ಹೊಸ ಕತೆಗಾರರೇ, ಕತೆಗಳ ಕಳುಹಿಸಿ ಛಂದ ಪ್ರಶಸ್ತಿ ಗೆಲ್ಲಿರಿ!


ಕತೆ ಕಳುಹಿಸಲು ಕಡೆಯ ದಿನಾಂಕ ಸೆ.30, ಇನ್ನೇಕೆ ತಡ. ಬೇಗನೇ ಕಳುಹಿಸಿ.

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ ಛಂದ ಪುಸ್ತಕ 2006ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.

ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಕತೆಗಳನ್ನು ಕಳುಹಿಸಬೇಕು. ಕತೆಗಳನ್ನು ಡಿಟಿಪಿ ಮಾಡಿಸಿ ಕಳಿಸಬೇಕು ಇಲ್ಲವೇ ಸ್ಫುಟುವಾದ ಕೈಬರಹದಲ್ಲಿ ಬರೆದಿರಬೇಕು.

ಆಯ್ಕೆಯಾದ ಹೊಸ ಕತೆಗಾರರಿಗೆ 5000 ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಕಳೆದ ಸಾಲಿನಲ್ಲಿ ಉದಯೋನ್ಮುಖ ಕತೆಗಾರ ಅಲಕ ತೀರ್ಥಹಳ್ಳಿ ಛಂದ ಪ್ರಶಸ್ತಿಗೆ ಪಾತ್ರರಾಗಿದ್ದರು.

ಸುಮಾರು 100 ಪುಟಗಳ ಚೆಂದ ಮುದ್ರಣದ ಈ ಪುಸ್ತಕವನ್ನು 2007ರ ಜನವರಿ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ. ಕತೆ ಕಳುಹಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್‌ 30.2006.

ಕತೆಗಳನ್ನು ಕಳಿಸಬೇಕಾದ ವಿಳಾಸ :
ಛಂದ ಪುಸ್ತಕ,
C/O ವಸುಧೇಂದ್ರ,
ಐ-004, ಮಂತ್ರಿ ಪ್ಯಾರಡೈಸ್‌,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 76

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಇ-ವಿಳಾಸ : [email protected]

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+