150077ಪ್ರಶಸ್ತಿಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ/literature/articles/2009/0108-writer-girish-karnad-bags-karunanidhi-award.htmlಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ 33955http://kannada.oneindia.com/img/2009/01/08-karnad2.jpg150077ಪ್ರಶಸ್ತಿ2009ನೇ ವರ್ಷದ ಕಾರು ಮತ್ತು ಮೋಟಾರ್ ಬೈಕ್/lifestyle/automobiles/2009/0219-car-and-motorbike-of-the-year-2009.htmlಹೊಂಟಾ ಸೀಲ್ ಕಾರು ತಯಾರಕ ಕಂಪನಿಯ ಹೊಂಡಾ ಸಿಟಿ ಮತ್ತು ಯಮಹಾ ಮೋಟಾರ್ ಬೈಕ್ ಕಂಪನಿಯ YZF-R15 ಮೋಟಾರ್ ಸೈಕಲ್ ಕ್ರಮವಾಗಿ 2009ನೇ ವರ್ಷದ ಕಾರು ಮತ್ತು ಬೈಕ್ ಪ್ರಶಸ್ತಿ ಗಳಿಸಿವೆ. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಭಾರೀ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು.ಕಾರು ಮತ್ತು ದ್ವಿಚಕ್ರವಾಹನಗಳ ಮಾರಾಟದ ಪ್ರಮಾಣ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶಸ್ತಿ 34746http://kannada.oneindia.com/img/2009/02/19-yamaha-yzf-r15.jpg150077ಪ್ರಶಸ್ತಿಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg150077ಪ್ರಶಸ್ತಿಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!/column/manikanth/2009/0618-sad-love-story-of-alfred-nobel.htmlಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು. ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ನಂತರದ ದಿನಗಳಲ್ಲಿ ಸಂತೋಷವೆಂಬುದು ನಮ್ಮ ಬದುಕಾಗುತ್ತದೆ. ಸಂಭ್ರಮ ಜತೆಗಿರುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಗುತ್ತಾಳೆ. ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳ ಸಂಖ್ಯೆ 37443http://kannada.oneindia.com/img/2009/06/18-alfred-nobel1.jpg150077ಪ್ರಶಸ್ತಿತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ/literature/my-karnataka/2009/0807-shilpashree-award-investigative-report-ktaka.htmlಬೆಂಗಳೂರು, ಆ. 7 : ಪ್ರತಿಭಾನ್ವಿತ ಪತ್ರಕರ್ತೆ ದಿ.ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮ ಅಂತರ್ ಜಾಲತಾಣವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ"ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ 50 (ಐವತ್ತು) ಸಾವಿರ ರೂ.ಗಳ ನಗದು 38494http://kannada.oneindia.com/img/2009/08/07-beluru-sudarshana1.jpg195521ಪತ್ರಕರ್ತದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್/movies/controversy/2009/01/26-kannada-media-protest-actor-prajwal-remarks.htmlತಪ್ಪಾಯ್ತು ತಪ್ಪಾಯ್ತು. ನನ್ನನ್ನು ಕ್ಷಮಿಸಿ ಎಂದು ಮತ್ತೂ ಕೇಳಿಕೊಂಡರು. ಕೋಪ ಕಡಿಮೆಯಾಯಿತು.'ಗುಲಾಮ' ಸಿನಿಮಾದಲ್ಲಿ ಲೀಲಾಜಾಲವಾಗಿ ಹತ್ತಾರು ವಿಲನ್‌ಗಳನ್ನು ಚಚ್ಚಿಹಾಕಿದ್ದ ಪ್ರಜ್ವಲ್ ದೇವರಾಜ್ ಎನ್ನುವ ಇಪ್ಪತ್ತೊಂದರ ಹರಯದ ಹುಡುಗ, ಶನಿವಾರ ಪತ್ರಕರ್ತರ ಎದುರು ಮುಖ ಕಪ್ಪಾಗಿಸಿಕೊಂಡು ಅಸಹಾಯಕನಾಗಿ ನಿಂತಿದ್ದ. ವಿವಾದ ಶುರುವಾದದ್ದು 'ಗುಲಾಮ'ನ ಕಾರಣದಿಂದಾಗಿಯೇ. 'ಗುಲಾಮ' ಚಿತ್ರದ ವಿಮರ್ಶೆಗಳನ್ನು ನೋಡಿದರೆ ಸೂಸೈಡ್ ಮಾಡ್ಕೊಬೇಕು ಅನ್ಸುತ್ತೆ. ಈ ಪತ್ರಕರ್ತರಿಗೆ ಒಂಚೂರು 34291http://kannada.oneindia.com/img/2009/01/26-prajwal-media-protest.jpg195521ಪತ್ರಕರ್ತನಾಯಕ ನಟರಿಗೆ ದ್ವಾರಕೀಶ್ ಛೀಮಾರಿ/movies/controversy/2009/01/30-dwarakish-blames-kannada-heroes-for-down-fall.html*ಜಯಂತಿಒಂದಲ್ಲ ಎರಡಲ್ಲ ಮೂರಲ್ಲ, ಸರೀಗೆ ಐದು ವರ್ಷ ಆಯಿತು. ನೆನಪಿಟ್ಟುಕೊಳ್ಳುವಂಥ ಇನ್ನೊಂದು ಚಿತ್ರನವನ್ನು ವಿಷ್ಣುವರ್ಧನ್ ಕೊಟ್ರಾ? ಆಪ್ತಮಿತ್ರನಂಥ ಯಶಸ್ವಿ ಚಿತ್ರದ ನಂತರವೂ ಅವರು ಸುಮ್ಮನಾದರಲ್ಲ, ಯಾಕೆ? ಯಾಕೆ ? ಈ ಕನ್ನಡದ ನಟರೇ ಹೀಗೆ. ಹಿರಿಯ ನಟರೇ ಹೀಗೆ ವರ್ತಿಸಿದರೆ ಇನ್ನು ಕಿರಿಯರ ಗತಿಯೇನು ? ಸೂಪರ್ ಹಿಟ್ ಚಿತ್ರ ಕೊಟ್ಟರೂ ಕೂಡ 34379http://kannada.oneindia.com/img/2009/01/30-dwarakish3e.jpg195521ಪತ್ರಕರ್ತಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ/news/2009/04/07/journalist-throws-shoe-at-p-chidambaram.htmlನವದೆಹಲಿ, ಏ. 7 : ಇದೊಂದು ಶಾಕ್ ನೀಡುವಂಥ ಘಟನೆ. ಭಾರತದಲ್ಲಿ ಇಂತಹ ಘಟನೆ ನಿರೀಕ್ಷಿಸಲು ಅಸಾಧ್ಯವಾದರೂ ಇಂದು ಗೃಹ ಸಚಿವ ಚಿದಂಬರಂ ಅವರ ಮೇಲೆ ಪತ್ರಕರ್ತನೊಬ್ಬ ಬೂಟು ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಬಾಗ್ದಾದ್ ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಬೂಟು ಎಸೆದ ತನ್ನ ಆಕ್ರೋಶ ವ್ಯಕ್ತಪಡಿಸಿದ 35784http://kannada.oneindia.com/img/2009/04/07-p-chidambaram-shoe1.jpg195521ಪತ್ರಕರ್ತಕರಾವಳಿಯಲ್ಲಿ ರೈಲು ಬಿಡುತ್ತಿರುವ ರಾಜಕಾರಣಿಗಳು!/cj/chidambar-baikampady/2009/0424-mangaluru-bengaluru-broadguage-still-a-dream.htmlಮಹಾಸಮರದ ಕೊನೆಯ ದಿನಗಳು ಸಮೀಪಿಸುತ್ತಿವೆ. ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲು ಕಸರತ್ತಿನಲ್ಲಿ ನಿರತರಾಗಿದ್ದಾರೆ. ಆದರೆ ಮತದಾರರು ಬುದ್ದಿವಂತರು ಎನ್ನುವ ಸಾಮಾನ್ಯ ಸಂಗತಿಯನ್ನು ರಾಜಕಾರಣಿಗಳು ಮರೆತಿದ್ದಾರೆ. ಐದು ವರ್ಷಕ್ಕೊಮ್ಮೆ ಚುನಾವಣೆಯ ಸಂದರ್ಭದಲ್ಲಿ ಏನಾದರೊಂದು ಭರವಸೆ ಕೊಟ್ಟು ವೋಟು ಗಿಟ್ಟಿಸಿಕೊಂಡರೆ ಆಯ್ತು, ಅವರಿಗೆ ಮತ್ತೊಂದು ಚುನಾವಣೆ ಹೊತ್ತಿಗೆ ಹಿಂದಿನ ಚುನಾವಣೆಯಲ್ಲಿ ಕೊಟ್ಟ ಭರವಸೆ ಮರೆತು ಹೋಗಿರುತ್ತೆ ಅಂದುಕೊಂಡಿದ್ದಾರೆ. ಆದರೆ ಈಗಿನ 36179http://kannada.oneindia.com/img/2009/04/24-chidambar-baikampady1.jpg195521ಪತ್ರಕರ್ತನನಸಾದ ಅಮಿತಾಬ್ ಬಚ್ಚನ್ ಕನಸು/movies/bollywood/2009/05/07-i-wanted-to-be-a-journalist-once-amitabh.htmlಬಾಲಿವುಡ್ ನ ಮೇಘಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಪತ್ರಕರ್ತನಾಗಬೇಕೆಂಬ ಬಹುದಿನದ ಕನಸೊಂದು ಈಡೇರಿದೆ. ಬಿಡುಗಡೆಗೆ ಸಿದ್ದಗೊಂಡಿರುವ 'ರಣ್' ಚಿತ್ರದಲ್ಲಿ ಅವರು ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸಿರುವುದು ನನಗೆ ಖುಷ ತಂದಿದೆ ಎಂದು ಅಮಿತಾಬ್ ಹೇಳಿದ್ದಾರೆ. 70 ದಶಕ ತುತ್ತಿಗಾಗಿ ಪರದಾಡುತ್ತಿರುವ ಸಮಯವದು. ದೂರ ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಮುಂಬೈಗೆ ಬಂದು ಸೇರಿದೆ. ಬಾಲಿವುಡ್ ನಲ್ಲಿ 36450http://kannada.oneindia.com/img/2009/05/07-amitabh-bachchan1.jpgnews"> ತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ | Investigative report|Shilpashree Award|Karnataka news papers|Beluru| Mitramadhyama| ತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ - Kannada Oneindia

ತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ

Beluru Sudarshana
ಬೆಂಗಳೂರು, ಆ. 7 : ಪ್ರತಿಭಾನ್ವಿತ ಪತ್ರಕರ್ತೆ ದಿ.ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮ ಅಂತರ್ ಜಾಲತಾಣವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ"ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ 50 (ಐವತ್ತು) ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದೆ.

ಪ್ರಶಸ್ತಿಯ ಸಾಮಾನ್ಯ ನಿಯಮಗಳು:

* ತನಿಖಾ ವರದಿಯು ಯಾವುದೇ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಿತಾಸಕ್ತಿಗಳಿಂದ ಪ್ರಚೋದಿತವಾಗಿರಬಾರದು; ಸ್ವತಂತ್ರ, ನಿಷ್ಪಕ್ಷಪಾತ ವರದಿಗಳಿಗೆ ಮಾತ್ರ ಅವಕಾಶವಿದೆ. ನಾಡಿನ ಅಭ್ಯುದಯ ಮತ್ತು ಸಮಷ್ಟಿ ಹಿತವೇ ಈ ತನಿಖಾ ವರದಿಗಳ ಸ್ಫೂರ್ತಿಯಾಗಿರಬೇಕು.

* ಸಮಾಜದ ಮೇಲೆ, ಆಡಳಿತದ ಮೇಲೆ ತೀವ್ರ ಪರಿಣಾಮ ಬೀರಿ ಸಮಾಜಹಿತಕ್ಕೆ ಕಾರಣವಾದ ವರದಿಗಳಿಗೆ ಆದ್ಯತೆ ನೀಡಲಾಗುವುದು.

* ಕರ್ನಾಟಕದ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಕನ್ನಡದ ವರದಿಗಳು ಮಾತ್ರವೇ ಪ್ರಶಸ್ತಿಗೆ ಅರ್ಹವಾಗಿರುತ್ತವೆ. ವಿದ್ಯುನ್ಮಾನ ವರದಿಗಳನ್ನು ಈ ವರ್ಷದ ಪ್ರಶಸ್ತಿಯಲ್ಲಿ ಸೇರಿಸಿಲ್ಲ.

* ಈ ವರದಿಗಳು 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗಿರಬೇಕು.

* ಪ್ರಶಸ್ತಿಗೆ ಅರ್ಹವೆನಿಸಿದ ವರದಿಗಳನ್ನು ವರದಿ ಬರೆದ ಪತ್ರಕರ್ತರಲ್ಲದೆ, ಬೇರೆಯವರೂ ಸಲ್ಲಿಸಬಹುದು.

* ಪ್ರಶಸ್ತಿ ನೀಡುವಲ್ಲಿ ಮಿತ್ರಮಾಧ್ಯಮದ ತೀರ್ಮಾನವೇ ಅಂತಿಮ; ಪ್ರಶಸ್ತಿಗೆ ಅರ್ಹ ವರದಿಗಳು ಬರದಿದ್ದರೆ ಪ್ರಶಸ್ತಿಯನ್ನು ತಡೆ ಹಿಡಿಯಲಾಗುವುದು. ತಜ್ಞ ತೀರ್ಪುಗಾರರ ತಂಡವೊಂದು ಈ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡುತ್ತದೆ.

* ಈ ಪ್ರಶಸ್ತಿಯನ್ನು ತನಿಖಾ ವರದಿಗಾರಿಕೆಯನ್ನು ಉತ್ತೇಜಿಸಲು ನೀಡಲಾಗುತ್ತಿದೆಯೇ ವಿನಃ ಯಾವುದೇ ಪ್ರಚಾರದ ಉದ್ದೇಶ ಇಲ್ಲಿಲ್ಲ. ಆದ್ದರಿಂದ ಪ್ರಶಸ್ತಿ ನೀಡಿಕೆ ಸಮಾರಂಭಕ್ಕೆ ಆದ್ಯತೆಯಿಲ್ಲ. ನಾಡಿನ ಹಿರಿಯರಿಂದ ಪ್ರಶಸ್ತಿಯನ್ನು ನೀಡಿಸುವ ಪ್ರಯತ್ನ ಮಾಡಲಾಗುವುದು. ದಿನಪತ್ರಿಕೆಗಳ ಸಹಕಾರದಿಂದ ಈ ಪ್ರಶಸ್ತಿಯ ಬಗ್ಗೆ ಹೆಚ್ಚಿನ ಪ್ರಚಾರಕ್ಕೆ ಒತ್ತು ನೀಡಲಾಗುವುದು.

* ಆಸಕ್ತರು ತಮ್ಮ ವರದಿಗಳ ಮುದ್ರಿತ ಪ್ರತಿಯನ್ನು ಸ್ಕ್ಯಾನ್ ಮಾಡಿಸುವುದರ ಜೊತೆಗೆ ಒಂದು ಸಾಫ್ಟ್ ಪ್ರತಿಯನ್ನು ಸೇರಿಸಿ [email protected] ಈ ಮೈಲ್ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾಗದದ ಅಂಚೆಯನ್ನು (ಪೋಸ್ಟ್) ಸ್ವೀಕರಿಸಲಾಗುವುದಿಲ್ಲ.

* ತನಿಖಾ ವರದಿಯ ಬಗ್ಗೆ ಯಾವುದೇ ನೆರವು ಬೇಕಾದಲ್ಲಿ ಪತ್ರಕರ್ತರು ಮಿತ್ರಮಾಧ್ಯಮವನ್ನು ಸಂಪರ್ಕಿಸಬಹುದು. ಅಂಥವರ ವಿಷಯ ಗೌಪ್ಯತೆಯನ್ನು ಕಾಪಾಡಲಾಗುವುದು.

ಶಿಲ್ಪಶ್ರೀ ಬಗೆಗೆ : ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಬೆಂಗಳೂರಿಗೆ ಬಂದು ವೃತ್ತಿನಿರತೆಯಾಗಿದ್ದ ಕು. ಶಿಲ್ಪಶ್ರೀ 2008ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಅಪಘಾತವೊಂದರಲ್ಲಿ ನಿಧನರಾದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸಿಸುತ್ತಿದ್ದ ಶಿಲ್ಪಶ್ರೀಯವರು ಬೇಳೂರು ಗ್ರಾಮದ ಹಳೆಮನೆ ರಾಮಚಂದ್ರರ ಕುಟುಂಬಕ್ಕೆ ಸೇರಿದವರು. ಶಿಲ್ಪಶ್ರೀಯವರ ತಂದೆ ನರಹರಿ ತಾಯಿ ಶ್ರೀಮತಿ ಜ್ಯೋತಿ (ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು ಅವರ ಅಕ್ಕ), ತಂಗಿ ಕುಮಾರಿ ನಭ – ಸಾಗರದಲ್ಲಿ ವಾಸವಾಗಿದ್ದಾರೆ.

ಮಿತ್ರಮಾಧ್ಯಮ : ಕಳೆದ ಹನ್ನೆರಡು ವರ್ಷಗಳಿಂದ ಪುಸ್ತಕ ಪ್ರಕಟಣೆ, ಮಾಧ್ಯಮ ಸಲಹೆ – ಸೇವೆ ಮುಂತಾದ ಬಹುಮುಖೀ ಮಾಧ್ಯಮ ಚಟುವಟಿಕೆಗಳನ್ನು ನಡೆಸುತ್ತಿರುವ ಮಿತ್ರಮಾಧ್ಯಮವು ಈಗ ಕನ್ನಡದ ಮುಂಚೂಣಿ ವೆಬ್‌ಸೈಟ್ ರೂಪದಲ್ಲಿ ಸೃಜನ-ಸೃಜನೇತರ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದೆ. ಈ ಒಂದು ವರ್ಷದಲ್ಲಿ ಮಿತ್ರಮಾಧ್ಯಮವು ತದಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಿರುದ್ಧ, ಶಾಸಕರೊಬ್ಬರ 80 ಲಕ್ಷ ರೂ.ಗಳ ದುರ್ಬಳಕೆ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದೆ. ಸಮಷ್ಟಿಹಿತದ ದೃಷ್ಟಿಯಿಂದ ಮಿತ್ರಮಾಧ್ಯಮವು ಮುಕ್ತ ಮಾಹಿತಿಗಾಗಿ ಹೆಜ್ಜೆ ಇಡುತ್ತಿದೆ. ಮಿತ್ರಮಾಧ್ಯಮವನ್ನು ನಡೆಸುತ್ತಿರುವವರು ಪತ್ರಕರ್ತ ಬೇಳೂರು ಸುದರ್ಶನ.

ವೆಬ್‌ಸೈಟ್: www.mitramaadhyama.co.in
ಈ ಮೈಲ್: [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+