ಮಾ. 14ರಿಂದ ಬಾಳೆಹೊನ್ನೂರಿನಲ್ಲಿ ಚುಟುಕು ಮೇಳ
ಚಾಮರಾಜ ನಗರ: ಮಾರ್ಚ್ 14ರಿಂದ ಎರಡು ದಿನಗಳ ಚುಟುಕು ಸಾಹಿತ್ಯ ಸಮ್ಮೇಳನ ಬಾಳೆ ಹೊನ್ನೂರಿನಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಸಿಪಿಕೆ ವಹಿಸುವರು. ಹಿರಿಯ ಸಾಹಿತಿ , ಸ್ವಾತಂತ್ರ್ಯ ಹೋರಾಟಗಾರ ಕೈಯ್ಯಾರ ಕಿಞಣ್ಣ ರೈ ಸಮಾವೇಶವನ್ನು ಉದ್ಘಾಟಿಸುವರು ಎಂದು ಪರಿಷತ್ತಿನ ಪ್ರಧಾನ ಸಂಚಾಲಕ ಡಾ. ಎಂ. ಜಿ. ಆರ್. ಅರಸ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಅಂಗವಾಗಿ ಚುಟುಕು ಶ್ರೀ ಪ್ರಶಸ್ತಿಗಾಗಿ ಸ್ಪರ್ಧೆಯನ್ನೂ ನಡೆಸಲಾಗುವುದು. ವಿಜೇತರಿಗೆ ಎರಡು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು, ಅಲ್ಲದೆ ಈ ಬಾರಿ ವಿಶೇಷವಾಗಿ ಮಹಿಳಾ ಚುಟುಕು ಸಾಹಿತ್ಯ ಗೋಷ್ಠಿಯನ್ನೂ ವ್ಯವಸ್ಥೆಗೊಳಿಸಲಾಗಿದೆ ಎಂದು ಅರಸ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications