ಕವಿಯಾಬ್ಬ ಬೆಸ್ತ

  • ಚಿಂತಾಮಣಿ ಕೊಡ್ಲೆಕೆರೆ
ಕಾಲದ ನದಿಯ ತೀರದಲ್ಲಿ

ಅವನ ಕಣ್ಣೆದುರಲ್ಲೆ
ಸೂರ್ಯೋದಯ
ಸೂರ್ಯಾಸ್ತ

ಕಾಲದ ನದಿಯ ನೀರಿಗೆ
ಅವನ ಕೈ-ಕಮಂಡಲ
ಅಲ್ಲಿ ಪ್ರತಿಫಲಿಸುವವು ಚಂದ್ರ
ತಾರೆ
ಆಗಸಕೂ ಭೂಮಿಗೂ
ಇಲ್ಲಿಯೇ ಮೇರೆ

ಬಲೆ-
ಬೀಸುವುದೂ ಒಂದು ಕಲೆ
ಎನ್ನುವನು ಕವಿ
ಅವನಿಗೆ
ಪರ್ವತಗಳೆ ಕಿವಿ
ಹಕ್ಕಿಗಳು ಅವನ ಕೊರಳು
ಗಿಡಗಳು ಅವನ ಬೆರಳು
ಈ ನದಿ ಅವನ ಹೃದಯ
ಆಕಾಶ ಅವನ ಬಟ್ಟೆ
ಈ ಅನಾದಿ ಲೋಕದಲ್ಲಿ
ಕವಿಯಾಂದು ಚಿಟ್ಟೆ
ಹಕ್ಕಿ
ನದಿ
ಗಿಡ
ಪರ್ವತ

ಹಾಗೂ

ಕಾಲದ ನದಿಯ ತೀರದಲ್ಲಿ

ಮೂಡು ಗಾಳಿಗೆ ತನ್ನ ಬಲೆಯ ಹಿಡಿಯುವುದೊಂದೆ
ಅವನ ಪುರುಷಾರ್ಥ
ಹಾಗೂ
ಇದ್ದೀತು ಅದೇ
ಅವನ ಬದುಕಿನ ಅರ್ಥ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+