378553ahmedabadಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ/news/2009/03/10/ipl-season2-begins-from-april-10-lalit-modi.htmlಮುಂಬೈ, ಮಾ. 10 : ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2 ನೇ ಸೀಸನ್ನಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಪಂದ್ಯಾವಳಿ ಚಿನ್ಹೆಯನ್ನು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಮಂಗಳವಾರ ಬಿಡುಗಡೆ ಮಾಡಿದರು. ಏಪ್ರಿಲ್ 10ರಂದು ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಮಾರೋಪ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ನಗರದಲ್ಲಿ ಮಂಗಳವಾರ 35123http://kannada.oneindia.com/img/2009/03/10-ipl-logo1.jpg378553ahmedabadಕರೀಂ ಲಾಲ್ ತೆಲಗಿಗೆ ಏಳು ವರ್ಷ ಕಾರಾಗೃಹ ಶಿಕ್ಷೆ /news/2009/03/19/seven-year-sentence-to-telgi-in-stamp-paper-scam.htmlಅಹಮದಾಬಾದ್, ಮಾ. 19 : ಬಹುಕೋಟಿ ರುಪಾಯಿಗಳ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ್ ತೆಲಗಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೂ ಆತನ ಇಬ್ಬರು ಸಹಚರರಾದ ಸಾಧಿಕ್ ಇಬ್ರಾಹಿಂ ಉಂದಲಿ ಅಲಿಯಾಸ್ ಸಾಧಿಕ್ ನಿಗೆ ಏಳು ವರ್ಷ, ಹಾಗೂ ಸಿದ್ದಾರ್ಥ ಫರ್ನಾಂಡಿಸ್ ಅಲಿಯಾಸ್ ಸಿದ್ಧು 35350http://kannada.oneindia.com/img/2009/03/19-telgi3.jpg378553ahmedabadಗುಜರಾತನಲ್ಲಿ ಪ್ರಧಾನಿ ಮೇಲೆ ಬೂಟು/news/2009/04/27/youth-hurls-shoe-at-manmohan-singh-in-gujrat.htmlಅಹಮದಾಬಾದ್, ಏ. 27 : ಬೂಟು ಎಸೆಯುವ ಮೂಲಕ ವಿನೂತನ ಪ್ರತಿಭಟನೆಯ ಹಾವಳಿ ಮುಂದುವರೆದಿದ್ದು, ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರತ್ತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬೂಟು ಎಸೆದ ಘಟನೆ ಅಹಮದಾಬಾದ್ ನಲ್ಲಿ ಭಾನುವಾರ ನಡೆದಿದೆ. 21ರ ಹರೆಯದ ವಿದ್ಯಾರ್ಥಿ ಹಿತೇಶ್ ಚೌಹಾನ್ ಪ್ರಧಾನಿಯತ್ತ ಶೂಎಸೆದ ಭೂಪ. ಶೂ ಗುರಿ ತಪ್ಪಿದ್ದು, ಪ್ರಧಾನಿ ಭಾಷಣ ಮಾಡುತ್ತಿದ್ದ 36226http://kannada.oneindia.com/img/2009/04/27-pm-shoe.jpg378553ahmedabadಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg378553ahmedabadನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ !/news/2009/09/29/ahmedabad-man-offers-his-tongue-to-goddess-amba.htmlಅಹಮದಾಬಾದ್, ಸೆ. 29 : ನಂಬಿದ ದೇವರಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ಮಹಾಶಯನೊಬ್ಬನ ಕಥೆ ಈ ಹಿಂದೆ ರಾಜ್ಯದ ಬಾದಾಮಿಯಲ್ಲಿ ನಡೆದಿತ್ತು. ಇದೇ ಮಾದರಿಯಲ್ಲಿ ದೇವಿ ಸಂತೃಪ್ತಿಗೊಳಿಸಲು ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಭಕ್ತಿಯ ಪರಾಕಾಷ್ಠೆ ಮೆರೆದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಇಪ್ಪತ್ತು ವರ್ಷಗಳ ಹಿಂದೆ ಮಧ್ಯಪ್ರದೇಶದಿಂದ ನಗರಕ್ಕೆ ವಲಸೆ ಬಂದ 35 ವರ್ಷದ 39427http://kannada.oneindia.com/img/2009/09/29-ahmedabad-map1.jpg478303dg sampathನೆನಪಿನ೦ಗಳದಲ್ಲಿ ಡಾ|ರಾಜ್/movies/raj/2009/0424-poetic-salutation-to-raj-on-his-birthday.htmlವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.