ಬಾಪೂ ನಂತರದ ಭಾರತ ಭಾನುವಾರ ಬಿಡುಗಡೆ

ಇಂಗ್ಲಿಷ್ ಕೃತಿಯನ್ನು ಲೇಖಕ, ಪತ್ರಕರ್ತ ಜಿಎನ್ ರಂಗನಾಥ್ ರಾವ್ ಅವರು ಅನುವಾದ ಮಾಡಿದ್ದು, ವಸಂತ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ.
ರಾಮಚಂದ್ರ ಗುಹ ಅವರ ಉಪಸ್ಥಿತಿಯಲ್ಲಿ ನೃಪತುಂಗ ರಸ್ತೆಯಲ್ಲಿರುವ ಯವನಿಕಾ ಸಂಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಪುಸ್ತಕ ಬಿಡುಗಡೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಯು.ಆರ್. ಅನಂತಮೂರ್ತಿ, ಡಾ. ಎಸ್. ಚಂದ್ರಶೇಖರ್ ಮತ್ತು ಜಿ.ಎನ್ ರಂಗನಾಥ್ ರಾವ್ ಅವರು ಭಾಗವಹಿಸಲಿದ್ದಾರೆ.
ಕಾಸರವಳ್ಳಿ ಸಹೋದರಿಯರು ಭಾವಗೀತೆ ಹಾಡಿ ಸಭಿಕರನ್ನು ರಂಜಿಸಲಿದ್ದಾರೆ. ಲಘು ಉಪಹಾರವೂ ಇದೆ.
ಕಾರ್ಯಕ್ರಮದ ವಿವರ
ಪುಸ್ತಕ : ಬಾಪೂ ನಂತರದ ಭಾರತ
ಸ್ಥಳ : ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, ಬೆಂಗಳೂರು - 560 001.
ದಿನಾಂಕ ಮತ್ತು ಸಮಯ : 22ನೇ ಆಗಸ್ಟ್, 2010, ಬಾನುವಾರ, ಬೆಳಿಗ್ಗೆ 10.30ಕ್ಕೆ












Click it and Unblock the Notifications