ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನ ಮಹಿಳಾ ಸಾಹಿತಿಗಳಿಗೆ ಸುವರ್ಣ ಅವಕಾಶ

By Staff
|
Google Oneindia Kannada News

ಧಾರವಾಡ, ಜೂ.17 : ಕರ್ನಾಟಕ ವಿದ್ಯಾವರ್ಧಕ ಸಂಘ 2007ನೇಸಾಲಿನ ಮಹಿಳಾ ಸಾಹಿತಿಗಳಿಂದ ರಚನೆಯಾಗಿ, ಬಿಡುಗಡೆಯಾಗಲಿರುವ3 ಕೃತಿಗಳಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ನೀಡಿ ಗೌರವಿಸಲು ತೀರ್ಮಾನಿಸಿದೆ.

ಪ್ರಶಸ್ತಿ ಫಲಕ, ತಾಂಬೂಲ ಹಾಗೂ ತಲಾ 10 ಸಾವಿರ ನಗದು ಒಳಗೊಂಡಿರುವ ಪ್ರಶಸ್ತಿಗೆ, ಲೇಖಕಿಯರು ತಮ್ಮ ಪುಸ್ತಕಗಳನ್ನು ಸಲ್ಲಿಸಲು ಜುಲೈ 31 ಕೊನೆ ದಿನಾಂಕ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ. ಗುಂಜೆಟ್ಟಿ ತಿಳಿಸಿದ್ದಾರೆ.

ನಿಯಮಗಳು:
*ಕನ್ನಡಕೃತಿಯಾಗಿರಬೇಕು. ಅನುವಾದಿತ ಕೃತಿಗಳಿಗೆ ಬಹುಮಾನವಿಲ್ಲ.
*ಕೃತಿ 2007 ಜನವರಿ 1 ರಿಂದ 2007ಡಿಸೆಂಬರ್ 31 ರ ಒಳಗಾಗಿ ಪ್ರಕಟವಾಗಿರಬೇಕು
*ಪ್ರತಿಯೊಂದು ಕೃತಿಯ ಐದು ಪ್ರತಿಗಳನ್ನು ಕಳುಹಿಸಬೇಕು.
*ಯಾವುದೇ ವಿವಿ ನೀಡಿರುವ ಡಾಕ್ಟರೇಟ್ ಪ್ರಬಂಧಗಳು, ಪಿ.ಎಚ್.ಡಿಗಾಗಿ ಸಲ್ಲಿಸಿ ತಿರಸ್ಕೃತವಾಗಿರುವ ಪ್ರಬಂಧ, ಎಂ.ಫಿಲ್ ಮಾಡಿ ಪ್ರಕಟಿಸಿದ ಕೃತಿಗಳನ್ನು ಕಳುಹಿಸುವಂತಿಲ್ಲ.
*ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನು ಕಳುಹಿಸಬಹುದು( ಆದರೆ ಬಹುಮಾನ ಒಂದು ಕೃತಿಗೆ ಮಾತ್ರ)
*ಲೇಖನವನ್ನು ಸ್ವ ಹಸ್ತಾಕ್ಷರದಲ್ಲಿ ಬರೆದು ಕಳುಹಿಸಬೇಕು.
*ಪುಸ್ತಕ ಪ್ರಕಾಶಕರು ಸಹಾ ಲೇಖನವನ್ನು ಕಳುಹಿಸಬಹುದು( ಬಹುಮಾನ ಮಾತ್ರ ಲೇಖಕಿಗೆ)
*ಸಂಘದ ಕಾರ್ಯಕಾರಿ ಸದಸ್ಯರು ಭಾಗವಹಿಸುವಂತಿಲ್ಲ.ಸಂಘದ ನಿರ್ಣಯವೇ ಅಂತಿಮ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಪ್ರೊ. ಬಿ.ವಿ. ಗುಂಜೆಟ್ಟಿ -(0836)2440283

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X