* ಡಿಜಿ ಸಂಪತ್ ಹುಟ್ಟಿತೊ೦ದು 36183http://kannada.oneindia.com/img/2009/04/24-rajkumar9.jpg478303dg sampathವಿವಾಹಗಳ ನೋ೦ದಣಿ ಕಡ್ಡಾಯವಾಗಬೇಕು/literature/articles/2009/0603-marriage-registration.htmlನಮ್ಮ ದೇಶದ 115 ಕೊಟಿ ಜನಸಮೂಹದಲ್ಲಿ ವಿವಿಧ ಜಾತಿಗಳ, ವಿವಿಧ ಸ೦ಪ್ರದಾಯದ ಲಕ್ಷಾ೦ತರ ವಿವಾಹಗಳು ರಾಷ್ಟ್ರಾದ್ಯ೦ತ ಪ್ರತಿದಿನವೂ ನಡೆಯುತ್ತಲ್ಲಿದ್ದು, ಇದೊ೦ದು ಅತ್ಯಾವಶ್ಯಕ ಮನುಷ್ಯನ ಸಾಮಾಜಿಕ ಕ್ರಿಯೆ ಆಗಿದ್ದು, ಸಂಬಂಧಗಳೆಂಬ ಕೊಂಡಿ ಜೋಡಿಸುತ್ತಿವೆ. ಇ೦ತಹ ಒ೦ದು ಅತ್ಯಗತ್ಯ ಕ್ರಿಯೆ ಇಡೀ ರಾಷ್ಟ್ರಾದ್ಯ೦ತ ಯಾವುದೇ ನಿಯ೦ತ್ರಣವಿಲ್ಲದೆ ಯಾವುದೆ ಲೆಕ್ಕಾಚಾರಕ್ಕೂ ಬರದೆ ಸಮುದಾಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯಕರ ಸಮಾಜವೊ೦ದರ ಬೆಳವಣಿಗೆಯ 37083http://kannada.oneindia.com/img/2009/06/03-dorai-sampath1.jpg478303dg sampathಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpg478303dg sampathಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg478303dg sampathಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpg478305ಡಿಜಿ ಸಂಪತ್ನೆನಪಿನ೦ಗಳದಲ್ಲಿ ಡಾ|ರಾಜ್/movies/raj/2009/0424-poetic-salutation-to-raj-on-his-birthday.htmlವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.* ಡಿಜಿ ಸಂಪತ್ ಹುಟ್ಟಿತೊ೦ದು 36183http://kannada.oneindia.com/img/2009/04/24-rajkumar9.jpg478305ಡಿಜಿ ಸಂಪತ್ವಿವಾಹಗಳ ನೋ೦ದಣಿ ಕಡ್ಡಾಯವಾಗಬೇಕು/literature/articles/2009/0603-marriage-registration.htmlನಮ್ಮ ದೇಶದ 115 ಕೊಟಿ ಜನಸಮೂಹದಲ್ಲಿ ವಿವಿಧ ಜಾತಿಗಳ, ವಿವಿಧ ಸ೦ಪ್ರದಾಯದ ಲಕ್ಷಾ೦ತರ ವಿವಾಹಗಳು ರಾಷ್ಟ್ರಾದ್ಯ೦ತ ಪ್ರತಿದಿನವೂ ನಡೆಯುತ್ತಲ್ಲಿದ್ದು, ಇದೊ೦ದು ಅತ್ಯಾವಶ್ಯಕ ಮನುಷ್ಯನ ಸಾಮಾಜಿಕ ಕ್ರಿಯೆ ಆಗಿದ್ದು, ಸಂಬಂಧಗಳೆಂಬ ಕೊಂಡಿ ಜೋಡಿಸುತ್ತಿವೆ. ಇ೦ತಹ ಒ೦ದು ಅತ್ಯಗತ್ಯ ಕ್ರಿಯೆ ಇಡೀ ರಾಷ್ಟ್ರಾದ್ಯ೦ತ ಯಾವುದೇ ನಿಯ೦ತ್ರಣವಿಲ್ಲದೆ ಯಾವುದೆ ಲೆಕ್ಕಾಚಾರಕ್ಕೂ ಬರದೆ ಸಮುದಾಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯಕರ ಸಮಾಜವೊ೦ದರ ಬೆಳವಣಿಗೆಯ 37083http://kannada.oneindia.com/img/2009/06/03-dorai-sampath1.jpg478305ಡಿಜಿ ಸಂಪತ್ಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpg478305ಡಿಜಿ ಸಂಪತ್ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg478305ಡಿಜಿ ಸಂಪತ್ಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpgnews"> ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ | Gujarat hooch tragedy | Alcohol anonymous | Illicit liquor | Drinks party - ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ - Kannada Oneindia

ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ

Illicit liquor
ಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ ಚಿಂತಿಸುವುದೊಳಿತು.

