ಬೂಸ ಬರಿ ಮೋಸ*
;*
- ಬೂಸಾಗೌ
ಕುವೆಂಪು ಬೇಂದ್ರೆ ಮೋಸ
ಹಳಗನ್ನಡವೆಲ್ಲ ಬರಿ ಬೂಸ
ಹೊಸಗನ್ನಡ ಹಳಸಿದ ಸಮೋಸ
ಕುಮಾರವ್ಯಾಸ ಬರೆದುದೆಲ್ಲ ಪೊಳ್ಳು
ದಾಸರು ಹಾಡಿದುದೆಲ್ಲ ಸುಳ್ಳು
ರಾಘವಾಂಕ ಮುದ್ದಣರು ಜೊಳ್ಳು
ಕನ್ನಡ ಸಾಹಿತ್ಯವೆಲ್ಲ ಮಳ್ಳು ಮಳ್ಳು
ಎಲ್ಲಿದೆಯಯ್ಯ ಗಟ್ಟಿ ಸಾಹಿತ್ಯ
ಎಲ್ಲಿಹುದು ಸಾಹಿತ್ಯ ಸಹ್ಯ
ಶರಣರು ಹಾಡಿದುದಷ್ಟೆ ಸತ್ಯ
ಉಳಿದ ಸಾಹಿತ್ಯವೆಲ್ಲ ಮಿಥ್ಯ
ನವೋದಯ ನವ್ಯ ದಲಿತ ಬಂಡಾಯ
ಸಕಲ ಪಥ ಪಂಥಗಳು ಸಾಯ
ಅಕ್ಷರ ಕಲಿಕೆಗಾಗಿ ಹೋರಾಟ ಬೂಸ
‘ಯುದ್ಧ ಮತ್ತು ಶಾಂತಿ’ ಮೋಸ
ಸಾವಿರದೈನೂರು ವರ್ಷದ ಇತಿಹಾಸ
ಕನ್ನಡ ಸಾಹಿತ್ಯವೆಲ್ಲವು ಬೂಸ
ಈವರೆಗೂ ಬಂದುದೆಲ್ಲ ಬೂಸ
ನಾವು ನೀವು ತಿಂದುದೆಲ್ಲ ಬೂಸ !
(*ದೇಜಗೌ ಅವರಿಗೆ ಈ ಬೂಸ ಕವನ ಅರ್ಪಿತವು)












Click it and Unblock the Notifications