375526ಗಂಗೂಬಾಯಿ ಹಾನಗಲ್ಗಂಗೂಬಾಯಿಗೆ ಆನಾರೋಗ್ಯ : ಆಸ್ಪತ್ರೆಗೆ ದಾಖಲು /news/2009/06/08/hindustani-singer-gangubai-hangal-hospitalized.htmlಹುಬ್ಬಳ್ಳಿ, ಜೂ. 8 : ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ ಗಂಗೂಬಾಯಿ ಹಾನಗಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತಸ್ಮಿಕವಾಗಿ ಮೈನಡುಕು ಹೆಚ್ಚಿದ್ದರಿಂದ ಶನಿವಾರ ಅವರನ್ನು ಇಲ್ಲಿನ ಗೋಕುಲ ರಸ್ತೆಯ ಕಲಮದಾನಿ ಆಸ್ಪತ್ರೆಗೆ ಸೇರಿಸಲಾಗಿದೆ. ಡಾ ಅಶೋಕ್ ಕಮಲದಾನಿ, ಡಾ ದತ್ತಾ ಹಾಗೂ ನಾಡಿಗೇರ ಎಂಬ ನುರಿತ ವೈದ್ಯರು ಗಂಗೂಬಾಯಿ ಅವರನ್ನು 37180http://kannada.oneindia.com/img/2009/06/08-gangubai-hangal2.jpg375526ಗಂಗೂಬಾಯಿ ಹಾನಗಲ್ಚೇತರಿಸಿಕೊಂಡ ಗಾಯಕಿ ಗಂಗೂಬಾಯಿ/news/2009/06/15/gangubai-hospitalized-again-but-stable.htmlಹುಬ್ಬಳ್ಳಿ, ಜೂ. 15 : ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಂಸದ ಪ್ರಲ್ಹಾದ ಜೋಶಿ ಮತ್ತಿತರರು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಗೋಕುಲ ರಸ್ತೆಯ ಲೈಪ್ ಲೈನ್ ಆಸ್ಪತ್ರೆಯ 37341http://kannada.oneindia.com/img/2009/06/15-gangubai-hangal1.jpg375526ಗಂಗೂಬಾಯಿ ಹಾನಗಲ್ಗಂಗೂಬಾಯಿ ದರ್ಶನಕ್ಕೆ ಸಿಸಿಟಿವಿ ಕ್ಯಾಮರಾ/news/2009/06/16/singer-gangubais-condition-is-improving.htmlಹುಬ್ಬಳ್ಳಿ, ಜೂ. 16 : ಅನಾರೋಗ್ಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಸ್ವರಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಚೇತರಿಸಿಕೊಳ್ಳುತ್ತಿದ್ದು, ಅವರ ದರ್ಶನಕ್ಕೆ ಗಣ್ಯರ ಹಾಗೂ ಅಭಿಮಾನಿಗಳು ದಂಡು ಹರಿದು ಬರುತ್ತಿದೆ.ಇಲ್ಲಿನ ಗೋಕುಲ್ ರಸ್ತೆಯಲ್ಲಿರುವ ಲೈಫ್ ಲೈನ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಗಂಗೂಬಾಯಿಯವರನ್ನು ದಾಖಲಿಸಲಾಗಿದೆ. ರೋಗಿಗಳ ಹಿತದೃಷ್ಟಿ ಮತ್ತು ನೈರ್ಮಲ್ಯ ಕಾಪಾಡಲು ಐಸಿಯುನಲ್ಲಿ ವೈದ್ಯರ ಅನುಮತಿಯಿಲ್ಲದೇ ಯಾರೂ ಒಳಗೆ ಹೋಗುವಂತಿಲ್ಲ. 37365http://kannada.oneindia.com/img/2009/06/16-gangubai1.jpg375526ಗಂಗೂಬಾಯಿ ಹಾನಗಲ್ಗಂಗೂಬಾಯಿಗೆ ಭಾರತರತ್ನ ನೀಡಿಲು ಸಿಎಂ ಒತ್ತಾಯ/news/2009/06/17/confer-bharat-ratna-to-gangubai-yeddyurappa.htmlಹುಬ್ಬಳ್ಳಿ, ಜೂ. 17 : ಗಾನವಿದುಷಿ ಡಾ ಗಂಗೂಬಾಯಿ ಹಾನಗಲ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗೂಬಾಯಿಯವರನ್ನು ಮಂಗಳವಾರ ಭೇಟಿಯಾದ ನಂತರ 37394http://kannada.oneindia.com/img/2009/06/17-bsy-visits-gangubai2.jpg375526ಗಂಗೂಬಾಯಿ ಹಾನಗಲ್ಗಂಗೂಬಾಯಿ ದೇಹಸ್ಥಿತಿ ವಿಷಮ/news/2009/07/17/gangubai-hangals-condition-still-critical.htmlಹುಬ್ಬಳ್ಳಿ, ಜು. 17 : ಹಿರಿಯ ಹಿಂದುಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ದೇಹಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. 97 ವರ್ಷದ ಗಂಗೂಬಾಯಿ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ದಿನದ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಗುರುವಾರ ತಡರಾತ್ರಿ ಅವರನ್ನು ಇನ್ನೊಂದು ಸುಸಜ್ಜಿತ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈಗ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆಂದು ಅವರನ್ನು 38050http://kannada.oneindia.com/img/2009/07/17-gangubai-hangal1.jpg235249ಹಿಂದೂಸ್ತಾನಿ ಸಂಗೀತವಿದುಷಿ ಗಂಗೂಬಾಯಿ ಹಾನಗಲ್ ವಿಧಿವಶ /news/2009/07/21/hindustani-vocalist-gangubai-hanagal-passes-away.htmlಹುಬ್ಬಳ್ಳಿ, ಜು. 21 : ಗಾಯನಗಂಗೆ ಹಿಂದೂಸ್ತಾನ ಶಾಸ್ತ್ರೀಯ ಸಂಗೀತದ ದಿಗ್ಗಜೆ ಪದ್ಮಭೂಷಣ ಡಾ ಗಂಗೂಬಾಯಿ ಹಾನಗಲ್(96) ಇಂದು ಬೆಳಗ್ಗೆ 7.10ಕ್ಕೆ ಇಲ್ಲಿನ  ಲೈಫ್ ಲೈನ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಸೋಮವಾರ ಅವರ ದೇಹಸ್ಥಿತಿ ತೀರಾ ವಿಷಮ ಸ್ಥಿತಿಗೆ ತಲುಪಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತಾದರೂ ಫಲಕಾರಿಯಾಗಲಿಲ್ಲ. ಹೆಮ್ಮಯ ಕಿರಾಣ ಘರಾಣಾದ ಗಂಗಜ್ಜಿ  ಸಂಗೀತದಲ್ಲಿ ದೇಶಕಂಡ ಅತ್ಯದ್ಭುತ 38101http://kannada.oneindia.com/img/2009/07/21-gangubai-hangal1.jpg235249ಹಿಂದೂಸ್ತಾನಿ ಸಂಗೀತಗಂಗಜ್ಜಿ ನಿಧನ, ಯಡಿಯೂರಪ್ಪ ಶೋಕ/news/2009/07/21/yeddyurappa-condolence-to-gangubai-demise.htmlಬೆಂಗಳೂರು, ಜು. 21 : ಗಾನಕೋಗಿಲೆ ಡಾ ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೀವ್ರಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಕಂಡ ಅಪ್ರತಿಮೆ ಸ್ವರಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಎಂದರು. ಗಂಗೂಬಾಯಿ ಅವರ ಅಂತ್ಯಕ್ರಿಯೆನ್ನು ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲಾಗುವುದು. ಹುಬ್ಬಳ್ಳಿಯ 38107http://kannada.oneindia.com/img/2009/07/21-bsy-visits-gangubai2.jpg235249ಹಿಂದೂಸ್ತಾನಿ ಸಂಗೀತಬೆಅಂವಿ ನಿಲ್ದಾಣಕ್ಕೆ ಗಂಗಜ್ಜಿ ಹೆಸರಿಡಿ/response/2009/0721-demand-to-name-bia-after-gangubai-hanagal.htmlಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅನರ್ಘ್ಯ ರತ್ನ ಪದ್ಮವಿಭೂಷಣ ಡಾ ಗಂಗೂಬಾಯಿ ಹಾನಗಲ್ ಅವರ ದೈವಾಧೀನರಾಗಿರುವುದು ನಾಡಿಗೆ ಭರಿಸಲಾರದ ನಷ್ಟ. ಗಂಗಜ್ಜಿಯಂತ ಶ್ರೇಷ್ಠ ಸಂಗೀತ ವಿದ್ವಾನ್ ಗಳು ಮತ್ತೊಮ್ಮೆ ಹುಟ್ಟಬರಲಿ ಎನ್ನುವುದು ಸಮಸ್ತ ಕನ್ನಡಿಗರ ಒಕ್ಕೂರಲಿನ ಕೂಗಾಗಿದೆ.ಗಂಗೂಬಾಯಿ ಅವರ ನಿಧಕ್ಕೆ ಸರಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಲಾಗುವ ಸಂಗೀತ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿ ಅವರ ಹೆಸರಿಡುವ 38113http://kannada.oneindia.com/img/2009/07/21-gangubai-hangal1.jpg235249ಹಿಂದೂಸ್ತಾನಿ ಸಂಗೀತಪಂಚಭೂತಗಳಲ್ಲಿ ಲೀನವಾದ ಗಂಗಜ್ಜಿ/news/2009/07/22/state-mourns-as-mark-of-respect-to-gangubai.htmlಹುಬ್ಬಳ್ಳಿ, ಜು. 22 : ಮಂಗಳವಾರ ನಿಧನರಾದ ಗಾನಕೋಗಿಲೆ ಡಾ ಗಂಗೂಬಾಯಿ ಹಾನಗಲ್ ಅವರನ್ನು ಇಂದು ಸಕಲ ಸರಕಾರಿ ಮಾರ್ಯದೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಗರದ ನೃಪತುಂಗ ಬೆಟ್ಟದಡಿ ಇರುವ ಗುರುಕುಲ ಟ್ರಸ್ಟ್ ನಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಗಂಗೂಬಾಯಿ ಹಾನಗಲ್ ಅವರ ಮಗ ಬಾಬುರಾವ್ ಅವರ ಗಾನಗಂಗೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಗಂಗಜ್ಜಿ ದುಖಃತಪ್ತ ಕುಟುಂಬ, ವಿಧಾನಸಭೆ 38134http://kannada.oneindia.com/img/2009/07/22-gangu-bai2e.jpg124367ಹುಬ್ಬಳ್ಳಿನೀವೇನ ಹೇಳ್ರಿ ಧಾರವಾಡದ ಮಂದಿನ ಮಂದಿ/literature/articles/2008/2501-gadag-to-hubballi-train-travel-notes.htmlಹಳ್ಳೀ ಕಡೆ ಅದ್ರಾಗೂ ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ. ವಿಷಯ ಗಂಭೀರ ಇರ್ಲಿ ಬಿಡ್ಲಿ, ಹಿಂದಮುಂದ ಯಾರಿದ್ರೂ ದರಕಾರ ಮಾಡ್ದ ಹಿರಿಯರಿಬ್ಬರು, 'ಏ ನಮ್ ಕಾಲ್ದಾಗ ಹಿಂಗಿರ್ಲಿಲ್ಲ ಬಿಡ್ರಿ' ಅಂತ ಹೊಡ್ಯೋ ಹರಟಿ ಅದ ಅಲ್ಲ, ಅದು ಡ್ಯಾಮಿನ್ಯಾಗಿಂದ ಬಿಟ್ಟ ನೀರಿನ್ಹಂಗ. ತಮ್ಮ ಕಾಲದಾಗಿನ ಮೌಲ್ಯಗಳ ಬಗ್ಗೆ ಅಭಿಮಾನನೂ ಇರ್ತದ, ಈಗಿನ 18928http://kannada.oneindia.com/img/2009/07/14-raghu-koppar1.jpg124367ಹುಬ್ಬಳ್ಳಿಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg124367ಹುಬ್ಬಳ್ಳಿಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ : ಬಚ್ಚೇಗೌಡ/news/2009/01/04/ktaka-job-fair-udyog-mela-extended-all-districts.htmlಮೈಸೂರು, ಜ. 4: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು. ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯ ಆಯೋಗ, ಉದ್ಯೋಗ ಮತ್ತು 33861http://kannada.oneindia.com/img/2009/01/04-udyog-mela-mysore.jpg124367ಹುಬ್ಬಳ್ಳಿಪಿಂಕ್ ಚಡ್ಡಿ ಕಳುಹಿಸಿದವರಿಗೆ ಲೀಗಲ್ ನೋಟಿಸ್ /news/2009/02/27/legal-notice-to-pink-chaddies-campainer-nisha.htmlಬೆಂಗಳೂರು, ಫೆ. 27 : ಪಿಂಕ್ ಚಡ್ಡಿ ಪುರಾಣ ರಾಮಾಯಣ ಆಗಲು ಹೊರಟಿದೆ. ಪ್ರೇಮಿಗಳ ದಿನದಂದು ಶ್ರೀರಾಮಸೇನೆ ಕ್ರಮ ವಿರೋಧಿಸಿ ಪಿಂಕ್ ಚಡ್ಡಿ ಕಳುಹಿಸಿದ್ದ ಪತ್ರಕರ್ತೆ ನಿಶಾ ಸೂಸಾನ್ ಸೇರಿದಂತೆ 8 ಮಂದಿಗೆ ಪ್ರಮೋದ್ ಮುತಾಲಿಕ್ ಪರ ವಕೀಲರು ನೋಟಿಸ್ ನೀಡಿದ್ದಾರೆ. 15 ದಿನದೊಳಗೆ ಕ್ಷಮೆ ಕೋರದಿದ್ದರೆ ಕಾನೂನು ಹೋರಾಟಕ್ಕೆ ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರೇಮಿಗಳ 34904http://kannada.oneindia.com/img/2009/02/27-pink-cheddy1.jpg124367ಹುಬ್ಬಳ್ಳಿಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ/festivals/general/2009/0311-holi-festival-in-north-karnataka.htmlಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.ನಮ್ ಕಾಲದಾಗ 35151http://kannada.oneindia.com/img/2009/03/11-holi2.jpgnews"> ಹಿಂದೂಸ್ತಾನಿ ಸಂಗೀತದ ಮೇರು ಶಿಖರ ಗಂಗೂಬಾಯಿ | Gangubai Hanagal | Hindustani Vocalist| 97th Birthday | Karntaka Classical singers | Indian Music| ಹಿಂದೂಸ್ತಾನಿ ಸಂಗೀತದ ಮೇರು ಶಿಖರ ಗಂಗೂಬಾಯಿ - Kannada Oneindia

ಹಿಂದೂಸ್ತಾನಿ ಸಂಗೀತದ ಮೇರು ಶಿಖರ ಗಂಗೂಬಾಯಿ

Gangubai Hangal
ಕರ್ನಾಟಕದ ಸಾಂಸ್ಕೃತಿಕರಾಯಭಾರಿ, ಮಹಾನ್ ಗಾಯಕಿ ಗಂಗೂಬಾಯಿ ಹಾನಗಲ್ ಅವರು ತಮ್ಮ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಸರಳವಾಗಿ ಆಚರಿಸಿಕೊಂಡರು. ಗಾನ ವಿದುಷಿಗೆ ಶುಭಕೋರಲು ಖ್ಯಾತ ಕೊಳಲು ಮಾಂತ್ರಿಕ ಪಂಡಿತ ಹರಿಪ್ರಸಾದ್ ಚೌರಾಸಿಯಾ, ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ,ಸಚಿವ ಮುರುಗೇಶ ನಿರಾಣಿ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಆಗಮಿಸಿದ್ದರು. ಗಂಗಾಲಹರಿ ನಿವಾಸದಲ್ಲಿ ವೇದ ಘೋಷಣೆಗಳ ನಡುವೆ ದೀಪ ಬೆಳಗಿಸಿ, ಮಕ್ಕಳೊಂದಿಗೆ ಹಾಡಿ ನಲಿದು ಸಂಗೀತ ಲೋಕದ ಹಿರಿಯಜ್ಜಿ ಸಂತಸ ಪಟ್ಟರು ಎಂಬ ವರದಿ ಬಂದಿದೆ.ಮಾ.5 ರಂದು 97 ನೇ ವಸಂತಕ್ಕೆ ಕಾಲಿರಿಸಿದ ಗಂಗೂಬಾಯಿ ಅವರಜನ್ಮದಿನಕ್ಕೆ ಶುಭಹಾರೈಸಿ ಬಂದ ಲೇಖನ ನಿಮ್ಮ ಮುಂದೆ.

*ರಘುಪತಿ ಯಾಜಿ, ಹುಬ್ಬಳ್ಳಿ

ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ...' ಇದು ಕೇವಲ 11 ವರ್ಷದ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು 1924 ರ ಬೆಳಗಾವಿ ಕಾಂಗ್ರೆಸ್ ಅಧಿ ವೇಶನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮುಂದೆ ಹಾಡಿ ಭೇಷ್ ಎನಿಸಿಕೊಂಡ ಹಾಡು. ಅಂದಿನಿಂದ ಹರಿಯ ಲಾರಂಭಿಸಿದ ಗಾನಗಂಗೆ (ಡಾ. ಗಂಗೂಬಾಯಿ ಹಾನಗಲ್) 97ರ ವೃದ್ಧಾಪ್ಯದಲ್ಲೂ ಜುಳು ಜುಳು ಹರಿಯುತ್ತಲೇ ಇದೆ. 86 ವರ್ಷಗಳಿಂದ ಇದು ನಾದವಾಗಿ-ನಿನಾದವಾಗಿ ತಂಬೂರಿಯೊಟ್ಟಿಗೆ ಸೇರಿ ಸ್ವರವಾಗಿ-ಶೃತಿಯಾಗಿ,ರಾಗವಾಗಿ, ತೃಗಳಿಗೆ ಬಹುಶ್ರುತವಾಗಿ ಸಂಗೀತದ ಪಥದಲ್ಲಿಕ್ರಮಿಸುತ್ತಲೇ ಇದೆ.

