ಹೈ.ಕರ್ನಾಟಕದ ಥೂಛೀ ಮಂದಿ ಭಾಗ 3
ಅಧಿಕಾರ ಗದ್ದುಗೆಯನ್ನು ಕುಂಡಿಗೆ ಅಂಟಿಸಿಕೊಂಡೇ ಕುಳಿತಿರುವ ಗರಿಗರಿ ಪಂಚೆಯ ಈ ಮಂದಿ ರಾಜಕೀಯ ಧರ್ಮಕ್ಕೆ ಅಡ್ಡನಾಮ ಎಳೆದುಬಿಟ್ಟಿದ್ದಾರೆ. ತಾವಿರುವುದೇ ಗುಡಾಣ ತುಂಬಿಸಿಕೊಳ್ಳಲು ಎಂಬಂತಿರುವ ಹೈದರಾಬಾದ್ ಕರ್ನಾಟಕದ ರಾಜಕಾರಣಿಗಳ 'ವಿರಾಟ್ ದರ್ಶನ' - ಭಾಗ 3.
ಹೈದರಾಬಾದ್ ಕರ್ನಾಟಕದ ದಂಡಪಿಂಡಗಳ ಮುಂದುವರೆದ 'ಹಿಂದಿಲ್ಲ ಮುಂದಿಲ್ಲ' ಎನ್ನುವಂಥ ಕತೆ ಕೇಳಿ ಕನ್ನಡ ಬಾಂಧವರೆ. ಗುಲಬರ್ಗಾದ ಕಮರುಲ್ಲ ಇಸ್ಲಾಂ ಕಮ್ಯುನಲ್ ಆಗಿ ಮಾತಾಡುತ್ತ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಆಸಾಮಿ. ನಗರದ ನೂರಭಾಗನ ಗಾರ್ಡನ್ ಜಾಗವನ್ನು ಕಬಳಿಸಿ ಕಾಂಪ್ಲೆಕ್ಸ ಕಟ್ಟಿಸುವುದೆ ತನ್ನ ರಾಜಕೀಯ ಹಿಕಮತ್ತು ಎಂದು ತಿಳಿದುಕೊಂಡಿರುವ ಈ ಎಬಡಲ್ಲಿ ಹೈದ್ರಾಬಾದ ಕರ್ನಾಟಕದ ಬಗೆಗಿನ ಕಾಳಜಿ ಹುಡುಕುವುದೆ ಮೂರ್ಖತನವಾಗುತ್ತದೆ. ವೈಜನಾಥ ಪಾಟೀಲ ಎಂಬ ಫಿಕಲ್ ಮೈಂಡೆಡ್ ಆಸಾಮಿ ಏನು ಹೇಳುತ್ತಾನೋ ? ಮತ್ತೇನು ಮಾಡುತ್ತಾನೋ ? ಕೆಲವು ಸಲ ಆತನಿಗೆ ಗೊತ್ತಿರುವುದಿಲ್ಲ. ಒಂದು ಸಲ ಚೆಡ್ಡಿಗಳನ್ನು ವಿರೋಧಿಸಿದರೆ ಮತ್ತೊಂದು ಸಲ ಜೆ.ಡಿ.ಎಸ್. ತೆಗಳುತ್ತಾನೆ, ಮಗದೊಂದು ಸಲ ಹಸ್ತದ ನೆರಳನ್ನು ದ್ವೇಷಿಸುತ್ತ , ಅದರ ಅಡಿಗೆ ಹೋಗಿ ನಿಲ್ಲುತ್ತಾನೆ.
ಡಾ. ಎ.ಬಿ.ಮಲಕರೆಡ್ಡಿ ಎಂಬ ಮಾಜಿ ಮಂತ್ರಿ ಹಾಲಿ ಶಾಸಕನದು ಮತ್ತೊಂದು ಬಗೆ. ಈತ ಗೆದ್ದು ಬಂದು ಮಂತ್ರಿಯಾಗಿದ್ದರೂ ಅಧಿಕಾರವೆಲ್ಲ ಇವರ ಶ್ರೀಮತಿ ಮಹಾದೇವಿ ಮಲಕರಡ್ಡಿಯವರೆ ನಿಭಾಯಿಸುತ್ತಾರೆ. ಎಲ್ಲಿ ಝಣ ಝಣ ರೊಕ್ಕದ ಸದ್ದಾಗುತ್ತದೊ ಆ ಕಡೆ ಮಾತ್ರ ಮಹಾದೇವಿಯವರ ಚಿತ್ತ ಹರಿಯುತ್ತದೆ ಎಂಬ ಪ್ರತೀತಿಯೆ ಇದೆ. ಲಿಂಗೈಕ್ಯ ವಿಶ್ವನಾಥರೆಡ್ಡಿ ಮುದ್ನಾಳ ಹಾಗೂ ಆತನ ಫ್ಯಾಮಿಲಿಯ ವಿಚಿತ್ರ ತೆವಲುಗಳಿಂದ ವಾಕರಿಕೆ ಬಂದು ಈ ಮಲಕರೆಡ್ಡಿಯ ಕಡೆ ಅನಿವಾರ್ಯವಾಗಿ ಹೊರಳುತ್ತಾರೆ. ಸಂಭಾವಿತ ಹಾಗೂ ಸರಳ ಮನುಷ್ಯ ಎಂಬುದನ್ನು ಬಿಟ್ಟರೆ ಈ ಪ್ರದೇಶದ ಬಗ್ಗೆ ಇರಬೇಕಾದ ವಿಜನ್ ಗಳನ್ನೆ ಈತ ಇಟ್ಟುಕೊಂಡಿರಲಿಲ್ಲ.
ಇನ್ನು ಬಾಬುರಾವ್ ಚಿಂಚನಸೂರ, ಪ್ರಕಾಶ ಖಂಡ್ರೆ, ಬಸವರಾಜ ಪಾಟೀಲ ಹುಮ್ನಾಬಾದ ,ಬಂಡೆಪ್ಪ ಖಾಶಂಪುರರ ಜೋಭದ್ರಗೇಡಿತನದ ಕುರಿತು ಪುಟಗಟ್ಟಲೆ ಬರೆಯಬಹುದು. ನೀವು ಓದುತ್ತಿರುವುದು ಇಂಟರ್ ನೆಟ್ಟು ಆದಕಾರಣ ಸಂಗತಿಗಳನ್ನು ಆದಷ್ಟೂ ಕ್ಲುಪ್ತವಾಗಿ ಇಡಲಾಗಿದೆ. ಚಿಂಚಸೂರ ಎಂಬ ಮುಕಡ್ಯಾ , ಬಾಬುರಾವ್ ಆಗಿ ರಾಜಕೀಯದಲ್ಲಿ ಮಿಂಚುತ್ತಿರುವುದು ಒಂದು ಚೋದ್ಯ. ಸುಭಾಸಗುತ್ತೇದಾರ ಹಾಗೂ ಮಾಲೀಕಯ್ಯ ಗುತ್ತೇದಾರ ರಾಜಕೀಯ ಏನಿದ್ದರೂ ಅದು ತಮ್ಮ ಅಕ್ರಮ ಹೆಂಡದ ದಂಧೆ ಸುಲಭವಾಗಿ ನಡೆಯಲು ಮಾತ್ರ ಇರುವಂಥದ್ದು. ಇವರಿಗೆ ತಾವು ಹಿಂದೆ ಮಾಡಿದ ಮಾಡಿಸುತ್ತಿದ್ದ ಕೊಲೆಗಿಲೆ ಮುಂತಾದವುಗಳಿಂದ ತೊಂದರೆ ಆಗಬಾರದು ಎಂಬುದಕ್ಕೆ ಮಾತ್ರ ರಾಜಕೀಯಕ್ಕೆ ಬಂದಿದ್ದಾರೆ ಹೊರತು ರಾಜಕೀಯವನ್ನು ಜನಸೇವೆಗಾಗಿ ಎಂದು ತಿಳಿದವರೆ ಅಲ್ಲ.
ಪೂರಕ ಓದಿಗೆ:
(ಇನ್ನೂ ಎಷ್ಟ್ ಮಂದಿ ಅದಾರ..ನಾಳೀಕ್ ನೋಡಿ- ಸಂ)












Click it and Unblock the Notifications