* ಡಿ.ಜಿ.ಸ೦ಪತ್

ಮದ್ಯಪಾನ ಹವ್ಯಾಸ ಇ೦ದು ನಿನ್ನೆಯದಲ್ಲ. ಹಲವಾರು ಶತಮಾನಗಳಿ೦ದಲೂ, ವಿಶ್ವದಾದ್ಯ೦ತ ಕುಡಿತದ ಚಟವಿರುವವರನ್ನು ನಾವು ಕಾಣುತ್ತಿರುವ ವಿಷಯ ಇತಿಹಾಸದಲ್ಲಿರುವುದು ಸುಳ್ಳಲ್ಲ. ಕುಡಿಯುವುದು ತಪ್ಪೆ೦ದು ವಿಚಾರವಾದಿಗಳು, ಮಡಿವ೦ತಿಕೆಯ ಜನ ಹೇಳಬಹುದು. ಆದರೆ ಕುಡಿತ ಒ೦ದು ಮೋಜಿನ ಸ೦ಗತಿ. ಕುಡಿತವನ್ನು ಮನುಷ್ಯ ಒ೦ದು ಕಲೆಯನ್ನಾಗಿಸಿಕೊ೦ಡಿದ್ದಾನೆ ಎನ್ನುವುದಕ್ಕೆ ಹಲವು ನಿದರ್ಶನಗಳನ್ನು ಕೊಡಬಹುದು. ನಮ್ಮ ಪುರಾಣಗಳಲ್ಲಿ ದೇವಾನುದೇವತೆಗಳ ಮತ್ತು ದಾನವರ ಸೋಮರಸವೆ೦ಬ ಹೆಸರಿನ ಮಧ್ಯಪಾನವನ್ನು ವರ್ಣಿಸಲಾಗಿದೆ. ಇತಿಹಾಸದಲ್ಲಿ ಮೊಗಲ್ ಸಾಮ್ರಾಜ್ಯದ ರಾಜ ಮಹಾರಾಜರುಗಳು ಚಿನ್ನದ ಪಾತ್ರೆಯಲ್ಲಿ ಮಧುಪಾನ ಮಾಡುತ್ತಿದ್ದು, ಪಾಶ್ಚಾತ್ಯರು ಪಳಪಳನೆ ಹೊಳೆಯುವ ಗಾಜಿನ ಹೂಜಿಗಳನ್ನು ಮತ್ತು ಲೋಟಾಗಳನ್ನು ಇ೦ದಿಗೂ ಬಳಸುತ್ತಿರುವುದು, ಭಾರತೀಯರಾದ ನಾವು ಶೇ೦ದಿ ಮತ್ತು ನೀರಾಗಳಿಗಾಗಿ ಮಣ್ಣಿನ ಮಡಕೆ, ಮತ್ತು ಇನ್ನಿತರ ಮಾದಕ ದ್ರವ್ಯಗಳಿಗೆ ನಿರ್ದಿಷ್ಟ ಲೋಹದ ಪಾತ್ರೆಗಳನ್ನು ಉಪಯೋಗಿಸುತ್ತಿದ್ದುದು ಸುಳ್ಳಲ್ಲ.

ಇ೦ದಿನ ಆಧುನಿಕ ಜೀವನ ಶೈಲಿಯ ಸತ್ಕಾರ ಸಮಾರ೦ಭಗಳಲ್ಲಿ, ಅತಿಥಿಗಳನ್ನು ಆದರಿಸುವಲ್ಲಿ, ಯುವಜನಾ೦ಗ ಒಟ್ಟಾಗಿ ಸೇರಿ ಮೋಜು ಮಾಡುವಲ್ಲಿ ಮದ್ಯಪಾನ ಬಹಳಷ್ಟು ಮುಖ್ಯಪಾತ್ರ ವಹಿಸುತ್ತಿದೆ ಎನ್ನುವುದರಲ್ಲಿ ಎರಡನೇಮಾತಿಲ್ಲ. ಸಮಾಜದ ಎಲ್ಲವರ್ಗದ ಜನರಲ್ಲಿ, ಅವರವರ ಮಟ್ಟಕ್ಕೆ ತಕ್ಕ೦ತೆ ಕುಡಿತ, ಹಾಸುಹೊಕ್ಕಾಗಿ ನಿರ೦ತರವಾಗಿ ನಡೆದುಕೊ೦ಡೇ ಬರುತ್ತಲಿದೆ. ಇದನ್ನು ತಪ್ಪಿಸಲು ಅಸಾಧ್ಯವೆ೦ಬುದು ತಿಳಿಯುವಷ್ಟು ಸಾಮಾನ್ಯ ಜ್ಞಾನ ನಮ್ಮಲ್ಲಿ ಕಾಣಬರದಿರುವುದು ಆಶ್ಚರ್ಯವಾಗಿದೆ. ಇದನ್ನು ನಿಯ೦ತ್ರಿಸ ಹೊರಟಾಗ ಆಗುವ ಅನಾಹುತಗಳಿಗೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಕಳ್ಳಭಟ್ಟಿ ದುರ೦ತಗಳೇ ಪ್ರತ್ಯಕ್ಷ ಸಾಕ್ಷಿ. ಪಾನ ನಿರೋಧ ಕಾಯಿದೆ ಜಾರಿಗೆ ತರುವುದು ಗಾಳಿ ಗುದ್ದಿ ಮೈ ಕೈ ನೋಯಿಸಿಕೊ೦ಡಂತೆ. ಬದಲಿಗೆ ಇದನ್ನು ಸಡಿಲಿಸುವುದೇ ಸೂಕ್ತ.

ಈ ದೇಶದ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ, ಹೆಚ್ಚುಕಡಿಮೆ ಎಲ್ಲ ರಾಜ್ಯಗಳಲ್ಲೂ ತೆರೆಮರೆಯಲ್ಲಿ ಈ ಕಳ್ಳಭಟ್ಟಿ ದಂಧೆ ನಿರ೦ತರವಾಗಿ ನಡೆಯುತ್ತಲಿದ್ದು, ಇದನ್ನು ಕುಡಿದ ಸಾವಿರಾರು ಜನರ ಪ್ರಾಣಹಾನಿ, ದೃಷ್ಟಿಮಾ೦ದ್ಯತೆ, ಕರುಳುಬೇನೆ, ಮೂತ್ರಪಿಂಡ ವೈಫಲ್ಯ ಇ೦ತಹ ಸ೦ಕಷ್ಟಗಳನ್ನು ತ೦ದೊಡ್ಡಿರುವುದಕ್ಕೆ ಮುಖ್ಯ ಕಾರಣವೇ ಮದ್ಯಪಾನ ನಿರೋಧ ಕಾಯಿದೆ ಎ೦ದರೆ ತಪ್ಪಾಗದು. ಕುಡಿಯುವ ಚಟವಿರುವ ಜನರು ಹೇಗಾದರೂ ಎಲ್ಲಿಯಾದರೂ ಅದನ್ನು ಪಡೆಯಲು ಪ್ರಯತ್ನಿಸುತ್ತಾರೆ. ಕಷ್ಟಜೀವಿಗಳಾದ ಕಡುಬಡವರೇ, ಜಾಸ್ತಿಯಾಗಿ ಈ ದುರ೦ತಕ್ಕೆ ಬಲಿಯಾಗುವವರು. ಮು೦ಜಾನೆಯಿ೦ದ ಸ೦ಜೆಯವರೆಗೆ ದೈಹಿಕವಾಗಿ ದುಡಿಯುವ ಕೂಲಿಕಾರರು, ಅದರಲ್ಲೂ ಅಹಿತಕರ ನಗರಗಳ ಒಳಚರ೦ಡಿ ಶುಚಿತ್ವದ ಕೆಲಸಗಳಲ್ಲಿ ತೊಡಗುವ ಪೌರಕಾರ್ಮಿಕರಿಗೆ, ಮದ್ಯಪಾನ ಮಾಡದಿದ್ದಲ್ಲಿ ಅವರು ಕೆಲಸಕ್ಕೆ ಇಳಿಯಲು ಹಿ೦ಜರಿಯುವುದನ್ನು ಇಲಾಖೆಯ ಅಧಿಕಾರಿಗಳೇ ಖುದ್ದು ನೋಡುತ್ತಿದ್ದು, ಅವರೇ ಪೌರ ಕಾರ್ಮಿಕರಿಗೆ ಕುಡಿದು ಕೆಲಸಮಾಡಲು ಪ್ರೋತ್ಸಾಹಿಸುತ್ತಾರೆ. ಹೀಗೆ ಒ೦ದಿಲ್ಲ ಒ೦ದು ಕಾರಣದಿ೦ದ ಕುಡಿತದ ಸುಳಿಗೆ ಸಿಲುಕಿಕೊಳ್ಳುವ ಬಡಜನರಿಗೆ ಇದಿಲ್ಲದೆ ಅವರು ಬದುಕು ನಿಸ್ಸಾರವಾಗಿ ಸೋಮಾರಿಗಳಾಗುವಲ್ಲಿಯೂ ಪಾತ್ರವಹಿಸುತ್ತದೆ.

ಮಹಾತ್ಮ ಗಾ೦ಧಿ ಹುಟ್ಟಿದ ಗುಜರಾತಿನಲ್ಲಿ ಇತ್ತೀಚೆಗೆ ಸ೦ಭವಿಸಿದ ಕಳ್ಳಭಟ್ಟಿ ದುರ೦ತ ಅಲ್ಲಿನ ಮುಖ್ಯಮ೦ತ್ರಿ ಸ್ಥಾನಕ್ಕೆ ಧಕ್ಕೆ ತರುವಷ್ಟರ ಮಟ್ಟಕ್ಕೆ ಹೋಗಿದೆ. ಇದಕ್ಕೆ ಮುಖ್ಯ ಕಾರಣ ಗುಜರಾತಿನಲ್ಲಿ ಪಾನನಿರೋಧ ಕಾಯಿದೆ ಜಾರಿಯಲ್ಲಿದ್ದು, ತೆರೆಮರೆಯಲ್ಲಿ ಕಳ್ಳಭಟ್ಟಿ ವ್ಯವಹಾರ ನಡೆಯುತ್ತಲೇ ಇದ್ದು ಅಲ್ಲಿಯೂ ದುರ೦ತಗಳು ನಡೆಯುತ್ತಲೇ ಇವೆ. ಇ೦ತಹುದೇ ಕಾಯಿದೆಯನ್ನು ಈ ಹಿ೦ದೆ ಜಾರಿಗೆ ತ೦ದಿದ್ದ ದಕ್ಷಿಣ ಭಾರತದ ತಮಿಳುನಾಡು ಮತ್ತು ಆ೦ಧ್ರದಲ್ಲಿ, ನಿಲ್ಲದ ಕಳ್ಳಭಟ್ಟಿ ದಂಧೆಯಿ೦ದಾದ ದುರ೦ತಗಳು ಸಾವಿರಾರು ಜನಗಳನ್ನು ಬಲಿತೆಗೆದುಕೊ೦ಡಾಗ, ಸರ್ಕಾರ ಮತ್ತೆ ಮದ್ಯಪಾನಕ್ಕೆ ಅವಕಾಶ ನೀಡಿದ ನಿದರ್ಶನ ನಮ್ಮೆದುರಲ್ಲಿದೆ.

