ನಾನು ಬುದ್ಧಿಜೀವಿಯಲ್ಲ ಎಂದಿದ್ದರು ಅನಂತಮೂರ್ತಿ-ಚಂದ್ರಶೇಖರ ಕಂಬಾರ

* ರಘುನಾಥ ಚ.ಹ.

‘ನಾನು ಬುದ್ಧಿಜೀವಿಯಲ್ಲ . ಇದನ್ನು ಮೊದಲು ಬಹಿರಂಗವಾಗಿ ಹೇಳಿದವರೇ ಅನಂತಮೂರ್ತಿ. ಈ ಬುದ್ಧಿಜೀವಿಗಳ ಸಭೆಯಲ್ಲಿ ಏನು ಮಾತನಾಡಬೇಕು ಅನ್ನುವುದೂ ಗೊತ್ತಾಗುತ್ತಿಲ್ಲ ! ಆದರೆ, ಅನಂತಮೂರ್ತಿ ಎದುರು ನನ್ನ ಪಾಂಡಿತ್ಯ ಪ್ರದರ್ಶಿಸುವ ಉದ್ದೇಶದಿಂದಲೇ ಇಲ್ಲಿಗೆ ಬಂದಿದ್ದೇನೆ.’

ತುಂತುರು ಮಳೆಯ ಭಾನುವಾರದ ಇಳಿಸಂಜೆ ಬನಶಂಕರಿಯ ಸುಚಿತ್ರಾ ಫಿಲ್ಮ್‌ ಅಕಾಡೆಮಿಯ ಸಭಾಂಗಣದಲ್ಲಿ ನಡೆದ ಆಪ್ತ ಸಮಾರಂಭದ ವಾತಾವರಣದಲ್ಲಿ ಡಾ.ಯು.ಆರ್‌.ಅನಂತಮೂರ್ತಿಯವರ ‘ದಿವ್ಯ’ ಕಾದಂಬರಿಯನ್ನು ಬಿಡುಗಡೆ ಮಾಡಿ ಕಂಬಾರ ಮಾತನಾಡುತ್ತಿದ್ದರು. ಹೆಗ್ಗೋಡಿನ ಅಕ್ಷರ ಪ್ರಕಾಶನ ಈ ಕಾದಂಬರಿಯನ್ನು ಹೊರತಂದಿದೆ.

ತಮ್ಮ ಹಾಗೂ ಅನಂತಮೂರ್ತಿ ನಡುವಣ ಜಟಾಪಟಿ ಜಗಳ, ನಗೆಚಾಟಿಕೆಗಳನ್ನು ಹೇಳುವುದರೊಂದಿಗೆ ಕಂಬಾರ ಮಾತು ಶುರುಮಾಡಿದರು. ಸಂಸ್ಕಾರ ಪುಸ್ತಕ ಪ್ರಕಟವಾದ ಸಂದರ್ಭದಲ್ಲಿ , ‘ಪ್ರಾಣೇಶಾಚಾರ್ಯರ ಶರೀರಕ್ಕೆ ಅನಂತಮೂರ್ತಿ ತಲೆ ಸೇರಿಸಿದಂತಿದೆ’ ಎಂದು ತಾವು ಟೀಕಿಸಿದುದನ್ನು ಕಂಬಾರ ಸ್ಮರಿಸಿಕೊಂಡರು.

ಯಾವುದಾದರೊಂದು ಪುಸ್ತಕ ನಿಮಗೆ ಇಷ್ಟವಾದರೆ ಅದಕ್ಕೇನು ಕಾರಣ ಅನ್ನುವುದೇ ಗೊತ್ತಾಗುವುದಿಲ್ಲ . ಗೊತ್ತಾದರೆ ಪುಸ್ತಕ ಓದಿದ ಸಂತೋಷ ಹಾಳಾಗುತ್ತದೆ. ದಿವ್ಯವನ್ನು ಓದಿದಾಗ ನನಗೆ ಅನಿಸಿದ್ದು ಇದೇ. ಪ್ರಸ್ತುತ ಕೂಡ ದಿವ್ಯದ ಗುಂಗಿನಿಂದ ನನಗೆ ಹೊರ ಬರಲಾಗಿಲ್ಲ , ಗುಂಗಿಗೆ ಕಾರಣ ಅರ್ಥವಾಗಿಲ್ಲ . ಇಡೀ ಜೀವನದಲ್ಲಿ ನನಗೆ ಇಂಥ ಗುಂಗು ಹಿಡಿಸಿದ್ದು ನಾಲ್ಕೈದು ಕಾದಂಬರಿಗಳು ಮಾತ್ರ. ದಿವ್ಯದ ಯಶಸ್ಸಿನ ಕಾರಣದಿಂದಾಗಿ ಅನಂತಮೂರ್ತಿಯವರ ಬಗೆಗೆ ಅಸೂಯೆಯಾಗುತ್ತಿದೆ ಎಂದು ಹೇಳಿದ ಕಂಬಾರ ಮಾತಿನುದ್ದಕ್ಕೂ ತಾವು ದಿವ್ಯದ ಸೆಳೆತದ ಆಳದೊಳಗೆ ಮುಳುಗಿದ ಪರಿಯನ್ನು ವಿವರಿಸಿದರು. ಇತಿಹಾಸಕ್ಕೆ ಇತಿಹಾಸ ಮುಖಾಮುಖಿಯಾದಾಗ ದಿವ್ಯದಂಥ ಕೃತಿ ಹುಟ್ಟುತ್ತದೆ ಎಂದು ಹೇಳಿದ ಕಂಬಾರ, ಇತಿಹಾಸಗಳ ಮುಖಾಮುಖಿ ಕಾದಂಬರಿಯಲ್ಲಷ್ಟೇ ಸಾಧ್ಯ ಎಂದರು.

ಜಾಗತೀಕರಣದ ಸಂದರ್ಭಕ್ಕೆ ಸೃಜನಶೀಲನೊಬ್ಬನ ಧ್ಯಾನಸ್ಥ ಪ್ರತಿಕ್ರಿಯೆ

ಸೂರ್ಯನ ಕುದುರೆ ಬರೆದಾಗ, ಇಂಥಹ ಇನ್ನೊಂದು ರೂಪಕ ಮೇಷ್ಟ್ರು ದಕ್ಕಿಸಿಕೊಳ್ಳಲಾರರು ಎಂದುಕೊಂಡಿದ್ದೆ. ಆದರೆ, ಮತ್ತೊಂದು ಮಹಾನ್‌ ರೂಪಕವನ್ನು ದಿವ್ಯದ ಮೂಲಕ ಮೇಷ್ಟ್ರು ದಕ್ಕಿಸಿಕೊಂಡಿದ್ದಾರೆ ಎಂದವರು ಈಚಿನ ದಿನಗಳಲ್ಲಿ ಕಡಿಮೆ ವಿಮರ್ಶೆ ಬರೆಯುತ್ತಿರುವ ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+