ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳ್ವಾ ಸ್ ನುಡಿಸಿರಿಗೆ ವಿದ್ಯುಕ್ತ ಚಾಲನೆ

By Staff
|
Google Oneindia Kannada News

ಆಳ್ವಾಸ್ ನುಡಿಸಿರಿ 2008 ಮೂಡುಬಿದಿರೆಯಲ್ಲಿ ಶುಕ್ರವಾರ ಆರಂಭಗೊಂಡಿತು. ಕನ್ನಡ ಮನಸ್ಸು, ಶಕ್ತಿ ಮತ್ತು ವ್ಯಾಪ್ತಿ ಎಂಬ ಪರಿಕಲ್ಪನೆಯ ಸಮ್ಮೇಳನ ಮುಂದಿನ ಮೂರು ದಿನಗಳ ಕಾಲ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಲಿದೆ. ಈ ಬಾರಿಯ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ನಾಡೋಜ ಡಾ.ಚೆನ್ನವೀರ ಕಣವಿ ವಹಿಸಿದ್ದಾರೆ.

*ಶ್ರೀನಿಧಿ ಡಿ.ಎಸ್ , ಮೂಡಬಿದಿರೆ

ಬೆಳಗ್ಗೆ ಉದ್ಘಾಟನಾ ಸಮಾರಂಭದ ಅಂಗವಾಗಿ ಮೆರವಣಿಗೆ ಜರುಗಿತು. ಕರ್ನಾಟಕದ ವಿವಿಧ ಜಾನಪದ ಕಲೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನುಡಿಸಿರಿಯ ಅಧ್ಯಕ್ಷ ನಾಡೋಜ ಚೆನ್ನವೀರ ಕಣವಿಯ ಅವರನ್ನು ಮೆರವಣಿಗೆಯಲ್ಲಿ ವೇದಿಕೆ ಕರೆತರಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ರದಾಯಿಕ ಶೈಲಿಯಲ್ಲಿ- ಭತ್ತದ ತೆನೆಗಳಿಗೆ ಹಾಲು ಸುರಿಯುವ ಮೂಲಕ ನುಡಿಸಿರಿ ಆರಂಭಗೊಂಡಿತು. ನಿತ್ಯೋತ್ಸವ ಕವಿ ನಿಸಾರ ಅಹಮದ್ ಉದ್ಘಾಟನಾ ಭಾಷಣ ಮಾಡಿದರು. ಕನ್ನಡ ಭಾಷೆಯನ್ನು ಇಂಗ್ಲೀಷ್ ಹಾಳುಗೆಡವುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಕನ್ನಡದ ಹಿರಿಮೆ ಉಳಿಸಬೇಕಾಗಿದೆ ಎಂದು ಹೇಳಿದರು.

alvas nudisi 2008
ಸಮ್ಮೇಳನದ ಅಧ್ಯಕ್ಷ ಚೆನ್ನವೀರ ಕಣವಿ ಮಾತನಾಡಿ, ಕನ್ನಡದ ಹಿರಿಯ ಚೇತನಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಸಮೃದ್ಧಗೊಳಿಸಿದ್ದಾರೆ. ಇವರಿಂದಾಗಿ ಕನ್ನಡಿಗರ ಬದುಕು ಸತ್ವಪೂರ್ಣವಾಗಿದೆ ಎಂದರು. ಇತ್ತೀಚೆಗೆ ಕನ್ನಡಕ್ಕೆ ದೊರಕಿದ ಶಾಸ್ತ್ರೀಯ ಸ್ಥಾನಮಾನದ ಕುರಿತು ಮಾತನಾಡುತ್ತ, ಕನ್ನಡ ಭಾಷೆಯ ಪದೋಭಿವೃದ್ಧಿಗೆ ತಜ್ಞರು ತಕ್ಕ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಕಣವಿ ಅಭಿಪ್ರಾಯಪಟ್ಟರು.

ಇಂದಿನ ಕವಿ ಸಮಯ - ಕವಿ ನಮನದಲ್ಲಿ ಮಮತಾ ಜಿ.ಸಾಗರ್ ಮತ್ತು ರಾಧಾಕೃಷ್ಣ ಉಳಿಯತ್ತಡ್ಕ ಮತ್ತು ಅಬ್ದುಲ್ ರಶೀದ್ ಭಾಗವಹಿಸಿದ್ದರು. ನಂತರ ನಡೆದ ಕನ್ನಡ ಭಾಷೆ- ಶಕ್ತಿ ಮತ್ತು ವ್ಯಾಪ್ತಿ ವಿಚಾರ ಗೋಷ್ಠಿಯಲ್ಲಿ ಡಾ.ಚಂದ್ರಶೇಖರ ನಂಗಲಿ ಮತ್ತು ಪುರುಸೋತ್ತಮ ಬಿಳಿಮಲೆ ನಡೆಸಿಕೊಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X