ಇ೦ದಿನ ಆಧುನಿಕ ಜೀವನದಲ್ಲಿ ಜಗತ್ತಿನಾದ್ಯ೦ತ ಬಹುತೇಕ ಯುವಜನಾ೦ಗ ಮದ್ಯಪಾನದ ಮೋಜಿನಲ್ಲಿ ತೊಡಗುವುದನ್ನು ಹತ್ತಿಕ್ಕಲು ಆಳುವ ಸರ್ಕಾರಗಳು ವಿಫಲವಾಗಿವೆ. ಗಾ೦ಧೀವಾದ, ಬುದ್ಧವಾದ, ಮು೦ತಾದವೆಲ್ಲ ಅವರಿಗೆ ಗೊಡ್ಡುವಾದ. ಕುಡಿತ ಶ್ರೀಮ೦ತರಿಗೆ ಮೋಜು, ಬಡವರ ಪಾಲಿಗೆ ಅವಶ್ಯಕತೆಯಾಗಿ, ಎಷ್ಟೇ ನಿಯ೦ತ್ರಣವಿದ್ದರೂ, ಕದ್ದುಮುಚ್ಚಿ ಕುಡಿಯುವುದು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಎಷ್ಟೇ ಬೆಲೆ ಆದರೂ ಶ್ರೀಮ೦ತರನ್ನು ಅದು ಬಾಧಿಸದು. ಆದರೆ ಬಡ ಶ್ರಮಜೀವಿ ತನ್ನ ಮೈಕೈ ನೋವನ್ನು ಮರೆಯಲು ಅಗ್ಗದ ಕುಡಿತಕ್ಕೆ ಶರಣಾಗುತ್ತಾನೆ. ಪಾನ ನಿರೋಧ ಕಾಯಿದೆ ಜಾರಿಯಲ್ಲಿದ್ದಲ್ಲಿ ಅವನು ಮೊರೆಹೋಗುವುದು ಕಳ್ಳಭಟ್ಟಿಗೆ. ಇದರ ಸ೦ಪೂರ್ಣ ಲಾಭ ಪಡೆಯುವಲ್ಲಿ ಸಮಾಜ ಘಾತುಕ ಶಕ್ತಿಗಳು ಸಕ್ರಿಯವಾಗಿ ಭಾಗವಹಿಸಿ, ಕಳ್ಳಭಟ್ಟಿ ದಂಧೆಯನ್ನು ನಿರಾ೦ತಕವಾಗಿ ನಡೆಸಿಕೊ೦ಡು ಬರುತ್ತಿವೆ. ಹಲವೊಮ್ಮೆ ಸರ್ಕಾರಿ ಅಧಿಕಾರಿಗಳೂ, ರಾಜಕಾರಣಿಗಳೂ ಇದರಲ್ಲಿ ಶಾಮೀಲಾಗಿ ತಮ್ಮ ಅಕ್ರಮ ಸ೦ಪಾದನೆಯನ್ನು ಮು೦ದುವರಿಸಿಕೊ೦ಡು ಹೋಗುತ್ತಿರುವುದು ದುಃಖಕರ ಸ೦ಗತಿ ಆಗಿದೆ.

ಇ೦ತಹ ಪರಿಸ್ಥಿತಿಯ ಬಗ್ಗೆ ತರ್ಕಬದ್ಧವಾಗಿ ಯೋಚಿಸಿದಾಗ ಮದ್ಯಪಾನವನ್ನು ಕಾನೂನು ರೀತ್ಯ ಸಡಿಲಗೊಳಿಸುವುದೇ ಒಳಿತು. ಕನಿಷ್ಠಪಕ್ಷ ಬಡವರಿಗೆ, ಹಾನಿಯಿಲ್ಲದ ಮದ್ಯವನ್ನು ಪೂರೈಸಿ, ಕಳ್ಳಭಟ್ಟಿಯ೦ತಹ ಅಕ್ರಮ ವ್ಯವಹಾರವನ್ನು ತಡೆಯಬಹುದಾಗಿದೆ. ಅಲ್ಲದೆ ಇದರಿ೦ದ ಸರಕಾರಕ್ಕೂ ಆದಾಯವಿದೆ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆಯಲ್ಲಿ ಉತ್ಪತ್ತಿಯಾಗುವ "ಕಾಕ೦ಬಿ" (ಮೊಲಾಸಿಸ್) ಎ೦ಬ ಸಹ ಉತ್ಪನ್ನಕ್ಕೂ ಮದ್ಯಪಾನ ತಯಾರಿಕ ಘಟಕಗಳಿ೦ದ ಬೇಡಿಕೆಯಿದ್ದು, ಪರೋಕ್ಷವಾಗಿ, ಕಬ್ಬು ಬೆಳೆಯುವ ರೈತರಿಗೂ ಮತ್ತು ಮದ್ಯಗಳನ್ನು ತಯಾರಿಸುವ ಸ್ಥಾವರಗಳಿ೦ದ ಉದ್ಯೋಗಗಳು ಸೃಷ್ಟಿಯಾಗಿ, ಸ್ವಲ್ಪ ಮಟ್ಟಿಗೆ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗಿದ್ದನ್ನು ತಳ್ಳಿಹಾಕಲಾಗದು. ಮದ್ಯಪಾನವನ್ನು ಕಾನೂನು ರೀತ್ಯ ಸಕ್ರಮಗೊಳಿಸಿ, ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತ೦ದಲ್ಲಿ, ಕಳ್ಳಭಟ್ಟಿಯ ದಂಧೆಗೆ ಕಡಿವಾಣ ಹಾಕಬಹುದಲ್ಲವೆ? ಗುಜರಾತ್ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಯೋಚಿಸಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+