ಕನ್ನಡ ಓದುವವನಿಗೆ ನಿಮ್ಮ ಸಹಾಯ ಬೇಕಾಗಿದೆ

ಅದಕ್ಕೂ ಮುಂಚೆ ಲೇಖಕರು ಏನು ಹೇಳುತ್ತಾರೋ ಓದಿರಿ.
ನನ್ನ ಸ್ವಂತ ಊರು ನೆಲಮಂಗಲ. ಕರ್ನಾಟಕದಿಂದ ಹೊರಡುವ ನಾನಾ ಪತ್ರಿಕೆಗಳನ್ನು ತಪ್ಪದೆ ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಪತ್ರಿಕೆಗಳು ಮತ್ತು ಬ್ಲಾಗುಗಳಲ್ಲಿ ಆಗಾಗ ಕನ್ನಡ ಸಾಹಿತ್ಯಕ್ಕೆ ಪುಸ್ತಕಗಳಿಗೆ ಪ್ರಶಸ್ತಿಗಳಿಗೆ ಸಂಬಂಧಿಸಿದ ಲೇಖನ, ವರದಿ, ವಿಮರ್ಶೆ, ವ್ಯಾಖ್ಯಾನ, ಹಾಸ್ಯ ಮುಂತಾದ ಬರವಣಿಗೆಗಳಲ್ಲಿ ಈ ಕೆಳಗೆ ಬರೆದ ಪದಗಳು ತಪ್ಪದೆ ಇಣಕುತ್ತವೆ. ಅವುಗಳನ್ನು ನಿತ್ಯ ಒಂದಲ್ಲ ಒಂದು ಕಡೆ ಓದಬೇಕಾಗುತ್ತದೆ ನನಗೆ. ನೀವು ಕೂಡ ಓದೇಓದಿರುತ್ತೀರಿ. ಈ ಪದಗಳ ನಡುವೆ ಇರುವ ಸ್ಪೆಸಿಫಿಕ್ ವ್ಯತ್ಯಾಸ ನನಗೆ ಗೊತ್ತಿಲ್ಲ. ತಿಳಿಯುವುದಕ್ಕೆ ಇಷ್ಟ. ತಿಳಿದವರು ದಯಮಾಡಿ ಅದರ ಬಗ್ಗೆ ಬರೆದು ತಿಳಿಸಿದರೆ ನನಗೆ ಗೊತ್ತಾಗುತ್ತದೆ. ಪ್ಲೀಸ್ ಹೆಲ್ಪ್, ಇದು ನನ್ನನ್ನು ತುಂಬ ವರ್ಷಗಳಿಂದ ಕಾಡುತ್ತಿರುವ ಗಂಭೀರವಾದ ಜಿಜ್ಞಾಸೆ.
ಕವನ
ಕವಿತೆ
ಕಾವ್ಯ
ಹನಿಗವನ
ಗೀತೆ
ಷಟ್ಪದಿ
ಪದ್ಯ
ವಚನ
ತ್ರಿಪದಿ
ಕೀರ್ತನೆ
ಚುಟುಕ
ಇತ್ಯಾದಿ












Click it and Unblock the Notifications