537912ಸುಶ್ರುತ ದೊಡ್ಡೇರಿಪ್ರಣತಿಯಿಂದ ಗಮಕ ಸುಧಾ ಧಾರೆ/literature/articles/2009/0716-pranathi-presents-gamaka-vachana-iiwc.html"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು 38019http://kannada.oneindia.com/img/2009/07/16-ram-lakshman-seeta2.jpg537912ಸುಶ್ರುತ ದೊಡ್ಡೇರಿಸುಚಿತ್ರದಲ್ಲಿ ಶ್ರೀನಿಧಿ, ಸುಶ್ರುತ ಜುಗಲ್ ಬಂದಿ/literature/book/2009/0804-shreenidhi-sushrutha-book-release-at-suchitra.htmlಬೆಂಗಳೂರು, ಆ. 4 : ಪತ್ರಕರ್ತ ಡಿ ಎಸ್ ಶ್ರೀನಿಧಿ ಅವರ 'ಹೂವು ಹೆಕ್ಕುವ ಮುನ್ನ' ಕವನ ಸಂಕಲನ ಹಾಗೂ ಸುಶ್ರುತ ದೊಡ್ಡೇರಿ ಅವರ 'ಹೊಳೆಬಾಗಿಲು' ಲಲಿತ ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 9 ರಂದು ನಗರದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಸಾಹಿತಿ ಹಾಗೂ 38410http://kannada.oneindia.com/img/2009/08/04-sushruta-dodderi1.jpg537912ಸುಶ್ರುತ ದೊಡ್ಡೇರಿಸುಚಿತ್ರಾದಲ್ಲಿ ಪ್ರಣತಿಯ ಐದನೇ ಕನಸು ನನಸು/literature/book/2009/0811-shreenidhi-sushrutha-book-release-pranati.htmlಪ್ರಣತಿ ಆಯೋಜಿಸಿದ್ದ ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಲಲಿತ ಪ್ರಬಂಧಗಳು ಮತ್ತು ಶ್ರೀನಿಧಿ ಡಿ ಎಸ್ ರ ಹೂವು ಹೆಕ್ಕುವ ಸಮಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಆಗಸ್ಟ್ 9 ರಂದು ನಡೆಯಿತು. ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಜೋಗಿ ಭಾಗವಹಿಸಿದ್ದರು.ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಬಿಡುಗಡೆ ಮಾಡಿ ಮಾತನಾಡಿದ 38548http://kannada.oneindia.com/img/2009/08/11-pranati-book-release1.jpg537912ಸುಶ್ರುತ ದೊಡ್ಡೇರಿಲಂಕೇಶ್ ಮಥಿಸಿದ ನೀಲು-ನೀಲಿ ನಕ್ಷತ್ರ/mixed-bag/blogs/2009/0904-neelu-romantic-poems-p-lankesh-motugode.htmlನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು 39006http://kannada.oneindia.com/img/2009/09/04-lankesh2.jpg284504ರಾಮಾಯಣತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ/movies/controversy/2009/02/24-no-dubbing-of-taare-zameen-par-in-kannada.htmlಅಮೀರ್ ಖಾನ್ ರ 'ತಾರೆ ಜಮೀನ್ ಪರ್' ಹಿಂದಿ ಚಿತ್ರವನ್ನ್ನು ಕನ್ನಡಕ್ಕೆ ಡಬ್ ಮಾಡಿ ಶಾಲಾ ಮಕ್ಕಳಿಗೆ ತೋರಿಸಬೇಕು ಎಂಬ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿದ್ದೇ ಆದರೆ ನಾವು ಉಗ್ರವಾಗಿ ಪ್ರತಿಭಟಿಸುವುದಾಗಿ ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟ ಬೆದರಿಕೆ ಒಡ್ಡಿದೆ. 34828http://kannada.oneindia.com/img/2009/02/24-taare-zameen-par1.jpg284504ರಾಮಾಯಣಪ್ರಣತಿಯಿಂದ ಗಮಕ ಸುಧಾ ಧಾರೆ/literature/articles/2009/0716-pranathi-presents-gamaka-vachana-iiwc.html"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು 38019http://kannada.oneindia.com/img/2009/07/16-ram-lakshman-seeta2.jpg284504ರಾಮಾಯಣರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ/news/2009/07/20/karunanidhi-continue-critical-of-ramayana.htmlಚೆನ್ನೈ, ಜು.20:ಭಗವಾನ್ ಶ್ರೀ ರಾಮಚಂದ್ರ ಯಾರು? ಆತನ ಅಸ್ತಿತ್ವದ ಬಗ್ಗೆ ಏನಾದರೂ ಪುರಾವೆ ಇದೆಯಾ? ಆತ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ನಿನ್ನೆ ಮತ್ತೆ ರಾಮಾಯಣ ಮತ್ತು ರಾಮನ ಬಗ್ಗೆ ಟೀಕೆ ಮಾಡುವುದನ್ನು ಮುಂದುವರಿಸುವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ನಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ, 38094http://kannada.oneindia.com/img/2009/07/20-karunanidhi1.jpg284504ರಾಮಾಯಣಹಾಲಿವುಡ್ ಚಿತ್ರದಲ್ಲಿ ಹನುಮಂತನಾಗಿ ಅಮೀರ್ /movies/hollywood/2009/09/07-aamir-khan-to-play-lead-in-hanuman.htmlಹತ್ತಾರು ಭಾಷೆಗಳಲ್ಲಿ ಚಲನಚಿತ್ರ ರೂಪದಲ್ಲಿ ಹೊರಬಂದಿರುವ ಮಹಾಕಾವ್ಯ ರಾಮಾಯಣ ಇದೀಗ ಹಾಲಿವುಡ್ ಗೂ ಅಡಿಯಿಟ್ಟಿದೆ. ಹಾಲಿವುಡ್ 'ಹನುಮಾನ್' ಚಿತ್ರದಲ್ಲಿ ಅಮೀರ್ ಖಾನ್ ಹನುಮಂತನ ಪಾತ್ರ ಪೋಷಿಸಲಿದ್ದಾರೆ. 'ಮ್ಯಾಟ್ರಿಕ್ಸ್' ಖ್ಯಾತಿಯ ಕೀನು ರೀವ್ಸ್ ರಾಮನಾಗಿ ಅಭಿನಯಿಸಲಿದ್ದಾರೆ.'ನಿಲ್ ಬೈ ಮೌತ್' ಖ್ಯಾತಿಯ ಗ್ಯಾರಿ ಓಲ್ಡ್ ಮನ್ ರಾವಣನಾಗಿ ಕಾಣಿಸಲಿದ್ದಾರೆ. ಹನುಮಂತನ ಪಾತ್ರವನ್ನು ಪೋಷಿಸುವಂತೆ ಈಗಾಗಲೇ ಅಮೀರ್ ಖಾನ್ ಅವರನ್ನು ಸಂಪರ್ಕಿಸಿ 39048http://kannada.oneindia.com/img/2009/09/07-amir-kha1.jpg123319ಬಸವನಗುಡಿಬಸವನಗುಡಿಯ ಮನೆಯಲ್ಲಿ ಕಣ್ತೆರೆದ ಸಾಯಿಬಾಬಾ/news/2008/07/18/shirdi-sai-baba-miracle-basavanagudi-blore.htmlಬೆಂಗಳೂರು, ಜು. 18 : ಇದು ನಿಜಕ್ಕೂ ಪವಾಡವೋ, ಕೃತಕವೋ, ವಿಸ್ಮಯವೋ, ಜನಮರುಳೋ ಗೊತ್ತಿಲ್ಲ. ಮಣ್ಣಿನ ವಿಗ್ರಹವೊಂದು ಕಣ್ಣು ತೆರೆದುಕೊಳ್ಳುತ್ತೆ ? ಅದಕ್ಕೆ ಸಹಸ್ರಾರು ಜನ ಮುಗಿಬಿದ್ದು ನೋಡ್ತಾರೆ ?. ಹೌದು ಇಂಥಹದೊಂದು ಅಪರೂಪದ ಘಟನೆ ಬೆಂಗಳೂರಿನ ಬಸವನಗುಡಿ ಸಮೀಪದ ಗವಿಪುರಂ ಎಂಬ ಪ್ರಜ್ಞಾವಂತರ ಬಡಾವಣೆಯಲ್ಲಿ ವಿಸ್ಮಯವೊಂದು ಜರುಗಿದೆ. ಶಿರಡಿ ಸಾಯಿಬಾಬಾನ ಪರಮಭಕ್ತರಾಗಿರುವ ಲಕ್ಷ್ಮಿ ಎಂಬುವವರು ಶಿರಡಿಯಿಂದ 1784http://kannada.oneindia.com/img/2009/07/30-shiradi-saibaba1e.jpg123319ಬಸವನಗುಡಿಬಸವನಗುಡಿ ರಸ್ತೆಯಲ್ಲಿ ರಕ್ತಪಾತ!