ ಡ್ರೈವರ್‌ನ ಕುತ್ತಿಗೆಗೆ ಚಾಕು ಹಿಡಿದೇ ಇದ್ದ. ಹೆಂಗಸಿನ ಅಳು ನಿಂತಿತ್ತು. ಸಾಫ್ಟ್‌ವೇರ್ ಹುಡುಗನ ಒಂದು ಮಾತೂ ಇದುವರೆಗೆ ನನ್ನ ಕಿವಿಗೆ ಬಿದ್ದಿರಲಿಲ್ಲ.

ಎಡಬಲಕ್ಕೆ ಕುಲುಕುತ್ತಾ ಹಿಂದುಮುಂದಕ್ಕೆ ಮುಗ್ಗರಿಸುತ್ತಾ ಐದಾರು ನಿಮಿಷ ಸಾಗಿದ ನಂತರ ದಾರಿ ಇಳಿಜಾರಾಗಿ ಎಡಕ್ಕೆ ಹೊರಳಿದಂತೆ ಕಂಡಿತು. ವಾಹನದ ಕುಲುಕಾಟ ಮತ್ತೂ ಹೆಚ್ಚಿತು. ತಲೆಯನ್ನು ಅಲುಗಿಸದೇ ಕಣ್ಣುಗಳನ್ನು ಓರೆಯಾಗಿಸಿ ಎಡಕ್ಕೆ ಕಿಟಕಿಯಾಚೆ ನೋಡಿದೆ. ಕಿಟಕಿಗೆ ಅಂಟಿದಂತೇ ಇದ್ದ ಬೆಟ್ಟದ ಕಪ್ಪು ಗೋಡೆಯ ಹೊರತಾಗಿ ಬೇರೇನೂ ಕಾಣಲಿಲ್ಲ. ವಾಹನ ಒಮ್ಮೆ ಧಡ್ಡನೆ ಎಗರಿ ಬಲಕ್ಕೆ ವಾಲಿಕೊಂಡಿತು. ನಾನು ಕುಳ್ಳನ ಮೈಮೇಲೆ ಬಿದ್ದೆ. ಅವನ ಕೈಯಲ್ಲಿದ್ದ ಚಾಕು ನನ್ನ ಕತ್ತಿನಲ್ಲಿ ಸರಕ್ಕನೆ ಇಳಿಯಿತು. "ಹ್ಞಾ" ಎಂಬ ಚೀತ್ಕಾರ ನನ್ನ ನಿಯಂತ್ರಣವನ್ನೂ ಮೀರಿ ಹೊರಬಂತು. ಹೆಂಗಸು ಛಕ್ಕನೆ ಹಿಂದೆ ತಿರುಗಿದಳು. ಕುಳ್ಳ ನನ್ನನ್ನು ಅಸಡ್ಡೆಯಿಂದ ನೂಕಿ ಕಾರ್ ನಿಲ್ಲಿಸಲು ಡ್ರೈವರ್‌ಗೆ ಹೇಳಿದ. ಕಾರು ಗಕ್ಕನೆ ನಿಲುಗಡೆಗೆ ಬಂತು.

ಎಡಗೈಯನ್ನು ಬಲ ಕತ್ತಿನ ಮೇಲೆ ಆಡಿಸಿದೆ. ರಕ್ತ ಬೆರಳುಗಳಿಗೆ ಅಂಟಿಕೊಂಡಿತು. ಗಾಯವೇನೂ ಆಳವಾಗಿದ್ದಂತೆ ಕಾಣಲಿಲ್ಲ. ಆದರೆ ಉರಿಯುತ್ತಿತ್ತು. ಕುಳ್ಳ ನನ್ನ ಭುಜ ಒತ್ತಿ ಬಾಗಿಲು ತೆರೆಯುವಂತೆ ಸೂಚಿಸಿದ. ಕರಿಯ ಛಟ್ಟನೆ ತನ್ನ ಕಡೆಯ ಬಾಗಿಲು ತೆರೆದು ಹೊರಗೆ ಹಾರಿ ಡ್ರೈವರ್ ಕಡೆಯ ಬಾಗಿಲನ್ನು ತೆರೆದ. ಎಡಗೈಯನ್ನು ಕುತ್ತಿಗೆಯ ಗಾಯದ ಮೇಲೆ ಒತ್ತಿಕೊಂಡೇ ಬಲಗೈಯಿಂದ ಬಾಗಿಲ ಹಿಡಿಕೆಗಾಗಿ ತಡಕಾಡಿದೆ. ಮುಂದಿನ ಸೀಟಿನಲ್ಲಿ ಆತುರದ ಚಲನೆಗಳು ಕಂಡುಬಂದವು. ಸಾಫ್ಟ್‌ವೇರ್ ಹುಡುಗ ಛಕ್ಕನೆ ಬಾಗಿಲು ತೆರೆದು ಮಿಂಚಿನಂತೆ ಹೊರಗೆ ಹಾರಿದ. "ರಾಜಪ್ಪಾ, ಹಿಡೀ ಅವನನ್ನ" ಎಂದು ಕುಳ್ಳ ಚೀರುತ್ತಿದ್ದಂತೆ ಹುಡುಗ ಕಲ್ಲುಬಂಡೆಗಳ ನಡುವೆ ಜಿಗಿಜಿಗಿದು ಓಡಿಬಿಟ್ಟ. ನಾನು ಕೆಳಗಿಳಿದು ನಿಲ್ಲುವ ಹೊತ್ತಿಗೆ ಅವನು ತನ್ನ ಜಾಡಿನ ಗುರುತೂ ಇಲ್ಲದಂತೆ ಅದೆಲ್ಲೋ ಮಾಯವಾಗಿಹೋಗಿದ್ದ. ಒಂದು ಕೈಯಲ್ಲಿ ಚಾಕು, ಮತ್ತೊಂದರಲ್ಲಿ ಡ್ರೈವರ್‌ನ ಕೊರಳಪಟ್ಟಿ ಹಿಡಿದಂತೇ ಹುಡುಗ ಓಡಿದ ದಿಕ್ಕಿಗೆ ನಾಕು ಹೆಜ್ಜೆ ಹಾಕಿದ ಕರಿಯ ಅಸಹನೆಯಲ್ಲಿ ಗೊಣಗುತ್ತಾ ನಿಂತ. ಡ್ರೈವರ್‌ನ ಕೊರಳಪಟ್ಟಿಯಿಂದ ಕೈ ತೆಗೆದು ತನ್ನ ಹಣೆಯ ಮೇಲಿಟ್ಟುಕೊಂಡ. ಆ ಗಳಿಗೆಗೆ ಸರಿಯಾಗಿ "ಅಲ್ಲಿದ್ದಾನೆ ಕಣ್ರೀ. ನಿಮಗೆ ಕಾಣ್ತಾ ಇಲ್ವಾ? ಇರಿ ನಾ ಹಿಡಕಂಡು ಬರ್ತೀನಿ ಬೋಳಿಮಗನ್ನ" ಎಂದರಚಿದ ಡ್ರೈವರ್ ಹುಡುಗ ಓಡಿದ ದಿಕ್ಕಿನಲ್ಲಿ ಬೀಳುವುದನ್ನೂ ಲೆಕ್ಕಿಸದೇ ಎಗರಿ ಎಗರಿ ಓಡಿದ.
"ಅರೆ ಮಾದರಚೋತ್! ಚಾಲಾಕಿ ಸೂಳೆಮಗ." ಇದುವರೆಗೂ ಡ್ರೈವರ್‌ನನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕೇಡಿ ಬೈದುಕೊಂಡ. ನನ್ನನ್ನು ಒಂದು ಪಕ್ಕಕ್ಕೆ ನೂಕಿ ಅವನತ್ತ ನಡೆದ ಕುಳ್ಳ ಏನೋ ಗೊಣಗಿ "ಹೋದ್ರೆ ಹೋಗ್ಲಿ ನಾಯಿಕುನ್ನಿಗಳು. ಒಳ್ಳೇದೇ ಆಯ್ತು ಬಿಡು. ನಮ್ಮ ಕೆಲಸ ಬೇಗ ಮುಗಿಸಿ ಜಾಗ ಖಾಲಿಮಾಡೋಣ" ಎನ್ನುತ್ತಾ ಕಾರಿನ ಮುಂದಿನ ಸೀಟಿನತ್ತ ತಿರುಗಿದ.

ಸಾಫ್ಟ್‌ವೇರ್ ಹುಡುಗನ ಲ್ಯಾಪ್‌ಟಾಪ್ ಸೀಟಿನ ಮೇಲೇ ಬಿದ್ದುಕೊಂಡಿತ್ತು. ಹುಡುಗ ಅದನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ಅವನ ಚೀಲವೂ ಅಲ್ಲೇ ಇರಬೇಕು. ಓಡುವ ಆತುರದಲ್ಲಿ ಅವನು ಏನನ್ನಾದರೂ ತೆಗೆದುಕೊಂಡು ಹೋದಂತೆ ಕಂಡಿರಲಿಲ್ಲ. ನಾನು ಗಮನಿಸಿದ ಹಾಗೆ ಡ್ರೈವರ್ ಸಹಾ ಬರಿಗೈಯಲ್ಲೇ ಓಟ ಕಿತ್ತಿದ್ದ. ಅವರಿಬ್ಬರ ಸಾಮಾನುಗಳೆಲ್ಲವೂ ಈಗ ಈ ಕೇಡಿಗಳ ವಶ. ನನ್ನ ಹಾಗೂ ಆ ಹೆಂಗಸಿನ ಸಾಮಾನುಗಳೂ ಈ ಗಳಿಗೆಯಲ್ಲಿ ಅವರವೇ ಆಗಿದ್ದವು. ಕೈಯಲ್ಲಿದ್ದ ವಾಚು, ಉಂಗುರಗಳನ್ನು ತೆಗೆದು ನನ್ನನ್ನು ಸಮೀಪಿಸಿದ ಕರಿಯನತ್ತ ಹಿಡಿದೆ. ಅವನು ಪಕಪಕನೆ ನಕ್ಕುಬಿಟ್ಟ. "ಇಲ್ನೋಡೋ ಕುಪ್ಪಣ್ಣಾ, ಈವಯ್ಯ ಹೆದರ್‍ಕೊಂಡು ವಾಚು ಉಂಗ್ರ ಬಿಚ್ಚಿ ಕೊಡ್ತಿದಾನೆ." ಕುಳ್ಳನತ್ತ ತಿರುಗಿ ಹೇಳಿ ಮತ್ತೊಮ್ಮೆ ನಕ್ಕ. "ಅದನ್ನೆಲ್ಲ ಅವನ ಮೂತಿಗೇ ಎಸೆದು ಕಾರ್‌ನೊಳಕ್ಕೆ ದಬ್ಬು. ಅವನಿಗೇನ್ ಕೆಲ್ಸ ಇದೆ ಇಲ್ಲಿ?" ಕುಳ್ಳನ ಉತ್ತರ ಬಂತು. ತಿಳಿಯಾಗುತ್ತಿದ್ದ ಗೊಂದಲ ಒಮ್ಮೆಲೆ ಅಧಿಕವಾಯಿತು. ನಕ್ಕು ಅಪಹಾಸ್ಯ ಮಾಡುತ್ತಿದ್ದ ಕರಿಯನನ್ನೇ ಮಿಕಿಮಿಕಿ ನೋಡಿದೆ. "ನಿನಗೇನೂ ಕೆಲಸ ಇಲ್ಲ. ಒಳಗೆ ತೆಪ್ಪಗೆ ಕೂರು" ಎನ್ನುತ್ತಾ ತೆರೆದಿದ್ದ ಬಾಗಿಲತ್ತ ನನ್ನನ್ನು ನೂಕಿದ ಅವನು. ನೂಕಿದ ರಭಸಕ್ಕೆ ಸೀಟಿನಲ್ಲಿ ಕುಸಿದೆ. "ಕಾಲು ಒಳಗೆ ತಗೋ." ಹೇಳುತ್ತಾ ನನ್ನ ಮಂಡಿಯ ಮೇಲೆ ಬಲವಾಗಿ ಒದ್ದ.

ಕಾಲು ಒಳಗೆಳೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ನನ್ನ ಪ್ರಯತ್ನವನ್ನೂ ಮೀರಿ ನರಳಿಕೆ ಗಂಟಲಿನಿಂದ ಹೊರಬಂತು. ಹಿಂದೆಯೇ ಅವನು ಧಡ್ಡನೆ ಬಾಗಿಲು ಮುಚ್ಚಿದ. ಅರೆತೆರೆದಿದ್ದ ಕಿಟಕಿಯ ಮೂಲಕ ಎಚ್ಚರಿಸಿದ: "ತಿಕ ಬಾಯಿ ಎರಡನ್ನೂ ಮುಚ್ಕೊಂಡು ಕೂರು. ಬಾಲ ಬಿಚ್ಚಿದ್ರೆ ಹೆಣ ಆಗ್ತಿಯ." ಇವರಿಗೆ ಬೇಕಾಗಿರುವುದೇನು? "ಅದೇನೋ ಅವರು ಹೇಳಿದ ಹಾಗೇ ಕೇಳಿಬಿಡಿ ಸಾರ್. ಸುಮ್ನೆ ಯಾಕೆ ನೋವು ಅನುಭವಿಸ್ತೀರಾ." ಹೆಂಗಸು ಹಿಂದೆ ತಿರುಗಿ ಮರುಕದ ದನಿಯಲ್ಲಿ ಹೇಳಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+