ಮಳೆಯ ನೆನಪು

ಚಿಂತಾಮಣಿ ಕೊಡ್ಲೆಕೆರೆ, ಬೆಂಗಳೂರು
Nenapugala Maleಹಿರೇಗುತ್ತಿಯ ಮನೆ. ಎಳವೆಯಲ್ಲಿ ನನಗಾಗ
ಅದು ಇಡೀ ಜಗತ್ತಿನ ಕೊನೆ. ಕಂಬಳಿಯ ಹೊದ್ದು
ನೇಗಿಲಿಗೆ ಎತ್ತುಗಳ ಹೂಡಿ ಸೆಳೆಯನು ಹಿಡಿದು
ಹೇರೇರೆ ಎಂದು ರಾಗವಾಗಿ ತುಳಸು ಅಪ್ಪ
ಗದ್ದೆ ಹೂಡುವನು. ಗದ್ದೆ ಈ ಬದಿಯಲಿ ತುಳಸು
ಆಡುವನು. ಮಳೆಯೂ- ಬಿಡದೆ ಸುರಿಯುತಲೆ ಇರುವುದು

ಮುಂಜಾನೆ ಶಾಲೆ ಮುಗಿಸಿದ ನಮಗೆ ನಮ್ಮಮ್ಮ
ಹಾಲು ಕೊಡುವಳು. ತಿನಲು ಗೋಧಿ ಹಪ್ಪಳ ಉಂಟು
ಮನೆ ಇದಿರ ಇಳುಕಲಲಿ ಸಿಹಿನೀರ ಝರಿಯಾಂದು
ಮುದ್ದಾಗಿ ಉಕ್ಕುತಿದೆ. ಹೊಸಹಸಿರು ಪಾಗಾರ
ಕಲ್ಲುಗಳ ನಡುವೆಯೂ. ‘ಮಳೆಯಲ್ಲಿ ನೆನೆಯಬೇ-
ಡಿರೊ’- ಅಮ್ಮ ಗದರುವಳು ಅಡಿಗೆ ಮನೆ ಒಳಗಿಂದ.

‘ಮಳೆಯಲ್ಲಿ ನಾವು ನೆನೆದವೆ?’ ‘ಮಳೆಯೆ ನೆನೆಯಿಸಿತು’ !
ಈ ಮಳೆಯೆ ನಮಗಿಂಥ ಮಾತುಗಳನು ಕಲಿಸಿತು.

ಮುಖಪುಟ / ಮೇಘ ಮಲ್ಹಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+