/nri/article/2009/0102-blood-stained-streets-of-bull-temple.htmlಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..* ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು 33831http://kannada.oneindia.com/img/2009/01/02-wallstreet-malli1.jpg123319ಬಸವನಗುಡಿಜೂನ್ 27 ರಂದು ಪಿಬಿಎಸ್ ರಸಸಂಜೆ /news/2009/06/23/singer-pb-srinivas-musical-programme-basavanagudi.htmlಬೆಂಗಳೂರು, ಜೂ. 23 : 'ನಾ ಕಂಡ ಬೆಂಗಳೂರು' ವಾರಪತ್ರಿಕೆಯು ಜೂನ್ 27 (ಶನಿವಾರ) ರಂದು ನಗರದ ಬಸವನಗುಡಿ ಕೋಹಿನೂರ್ ಆಟದ ಮೈದಾನದಲ್ಲಿ ಖ್ಯಾತ ಗಾಯಕ ಪಿ ಬಿ ಶ್ರೀನಿವಾಸ್ ಅವರ ರಸಸಂಜೆ ಕಾರ್ಯಕ್ರಮ ಆಯೋಜಿಸಿದೆ. ಸ೦ಜೆ 6.30 ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪಿಬಿಎಸ್ ಹಾಡಿದ 60 ರಿ೦ದ 70ರ ದಶಕದಲ್ಲಿ ತೆರೆಕಂಡ ಹಳೆಯ ಚಿತ್ರಗೀತೆಗಳನ್ನು 37514http://kannada.oneindia.com/img/2009/06/23-pbs1.jpg123319ಬಸವನಗುಡಿಪ್ರಣತಿಯಿಂದ ಗಮಕ ಸುಧಾ ಧಾರೆ/literature/articles/2009/0716-pranathi-presents-gamaka-vachana-iiwc.html"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು 38019http://kannada.oneindia.com/img/2009/07/16-ram-lakshman-seeta2.jpg123319ಬಸವನಗುಡಿಮರೀಬೇಡಿ ಸೋಮವಾರ ಕಡಲೆಕಾಯಿ ಪರಿಷೆ!/news/2009/11/15/basavanagudi-ground-net-fare-from-nov-16.htmlಬೆಂಗಳೂರು, ನ.15: ಪ್ರತಿ ವರ್ಷದಂತೆ ಕಾರ್ತೀಕ ಮಾಸದ ಕಡೆಯ ಸೋಮವಾರ (ನ.16) ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಸೋಮವಾರ ಬೆಳಗ್ಗೆ 10ಗಂಟೆಗೆ ಸಂಸದ ಅನಂತಕುಮಾರ್ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ಅವರು ಕಡಲೆಕಾಯಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಬಿ.ಎನ್.ವಿಜಯಕುಮಾರ್, ಡಾ.ಪ್ರೇಮಚಂದ್ರ 40234http://kannada.oneindia.com/img/2009/11/15-ground-net-fare1.jpgnews"> ಪ್ರಣತಿಯಿಂದ ಗಮಕ ಸುಧಾ ಧಾರೆ | Kannada Culture|Gamaka|kannada songs|Pranathi|bangalore cultural diary| ಪ್ರಣತಿಯಿಂದ ಗಮಕ ಸುಧಾ ಧಾರೆ - Kannada Oneindia

ಪ್ರಣತಿಯಿಂದ ಗಮಕ ಸುಧಾ ಧಾರೆ

Ramayana Gamaka
"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು ಮುಂದುವರೆಸುತ್ತಿದ್ದರು:

"...ವಿಮಲ ರಾಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ಧಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜಗವ ಗದುಗಿನ ವೀರನಾರಯಣ|

-ಎಂಬಲ್ಲಿಗೆ ಒಂದು ಕೆಮ್ಮು, ರಾಯರ ಪಕ್ಕ ವ್ಯಾಖ್ಯಾನಕ್ಕೆಂದು ಕೂತಿರುತ್ತಿದ್ದ ಸಾಗರದ ಮಧ್ಯಸ್ತರಿಂದ!

ಅದು ನಮ್ಮೂರಿನ ದೇವಸ್ಥಾನದ ಪ್ರಾಂಗಣ. ನಮ್ಮೂರಿನದು ಶ್ರೀಕೃಷ್ಣನ ದೇವಸ್ಥಾನವಾದ್ದರಿಂದ, ಪ್ರತಿವರ್ಷದ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನಡೆಯುತ್ತಿತ್ತು. ಅಷ್ಟಮಿಯ ಮರುದಿನ, ಕೃಷ್ಣ ಜಯಂತಿಯಂದು ಸಂಜೆ, ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಸಾಮಾನ್ಯವಾಗಿ ಅದು 'ಗಮಕ ವಾಚನ ಮತ್ತು ವ್ಯಾಖ್ಯಾನ' ಕಾರ್ಯಕ್ರಮವೇ ಆಗಿರುತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಗಮಕಿ ಹೊಸಬಾಳೆ ಸೀತಾರಾಮರಾಯರಿಂದ ಗಮಕ ವಾಚನ ಮತ್ತು ಸಾಗರದ ನೀ.ನಾ. ಮಧ್ಯಸ್ತರಿಂದ ಅದರ ವ್ಯಾಖ್ಯಾನ. ನಮ್ಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರನ್ನೊಳಗೊಂಡ ಸುಮಾರು ನೂರು ಪ್ರೇಕ್ಷಕರು ಆ ಕಾರ್ಯಕ್ರಮದಲ್ಲಿ ಇರುತ್ತಿದ್ದರು. ಚಿಕ್ಕ ಮಕ್ಕಳಾಗಿದ್ದ ನಾವು, ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ'ಯ ಅನೇಕ ಭಾಗಗಳನ್ನು ಕೇಳಿದ್ದು ಹಾಗೆ.

ಆಮೇಲೆ ಒಂದೆರಡು ವರ್ಷ, ಕೆರೆಕೊಪ್ಪದ ನರಹರಿ ಶರ್ಮರ ವಾಚನ ಮತ್ತು ನಿಸರಾಣಿ ರಾಮಚಂದ್ರರ ವ್ಯಾಖ್ಯಾನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಈ ಹೊಸ-ಯುವ ಜೋಡಿಯನ್ನು ಗ್ರಾಮಸ್ಥರು ಮೆಚ್ಚಿಕೊಂಡರಾದರೂ, ಎಷ್ಟೋ ವರ್ಷಗಳಿಂದ ಗಮಕ ಕಾರ್ಯಕ್ರಮವನ್ನೇ ಕೇಳೀ ಕೇಳಿ ಬೇಸರ ಬಂದಿತ್ತು. ಹೀಗಾಗಿ, ಗಮಕದ ಬದಲು ಈಗ ಕೆಲ ವರ್ಷಗಳಿಂದ ಬೇರೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮೂರಿನ ದೇವಸ್ಥಾನದಲ್ಲಿ ನಡೆಯುತ್ತಿದೆ.

