ಶಿವಮೊಗ್ಗ ಅಂದ್ರೆ ಏನು? ಈ ಬಗ್ಗೆ ನಿಮಗೆಷ್ಟು ಗೊತ್ತು?


ಶಿವಮೊಗ್ಗ : ಅಂದ ಹಾಗೇ, ಶಿವಮೊಗ್ಗ ಎನ್ನುವ ಹೆಸರು ರೂಢಿಗೆ ಬಂದ ಬಗೆ ನಿಮಗೆ ಗೊತ್ತೆ? ಈ ನೆಲದಲ್ಲಿ ಸಮ್ಮೇಳನದ ಸಂಭ್ರಮ ಮೇಳೈಸಿದೆ. ಈ ಬೆನ್ನಲ್ಲಿಯೇ ಸ್ಥಳ ಪುರಾಣ ತಿಳಿದುಕೊಳ್ಳೋಣ ಬನ್ನಿ.

ಶಿವನ ಮುಖ ಅಂದರೆ; ಶಿವಮುಖ ಎಂಬುದು ಶಿವಮೊಗವಾಯಿತು, ನಂತರ ಶಿವಮೊಗ್ಗವಾಯಿತು ಎನ್ನುತ್ತದೆ ಸ್ಥಳಪುರಾಣ. ಇನ್ನೊಂದು ಮೂಲದ ಪ್ರಕಾರ, ಸಿಹಿಮೊಗೆ(ಸಿಹಿಯಾದ ಪಾತ್ರೆ) ಆಂಗ್ಲರ ಬಾಯಲ್ಲಿ ಶಿವಮೊಗ್ಗವಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸ್ಥಳಗಳು : ಗಾಜನೂರು, ತುಂಗಾ ನದಿ, ಜೋಗ ಜಲಪಾತ, ಆಗುಂಬೆ, ಶರಾವತಿ, ಕೊಡಚಾದ್ರಿ, ತೀರ್ಥಹಳ್ಳಿ ಇತ್ಯಾದಿ ಇತ್ಯಾದಿ.

ಈ ನೆಲದಿಂದ ಉದಯಿಸಿದ ಪ್ರಮುಖರು : ಕುವೆಂಪು, ಯು. ಆರ್‌.ಆನಂತಮೂರ್ತಿ, ಪಿ.ಲಂಕೇಶ್‌, ಹಾ.ಮಾ.ನಾಯಕ್‌, ಕೆ.ವಿ.ಸುಬ್ಬಣ್ಣ, ಎಸ್‌.ಬಂಗಾರಪ್ಪ, ಬಿ.ಎಸ್‌.ಯಡಿಯೂರಪ್ಪ, ಜೆ.ಎಚ್‌.ಪಟೇಲ್‌, ಕಡಿದಾಲ್‌ ಮಂಜಪ್ಪ, ಕೆ.ಎಸ್‌.ಈಶ್ವರಪ್ಪ, ಬಿ.ಎಸ್‌.ಯಡಿಯೂರಪ್ಪ, ಪೂರ್ಣ ಚಂದ್ರ ತೇಜಸ್ವಿ, ಎಂ.ಕೆ.ಇಂದಿರಾ, ಎಸ್‌.ವಿ.ಪರಮೇಶ್ವರ ಭಟ್ಟ, ಶಿವಮೊಗ್ಗ ಸುಬ್ಬಣ್ಣ, ಗಿರೀಶ್‌ ಕಾಸರವಳ್ಳಿ ಮತ್ತಿತರರು.

ಗಮನ ಸೆಳೆದ ಗ್ರಾಮಗಳು : ಈಸೂರು (ಶಿಕಾರಿಪುರ ತಾ.), ಮತ್ತೂರು (ಶಿವಮೊಗ್ಗ ತಾ.), ಹೆಗ್ಗೋಡು (ಸಾಗರ ತಾ.), ಆಗುಂಬೆ ಮತ್ತು ಕುಪ್ಪಳ್ಳಿ(ತೀರ್ಥಹಳ್ಳಿ ತಾ).

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+