35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg206128ಮಂಗಳೂರು ಪಬ್ ದಾಳಿಮಂಗಳೂರು ಪಬ್ ದಾಳಿ ಖಂಡನೀಯ:ಅಡ್ವಾಣಿ /news/2009/02/28/mangaluru-pub-attack-unpardonable-advani.htmlಬೆಂಗಳೂರು, ಫೆ. 28 : ಹಿಂದೂ ಧರ್ಮ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಸಹಿಸುವುದಿಲ್ಲ. ಮಂಗಳೂರಿನಲ್ಲಿ ಪಬ್ ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಭಯೋತ್ಪಾದನಾ ವಿರೋಧಿ ಅಭಿಯಾನದ ಸಮಾರೋಪ 34921http://kannada.oneindia.com/img/2009/02/28-advani-lk2.jpg206128ಮಂಗಳೂರು ಪಬ್ ದಾಳಿಕೇಂದ್ರದ ವಿರುದ್ಧ ನಿರ್ಮಲಾ ವೆಂಕಟೇಶ್ ಕಿಡಿ /news/2009/03/02/sacked-ncw-member-nirmala-lashes-out-at-upa-govt.htmlನವದೆಹಲಿ, ಮಾ. 2 : ವಜಾಗೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ಅವರು ಕೇಂದ್ರ ಸರ್ಕಾರ, ವಿಶೇಷವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ರೇಣುಕಾ ಚೌಧರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನನ್ನು ವಜಾಗೊಳಿಸಿರುವ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ಅವರು ಆರೋಪಿಸಿದ್ದಾರೆ. ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ 34934http://kannada.oneindia.com/img/2009/03/02-nirmala-venkatesh1.jpg206128ಮಂಗಳೂರು ಪಬ್ ದಾಳಿಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg206128ಮಂಗಳೂರು ಪಬ್ ದಾಳಿಅಲ್ಪಸಂಖ್ಯಾತರ ಜೀವನ ಭಯದಲ್ಲಿದೆ : ಯುಆರ್ ಎ /news/2009/03/16/bjp-will-build-nation-of-majority-community-ura.htmlಮೈಸೂರು, ಮಾ. 16 : ಬಿಜೆಪಿ ಪಕ್ಷದೊಂದಿಗೆ ಕಾಲು ಕೆದರಿ ಜಗಳ ಕಾಯದಿದ್ದರೆ ನಮ್ಮ ಜ್ಞಾನಪೀಠ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರಿಗೆ ನಿದ್ದೆ ಬರುವುದಿಲ್ಲವೇನೂ, ಹಾಗಂತ ಬಿಜೆಪಿ ಕಾರ್ಯಕರ್ತರೊಬ್ಬರು ಕಿಡಿಕಾರುತ್ತಿದ್ದರು. ಲೋಕಸಭೆ ಚುನಾವಣೆಗೆ ಮುನ್ನ ಕೇಸರಿ ಪಡೆಯ ಮುಗಿಬಿದ್ದಿರುವ ಅವರು, ಬಿಜೆಪಿ ಪಕ್ಷದ ಮೇಲೆ ಇದೀಗ ಮತ್ತೊಂದು ಬಾಂಬ್ ಎಸೆದಿದ್ದಾರೆ. ಭಾರತೀಯ ಜನತಾ ಪಕ್ಷ ಭಾರತವನ್ನು ಬಹುಸಂಖ್ಯಾತರ 35260http://kannada.oneindia.com/img/2009/03/16-ura3.jpg206128ಮಂಗಳೂರು ಪಬ್ ದಾಳಿಮುತಾಲಿಕ್ ಗೆ ದ.ಕನ್ನಡ ಜಿಲ್ಲೆ ಪ್ರವೇಶ ನಿರ್ಬಂಧ/news/2009/03/16/dk-district-administration-bans-mutalik-for-a-year.htmlಮಂಗಳೂರು, ಮಾ. 16 : ಪ್ರಚೋಚನಾಕಾರಿ ಭಾಷಣ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇಲೆ ಒಂದು ವರ್ಷ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡದಂತೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಮಂಗಳೂರು ಪಬ್ ದಾಳಿ ಪ್ರಕರಣ ಮತ್ತು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದಂತೆ ಮುತಾಲಿಕ್ ಹಾಗೂ ಅವರ ಸಂಘಟನೆಯ ಕಾರ್ಯಕರ್ತರು ನಡೆಸಿದ ದಾಳಿ, 35267http://kannada.oneindia.com/img/2009/03/16-pramod-mutalik2.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpgnews"> ಬೆಂಗಳೂರಿನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ | Women Harassment| Mangalore Pub attack| bengaluru |BAware | DGP Ajay Kumar Singh | ಬೆಂಗಳೂರಿನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ - Kannada Oneindia

ಬೆಂಗಳೂರಿನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ

Nagaraj Maraa
ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಫೆಂಟ್ರಿರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ . ನಂಬಲೂ ಸಾಧ್ಯವಾಗುತ್ತಿಲ್ಲವೇ ಹಾಗಾದರೇ ಈ ಇದನ್ನು ಓದಿ. ಇದು ಸತ್ಯ ಘಟನೆಗಳನ್ನು ಆಧರಿಸಿದ ಲೇಖನ

*ನಾಗರಾಜ್, ಬೆಂಗಳೂರು

ಕಳೆದ ಒಂದು ವಾರದಿಂದ ಕನಿಷ್ಟ 7 ದಾಳಿಗಳು ಮಹಿಳೆಯರ ಮೇಲೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಅದೂ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಈ ಸ್ತ್ರೀಯರು ಪಾಶ್ಚಾತ್ಯ ವಸ್ತ್ರಗಳನ್ನು ಧರಿಸಿದ್ದರೆಂಬ ಕಾರಣದಿಂದ ಅವರನ್ನು 2-4 ಮಂದಿಯ ಗುಂಪೊಂದು ಬಂದು ಥಳಿಸಿದೆ. ಮಂಗಳೂರಿನ ಪಬ್ ಪ್ರಕರಣವೇ ಇದರ ಹಿನ್ನೆಲೆಯಾಗಿರಬಹುದೆಂಬ ಸಂಶಯವೂ ಸಹ ಇದರಿಂದ ಎದ್ದಿದೆ.

ಮೊದಲನೇ ಘಟನೆನಡೆದಿದ್ದು ಫೆಬ್ರವರಿ 17 ನೇ ತಾರೀಖಿನಂದು. ಇಂದಿರಾನಗರದಲ್ಲಿ ಒಬ್ಬ ಮಹಿಳೆ ತನ್ನ ಕಾರನ್ನು ಓಡಿಸುತ್ತಿದ್ದಾಗ, ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಆಕೆಯನ್ನು ಹಿಂಬಾಲಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಅವಳನ್ನು ಥಳಿಸಲು ಮುಂದಾದರು. ಇದರಿಂದಾಗಿ ಹೆದರಿದ ಆಕೆ ತನ್ನ ರಕ್ಷಣೆಗಾಗಿ ತನಗೆ ಗೊತ್ತಿದ್ದ ಅಪಾರ್ಟ್ ಮೆಂಟ್ ಒಂದರಲ್ಲಿ ಸಹಾಯಕ್ಕಾಗಿ ಓಡಿದಳು. ಅಷ್ಟೊರೊಳಗೆ ಅವಳ ಕಾರಿನ ಬಳಿಯೇ ಮುತ್ತಿಗೆ ಹಾಕಿದ ಒಬ್ಬ ವ್ಯಕ್ತಿಯೊಡನೆ ಹೊಡೆದಾಟವು ನಡೆದು, ಕೊನೆಗೂ ತಪ್ಪಿಸಿಕೊಂಡ ಆಕೆ ಆ ಬಿಲ್ಡಿಂಗ್ ನಲ್ಲಿ ಬಚ್ಚಿಟ್ಟುಕೊಂಡಳು. ಆತಂಕಗೊಂಡಿದ್ದ ಆಕೆಗೆ ಗಾಡಿಯ ನಂಬರ್ ಅನ್ನು ಸಹ ಬರೆದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಎರಡನೇ ಘಟನೆ ಮಂಗಳವಾರ ಬೆಳಿಗ್ಗೆ ಅಲಸೂರಿನಲ್ಲಿ, ಒಬ್ಬ ತರುಣಿಯನ್ನು ಹೋಂಡಾ ಕಾರಿನಲ್ಲಿ ಬಂದ 4 ಮಂದಿಗಳಿದ್ದ ಗುಂಪೊಂದು ದಾಳಿ ಮಾಡಿದರು. ಅವಳ ಬ್ಯಾಗ್ ನ್ನು ಪರಿಶೀಲಿಸಿ, ಆಕೆ ಧರಿಸಿದ್ದ ಪಾಶ್ಚಾತ್ಯ ಉಡುಗೆಗೆ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಆಕೆಯ ಕಿವಿ, ಕತ್ತಿಗೆ ಪರಚುವಂತಹ ಅಮಾನುಷ ಕೃತ್ಯವನ್ನೆಸಗಿದರು. ಸೇನೆಯಲ್ಲಿ ಕೆಲಸ ಮಾಡುವ ಕೆಲವು ವ್ಯಕ್ತಿಗಳು ಆಕೆಯನ್ನು ರಕ್ಷಿಸಿಲ್ಲದಿದ್ದರೆ, ಏನು ಮಾಡುತ್ತಿದ್ದರೋ ಈ ಗೂಂಡಾಗಳು?

ಅದೇ ದಿನ, ರಾತ್ರಿ 9 ಘಂಟೆ ಸಮಯದಲ್ಲಿ, ಮೌಂಟ್ ಕಾರ್ಮೆಲ್ ಕಾಲೇಜಿನಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದಂತಹ ಚಿತ್ರ ನಿರ್ಮಾಪಕಿಯೊಬ್ಬಳನ್ನು 4 ವ್ಯಕ್ತಿಗಳ ಗುಂಪೊಂದು ಥಳಿಸಿದೆ. ಇಲ್ಲಿಯೂ ಕೂಡ ಆಕೆ ಧರಿಸಿದ್ದ ಪಾಶ್ಚಾತ್ಯ ಉಡುಗೇನೆ ಕಾರಣವಾಗಿತ್ತು ಎಂದಾಕೆ ಹೇಳಿರುವುದು ನಿಜಕ್ಕೂ ದಿಗ್ಬ್ರಮೆಯನ್ನುಂಟು ಮಾಡಿದೆ. ಈಗಾಗಲೇ ಮೊದಲೀರ್ವರೂ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ರೆಸ್ಟ್ ಹೌಸ್ ರಸ್ತೆಯ ಗಝಲರ್ಸ್ ಎಂಬ ಪಬ್ ಬಳಿ ನಿಂತಿದ್ದ ಮಹಿಳೆಯರು ಅತಿವೇಗವಾಗಿ, ನಿರ್ಲಕ್ಷ್ಯತನದಿಂದ ಬರುತ್ತಿದ್ದ ಹೋಂಡಾ ಕಾರಿನವರನ್ನು (KA-51 TR-2767) ಪ್ರಶ್ನಿಸಿದ್ದಕ್ಕೆ, ಕಾರಿನಲ್ಲಿದ್ದ 4-5 ಪುರುಷರು ಈ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯರಲ್ಲಿ ಒಬ್ಬರಾದ ರಶ್ಮಿ ಸಮಾಕ(40) ಹೇಳಿದ್ದೇನೆಂದರೆ “ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ನಮ್ಮ ಕೂದಲನ್ನು ಹಿಡಿದೆಳೆದು, ನಮ್ಮನ್ನು ಹಿಡಿಯಲು ಪ್ರಯತ್ನ ಮಾಡಿದರು. ಜೊತೆಯಲ್ಲಿದ್ದ ನನ್ನ ಗಂಡ (ಅರವಿಂದ್) ಮತ್ತು ಇತರ ಪುರುಷರ ವಿರೋಧವನ್ನು ಲೆಕ್ಕಿಸದೆ ನಮ್ಮ ಮೇಲೆ ಹಲ್ಲೆ ಮಾಡಿದರು. ಮಹಿಳೆಯರ ಮೇಲೆ ದಾಳಿ ಮಾಡುವುದೇ ಅವರ ಉದ್ದೇಶದಂತಿತ್ತು".

ಪ್ರಿಯಾ ಜಾರ್ಜ್ (38), ತುಂಬಾ ಹಲ್ಲೆಗೊಳಗಾದ ಮಹಿಳೆ ಹೇಳಿದ್ದೇನೆಂದರೆ “ಹೇಳಲಿಕ್ಕೆ ಮುಜುಗರವಾಗುವಂತಹ ಭಾಗಗಳಿಗೆ ಪೆಟ್ಟು ಬಿದ್ದಿದೆ ಹಾಗೂ ಅವರ ಉದ್ದೇಶವೇ ಮಹಿಳೆಯರ ಮೇಲಿನ ಹಲ್ಲೆಯಾಗಿತ್ತು".ಗುಂಪಿನಲ್ಲಿ ಇತರ ಗಂಡಸರು ವಿರೋಧಿಸಿದರೂ ಈ ಗೂಂಡಗಳ ಶಕ್ತಿಯ ಮುಂದೆ ಅವರು ತಲೆ ಬಾಗಲೇ ಬೇಕಾಯಿತು. ಹಾಗೆಯೇ ವೀಕ್ಷಿಸುತ್ತಿದ್ದ ಮಂದಿಯೂ ಕೂಡ ಯಾರೂ ನೆರವಿಗೆ ಧಾವಿಸಲಿಲ್ಲ. ಮೊದಲಿಗೆ ನಾಲ್ಕೇ ಮಂದಿಯಿದ್ದ ಆ ತಂಡದಲ್ಲಿ ಸ್ವಲ್ಪ ಹೊತ್ತಿನಲ್ಲಿ ಬಹು ಜನರು ಸೇರಿದರು. ಹಾಗಾಗಿ ಎಲ್ಲರೂ ಅಸಹಾಯಕ ಸ್ಥಿತಿಯಲ್ಲಿದ್ದರು. ಹಲ್ಲೆ ನಡೆಸಲು ನಿಶ್ಚಯಿಸಿದ್ದ ಈ ಗೂಂಡಾಗಳು ಯಾವುದು ಸಿಗುತ್ತದೆಯೋ ಅಂದರೆ ಕಲ್ಲುಗಳನ್ನೆಲ್ಲಾ ಮಂದಿಯನ್ನು ಥಳಿಸಲು ಉಪಯೋಗಿಸಿದ್ದಾರೆ. ಅವರ ಗುರಿ ಮಾತ್ರ ಮಹಿಳೆಯರೇ ಆಗಿದ್ದರು ಎಂದು ಹೇಳಿದರು ಪ್ರತ್ಯಕ್ಶದರ್ಶಿಯಾಗಿದ್ದ ಅಲನ್ ಡೇವಿಡ್ ರಿಚಿ

ಆ ಕರಾಳ ರಾತ್ರಿಯನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ ಹಲ್ಲೆಗೊಳಗಾದ ಹನ್ನೆರಡು ವ್ಯಕ್ತಿಗಳಿದ್ದ ಈ ಗುಂಪಿಗೆ. ರವಿ ಎನ್ನುವ ಕಾರ್ ಮಾಲೀಕನನ್ನು ಗುರುತಿಸಲಾಗಿದ್ದು, ಈ ವ್ಯಕ್ತಿ ಯ ಮೇಲೆ ದೂರನ್ನು ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಕಳೆದ ಶನಿವಾರ ರಾತ್ರಿ 10.30 ಗಂಟೆಗೆ ಸಂಜನಾ (28) ಎಂಬ ಮಹಿಳಾ ಪತ್ರಕರ್ತೆಯೊಬ್ಬಳು ವಸಂತ ನಗರದಲ್ಲಿ ಆಟೋರಿಕ್ಷಾವನ್ನು ಹತ್ತುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಪುರುಷರು ಆಕೆಯ ಗಲ್ಲಕ್ಕೆ ಗುದ್ದಿ ದವಡೆಯನ್ನು ಘಾಸಿಗೊಳಿಸಿದ್ದಾರೆ. ಆಕೆ ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡು ಆ ಬೈಕಿನ ಸಂಖ್ಯೆಯನ್ನು ಬರೆದುಕೊಳ್ಳುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯು ಕೆಲಸದಿಂದ ಹಿಂತಿರುಗುತ್ತಿದ್ದಾಗ ನಡೆದ ಘಟನೆ ಇದಾಗಿದೆ. ಆಕೆಯಿಂದ ಏನನ್ನೂ ಕದ್ದೊಯ್ಯಲು ಈ ಆರೋಪಿಗಳು ಪ್ರಯತ್ನಿಸಿಲ್ಲ ಹಾಗೂ ಹಲ್ಲೆ ನಡೆಸಿದ ಕಾರಣವೂ ಗೊತ್ತಿಲ್ಲ. ಈಗ ಈ ಮಹಿಳೆಯು ಸಹ ಹೈ ಗ್ರೌಂಡ್ಸ್ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳು ನಮ್ಮ ಕರ್ನಾಟಕವನ್ನು ನಿರ್ಭಯ ಕರ್ನಾಟಕವನ್ನಾಗಿ ಮಾಡಲು ಮತ್ತು ಮಹಿಳೆಯರಿಗೆಸುರಕ್ಷತೆಯ ಜಾಗೃತಿಯನ್ನು ಹಾಗೂ ಸಾರ್ವಜನಿಕರಿಗೆ ಅದರ ಅರಿವನ್ನು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದೆ ಬಂದಿದ್ದಾರೆ.
ಮಂಗಳೂರಿನಲ್ಲಿ ನಡೆದ ದಾಳಿಗಳನ್ನು ಅವಲೋಕಿಸಿದಾಗ (ಕೊನೆಯದಾಗಿ ಗಮನಕ್ಕೆ ಬಂದ ಪ್ರಕರಣವೆಂದರೆ ಫೆಬ್ರವರಿ 24, 2009), ಮಹಿಳೆಯರನ್ನು ಸಂಸ್ಕೃತಿ, ನೈತಿಕತೆ ಮತ್ತು ಸಮಾಜದ ಅವನತಿಗೆ ಕಾರಣಕರ್ತರೆಂಬಂತೆ ಬಿಂಬಿಸುತ್ತಿರುವುದು ನಿಜಕ್ಕೂ ಶೋಚನೀಯ. ಬೆಂಗಳೂರಿನಲ್ಲಿಯೂ ಹುಡುಗಿಯರು ಜೀನ್ಸ್ ಪ್ಯಾಂಟ್, ತೋಳಿಲ್ಲದ ಶರ್ಟ್ ಗಳನ್ನು ತೊಟ್ಟಿದ್ದಾರೆಂದು ಹಾಗೂ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರೆಂಬ ಕಾರಣಗಳನ್ನು ಕೊಟ್ಟು ಅವರ ಮೇಲೆ ಹಲ್ಲೆಗಳನ್ನು ನಡೆಸಲಾಗಿದೆ. ಈ ಅನಾಚಾರಗಳನ್ನು ನೋಡಿದಾಗ ಈ ಘಟನೆಗಳು ಮಂಗಳೂರು ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ನಡೆದ ದಾಳಿಗಳ ಮುಂದುವರಿದ ಭಾಗದಂತಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಬೇರೆ ಬೇರೆಯೇ ಹೊರತು ಉದ್ಧೇಶ ಮಾತ್ರ ಒಂದೇ ಆಗಿದೆ.

ಮಹಿಳೆಯರ ಮೇಲಿನ ಈ ದೌರ್ಜನ್ಯವನ್ನು ಖಂಡಿಸುತ್ತಾ ಹಾಗೂ ಮಹಿಳೆಯರಿಗೆ ನಿರ್ಭಯದ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ಈ ಕೆಳಗಿನಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1. ಮಾರ್ಚ್ 7, 2009 ರಂದು ಎಲ್ಲಾ ಪ್ರತಿನಿಧಿಗಳೊಂದಿಗೆ ಮಾನ್ಯ ಶ್ರೀಅಜಯ್ ಕುಮಾರ್ ಸಿಂಗ್, DGP, IGPಯವರ ಕಚೇರಿಗೆ ದೂರು ದಾಖಲಿಸಲು ಪ್ರತಿಭಟನಾ ಜಾಥವನ್ನು ಹಮ್ಮಿಕೊಳ್ಳಲಾಗಿದೆ.

2. ಮಾರ್ಚ್ 8, 2009 ರಂದು ( 9:00pm To 11:00pm) BMTC ನಿಲ್ದಾಣದ(ಮೆಜೆಸ್ಟಿಕ್) ಬಳಿ ರಾತ್ರಿ ಎಲ್ಲಾ ಪ್ರತಿನಿಧಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

3. ಸಾರ್ವಜನಿಕರಿಗೆ ಭಿತ್ತಿ ಪತ್ರಗಳ ಮೂಲಕ ಮಹಿಳಾ ದೌರ್ಜನ್ಯದ ಅರಿವನ್ನು ಮೂಡಿಸುವುದು, ಇದಲ್ಲದೆ, ಹಸ್ತಾಕ್ಷರ ಅಭಿಯಾನ, ಕಲಾ ಚಿತ್ರಣ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವುಗಳೆಲ್ಲರೂ ಪಾಲ್ಗೊಂಡು, ಇದನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯ ಮನವಿ.
ನಿಮಗೆ ಈ ವಿಷಯಗಳ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಲೀ ಅಥವಾ ಕಾನೂನು ಮಾಹಿತಿಗಳಿಗೆ http://baware.in/ ನ್ನು ಸಂಪರ್ಕಿಸಿ. ಹಾಗೂ ನಿಮ್ಮ ಪರಿಚಯಸ್ಥರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+