ಸಂದು-ಹೋ-ದ ಉ-ಷಾ ನವ-ರ-ತ್ನ-ರಾ-ಮ್
*ಸತ್ಯವ್ರತ ಹೊಸಬೆಟ್ಟು
ತಮ್ಮ ಕಾದಂ-ಬ-ರಿ-ಯ ನಾಯ-ಕಿಯ-ರಂ-ತೆ-ಯೇ ಬಾಳಿ-ದ ಉಷಾ ನವ-ರ-ತ್ನ-ರಾಮ್, ಕಲ್ಪ-ನಾ ಪ್ರೇಕ್ಷ-ಕ-ರ ಪಾಲಿ-ಗೆ ಅತ್ಯು-ತ್ತ-ಮ ನಟಿ-ಯಾ-ಗಿ-ದ್ದ ಕಾಲ-ದ-ಲ್ಲಿ , ಓದು-ಗ-ರ ಪಾಲಿ-ಗೆ ಅ-ದ್ಭು-ತ ಕಾದಂ-ಬ-ರಿ-ಕಾ-ರ್ತಿ-ಯಂ-ತೆ ಕಂಡ-ವ-ರು. ಡಾ. ಅನು-ಪ-ಮಾ ನಿರಂ-ಜ-ನ-ರ ಸೂಕ್ಷ್ಮ-ಜ್ಞ-ತೆ, ಸಾಯಿ-ಸು-ತೆ-ಯ-ವ-ರ ಉಡಾ-ಫೆ- ಇವೆ-ರ-ಡ-ನ್ನೂ ಮೀರಿ-ದ-ವ-ರಂ-ತಿ-ದ್ದ ಉಷಾ, ಲೇಖ-ಕಿ ಎಂದು ಕರೆ-ಸಿ-ಕೊ-ಳ್ಳ-ಲು ಹೆಮ್ಮೆ ಪಟ್ಟು-ಕೊಂ-ಡ-ವ-ರು. ಚಾ-ಮ-ರಾ-ಜ-ಪೇ-ಟೆ-ಯ ಅವ-ರ ಮನೆ ಮುಂದೆ ತಮ್ಮ ಹೆಸ-ರು ಹಾಗೂ ಹುದ್ದೆ-ಯ ದೊಡ್ಡ ನಾಮ-ಫ-ಲ-ಕ ಹಾಕಿ-ಸಿ-ಕೊಂ-ಡು ಮೆರೆ-ದ-ವ-ರು. ಹೌ-ದು.. ಆಕೆ ಲೇಖ-ಕಿ ಎನ್ನು-ವು-ದ-ನ್ನು ಹುದ್ದೆ-ಯೆಂ-ದೇ ಭಾವಿ-ಸಿ-ದಂ-ತಿ-ತ್ತು .
ಉಷಾ ನವ-ರ-ತ್ನ-ರಾ-ಮ್ ಅವ-ರ ಹೆಸ-ರು ಕೇಳುತ್ತಿ-ದ್ದ ಹಾಗೇ ಸಾಹಿ-ತ್ಯ ಪ್ರಿಯ-ರಿ-ಗೆ ನೆನ-ಪಾ-ಗು-ವು-ದು ಅವ-ರ ಮಾವ ನವ-ರ-ತ್ನ ರಾಮ-ರಾ-ವ್. ಅವ-ರು ಬರೆ-ದ ‘ಕೆಲ-ವು ನೆನ-ಪು-ಗ-ಳು’ ಇವ-ತ್ತಿ-ಗೂ ಮಳೆ-ಗಾ-ಲ-ದ ಇಡೀ ಹಗ-ಲು ಕುಳಿ-ತು ಓದ-ಬ-ಹು-ದಾ-ದ ಬೆಚ್ಚ-ನೆ-ಯ ಕೃತಿ.
ಸುಮಾ-ರು ಎಪ್ಪ-ತ್ತೆೈ-ದು ಕೃತಿ-ಗ-ಳ-ನ್ನು ರಚಿ-ಸಿ-ದ ಉಷಾ, ಹೊಂಬಿ-ಸಿ-ಲು ಕಾದಂ-ಬ-ರಿ ಚಲ-ನ-ಚಿ-ತ್ರ-ವಾ-ಗಿ-ದ್ದಾ-ಗ ತುಂಬಾ ಸಂತೋ-ಷ ಪಟ್ಟಿ-ದ್ದ-ರು. ಗೀತ-ಪ್ರಿ-ಯ-ರಿ-ಗೆ, ವಿಷ್ಣು-ವ-ರ್ಧ-ನ್ ಅವ-ರಿ-ಗೆ ಆ ಕೃತಿ ಹೆಸ-ರು ತಂದು ಕೊಟ್ಟಿ-ತ್ತು . ವಿಷ್ಣು-ವ-ರ್ಧ-ನ್ ಅವ-ರ ಅತ್ಯು-ತ್ತ-ಮ ಚಿತ್ರ-ಗ-ಳ ಪಟ್ಟಿ-ಯ-ಲ್ಲಿ ಅದೂ ಒಂದು. ನಂತ-ರ ಬಂದ ಬಂಧ-ನ ಕೂಡ ರಾಜೇಂ-ದ್ರ-ಸಿಂ-ಗ್ ಬಾಬು, ವಿಷ್ಣು-ವ-ರ್ಧ--ನ್ ಇಬ್ಬ-ರಿ-ಗೂ ಹೆಸ-ರು ತಂದು-ಕೊ-ಟ್ಟ ಚಿತ್ರ.
ಉಷಾ ನವ-ರತ್ನ-ರಾ-ಮ್ ತೀರಿ-ಕೊಂ-ಡಾ-ಗ ಅಲ್ಲಿಗೆ ವಿಷ್ಣು-ವ-ರ್ಧ-ನ್ ಹೋಗಿ-ರ-ಲಿ-ಲ್ಲ . ಗೀತ-ಪ್ರಿ-ಯ ಕೂಡ. ರಾಜೇಂ-ದ್ರ ಸಿಂಗ್ ಬಾಬು ದೂರ-ದ ಮುಂಬ-ಯಿ-ಯ-ಲ್ಲಿ--ದ್ದ-ರು.ನಾಯ-ಕ ನಟ-ರಿ-ಗೆ ತಮ್ಮ--ನ್ನು ರೂಪಿ-ಸಿ-ದ ಕತೆ-ಗಾ-ರ, ಕತೆ-ಗಾ-ರ್ತಿ-ಯ-ರ ಬಗ್ಗೆ ಎಂಥ ಭಾವ-ನೆ ಇರು-ತ್ತ-ದೆ ಅ-ನ್ನು-ವು-ದಕ್ಕೆ ಇದೊಂ-ದು ಉದಾ-ಹ-ರ-ಣೆ ಸಾ-ಕು.
ಟೀವಿ-ಗ-ಳ-ಲ್ಲಿ ಮೆಗಾ ಸೀರಿ-ಯ-ಲ್ ಆರಂ-ಭ-ವಾ-ಗು-ತ್ತಿ-ದ್ದ ಹಾಗೇ, ಉಷಾ ನವ-ರ-ತ್ನ-ರಾ-ಮ್ ಕ-ಳೆಗುಂದಿ-ದ-ವ-ರಂ-ತೆ ಕಂಡು ಬಂದ-ರು. ಅವ-ರ ಕಾದಂ-ಬ-ರಿ-ಯಂ-ಥ ಸೀರಿ-ಯ-ಲ್ಲು-ಗ-ಳು ಬಂದ-ವು. ಓದು-ಗ-ರ ಆಸ-ಕ್ತಿ ಕುಂಠಿ-ತ-ವಾ-ಗಿ, ಅದ-ನ್ನೇ ದೃ-ಶ್ಯ ಮಾಧ್ಯ-ಮ-ದ-ಲ್ಲಿ ಜನ ನೋಡ-ಲಾ-ರಂ-ಭಿ-ಸಿ-ದ-ರು.
ಪ್ಲಾಸ್ಟಿ-ಕ್ ಬುಟ್ಟಿ-ಗ-ಳು ಬಂದಾ-ಗ, ಬಿದಿ-ರಿ-ನ ಬುಟ್ಟಿ ಹೊಲೆ-ಯು-ತ್ತಿ-ದ್ದ ವೃತ್ತಿ-ಪ-ರ ಕಸು-ಬು-ದಾ-ರ-ರು ಕಂಗಾ-ಲಾ-ದ ಹಾಗೆ ಇದೂ ಎ-ನ್ನು-ವು-ದು ಹೊಂದ-ಲಾ-ರ-ದ ಹೋಲಿ-ಕೆ. ಆದ-ರೆ, ಉಷಾ ನವ-ರ-ತ್ನ-ರಾ-ಮ್ ಸಂವೇ-ದ-ನೆ, ಗ್ರಹಿ-ಕೆ-ಗ-ಳಿ-ಗೆ ಈ ಹೋಲಿ-ಕೆ ಸುಮಾ-ರಾ-ಗಿ ಹೊಂದಿ-ಕೊ-ಳ್ಳು-ತ್ತ-ದೆ.
ಚಾಮ-ರಾ-ಜ-ಪೇ-ಟೆ-ಯ ಉಮಾ ಥಿಯೇ-ಟ-ರಿ-ನ ಪಕ್ಕ-ದ ಗೇಟಿ-ಗೆ ತೂಗು ಹಾಕಿ-ದ್ದ ನಾಮ-ಫ-ಲ-ಕ ಇನ್ನು ಆ ಹಾದಿ-ಯ-ಲ್ಲಿ ಹಾದು-ಹೋ-ಗು-ವಾ-ಗ ನಿಮ್ಮ ಕಣ್ಣಿ-ಗೆ ಬೀಳು-ವು-ದಿ-ಲ್ಲ . ಅದು ಮರೆ-ಯಾ-ದ-ದ್ದು ಅನೇ-ಕ-ರಿ-ಗೆ ಗಮ-ನ-ಕ್ಕೂ ಬಾರ-ದೇ ಇರ-ಬ-ಹು-ದು. ಹೀಗೆ ಗಮ-ನ-ಕ್ಕೆ ಬಾರ-ದ ಹಾಗೇ, ನಮ್ಮ ದೈನಿ-ಕ-ಗ-ಳ ಪಟ್ಟಿ-ಯಿಂ-ದ ಅನೇ-ಕ ಸಂಗ-ತಿ-ಗ-ಳು ಮರೆ-ಯಾ-ಗು-ತ್ತ ಹೋಗು-ತ್ತ-ವೆ.
ಉಷಾ ನವ-ರ-ತ್ನ-ರಾ-ಮ್ ಕಾದಂ-ಬ-ರಿ-ಯ ಹಾಗೆ. ಅವ-ರ ನಾಯ-ಕಿ-ಯ-ರ ಹಾಗೆ. ಅವ-ರ ಹೆಮ್ಮೆ-ಯ ಹಾಗೆ. ಅವ-ರ ನೋವು-ಗ-ಳ ಹಾಗೆ ..
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications