ಆತ್ಮ ಸಂಗಾತಕ್ಕೆ ಅವನುಂಟೆ ?
- ಸಂಘಮಿತ್ರ
ಈವ್- ಆ್ಯಡಮ್
ಗಂಡು- ಹೆಣ್ಣಿನ ಅವಿನಾಭಾವ ಸಂಬಂಧ ಸಾಧ್ಯವೆ ? ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಾಣಲುಂಟೆ ?
ಗಂಡು ಹೆಣ್ಣಿನ ಸಂಬಂಧದಲ್ಲಿ ಒಂದು ಅಂತರ್ಗತ ವಿಷಮತೆ ಇದೆ ಅಂತ ನಿಮಗೆ ಯಾವಾಗಲಾದರೂ ಅನ್ನಿಸಿದ್ದಿದೆಯೆ ?
ಪ್ರಜ್ಞಾವಂತ ಲೇಖಕಿಯರು, ಕತೆಗಾರ್ತಿಯರು, ವಿಮರ್ಶಕರು, ಕವಿಯತ್ರಿಯರು ಸೇರಿದ್ದ ಕಡೆ ಹೀಗೊಂದು ಕೈಬಾಂಬ್ ಒಗೆದಾಗ ಎದ್ದ ಹೊಗೆ- ನಗೆ ಇಲ್ಲಿದೆ.
*
ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಗಂಡು-ಹೆಣ್ಣಿನ ಜೋಡಿಯಿಂದ ಜೋಡಿಗೆ ಇದು ಬದಲಾಗುತ್ತೆ ಅನ್ನಿಸುತ್ತೆ. ಹೆಣ್ಣಿನ ಬೌದ್ಧಿಕ ಮೇಲ್ಮೆಯನ್ನು ಒಪ್ಪಿಕೊಳ್ಳಲಾರದ ಕೃಪಣತೆ, ಆಕೆಯ ಕಾರ್ಯಕ್ಷಮತೆ, ಸಾಮರ್ಥ್ಯಗಳ ವಿನ್ಯಾಸ ಅರ್ಥಮಾಡಿಕೊಳ್ಳದ ಹುಂಬತನ, ನಾನು ಉಪದೇಶಿಸುತ್ತೇನೆ- ನೀನು ಕೇಳಿಕೊ ಎಂಬ ಧಾಷ್ಟ್ಯ ಇನ್ನೂ ಗಂಡಸಿನಲ್ಲಿದೆ. ನಾನು ವಿವಾಹಿತೆಯಲ್ಲದ ಕಾರಣ ನನಗೆ ಇದರ ಬಿಸಿ ತಟ್ಟದೇ ಇರಬಹುದು. ಆದರೆ ನನ್ನ ಸ್ನೇಹಿತೆಯರು- ಬಂಧು ವರ್ಗದವರು ಕಂಡುಕೊಂಡಿರುವ ಪ್ರಕಾರ ವಿಷಮತೆಯ ಸೂಕ್ಷ್ಮರೇಖೆ ಇದೆ. ಇದ್ದೇ ಇದೆ. ಗಂಡಸರು ಅವರ ಬುದ್ಧಿ ಬಿಡೊಲ್ಲ ! ಎಂಬ ಅಭಿಪ್ರಾಯವೇ ಗಾಳಿಯಲ್ಲಿ ಅಲೆದಾಡುತ್ತದೆ.
- ಡಾ.ಬಿ.ಎನ್. ಸುಮಿತ್ರಾಬಾಯಿ
ಸಂಸ್ಕೃತ ಅಧ್ಯಾಪಕಿ, ವಿಮರ್ಶಕಿ
*
ವಿಷಮತೆ ಇಲ್ಲ . ಸಂಬಂಧದ ಯಶಸ್ಸು ವ್ಯಕ್ತಿಗಳನ್ನು ಆಧರಿಸಿರುವುದರಿಂದ ಪರಸ್ಪರ ಅಭಿರುಚಿ, ಆಸಕ್ತಿಗಳನ್ನು ಗೌರವಿಸುವ ಗಂಡು-ಹೆಣ್ಣಿನದು ಆದರ್ಶ ಸ್ನೇಹ- ಪ್ರೀತಿಯಾಗಿರಲು ಸಾಧ್ಯ.
- ಡಾ.ಎಲ್.ಸಿ. ಸುಮಿತ್ರಾ
ಕನ್ನಡ ಅಧ್ಯಾಪಕಿ, ವಿಮರ್ಶಕಿ
*
ಹೆಣ್ಣನ್ನು ಸಮಾನ ಧರ್ಮದಿಂದ ನಡೆಸಿಕೊಳ್ಳಲು ಬಲ್ಲ ಪುರುಷರು ಇಲ್ಲ ಅಂತೇನಲ್ಲ . ಅವರ ಸಂಖ್ಯೆ ಬಹಳ ಕಡಿಮೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣ್ಣು ಲಿಬರೇಟೆಡ್ ಆಗಿದ್ದಾಳೆ ಅಂದುಕೊಳ್ತೀವಿ. ಆದರೆ ಅಲ್ಲೂ ಅವರಿಗೆ ಸಮಸ್ಯೆಗಳಿವೆ. ಅವರಿಗೇ ವಿಶಿಷ್ಟವಾದ ಸಮಸ್ಯೆಗಳು.
- ವೀಣಾ ಶಾಂತೇಶ್ವರ
ಸಾಹಿತಿ, ಪ್ರಾಂಶುಪಾಲರು
*
ಗಂಡು-ಹೆಣ್ಣಿನ ಸಂಬಂಧ ಅಂತಾನೇ ಅಲ್ಲ . ಒಂದೇ ಸೂರಿನಡಿ ದೀರ್ಘ ಕಾಲ ಜೀವಿಸುವ ಯಾವುದೇ ಆಪ್ತ ನಂಟಿನಲ್ಲೂ ಈ ವಿಷಮತೆಯ ಎಳೆ ಗೋಚರಿಸುತ್ತದೆ ಅಂತ ನನ್ನ ಭಾವನೆ. ಉದಾಹರಣೆಗೆ ಹದಿಹರೆಯದ ಮಗಳು ತಾಯಿಯನ್ನೇ ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುವ ಸಂಗತಿ. ಅಧಿಕಾರ, ಆಸ್ತಿಯ ಕಾರಣ ಅಪ್ಪ- ಮಗನಲ್ಲಿ ಏರ್ಪಡುವ ಬಿರುಕು. ಬಲಿಷ್ಠವಾಗಿರುವ ದೊಡ್ಡ ಮಂಗ ವಿನಾಕಾರಣ ಸಣ್ಣದರ ಕಾಲು ಹಿಡಿದು ತಿರುಚುವುದು... ಹೀಗೆ.
- ಸ. ಉಷಾ
ಕನ್ನಡ ಅಧ್ಯಾಪಕಿ, ಕವಿ
*
ಇದೆಯಮ್ಮಾ ಇದೆ. ವಿದ್ಯೆ, ಬುದ್ಧಿ , ಸಂಸ್ಕಾರ ಎಲ್ಲ ಮೀರಿ ಗಂಡಸಿನಲ್ಲಿರುವ ‘ಅಹಂ’ ಕುಂಡಲಿನಿಯ ಹಾಗೆ ಇದ್ದಕ್ಕಿದ್ದ ಹಾಗೆ ಜಾಗೃತವಾಗಿಬಿಡುತ್ತೆ . ಎಷ್ಟೇ ಸಹಕಾರ ಕೊಡ್ತೀವಿ ಅಂತ ಮಾತಾಡಿದರೂ ಗಂಡಸಿಗೆ ಹೆಣ್ಣನ್ನು ಸಮಾನತೆಯಿಂದ ನಡೆಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ .
- ಡಾ. ಸುನೀತಿ ಶೆಟ್ಟಿ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥೆ
*
ಎಲ್ಲಿಯತನಕ ನಾವು ವಿಧೇಯರಾಗಿ ನಿನ್ನದೇ ನನ್ನದು ಅನ್ನುವ ಮನೋಭಾವನೆಯಿಂದ ಇರುತ್ತೇವೆಯೋ ಅಲ್ಲಿಯತನಕ ಎಲ್ಲ ಚೆನ್ನ. ಒಂದು ಸಾರಿ ನಾನು, ನನ್ನದು, ನನ್ನ ಸಾಧನೆ ಅಂತ ಆರಂಭವಾದ ಕೂಡಲೆ ಈ ವಿಷಮತೆ ಅಥವಾ ಒಡಕು ಕಾಣಿಸುತ್ತದೆ. ಈ ಒಡಕನ್ನು ಕೆಲವರು ಕಂಡುಕೋತಾರೆ, ಕೆಲವರು ಕಂಡೂ ಕಾಣದಂತಿರುತ್ತಾರೆ !
ಎಚ್.ಎಲ್.ಪುಷ್ಪ
ಕನ್ನಡ ಅದ್ಯಾಪಕಿ, ಕವಿ
(ಸ್ನೇಹಸೇತು : ವಿಜಯ ಕರ್ನಾಟಕ)
ವಾದ ವಿವಾದ ಕೇಳಿದ್ರಲ್ಲಾ , ನೀವೇನಂತೀರಿ ?
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications