ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿಯ ಹೆಮ್ಮೆಯ ಪುತ್ರ ಸಿದ್ದಲಿಂಗ ಶ್ರೀಗಳು

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

ನಡೆದಾಡುವ ದೇವರೆಂದೇ ಖ್ಯಾತಿಗಳಿಸಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ತಮ್ಮ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಶ್ರೀಗಳನ್ನ ನೇಮಕ ಮಾಡಿದ್ದಾರೆ. ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅನನ್ಯ ಸೇವೆ ಸಲ್ಲಿಸುತ್ತಾ ಬಂದಿರುವ ಸಿದ್ದಗಂಗಾ ಮಠದಂತಹ ದೊಡ್ಡ ಮಠದ ಜವಾಬ್ಧಾರಿಯನ್ನ ಸಿದ್ದಲಿಂಗ ಶ್ರೀಗಳು ಹೊತ್ತಿದ್ದಾರೆ.

ಶಿವಕುಮಾರ ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲೇ ನಡೆಯಬೇಕಾಗಿರುವ ಸಿದ್ದಲಿಂಗಾ ಶ್ರೀಗಳು ಚಿಕ್ಕಂದಿನಿಂದಲೇ ಶರಣರಾಗಲು ಮುಂದೆ ಬಂದವರು. ಶಿಸ್ತು ಸಂಯಮ ಸಂಸ್ಕಾರಗಳನ್ನ ಎಲ್ಲಾ ವರ್ಗದ ಮಕ್ಕಳಿಗೆ ಹೇಳಿಕೊಡುತ್ತಾ ಭಾವೈಕ್ಯೆತೆಯ ಕೇಂದ್ರವಾಗಿದೆ ಸಿದ್ಧಗಂಗಾ ಮಠ. ಶಿವಕುಮಾರ ಶ್ರೀಗಳು ಮತ್ತು ಈಗಿನ ಸಿದ್ದಗಂಗಾ ಶ್ರೀಗಳು ಇಬ್ಬರು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನವರೇ ಆಗಿರುವುದು ಹೆಮ್ಮೆಯ ಸಂಗತಿ. ಮಹಾಸಂಸ್ಥಾನಮಠದ ಮಹತ್ತರ ಜವಾಬ್ಧಾರಿ ಹೊತ್ತಿರುವ ಸಿದ್ದಗಂಗಾಶ್ರೀಗಳು ನಡೆದುಬಂದಿರುವ ಹಾದಿಯ ಬಗ್ಗೆ ಪರಿಚಯ ಇಲ್ಲಿದೆ.

Siddaganga Sri Siddalinga Swamiji | New seer of Siddaganga Mutt | Pen portrait of Siddalinga Swamiji | ಸಿದ್ದಲಿಂಗ ಸ್ವಾಮೀಜಿಯ ವ್ಯಕ್ತಿಚಿತ್ರ

ಕಂಚುಗಲ್ ಬಂಡೇಮಠದವರು : ಇತ್ತೀಚಿಗೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಯಾಗಿ ಸಿದ್ಧಗಂಗಾ ಶ್ರೀಗಳನ್ನ ನೇಮಕಗೊಳಸಲಾಗಿದೆ. ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕಂಚುಗಲ್‌ ಬಂಡೇಮಠದ ಗ್ರಾಮದವರಾದ ಕಿರಿಯ ಶ್ರೀಗಳಾದ ಸಿದ್ದಲಿಂಗ ಶ್ರೀಗಳು ಪೂರ್ವಾಶ್ರಮದಲ್ಲಿ ವಿಶ್ವನಾಥಯ್ಯರಾಗಿದ್ದವರು. ತಂದೆ ಸದಾಶಿವಯ್ಯ ಮತ್ತು ಶಿವರುದ್ರಮ್ಮನವರಿಗೆ 8ನೇ ಪುತ್ರನಾಗಿ ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನ ಸ್ವಗ್ರಾಮದಲ್ಲೇ ಮುಗಿಸಿದ ಶ್ರೀಗಳು ನಂತರ ಕನಕಪುರದ ದೇಗುಲು ಮಠದಲ್ಲಿ ಪ್ರೌಢಶಿಕ್ಷಣ ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕಾಗಿ ತುಮಕೂರಿನ ಸಿದ್ದಗಂಗಾಮಠಕ್ಕೆ ಸೇರಿದರು. ಚಿಕ್ಕಂದಿನಿಂದಲೇ ಸನ್ಯಾಸತ್ವ ದೀಕ್ಷೆ ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಹೊಂದಿದ್ದ ಶ್ರೀಗಳು ಶಿವಕುಮಾರಶ್ರೀಗಳ ಸೇವೆ ಮಾಡುತ್ತಲೇ ಬಂದರು. ನಂತರ ಸಿದ್ಧಲಿಂಗ ಶ್ರೀಗಳ ಶ್ರದ್ಧೆ ಆಸಕ್ತಿಯನ್ನು ನೋಡಿದ ಶಿವಕುಮಾರ ಶ್ರೀಗಳು ಸನ್ಯಾಸತ್ವ ದೀಕ್ಷೆ ನೀಡಿ ತಮ್ಮ ಶಿಷ್ಯನಾಗಿ ಬೆಳೆಸಿ ಈಗ ಮಹಾಸಂಸ್ಥಾನಮಠದ ಮಹತ್ತರ ಜವಾಬ್ಧಾರಿಯನ್ನ ನೀಡಿದ್ದಾರೆ.

ತಂದೆಯಿಂದ ಪ್ರೋತ್ಸಾಹ : ಸಿದ್ಧಲಿಂಗ ಶ್ರೀಗಳ ತಂದೆ ಸದಾಶಿವಯ್ಯನವರು ಶಿಕ್ಷಕರಾಗಿದ್ದರು. ಶಿಕ್ಷಕರಾಗಿ ಹಲವು ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ ಅವರು ಕಂಚುಗಲ್ ಬಂಡೇಮಠದಲ್ಲೂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಮಗ ಸನ್ಯಾಸತ್ವ ದೀಕ್ಷೆ ಪಡೆಯುವುದಾಗಿ ಕೇಳಿದ ತಂದೆ ಸದಾಶಿವಯ್ಯನವರು ಸಮಾಜಕ್ಕೆ ನೀನು ಆಸ್ತಿಯಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡು ಮುಂದುವರಿ ಎಂದು ಹಿಂದೆಯೇ ವಿಶ್ವನಾಥಯ್ಯ(ಈಗಿನ ಸಿದ್ಧಲಿಂಗಾಶ್ರೀ)ರಿಗೆ ಹರಿಸಿದವರು.

ಬಂಡೇಮಠವೇ ಶ್ರೀಗಳಿಗೆ ವೇದಿಕೆ : ಸಿದ್ಧಲಿಂಗ ಶ್ರೀಗಳು ಪದವಿಯನ್ನು ಸಿದ್ಧಗಂಗಾಮಠದಲ್ಲೇ ಪಡೆದರು. ಕಂಚುಗಲ್ ಬಂಡೇಮಠದ ಹಿರಿಯ ಶ್ರೀಗಳಾದ ಶಿವರುದ್ರಶ್ರೀಗಳು ಸಂಬಂಧದಲ್ಲಿ ಸಿದ್ದಲಿಂಗಶ್ರೀಗಳಿಗೆ ಸೋದರಮಾವ. ಬಂಡೇಮಠದ ಹಿರಿಯಶ್ರೀಗಳಾದ ಶಿವರುದ್ರ ಸ್ವಾಮೀಜಿಯ ಸಮಾಜಸೇವೆಯನ್ನು ನೋಡುತ್ತಾ ತಾನೂ ಸನ್ಯಾಸತ್ವ ದೀಕ್ಷೆ ತೊಡಬೇಕೆಂದು ಮನಸು ಮಾಡಿದರು. ಶಿವರುದ್ರ ಶ್ರೀಗಳ ಮಾರ್ಗದರ್ಶನದಲ್ಲೇ ಬೆಳೆದು ಮೊದಲಿಗೆ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿಸುವ ಆಕಾಂಕ್ಷೆಯನ್ನು ಹೊಂದಿದ್ದರು. ಆದರೆ ಸಿದ್ಧಗಂಗಾ ಮಠ ಅವರನ್ನ ಕೈಬೀಸಿ ಕರೆದಿದ್ದರಿಂದ ಅಲ್ಲಿಗೆ ಹೋಗಿ ಈಗ ಮಹತ್ತರ ಜವಾಬ್ಧಾರಿಯನ್ನು ಹೊತ್ತಿದ್ದಾರೆ.

ಮಠಾಧೀಶರುಗಳ ತವರು ಬಂಡೇಮಠ : ಕಂಚುಗಲ್ ಬಂಡೇಮಠ ಗ್ರಾಮ ಶ್ರೀಗಳನ್ನು ತಯಾರು ಮಾಡುವ ಪುಣ್ಯಭೂಮಿಯಾಗಿದೆ. ಈ ಗ್ರಾಮದಲ್ಲಿ ಜನಿಸಿದಂತಹ ಹಲವರು ಸನ್ಯಾಸತ್ವ ದೀಕ್ಷೆ ಪಡೆದು ಹಲವು ಮಠಗಳಲ್ಲಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕಂಚುಗಲ್ ಬಂಡೇಮಠದ ಶಿವರುದ್ರಶ್ರೀಗಳು ಮತ್ತು ಈಗಿನ ಬಸವಲಿಂಗಶ್ರೀಗಳು, ಕಣ್ಣೂರು ಮಠದ ಶಾಂತವೀರಶ್ರೀಗಳು, ಮೃತ್ಯುಂಜಯಶ್ರೀಗಳು, ಕಂಬಾಳುಮಠದ ಸಿದ್ಧಲಿಂಗಾಶಿವಾಚಾರ್ಯಶ್ರೀಗಳು, ಚನ್ನವೀರಶ್ರೀಗಳು ಮತ್ತು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವಂತಹ ಸಿದ್ಧಲಿಂಗ ಶ್ರೀಗಳೆಲ್ಲರೂ ಕಂಚುಗಲ್ ಬಂಡೇಮಠ ಗ್ರಾಮದವರೇ ಆಗಿದ್ದಾರೆ.

ಮಾಗಡಿಯ ಹೆಮ್ಮೆಯ ಪುತ್ರರತ್ನರು : ಸಣ್ಣದಾಗಿದ್ದ ಸಿದ್ಧಗಂಗಾ ಮಠವನ್ನು ವಿಶ್ವವೇ ತಿರುಗಿನೋಡುವಂತೆ ದೊಡ್ಡ ಮಟ್ಟಕ್ಕೆ ಬೆಳೆಸಿದಂತಹ ಕೀರ್ತಿ ಶತಾಯುಷಿ ಶಿವಕುಮಾರಶ್ರೀಗಳಿಗೆ ಸಲ್ಲಬೇಕಾಗಿದೆ. ಶಿವಕುಮಾರಶ್ರೀಗಳು ಕೂಡ ಮಾಗಡಿ ತಾಲ್ಲೂಕಿನ ವೀರಾಪುರದವರೆ. ಈಗ ನೇಮಕಗೊಂಡಿರುವ ಸಿದ್ಧಲಿಂಗ ಶ್ರೀಗಳು ಕೂಡ ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದವರೆ. ಸಿದ್ದಗಂಗಾ ಮಠಕ್ಕೆ ಇಬ್ಬರು ಶ್ರೀಗಳನ್ನ ನೀಡಿದ ಹೆಗ್ಗಳಿಕೆಯನ್ನ ಮಾಗಡಿ ತಾಲೂಕಿನದು.

ಈಜಿನಲ್ಲಿ ಪರಿಣಿತರು :
ಬಾಲ್ಯದಿಂದಲೂ ಕಂಚುಗಲ್ ಬಂಡೇಮಠದಲ್ಲೇ ಬೆಳೆದ ಸಿದ್ಧಲಿಂಗ ಶ್ರೀಗಳು ವಾರಾಂತ್ಯಗಳಲ್ಲಿ ಬಾವಿಯಲ್ಲಿ ಈಜುವುದನ್ನ ಹವ್ಯಾಸವನ್ನಾಗಿಸಿಕೊಂಡಿದ್ದರು. ನಾಲ್ಕೈದು ಗಂಟೆಗಳ ಕಾಲ ಬಾವಿಯಲ್ಲಿಯೇ ಈಜುವುದನ್ನ ರೂಢಿಸಿಕೊಂಡಿದ್ದರು. ಮತ್ತು ಮರ ಹತ್ತಿ ತೆಂಗಿನಕಾಯಿ ಮತ್ತು ಎಳನೀರು ಕೀಳುವುದರಲ್ಲೂ ಸಿದ್ಧಲಿಂಗ ಶ್ರೀಗಳು ಸಾಕಷ್ಟು ಪರಿಣಿತಿಯನ್ನು ಹೊಂದಿದ್ದವರಾಗಿದ್ದರು. ಎಲ್ಲರೊಂದಿಗೆ ವಿನಯ ವಿಧೇಯತೆಯಿಂದಲೇ ಬೆರೆಯುತ್ತಿದ್ದ ಸಿದ್ಧಲಿಂಗ ಶ್ರೀಗಳು ಮಹತ್ತರ ಜವಾಬ್ಧಾರಿಯನ್ನು ನಿಭಾಯಿಸುತ್ತಾರೆಂದು ಅವರ ಆಪ್ತರೆನಿಸಿದರುವ ಬಸವಲಿಂಗಶ್ರೀಗಳು ಹೇಳುತ್ತಾರೆ.

English summary
Pen portrait of new seer of Siddaganga Mutt Sri Siddalinga Swamiji. The pontiff is originally from Magadi taluk Ramnagar district. Sri Shivakumar Swamiji of Siddaganga Mutt also hails from same taluk. Siddalinga Swamiji is also a good swimmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X