* * *

ನಾನು ಹೋಗುತ್ತಿದ್ದ ನಿಸರಾಣಿ ಹೈಸ್ಕೂಲಿನಲ್ಲಿ, ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವ ಕೊಡುತ್ತಿದ್ದರು. ಅಂದರೆ, ಮಕ್ಕಳಲ್ಲಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆಯಲು ಅನೇಕ ಕಾರ್ಯಕ್ರಮಗಳು - ಸ್ಪರ್ಧೆಗಳು ಅಲ್ಲಿ ನಡೆಯುತ್ತಿದ್ದವು. ಅದರಲ್ಲಿ ಗಮಕ ತರಗತಿಯೂ ಒಂದು. 'ಗಮಕ ಕಲಾ ಪರಿಷತ್'ನ ಆಶ್ರಯದಲ್ಲಿ, ಆಸಕ್ತ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳುಗಳ ಗಮಕ ತರಗತಿ ಮತ್ತು ಕೊನೆಯಲ್ಲೊಂದು ಪರೀಕ್ಷೆ ಇರುತ್ತಿತ್ತು. ನರಹರಿ ಶರ್ಮರೇ ತರಗತಿ ತೆಗೆದುಕೊಳ್ಳುತ್ತಿದ್ದುದು. ನಾನೂ ಸೇರಿದ್ದೆ. ಹೇಳಿಕೊಳ್ಳಬಹುದಾದ ಒಂದು ಖುಶಿಯ ವಿಷಯ ಎಂದರೆ, ಆ ವರ್ಷದ ಗಮಕ ಪರೀಕ್ಷೆಯಲ್ಲಿ ನಾನೇ ಶಾಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದೆ! ಅದಾದಮೇಲೆ, ಎಸ್ಸೆಸ್ಸೆನ್ ಮೇಡಂ ಕ್ಲಾಸಿನಲ್ಲಿ ನನ್ನ ಕಾಲೆಳೆಯ ಬೇಕೆಂದೆನಿಸಿದಾಗಲೆಲ್ಲ 'ಸುಶ್ರುತ, ಒಂದು ಭಾವಗೀತೆ ಹಾಡೋ' ಅಂತಲೋ ಚಿತ್ರಗೀತೆ ಹಾಡೋ ಅಂತಲೋ ಜನಪದ ಗೀತೆ ಹಾಡೋ ಅಂತಲೋ ಹೇಳುತ್ತಿದ್ದರು. ಅದು ಹೇಗೋ ಗಮಕದಲ್ಲೊಂದು ಬಾಯ್ಕಳೆದು ಹಾಡಿ ಸರ್ಟಿಫಿಕೇಟು ಗಿಟ್ಟಿಸಿದ್ದು ಬಿಟ್ಟರೆ, ಈ ಭಾವಗೀತೆಯನ್ನಾಗಲೀ ಚಿತ್ರಗೀತೆಯನ್ನಾಗಲೀ ಜನಪದ ಗೀತೆಯನ್ನಾಗಲೀ ನಾನು ಬಾತ್‌ರೂಮು ಮತ್ತು ಏಕಾಂತದಲ್ಲಿ ಬಿಟ್ಟು ಬೇರೆಲ್ಲೂ ಹಾಡಿದ್ದೇ ಇಲ್ಲ. ಒಟ್ಟಿನಲ್ಲಿ ಎಸ್ಸೆಸ್ಸೆನ್ ಮೇಡಂರ ತಮಾಷೆಯಿಂದಾಗಿ ಕ್ಲಾಸು ಕಿಸಕಿಸ ನಗೆಯಲ್ಲಿ ಮುಳುಗುತ್ತಿತ್ತು.

* * *

ಈಗ ಇವೆಲ್ಲ ನೆನಪಾದದ್ದು ಪ್ರಣತಿಯಿಂದ ನಾವು ಆಯೋಜಿಸಿರುವ 'ಗಮಕ ಸುಧಾ ಧಾರೆ' ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ವಿಷಯ ಬಂದಾಗ. ಹೌದು, ಬರುವ ಶನಿವಾರ- ಜುಲೈ 18ರ ಸಂಜೆ 5 ಗಂಟೆಗೆ, ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ರಸಋಷಿ ಕುವೆಂಪು ನೆನಪಿನಲ್ಲಿ 'ಶಬರಿಗಾದನು ಅತಿಥಿ ದಾಶರಥಿ' ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಗಮಕ ವಾಚನವನ್ನು ಶೋಭಾ ಶಶಿಧರ್ ಹಾಗೂ ವ್ಯಾಖ್ಯಾನವನ್ನು ಬಿ.ಜಿ. ಕುಸುಮ ನಡೆಸಿಕೊಡುವರು.ಇತ್ತೀಚೆಗೆ ವಿರಳವಾಗುತ್ತಿರುವ ಈ ಕಲೆಯನ್ನು ಮತ್ತೆ ಪ್ರಚುರಪಡಿಸುವುದು ಪ್ರಣತಿಯ ಧ್ಯೇಯಗಳಲ್ಲೊಂದಾದ 'ಸಂಸ್ಕೃತಿ'ಯ ಕೆಲಸ. ಪ್ರಣತಿಗೆ ಇದು ಹೆಮ್ಮೆಯ ನಾಲ್ಕನೇ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ನೀವೆಲ್ಲ ಬರಲೇಬೇಕು ಅಂತ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+