ವಿಧಾನಸೌಧದವರೆಗೆ....
- ಶ್ರೀಲಕ್ಷ್ಮಿ ಹೊನ್ನವಳ್ಳಿ , ಬೆಂಗಳೂರು.
[email protected]
ರಶ್ಶೋ ರಶ್ಶು....
ದಬ್ಬಿ ನೂಕಿ ಒಳಹೋದಾಗ
ಕಂಬಕ್ಕೊರಗಲು ಸಿಕ್ಕಿತು ಜಾಗ
ಮುಂದಿನ ಸ್ಟಾಪಿನಲ್ಲೇರಿದಳು ಗೆಳತಿ
ಅವಳದ್ದೀಗ ಗೊಣಗುವ ಸರತಿ
‘ಅದೇನು ಬಸ್ಸೋ ಅದೇನು ರಶ್ಶೋ
ಉಸ್ಸೋ ಉಸ್ಸೋ....’
ದಿನಚರಿಯೇ ಶುರುವಾಗುವ ಮುನ್ನ
ಕಂಡಳು ಅಲ್ಲೇ ಮಲಗಿದ್ದ ಹೆಣ್ಣೊಂದನ್ನ...
‘ಸಂತೆಯಂಥಾ ಬಸ್ಸಲಿ ಕುಳಿತು...
ಇವಳಿಗೆ ನಿದ್ದೆ ಅದು ಹೇಗೆ ಬಂತು...’
‘ಇಲ್ಲೇ ನಿದ್ರೆ..
ಇನ್ನು ಆಫಿಸ್ನಲ್ಲಿ ಏನ್ ಮಾಡ್ತಾರೆ...?’
ಹಿಂದಿನಿಂದ ಬಂತೊಂದು ಉತ್ತರ....
‘ ಅಲ್ಲೂ ಅದೇ ಮೇಡಂನೋರೆ...
ಇದು ಬರೀ warm upಉ’












Click it and Unblock the Notifications