ದೇವನೂರ ಮಹಾದೇವ ಅವರ 'ಆರ್‌ಎಸ್‌ಎಸ್: ಆಳ ಮತ್ತು ಅಗಲ' 5 ಭಾಷೆಗೆ ಅನುವಾದ
ಬೆಂಗಳೂರು, ಜುಲೈ 14: ಪುಸ್ತಕಗಳನ್ನು ಕೊಂಡು ಓದುವ ಓದುಗರಿಲ್ಲ ಎಂಬ ಆರೋಪಕ್ಕೆ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರ 'ಆರ್‌ಎಸ್‌ಎಸ್: ಆಳ ಮತ್ತು ಅಗಲ' ಪುಸ್ತಕ ಉತ್ತರ ನೀಡಿದೆ. ರಾಜ್ಯದಲ್ಲಿ ಪುಸ್ತಕ ಕ್ರಾಂತಿಗೆ ಕಾರಣವಾಗಿರುವ ಈ ಚಿಕ್ಕ ಪುಸ್ತಕದ 40,000 ಪ್ರತಿಗಳು ಈಗಾಗಲೇ ಓದುಗರ ಕೈ ಸೇರಿವೆ. ಈಗ ಈ ಪುಸ್ತಕ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಗಲು ಸಿದ್ಧವಾಗುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ನಾಡಿನ ಸಾಕ್ಷಿಪ್ರಜ್ಞೆ ಎಂದೆ ಕರೆಯಲ್ಪಡುವ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ "ಆರ್‌ಎಸ್‌ಎಸ್: ಆಳ ಮತ್ತು ಅಗಲ" ಎಂಬ ಕಿರು ಪುಸ್ತಕದ ಹಕ್ಕುಸ್ವಾಮ್ಯವನ್ನು ಕೂಡ ಬಿಟ್ಟುಕೊಟ್ಟಿದ್ದಾರೆ. ಯಾವ ಪ್ರಕಾಶಕರು ಬೇಕಾದರೂ ಇದನ್ನು ಪ್ರಕಟಿಸಬಹುದು. ಆದರೆ ಬೆಲೆಯನ್ನು ಜನರ ಕೈಗೆಟುಕುವಂತೆ ಇಡಬೇಕು ಅಷ್ಟೆ ಎಂದು ಹೇಳಿದ್ದರು.
ಈವರೆಗೆ ಈ 64 ಪುಟಗಳ ಪುಸ್ತಕವನ್ನು ಗೌರಿ ಮೀಡಿಯಾ ಟ್ರಸ್ಟ್, ಓದು ವಿನಿಮಯ ಬಳಗ, ನವಕರ್ನಾಟಕ, ಅಭಿರುಚಿ ಪ್ರಕಾಶನ, ಮಾನವ ಬಂಧುತ್ವ ವೇದಿಕೆ, ನಡೆನುಡಿ ಚಿಕ್ಕನಾಯಕನಹಳ್ಳಿ, ಜನಸ್ಪಂದನ ತಿಪಟೂರು, ಭಾರತೀಯ ಟ್ರಸ್ಟ್, ನೀಲಿಹೆಜ್ಜೆ, ಆದಿಮ, ನಯನ, ಶ್ಯಾಮ್ ಮತ್ತು ಸಂಕಥನ ಸೇರಿದಂತೆ ಹಲವಾರು ಪ್ರಕಾಶಕರು ಪ್ರಕಟಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಒಂದೇ ಸುಮಾರು 17 ಸಾವಿರ ಪ್ರತಿಗಳನ್ನು ಮುದ್ರಿಸಿದೆ.

ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪುಸ್ತಕ ಪ್ರಕಾಶಕರ ವಲಯಕ್ಕೆ ಬಿದ್ದ ಹೊಡೆತವನ್ನು ಈ ಪುಸ್ತಕವು ಹೊಸ ಉತ್ಸಾಹವನ್ನು ತುಂಬಿದೆ. 64 ಪುಟಗಳ ಕಿರು ಪುಸ್ತಕದ ಬೆಲೆ 40 ರೂಪಾಯಿಯಾಗಿದೆ.
ಪುಸ್ತಕಕ್ಕೆ ಭಾರಿ ಬೇಡಿಕೆ:
ಪುಸ್ತಕಕ್ಕೆ ಇರುವ ಬೇಡಿಕೆಯಿಂದಾಗಿ ಇನ್ನು ಮುದ್ರಣ ಹೆಚ್ಚಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಒಂದು ಲಕ್ಷ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪುಸ್ತಕದ ಅನುವಾದಕ್ಕಾಗಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಾಶಕರು ಮುಂದೆ ಬಂದಿದ್ದು, ಅನುವಾದಗಳು ನಡೆಯುತ್ತಿವೆ. ತಮಿಳು ಭಾಷೆಗೆ ಬರಹಗಾರರಾದ ಕನಕರಾಜು ಅವರು ಅನುವಾದ ಮಾಡುತ್ತಿದ್ದು, ತಮಿಳುನಾಡಿನ ಯಾವರೂಂ (yaavarum) ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ ಎನ್ನುವ ಮಾಹಿತಿಯಿದೆ.

ದೇವನೂರು ಮಹಾದೇವ ಅವರು ಪುಸ್ತಕದ ಮುನ್ನುಡಿಯಲ್ಲಿ ಈ ಪುಸ್ತಕವು "ಆರ್‌ಎಸ್‌ಎಸ್‌ನ ನೈಜ ಸ್ವರೂಪ ಮತ್ತು ಉದ್ದೇಶವನ್ನು ವಿಮರ್ಶಾತ್ಮಕವಾಗಿ ಗಮನಿಸಿ, ಅದನ್ನು ಜನರ ಮುಂದೆ ಇಡುವ ಪ್ರಯತ್ನವಾಗಿದೆ" ಎಂದಿದ್ದಾರೆ. ಈ ಪುಸ್ತಕದಲ್ಲಿ ಹಿಂದೂ ಬಲಪಂಥೀಯ ಸಂಘಟನೆಯ ಸಿದ್ಧಾಂತವನ್ನು ರೂಪಿಸಿದ ಆರ್‌ಎಸ್‌ಎಸ್‌ನ ಗೋಲ್ವಾಲ್ಕರ್, ಹೆಡ್ಗೇವಾರ್ ಅವರ ಚಿಂತನ ಗಂಗಾದ ಭಾಗಗಳು ಮತ್ತು ಸಾವರ್ಕರ್ ಭಾಷಣಗಳನ್ನು ಉಲ್ಲೇಖಿಸಿ ಹೇಗೆ ಇವರೆಲ್ಲಾ ಜಾತಿ ವ್ಯವಸ್ಥೆಯನ್ನು ಹೇಗೆ ಸಮರ್ಥಿಸುತ್ತಾರೆ ಮತ್ತು ಐಕ್ಯತೆಯನ್ನು ವಿರೋಧಿಸುತ್ತಾರೆ ಎಂಬುದನ್ನು ವಿವರಿಸಲಾಗಿದೆ.
ಜೊತೆಗೆ ಈ ಕೃತಿಯು ವರ್ಣಾಶ್ರಮ ಧರ್ಮ ಮತ್ತು ಮನುಸ್ಮೃತಿ, ಆರ್ಯರ ಪ್ರಾಬಲ್ಯ ಮತ್ತು ಭಾರತದ ಸಂವಿಧಾನ ಮತ್ತು ಒಕ್ಕೂಟದ ನಾಶದ ಬಗ್ಗೆ ಮಾತನಾಡುತ್ತದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಮತಾಂತರ ವಿರೋಧಿ ಮಸೂದೆಯು ಈ ಬಲಪಂಥೀಯ ಮಾದರಿಗಳನ್ನು ನಾಗರಿಕ ಸಮಾಜದ ಮೇಲೆ ಹೇರುವ ಕ್ರಮವಾಗಿದೆ ಎಂದು ದೇವನೂರು ಪ್ರಸ್ತುತಪಡಿಸಿದ್ದಾರೆ.
ಈ ಪುಸ್ತಕವನ್ನು ಆರ್‌ಎಸ್‌ಎಸ್‌ನ ಪ್ರಾಣ ಎಂದು ಕರೆದಿರುವ ಅವರು, ಪ್ರಗತಿಪರ ಸಂಘಟನೆಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ "ವರ್ಣಾಶ್ರಮ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿರುವ ಪ್ರತಿಗಾಮಿ ಶಕ್ತಿಗಳ ಮುಖವಾಡಗಳನ್ನು ಕಳಚಬೇಕು" ಎಂದು ಕರೆ ನೀಡಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications