ನರಳುತಲಿರಲಿ ಈ ಜೀವ

ಮಲೆನಾಡ ಮಡಿಲಲ್ಲಿ ನಿನ್ನ ಮನದಂಗಳದಲ್ಲಿ ವಿಹರಿಸಬಯಸಿದ್ದ ನನ್ನ ಕನಸು
ನನಸಾಗಲಿಲ್ಲ ಕನಸಾಗಿಯೇ ಉಳಿಯಿತು ಮನದಾಳದಲಿ ಕೀವಾಗಿ ಬೆಳೆಯಿತು
ನನ್ನ ಮೈಮನಗಳನ್ನು ಅರ್ಬುದದಂತಾವರಿಸಿ ಸರ್ವಸ್ವವನ್ನೂ ಹೀರಿತು.
ಅದಕೆ ಬೇಸರಿಲ್ಲ ಕೊಲ್ಲುತಿರುವುದು ನಿನ್ನ ನೆನಪು ತಾನೆ, ನೋವಿನಲ್ಲೂ
ಮಧುರ ಯಾತನೆಯಿದೆ; ಹೀಗೆಯೇ ಕೊನೆಯುಸಿರಿನವರೆಗೂ ಇರಲಿ
ದೇಹದ ಕಣಕಣವನ್ನೂ ಆವರಿಸಿ ನೋವನ್ನು ಹಿಗ್ಗಿಸಿ ವಿಸ್ತರಿಸುತಿರಲಿ
ಜಗ ನಗಲಿ ಎನಗೆ ಮರುಳೆಂದು, ಬೇಸರವಿಲ್ಲ ಕೊನೆಗೆ ಪ್ರೀತಿ ಗೆಲ್ಲಲಿ ಸಾವಿನಲೂ.
ಪ್ರತಿಭೆಯ ಕನ್ನಡಿಗೆ ಧೂಳಾವರಿಸಿತು ಸ್ನೇಹಿತರ ಒಲುಮೆ ದೂರಾಯಿತು
ಬದುಕಬೇಕೆಂಬಾಸೆಯೇ ನೀನಿಲ್ಲದೇ ಹೊರಟುಹೋಯಿತು
ಆದರಿಸುತಿದ್ದ ಜನಗಳೇ ಭಾವನೆಗಳಿಲ್ಲದ ಕಲ್ಲೆಂದು ನನ್ನ ತಳ್ಳಿಹಾಕಿದರು
ಇದಾವುದಕ್ಕೂನೀ ಕಾರಣವೆಂದು ಹಳಿಯುವ ಕೀಳುಬಯಕೆ ನನಗಿಲ್ಲ.
ಈ ಜನ್ಮದಲ್ಲಿ ನೀ ನನಗೆ ಲಭಿಸಲಾರೆಯೆಂಬುದು ಖಾತ್ರಿಯಾಗಿದೆ
ಹೀಗೆಯೇ ಹಗಲುಗನಸು ಕಾಣುತ್ತಾ ಮಣ್ಣ ಸೇರಲಿ ಈ ದೇಹ
ಭಗವಂತನ ಸಂತೆಯ ಈ ಲೋಕದಲ್ಲಿ ನಾನೊಬ್ಬ ಮಾರಾಟವಾಗದ ಸರಕು
ಉಸಿರಿರುವವರೆಗೂ ಇರಲಿ ಈ ವೇದನೆ, ತಳ್ಳಲಾರೆ ನೆನಪುಗಳನೀಗ ನಾ ಮನಸಾರೆ!












Click it and Unblock the Notifications