ಗಾನಗಂಗೆ ಎಂದೇ ಕರೆಯಲ್ಪಟ್ಟ ಡಾ.ಗಂಗೂಬಾಯಿ ಹಾನಗಲ್ ಇಂದು 97 ವಸಂತಗಳನ್ನು ಪೂರೈಸಿದ್ದಾರೆ. ಇದು ಸಾಮಾನ್ಯ ಬದುಕಲ್ಲ, ಸಂಗೀತದ ಬದುಕು, ನಾದೋಪಾಸನೆಯ ಅನುಭದ ಬುತ್ತಿ. ಈಗಲೂ ಅವರು ವರ್ಷಕ್ಕೆ ಸುಮಾರು 150 ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಂಗೀತದ ಬಗ್ಗೆ ಮಾತ ನಾಡಿದರೆ ಪುಳಕಗೊಳ್ಳುತ್ತಾರೆ, ಹಿಂದಿನ ಮೆಲುಕುಗಳನ್ನು ಹಾಕುತ್ತಾರೆ. 1913 ರಲ್ಲಿ ಧಾರವಾಡದಲ್ಲಿ ಜನನ. ಜನಿಸುವಾಗಲೇ ಅವರು ಕೇಳಿದ್ದು ಸಂಗೀತವನ್ನೇ. ಯಾಕೆಂದರೆ ತಾಯಿ ಅಂಬಾಬಾಯಿ ಅವರು ಕರ್ನಾಟಕ ಸಂಗೀತಗಾರರಾಗಿದ್ದರು. ಹೀಗಾಗಿ ಗಂಗೂಬಾಯಿಗೂ ಸಂಗೀತದತ್ತ ಸೆಳೆತ. ಆರಂಭದಲ್ಲಿ
ಕೃಷ್ಣಾಮಾಚಾರ್ಯ, ದತ್ತೋಪಂತ ದೇಸಾಯಿ ನಂತರದ ದಿನಗಳಲ್ಲಿ ಕುಂದಗೋಳದ ಸವಾಯಿ ಗಂಧರ್ವ (ರಾಮಬಾವು ಕುಂದಗೋಳಕರ) ಅವರಲ್ಲಿ ತರಬೇತಿ. ಸವಾಯಿ ಗಂಧರ್ವ ಅವರು ಕುಂದಗೋಳದಲ್ಲಿಯೇ ವಾಸಿಸುತ್ತಿದ್ದರು. ಹೀಗಾಗಿ ಹುಬ್ಬಳ್ಳಿಯ ಅವರ ಮನೆಯಿಂದ ಅಂಕಲ್ ರಾಮಣ್ಣ ಅವರೊಂದಿಗೆ ಪ್ರತಿ ದಿನ ಸಂಜೆ ಕುಂದಗೋಳಕ್ಕೆ ಪ್ರಯಾಣ.

ಹೀಗೆ ಸಂಗೀತ ಬದುಕು ಆರಂಭ. ಕಟ್ಟುನಿಟ್ಟಾದ ಗುರು-ಶಿಷ್ಯ ಪರಂಪರೆಯಡಿ ಸಂಗೀತದ ತಾಲೀಮು. ಅವರಿಗೆ ಎಲ್ಲರ ಕುತೂಹಲದ ಕೇಂದ್ರವಾಗಿದ್ದ, ಎಲ್ಲರಿಂದಲೂ ಗಾನೆವಾಲಿ' ಎಂದು ಎನಿಸಿಕೊಳ್ಳುತ್ತಿದ್ದ ಪುಟ್ಟ ಬಾಲಕಿಯೇ ಸಂಗೀತ ಸಾಮ್ರಾಜ್ಞಿಯಾಗಿ ಬೆಳೆದದ್ದು ಈಗ ಇತಿಹಾಸ. ಡಾ.ಗಂಗೂಬಾಯಿ ಹಾನಗಲ್ ಕ್ರಮಿಸಿದ ನಾದ ಪಥ ನಿಜಕ್ಕೂ ಅಪೂರ್ವ.ಇದು ಸಂಗೀತ, ಸೌಹಾರ್ದ ಹಾಗೂ ರಾಷ್ಟ್ರಪ್ರಜ್ಞೆಯ ಅಪರೂಪದ ಸಮ್ಮಿಲನ. ಅವರು ಜನಪ್ರಿಯತೆ ಗಾಗಿ ಸಂಗೀತ ಸಂಪ್ರದಾಯದೊಂದಿಗೆ ರಾಜಿ ಮಾಡಿ ಕೊಂಡವರಲ್ಲ. ಶುದ್ಧ ಕಿರಾಣಾ ಘರಾಣಾ ಶೈಲಿಯ ಖ್ಯಾಲ್ ಗಾಯನ ಬಿಟ್ಟು ಅವರು ಸುಗಮ ಸಂಗೀತ ಭಜನೆಗಳು, ಭಾವಗೀತೆಗಳನ್ನು ಹಾಡಿಯೇ ಇಲ್ಲ. 1932 ರಲ್ಲಿ ಒಮ್ಮೆ ಒಂದೆರಡು ಠುಮ್ರಿ ಹಾಡಿದ್ದು ಬಿಟ್ಟರೆ ಮುಂದೆ ಅವರು ಖ್ಯಾಲ್ ಗಾಯನವನ್ನೇ ಜೀವನ ಪೂರ್ತಿ ಹಾಡಿದ್ದು. ಒಮ್ಮೆ ಕಛೇರಿ ನೀಡುತ್ತಿರುವಾಗ ಶ್ರೋತೃ ಒಬ್ಬರು ಲೈಟ್ ಮ್ಯೂಸಿಕ್ ಹಾಡಿ ಎಂದು ವಿನಂತಿಸಿದಾಗ ಎದುರಿಗಿರುವ ಲೈಟ್ (ಬೆಳಕು) ತೋರಿಸಿ ತನಗೆ ಈ ಲೈಟ್ ಬಿಟ್ಟು ಬೇರೆ ಯಾವು ಲೈಟು ಗೊತ್ತಿಲ್ಲ ಎಂದು ಹೇಳಿದರು.ಇವರ ಮೇಲೆ ಹೆಚ್ಚು ಪ್ರಭಾವ ಬೀರಿದ ಗಾಯಕಿ ಎಂದರೆ ಉತ್ತರ ಪ್ರದೇಶದ ಝೋಹ್ರಾಬಾಯಿ. ಈಗಲೂ ಅವರು ಆ ಗಾಯನವನ್ನು ಮೆಲುಕು ಹಾಕುತ್ತಾರೆ. ಹೋರಾಟದಲ್ಲಿಯೂ ಸಕ್ರಿಯ; ಗಂಗೂಬಾಯಿ ಹಾನಗಲ್ ಜನಪರ ಹೋರಾಟಗಾರರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನಾಡು-ನುಡಿಗೆ ಧಕ್ಕೆ ಬಂದಾಗ ಅವರು ಎಂದೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡವರಲ್ಲ. ಇದಕ್ಕೆ ಗೋಕಾಕ ಚಳವಳಿ ಒಂದು ಉತ್ತಮ ಉದಾಹರಣೆ. ಗೋಕಾಕ ಚಳವಳಿ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರದ ನೀತಿ ಪ್ರತಿಭಟಿಸಿದವರಲ್ಲಿ ಮೊದಲಿಗರೆನಿಸಿಕೊಂಡವರು ಇವರು.

ಇಂಥದ್ದೇ ಮತ್ತೊಂದು ಪ್ರಸಂಗ 1960ರಲ್ಲಿ ನಡೆಯಿತು. ಆಗ ಆಕಾಶವಾಣಿಯಲ್ಲಿ ತಂಬೂರಿಮೀಟುವ , ಸಾಥ್ ನೀಡುವ ಕಲಾವಿದರಿಗೆ ದಿನಗೂಲಿ ನೀಡಲಾಗುತ್ತಿತ್ತು. ಅವರನ್ನು ಕಾಯಂಗೊಳಿಸಬೇಕೆಂಬ ಬೇಡಿಕೆಯನ್ನು ಸರಕಾರ ಮನ್ನಿಸಿರಲಿಲ್ಲ. ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಡಾ.ಗಂಗೂಬಾಯಿ ಹಾನಗಲ್ ನೇತೃತ್ವದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಇಂದಿರಾ ಗಾಂಧಿ ವಿರುದ್ಧ ಪಿಕೆಟಿಂಗ್ ಮಾಡಲಾಯಿತು. ಇದರಿಂದ ಕೇಂದ್ರ ಸರಕಾರ ವಿರುದ್ಧ ಗರಂ' ಆಯಿತು. ಗಂಗೂಬಾಯಿಗೆ ಆಕಾಶವಾಣಿಯಲ್ಲಿ ಯಾವುದೇ ಕಾರ್ಯಕ್ರಮ ನೀಡದಂತೆ ತಾಕೀತು ಮಾಡಿತು. ಗಂಗೂಬಾಯಿ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಕೊನೆಗೂ ಸರಕಾರವೇ ಮಣಿದು ತಂಬೂರಿ ಹಾಕುವವರನ್ನು ಹಾಗೂ ಸಾಥ್ ನೀಡುವವರನ್ನು ಕಾಯಂಗೊಳಿಸಿತು . ಅಲ್ಲದೇ ಈದ್ಗಾ ವಿವಾದದ ಶಾಂತಿಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ, ಹೈಕೋರ್ಟ್ ಪೀಠ, ನೈರುತ್ವ ರೈಲ್ವೆಹೋರಾಟದ ಸಂದರ್ಭ ದಲ್ಲಿ ತಮ್ಮ ಇಳಿವಯಸ್ಸಿನಲ್ಲಿಯೂ ಪಾಲ್ಗೊಂಡಿದ್ದಾರೆ. ಭಾರತೀಯ ಭಾಷೆಯಲ್ಲಿ ಭಾರತೀಯ ಮ್ಯೂಸಿಕ್ ಕಂಪನಿಯೊಂದರ ಧ್ವನಿ ಮುದ್ರಣದಲ್ಲಿ ಯುಗಳ ಗೀತೆ ಹಾಡಿದ ಕೀರ್ತಿಯೂ ಇವರದ್ದೇ. ಎಚ್‌ಎಂವಿ ಕಂಪನಿ 1933ರಲ್ಲಿ ಇವರು ಹಾಗೂ ಜಿ.ಎನ್.ಜೋಶಿ ಅವರ ಯುಗಳ ಗೀತೆಯನ್ನು ಧ್ವನಿ ಮುದ್ರಿಸಿ ಕೊಂಡಿತು. 1933 ರಲ್ಲಿ ಮುಂಬಯಿ ಆಕಾಶವಾಣಿಯಲ್ಲಿ ಇದು ಪ್ರಸಾರಗೊಂಡಿತು. ಆಗ ಇವರಿಗೆ ಕೇವಲ 20 ವರ್ಷ. 12 ನೇ ವಯಸ್ಸಿನಲ್ಲಿಯೇ ಅವರು ಕಿರಾಣಾ ಘರಾನಾದ ದಂತಕತೆ ಉಸ್ತಾದ್ ಅಬ್ದುಲ್ ಕರೀಂಖಾನ್ ಅವರ ಮುಂದೆ ಹಾಡಿ ಭೇಷ್ ಎನಿಸಿಕೊಂಡಿದ್ದು ಅಪ್ರತಿಮ ಪ್ರತಿಭೆಗೆ ಸಾಕ್ಷಿ.

ಗಂಗೂಬಾಯಿ ಅವರ ವೈಶಿಷ್ಟಎಂದರೆ ಮತ್ತೊಬ್ಬ ಕಲಾವಿದರಿಗೆ ಅವರು ಪ್ರೋತ್ಸಾಹ ನೀಡುವ ಗುಣ. ಪಂ.ಭೀಮಸೇನ್ ಜೋಶಿ ಅವರಿಗೆ ಜೀವನದ ಪ್ರಥಮ ಕಾರ್ಯ ಕ್ರಮ ಏರ್ಪಾಟು ಮಾಡಿದ್ದೇ ಗಂಗೂಬಾಯಿ. ಅದೂ ಹುಬ್ಬಳ್ಳಿಯಲ್ಲಿ. ನಂತರ ಕೋಲ್ಕತಾದಲ್ಲಿಯೂ ಅವರಿಗೆ ಪ್ರಥಮ ಗಾಯನಕ್ಕೆ ವೇದಿಕೆ ಒದಗಿಸಿದರು. ಮಾಲಿನಿ ರಾಜುಲ್ಕರ್ ಅವರಂಥ ಜನಪ್ರಿಯ ಕಲಾವಿದೆಯೂ ಇದೇ ಮಾತನ್ನು ಒಮ್ಮೆ ಹೇಳಿದ್ದರು. ಪಂಡಿತ್ ಜಸ್‌ರಾಜ್ ಸಹ ಇವರ ಈ ಗುಣವನ್ನು ನೆನಪಿಸಿಕೊಳ್ಳುತ್ತಾರೆ.

ಗಂಗೂಬಾಯಿ ಜೀವನವೇ ಅಪೂರ್ವ ದಾಖಲೆಗಳ ಸಂಗಮ.ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಆರಂಭಿಸಿ ಒಂಬತ್ತು ಪ್ರಧಾನಿಗಳಿಂದ ಹಾಗೂ ಐದು ರಾಷ್ಟ್ರಪತಿಗಳಿಂದ ಸನ್ಮಾನಿಸಲ್ಪಟ್ಟ ಕೀರ್ತಿ ಇವರದ್ದು. ಅಲ್ಲದೇ 7 ಗೌರವ ಡಾಕ್ಟರೇಟ್‌ಗಳೂ, 48 ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕರಿಸಲ್ಪಟ್ಟಿದ್ದಾರೆ. ತಮ್ಮ 40 ನೇ ವಯಸ್ಸಿನಲ್ಲಿ ಗಂಟಲು ಕೈಕೊಟ್ಟರೂ ಅವರು ಎದೆಗುಂದಲಿಲ್ಲ, ಸ್ತ್ರೀ ಮಾಧುರ್ಯದ ಧ್ವನಿ ಹೋಗಿ
ಗಂಡಸಿನ ಗಡಸು ಧ್ವನಿಯಾಗಿ ಮಾರ್ಪಟ್ಟಿತು. ಆದರೆ ಗಂಗೂಬಾಯಿ ಅವರ ತಾಕತ್ತಿನ ಮುಂದೆ ಧ್ವನಿ ಸೋತಿತು. ಅವರ ಶಾಸ್ತ್ರೀಯ ಗಾಯನದ ಪಕ್ವತೆಗೆ ಗಡಸು ಧ್ವನಿಯೇ ಶ್ರೋತೃಗಳಿಗೆ ಇಂಪಾಯಿತು. ಹೀಗಿದೆ ಅವರ ಗಾಯನದ ಶ್ರೀಮಂತಿಕೆ. ಗಂಗೂಬಾಯಿ ಸಂಗೀತ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾರೆ. ಮೊದಲೆಲ್ಲ ದೊಡ್ಡ ದೊಡ್ಡ ಸಂಗೀತಗಾರರು ಸಹ ಮತ್ತೊಬ್ಬರ ಅಷ್ಟೇ ಏಕೆ ಕಿರಿಯ ಸಂಗೀತಗಾರರ ಗಾಯನ ಕೇಳುತ್ತಿದ್ದರು. ಇದು ಸಂಗೀತದ ಬೆಳವಣಿಗೆಗೆ ಪೂರಕವಾಗಿತ್ತು. ಒಂದು ಘರಾಣೆಯವರು ಮತ್ತೊಂದು ಘರಾಣೆಯ ಗಾಯನ ಸವಿಯುತ್ತಿದ್ದರು. ಈಗ ಹಾಗಿಲ್ಲ, ಮತ್ತೊಬ್ಬರ ಗಾಯನ ಕೇಳುವ ಮನೋಭಾವ ಕಡಿಮೆಯಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎನ್ನುವ ಅವರ ಹೇಳಿಕೆಯೇ ಇದಕ್ಕೆ ಸಾಕ್ಷಿ.

ಗಂಗೂಬಾಯಿ ಅವರಿಗೆ ಗಾಯನ ಅದು ನಿರಂತರ ನಾದೋಪಾಸನೆ.ಇದರ ತುಡಿತ ಎಷ್ಟಿದೆ ಎಂದರೆ ಅವರು 94ರ ನಂತರವೂ ಅನೇಕ ಕಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಈಗಲೂ ಸಂಗೀತದೊಂದಿಗೆ ಬೆಸೆದು ಕೊಂಡಿದ್ದಾರೆ. ಗಾಯನ ಗಂಗೆಗೇ ಸ್ವರ ಸಮುದ್ರದಲ್ಲಿ ಮೀಯುವ ಆಸೆ. ಇದು ಚಿರಕಾಲ ಇರಲಿ ಎನ್ನುವುದೇ ಎಲ್ಲರ ಆಸೆ. ನಿರೀಕ್ಷೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+