ಹೊಸ ಗಂಡ
- ಜಲಗಾರ, ಅಮೆರಿಕ
ದಂಡೆತ್ತಿ ಹೋಗಿಹನು BUSH ಎಂಬ ಗುಂಡಗಂಡರ ಗಂಡ ಆಗಿಹನು ಮೇಧಿನಿಯ
ಸದ್ದಾಮನಿಗೆ ತಲೆದಂಡ ಬಾಕ್ ಪಕ್ಷಕೆ ಕೋದಂಡ
ಅವನ ಮಕ್ಕಳಿಗಂತು ಕಾದಿರುವನು ನಂಜಂಡ
ದುಷ್ಟರ ಮರ್ದನಕೆ ಶಿಷ್ಟರ ಪರಿಪಾಲನೆಗೆ
ಎಣ್ಣೆ ತುಂಬಲು ನಮ್ಮೂರ ಶತಕೋಟಿ ಬಂಡಿಗಳಿಗೆ
ಅವರೆಣ್ಣೆಯ ತೆಗೆದು ಅವರಿಗೇ ಹಂಚಲಿಕೆ
ಹಂಚುವಾ ಕಾರ್ಯಕ್ಕೆ ಬೆಣ್ಣೆ CHARGE ಮಾಡಲಿಕೆ
ಇರಾಕಿಗಳ ಮಂಡೆಗೆ ತುಂಬಲು ಆ ನಮ್ಮ ಸ್ವಾತಂತ್ರ್ಯ
ಅಲ್ಲಾನ ಚೋದನೆಗೆ ಆಗುವುದು ಮೊದಲ ತಿರುಮಂತ್ರ
ಬಂಡ BUSH ನು ಹಟದಿ ಹಿಡಿದಿರುವನೀ ಸೂತ್ರ
ಯಾರು ಊದಿದರು ಅವನ ಕಿವಿಯಲಿ ಈ ಮಂತ್ರ
ಅವನಿಯ ಅರ್ಪಿಸಿದ BLAIR ಎಂಬ ಹಳೆಗಂಡ
ಸಾಮ್ರಾಜ್ಯ ಚಂಚಲೆಯ ಅಟ್ಟಿಹನು BRITON ನಿಂದ
ಪ್ರಚಂಡ BUSH ನನೆ ಮಾಡಿರುವ ಅವಳ
ಗಂಡಾದಿ ಗಂಡರ ಕಂಡ ಚಂಚಲೆಗೆ WHITE HOUSEಸೆ ಸರಿ ಅಂದ
ನೆಲದಿಂದ ನೆಲಕೆ ವಲಸೆ ಹೋಗುವ ಈ ಭೂ ರಾಣಿ
ಮುಂದಿನಾ ನೆಲಕೆ ಆಗಿದೆ ಚಿಂತಿಸುವ ಚಿತ್ರಾಣಿ
ಇಣುಕು ನೋಟದಲಿ ಹೊಡೆದಿಹಳು ಕೆಣಕುವಾ ಕಣ್ಣ
ಪ್ರಚಂಡ BUSH ನಿಗೆ ಆಗಲೆ ಸವಾಲು ಹಾಕಿಹನು FRENCH ಅಣ್ಣ
ಅಳಿದುಳಿದ ನಾಡಗಂಡುಗಳು ಬಾಲಮುದುರಿ ನೋಡುತಿಹರು
ಪ್ರಚಂಡ BUSH ನ ಗುಂಡಿಗೆ ನುಡಿಹಿಡಿದು ಕುಂತಿಹರು (ಆಡುತಿಹರು)
ಕನಸಿನಲಿ ಮೇಧಿನಿಯ ಗಂಡತನ ಬಯಸಿ ಮೇಯುತಿಹರು
ಮೇಧಿನಿಯ ಮುಂದಿನಾ ಗಂಡನಾಗಲು ತಾಕತ್ತು ಕೊಳ್ಳುತಿಹರು.
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications