ವೈದೇಹಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

ಮೈಸೂರು ವಿವಿ ಇಂಗ್ಲಿಷ್ ವಿಭಾಗದ ಡಾ ಸಿ ನಾಗಣ್ಣ, ಹಂಪಿ ವಿವಿ ಡಾಡಾ ಕರೀಗೌಡ ಬೀಚನಹಳ್ಳಿ ಹಾಗೂ ಶೂದ್ರ ಶ್ರೀನಿವಾಸ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿ ಸರ್ವಾನುಮತದಿಂದ ವೈದೇಹಿ ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಫೆಬ್ರವರಿ 16 ರಂದು ನವದೆಹಲಿಯಲ್ಲಿ ನಡೆರುವ ಅಕ್ಷರ ಉತ್ಸವದಲ್ಲಿ ವೈದೇಹಿ ಮತ್ತು ಇತರೆ 23 ಭಾಷೆಗಳ ಪ್ರಶಸ್ತಿ ವಿಜೇತ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಒಂದು ಲಕ್ಷ ರುಪಾಯಿ ನಗದು ಒಳಗೊಂಡಿದೆ.












Click it and Unblock the Notifications