Get Updates
Get notified of breaking news, exclusive insights, and must-see stories!

ಹೊಸ ವರ್ಷ ಅಂತ ದಿಢೀರ್ ಮದ್ಯ ಸೇವನೆ ಆರಂಭಿಸಿದರೆ ಜೀವನವಿಡೀ ನರಳಬೇಕಾಗುತ್ತೆ ಹುಷಾರ್: ಇಲ್ಲಿದೆ ವಿವರ

Year Ender 2025: ಕುಡಿತ ಆರಂಭಿಸಲು ಹೊಸ ವರ್ಷದ ಸಂಭ್ರಮಾಚರಣೆಯನ್ನು ಒಂದು ನೆಪ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಆರಂಭದಲ್ಲಿ ಮೋಜಾಗಿ ಆರಂಭವಾಗುವ ಮದ್ಯಪಾನ ನಂತರದ ದಿನಗಳಲ್ಲಿ ಹವ್ಯಾಸ, ವ್ಯಸನವಾಗುತ್ತದೆ. ಅಪ್ರಾಪ್ತ ಹದಿಹರೆಯದವರು ಈ ವ್ಯಸನದ ಗೀಳು ಅಂಟಿಸಿಕೊಂಡರೆ ಆಗುವ ಅನಾಹುತಗಳು ಒಂದೆರೆಡಲ್ಲ. ಜೀವನ ಪರ್ಯಂತ ನರಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮದ್ಯವ್ಯಸನದಿಂದ ಉಂಟಾಗುವ 10 ಅಪಾಯಗಳ ಪಟ್ಟಿ ಇಲ್ಲಿ ನೀಡಲಾಗಿದೆ. ನೀವೂ ಓದಿ, ಇಂಥ ಆಲೋಚನೆಯಿದ್ದವರಿಗೂ ತಿಳಿಹೇಳಿ.

ಕೆಲವೇ ದಿನಗಳಲ್ಲಿ 2025ನೇ ವರ್ಷ ಮುಗಿದು 2026ನ ಹೊಸ ವರ್ಷ ಎಂಟ್ರಿ ಕೊಡಲಿದೆ. ಬಹುತೇಕ ಯುವಪೀಳಿಗೆಯವರು (ಯುವಕ, ಯುವತಿಯರು) ಈ ಹೊಸ ವರ್ಷವನ್ನು ಎಣ್ಣೆ ಪಾರ್ಟಿಯೊಂದಿಗೆ ಸ್ವಾಗತ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆದರೆ, ಇದರಿಂದ ಜೀವನವಿಡೀ ನರಳಬೇಕಾಗುತ್ತದೆ ಎನ್ನುವ ವಿಚಾರವನ್ನು ಗಮನದಲ್ಲಿಡಬೇಕಾಗುತ್ತದೆ. ಅದರಲ್ಲೂ ಪ್ರಮುಖ ಹೊಸದಾಗಿ ಈ ಫೀಲ್ಡ್‌ಗೆ ಎಂಟ್ರಿ ಕೊಡಬೇಕೆಂದು ಪ್ಲಾನ್‌ ಮಾಡಿಕೊಂಡಿರುವವರು ಈ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.

Year Ender 2025 10 major dangers of alcohol consumption

ಏನೆಲ್ಲಾ ಸಮಸ್ಯೆಗಳು ಬರುತ್ತವೆ?: ವೈದಕೀಯ ಮೂಲಗಳ ಪ್ರಕಾರ, ಒಮ್ಮೆ ಮದ್ಯಪಾನಕ್ಕೆ ಅಂಟಿಕೊಂಡುಬಿಟ್ಟರೆ, ಕುಡಿತದ ದಾಸರಾಗುವುದಂತೂ ಗ್ಯಾರಂಟಿ. ಮತ್ತೆ ಬಿಡುವುದು ತುಂಬಾ ಕಷ್ಟ. ಈ ಚಟಕ್ಕೆ ಬಿದ್ದು, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವುದಲ್ಲದೆ, ಸಾಲ ಮಾಡಿ ಕುಟುಂಬವನ್ನು ಸಹ ಬೀದಿಗೆ ತಂದಂತಹ ಉದಾಹರಣೆಗಳಿವೆ.

ಅತಿಯಾದ್ರೆ ಅಮೃತ ಕೂಡ ವಿಷ ಆಗುತ್ತದೆ ಎಂಬ ಮಾತಿದೆ. ಅದರಂತೆಯೇ ಮೋಜು ಮಸ್ತಿಗಾಗಿ ಬೆಳೆಸಿಕೊಂಡ ಮದ್ಯಪಾನ ಅಭ್ಯಾಸ ಕೊನೆಗೆ ಅದು ಇಲ್ಲದಿದ್ದರೆ, ಜೀವನವೇ ನಡೆಯೋದಿಲ್ಲ ಎಂಬ ಮಟ್ಟಕ್ಕೆ ಇಳಿದಿರುವವರನ್ನೂ ನೋಡಿಯೇ ಇರುತ್ತೇವೆ. ಇದು ಒಂದು ಕಡೆಯಾದ್ರೆ, ಮತ್ತೊಂದೆಡೆ ಇದರಿಂದ ಮಾರಕ ರೋಗಗಳಿಗೂ ತುತ್ತಾಗಿರುವವರು ಇದ್ದಾರೆ. ಹಾಗಾದ್ರೆ, ಯಾವೆಲ್ಲಾ ಅಪಾಯಗಳು ಎದುರಾಗಲಿವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಆಲ್ಕೋಹಾಲ್ ಸೇವನೆಯಿಂದ ಬರುವ 10 ಅಪಾಯಗಳು

* ಫ್ಯಾಟಿ ಲಿವರ್, ಹೆಪಟೈಟಿಸ್, ಸಿರೋಸಿಸ್ ಮೊದಲಾದ ಗಂಭೀರ ರೋಗಗಳು.
* ರಕ್ತದೊತ್ತಡ, ಹೃದಯಾಘಾತದ ಅಪಾಯ ಹೆಚ್ಚಳ
* ನೆನಪಿನ ಶಕ್ತಿ ಕಡಿಮೆಯಾಗಲಿದೆ.
* ಬಾಯಿ, ಕಂಠ, ಲಿವರ್, ಸ್ತನ ಮುಂತಾದ ಕ್ಯಾನ್ಸರ್‌ಗಳು ಬರುವ ಸಾಧ್ಯತೆ
* ಮಾನಸಿಕ ಆರೋಗ್ಯದ ಸಮಸ್ಯೆ: ಆತಂಕ, ಡಿಪ್ರೆಶನ್, ನಿದ್ರಾಹೀನತೆ
* ಜೀರ್ಣಾಂಗದ ಸಮಸ್ಯೆಗಳು: ಗ್ಯಾಸ್ಟ್ರಿಟಿಸ್, ಅಲ್ಸರ್, ಹೊಟ್ಟೆ ನೋವು.
* ರೋಗನಿರೋಧಕ ಶಕ್ತಿ ಕುಸಿತ: ಸೋಂಕುಗಳಿಗೆ ಬೇಗ ಗುರಿಯಾಗುದು.
* ವಾಹನ ಅಪಘಾತಗಳಿಗೆ ಕಾರಣವಾಗಬಹುದು. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
* ಕೌಟುಂಬಿಕ ಸಮಸ್ಯೆಗಳು: ಜಗಳಗಳು ಸಂಭವಿಸಿದ, ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ.
* ಗರ್ಭಧಾರಣೆಗೆ ತೀವ್ರ ಅಪಾಯ: ಹುಟ್ಟುವ ಮಗುವಿನ ಬೆಳವಣಿಗೆಗೆ ಹಾನಿ.

ನಿಯಮಿತ ಅಥವಾ ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತದೆ. ಸಮಸ್ಯೆ ಎದುರಿಸುತ್ತಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಆಗಿದೆ. ಇನ್ನೂ ಹೊಸ ವರ್ಷವನ್ನು ಮದ್ಯಪಾನದಿಂದ ಸ್ವಾಗತಿಸುವ ಬದಲಿಗೆ, ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಬೇಕಾಗಿರುವ ಹೊಸ ಯೋಜನೆಗಳೊಂದಿಗೆ ಬರಮಾಡಿಕೊಳ್ಳಿ.

ಹೊಸ ವರ್ಷ ಅಂದ್ರೇನೆ ಹೊಸತನ. ಆದ್ದರಿಂದ ಕಳೆದ ವರ್ಷದ ಕೆಟ್ಟ ನೆನಪುಗಳನ್ನೆಲ್ಲಾ ಕನಸು ಎಂದುಕೊಂಡು ಮರೆತು ಉತ್ತಮ ಆಲೋಚನೆಯೊಂದಿಗೆ ಹೊಸ ಜೀವನದ ಹಾದಿಯತ್ತ ನಡೆಯಿರಿ. ಆಗ ನಿಮ್ಮ ಜೀವನದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ 2026ನೇ ಹೊಸ ವರ್ಷ ಎಂಟ್ರಿ ಕೊಡಲಿದ್ದು, ಇದೇ ದೇಶವೇ ಇದನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ಭರ್ಜರಿ ಸಿದ್ಧತೆಗಳು ಸಹ ನಡೆದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+