ಕನಸಿನ ಕೂಸು ಮಾರುತಿ ಕಾರು ರಸ್ತೆಗಿಳಿದಾಗ

ಪ್ರಸ್ತುತ, ಕೇಂದ್ರ ಸರಕಾರದ ಮುಷ್ಠಿಯಿಂದ ಹೊರಬಂದಿರುವ ಸುಜುಕಿ ಮೋಟಾರ್ಸ್ ಕಂಪನಿ ಚೇರ್ಮನ್ ಆಗಿರುವ ಆರ್ ಸಿ ಭಾರ್ಗವ ಅವರು ಸರಕಾರದ ಹಿಡಿತದಲ್ಲಿದ್ದುಕೊಂಡೇ ಅಸಾಧ್ಯವಾದುದನ್ನು ಸಾಧಿಸಿದ ಅಪೂರ್ವ ಕಥಾನಕವನ್ನು ಪುಸ್ತಕದಲ್ಲಿ ಹಿಡಿದಿಡುತ್ತಿದ್ದಾರೆ. ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಸೀತಾ ಅವರೊಡನೆ ಮಾರುತಿ ಕಾರು ಹುಟ್ಟಿ ನಡೆದುಬಂದ ದಾರಿ, ಸ್ಪರ್ಧಾ ಜಗತ್ತಿನಲ್ಲಿ ಇತರ ಕಾರುಗಳೊಂದಿಗೆ ಸೆಣಸುತ್ತಿರುವ ರೋಚಕ ಕಥಾನಕವನ್ನು ಭಾರ್ಗವ ಹಿಡಿದಿಡುತ್ತಿದ್ದಾರೆ.
ಎರಡೇ ಎರಡು ವರುಷಗಳಲ್ಲಿ ಹಿಡಿದಿದ್ದನ್ನು ಸುಜುಕಿ ಮೋಟಾರ್ಸ್ ಕಾರ್ಪೊರೇಷನ್ ಸಾಧಿಸಬೇಕಿತ್ತು. ತಕ್ಕ ಭಾಗೀದಾರನನ್ನು ಹುಡುಕಿ, ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು, ಕರಾರುಪತ್ರಗಳಿಗೆ ಸರಕಾರಿ ಠಸ್ಸೆ ಒತ್ತಿಸಿಕೊಂಡು, ಫ್ಯಾಕ್ಟರಿ ಕಟ್ಟಿ, ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಿಕೊಂಡು, ಭಾರತದಲ್ಲಿ ಸೀಮಿತ ಮಾರುಕಟ್ಟೆಯಲ್ಲಿ ವರ್ಷಕ್ಕೆ ಒಂದು ಲಕ್ಷದಷ್ಟು ಕಾರುಗಳನ್ನು ಮಾರಾಟ ಮಾಡಬೇಕಾದ ಕಷ್ಟಸಾಧ್ಯವಾದ ಸವಾಲು ಭಾರ್ಗವ ಅವರ ಮುಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕ ವಲಯದ ಸಂಸ್ಥೆಯಾದ್ದರಿಂದ ಸರಕಾರಿ ವ್ಯವಸ್ಥೆಯೊಂದಿಗೆ ಗುದ್ದಾಡಬೇಕಿತ್ತು, ಸರಕಾರ ಮತ್ತು ಸುಜುಕಿ ಸಂಸ್ಥೆಯನ್ನು ಮೆಚ್ಚಿಸುವಂತೆ ಕಾರ್ಯ ನಿರ್ವಹಿಸಬೇಕಿತ್ತು.
ಅಬ್ಬಬ್ಬ, ಇದೆಲ್ಲ ಕೇವಲ ಎರಡೇ ಎರಡು ವರ್ಷಗಳಲ್ಲಿ ಸಾಧ್ಯವಾದದ್ದಾದರೂ ಹೇಗೆ? ಸವಾಲುಗಳಾದರೂ ಎಂಥವು? ದಾರಿಯಲ್ಲಿದ್ದ ಎಲ್ಲ ಹಂಪ್ಸುಗಳನ್ನು ಜಿಗಿದು ನಾಗಾಲೋಟದಲ್ಲಿ ಸಾಗಿದ್ದ ಪರಿ ಎಂಥದು? ಕನಸಿನ ಕೂಸು ಹುಟ್ಟುತ್ತಲೇ ಓಡಾಡಿದಾಗ ಅಂತರಾಳದಲ್ಲಿ ಹುದುಗಿದ್ದ ಸಂತಸ ಪುಟಿದೆದ್ದಾದರೂ ಹೇಗೆ? ನಾನಾ ಕಂಪನಿಗಳಿಂದ ಹಲವಾರು ಬಗೆಯ ಮಾಡೆಲ್ಲುಗಳು ಆಕರ್ಷಿಸುತ್ತಿವೆ. ಇವೆಲ್ಲಗಳ ನಡುವೆ ಮಾರುತಿ ಎಂಬ ಕೂಸು ತಲೆಯೆತ್ತುವಂತೆ ಬೆಳೆದುನಿಂತಿದ್ದಾದರೂ ಹೇಗೆ?
ಹಲವಾರು ಪ್ರಶ್ನಗಳಿಗೆ ಉತ್ತರ ಮತ್ತು ಭಾರ್ಗವ ಆ ಹಂತದಲ್ಲಿ ತೋರಿದ ಅಸಾಮಾನ್ಯ ಛಲ, ವೃತ್ತಿ ಚಾಣಾಕ್ಷತೆ, ನಿರ್ವಹಣಾ ನೈಪುಣ್ಯತೆಯ ಬಗ್ಗೆ ತಿಳಿಯಬೇಕೆಂದರೆ ನೀವು ಇನ್ನೂ ಕೆಲಕಾಲ ಕಾಯಬೇಕು. ಆದರೆ, ಕಾರುಗಳಿಗೆ ಮುಂಗಡ ಬುಕ್ ಮಾಡುವಂತೆ ಹೊರಬರಲಿರುವ ಪುಸ್ತಕಕ್ಕಾಗಿ ಈಗಲೇ ಬುಕ್ ಮಾಡಬಹುದು. ಈಗಲೇ ಕಾಯ್ದಿರಿಸಿದರೆ ವಿಶೇಷ ರಿಯಾಯಿತಿ ದರದಲ್ಲಿ The Maruti Story ನಿಮ್ಮ ಓದಿಗೆ ದಕ್ಕಲಿದೆ.
Pre-order Now at a Special Price. - The Maruti Story by R C. Bhargava @ 30% discount
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications