ಮಹಿಳಾ ದಿನಾಚರಣೆ: ಧೃತಿ ಮಹಿಳಾ ಮಾರುಕಟ್ಟೆ ಯಶೋಗಾಥೆ ಪುಸ್ತಕ ಬಿಡುಗಡೆ
ಬೆಂಗಳೂರು, ಮಾರ್ಚ್ 07: ಕೊರೊನಾ ಕಾಲದಲ್ಲಿ ಬಹಳಷ್ಟು ಜನರ ಬದುಕು ಅತಂತ್ರವಾಗಿತ್ತು. ಸಾಕಷ್ಟು ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡರು. ಹಿಂದೆ ಮುಂದಿಲ್ಲದ ರೋಗವೊಂದು ಇದ್ದಕ್ಕಿದ್ದಂತೆ ಇಡೀ ಪ್ರಪಂಚವನ್ನೇ ತನ್ನ ಭಯದ ತೆಕ್ಕೆಗೆ ಬೀಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳ ಹೆಂಗಳೆಯರೂ ಬಲ ಒಗ್ಗೂಡಿಸಿ ಎದ್ದು ನಿಂತು, ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಲಿ, ದುಡಿಮೆಯ ಅನಂತ ಸಾಧ್ಯತೆಗಳನ್ನು ಗುರುತಿಸುವಂತಾಗಲಿ ಎನ್ನುವ ಧ್ಯೇಯದೊಂದಿದೆ ಮೇ 2020 ರಂದು ಹುಟ್ಟಿದ ಫೇಸ್ ಬುಕ್ ಗುಂಪು "ಧೃತಿ ಮಹಿಳಾ ಮಾರುಕಟ್ಟೆ". ಇಂದು ಈ ಗ್ರೂಪಿನಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಈ ಆನ್ ಲೈನ್ ಮಹಿಳಾ ಮಾರುಕಟ್ಟೆಯ ಮೂಲಕ, ಎರಡು ವರ್ಷಗಳ ಅವಧಿಯಲ್ಲೇ ನೂರಾರು ಮಹಿಳೆಯರು ತಮ್ಮನ್ನು ಗುರುತಿಸಿಕೊಂಡು, ತಮ್ಮ ಕೌಶಲ್ಯಗಳನ್ನು ಪರೀಕ್ಷೆಗೊಡ್ಡಿ ತಮ್ಮ ಮತ್ತು ತಮ್ಮವರ ಬದುಕನ್ನು ಇನ್ನಷ್ಟು ಹಸನಾಗಿಸಲು ಸಮರ್ಥರಾದರು. ಮನೆಯಲ್ಲೇ ಕೂತು ತಯಾರಿಸಿದ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಿ ಯಶಸ್ಸು ಗಳಿಸಿದರು. ಬದುಕಲ್ಲೇ ಒಂದು ಬಾರಿಯೂ ಇಂಟರ್ ನೆಟ್ ಮುಖ ನೋಡದವರೂ ಈ ಮಾರುಕಟ್ಟೆಯ ಸಹಾಯದಿಂದ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡಿದರು.
ಈಗ, ಇವರಲ್ಲಿ ಆಯ್ದ 33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕ "ಧೃತಿಗೆಡದ ಹೆಜ್ಜೆಗಳು" ಧೃತಿ ಮಹಿಳಾ ಮಾರುಕಟ್ಟೆಯಿಂದ ಪ್ರಕಟವಾಗುತ್ತಿದೆ. ಮಹಿಳಾ ದಿನಾಚರಣೆಯಂದು, ಮಾರ್ಚ್ 8, 2022, ಮಂಗಳವಾರ, ಚಾಮರಾಜಪೇಟೆಯ "ಕನ್ನಡ ಸಾಹಿತ್ಯ ಪರಿಷತ್" ಸಭಾಭವನದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಪ್ರಸಿದ್ಧ ಅಂಕಣಕಾರ, ವಾಗ್ಮಿಯಾದ ರಮಣಶ್ರೀ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಎಸ್. ಷಡಕ್ಷರಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕ್ವಿಇನ್ ಫ್ರಾ ಸೊಲ್ಯೂಶನ್ಸ್ ನ ಡೈರೆಕ್ಟರ್ ಆಗಿರುವ ಕಿರಣ್ ಪ್ರಸಾದ್ ರಾಜನಹಳ್ಳಿ, ಸುಕೋ ಬ್ಯಾಂಕ್ ನಿರ್ದೇಶಕರು, ಮಲೆನಾಡು ನಟ್ಸ್ ಅಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ ಆಗಿರುವ ಮನೋಹರ ಮಸ್ಕಿ ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕರಾದ ಆರತಿ ಹೆಚ್.ಎನ್, ಎಂಡಿಪಿ ಕಾಫೀ ಹೌಸ್‌ನ ಮುಖ್ಯಸ್ಥರಾದ ಮಹದೇವ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು. ರೂಪಾ ಗುರುರಾಜ್, ಕಾರ್ಯಕ್ರಮ ನಿರೂಪಿಸಲಿದ್ದಾರೆ.
Recommended Video
ಕೃತಿ: ಧೃತಿಗೆಡದ ಹೆಜ್ಜೆಗಳು
ಬಿಡುಗಡೆ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ.
ದಿನಾಂಕ: 08.03.2022, ಮಂಗಳವಾರ.
ಸಮಯ: 4.30PM
ಪ್ರಕಾಶನ: ಧೃತಿ ಮಹಿಳಾ ಮಾರುಕಟ್ಟೆ,ಬೆಂಗಳೂರು
ಪುಟಗಳು: 172
ಬೆಲೆ: ರೂ. 150
ಮುಂಗಡ ಖರೀದಿಗೆ ಸಂಪರ್ಕಿಸಿ: 8197759806
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications