ಕಚೇರಿಯ ಮೊದಲ ದಿನ ವೆಲ್‌ಕಮ್ ಕಿಟ್‌ನಲ್ಲಿ ಸಿಕ್ತು 'ಕಸದ ಚೀಲ'! ವಿಚಿತ್ರ ಗಿಫ್ಟ್ ಹಿಂದಿನ ಕಾರಣ ಕೇಳಿದ್ರೆ ನೀವೂ ಮೆಚ್ಚಿಕೊಳ್ತೀರಾ

ಯಾವುದೇ ಹೊಸ ಕಂಪನಿಗೆ ಕೆಲಸಕ್ಕೆ ಸೇರಿದಾಗ ಉದ್ಯೋಗಿಗಳಿಗೆ ವೆಲ್‌ಕಮ್ ನೀಡುವುದು ಈಗಿನ ಕಾರ್ಪೊರೇಟ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ಈ ಸ್ವಾಗತ ಕಿಟ್‌ನಲ್ಲಿ ಕಂಪನಿಯ ಲೋಗೋ ಇರುವ ಮಗ್, ನೋಟ್‌ಬುಕ್, ಪೆನ್, ವೋಚರ್‌ಗಳು ಅಥವಾ ಕೆಲವು ಬ್ರಾಂಡೆಡ್ ವಸ್ತುಗಳು ಇರುತ್ತವೆ. ಉದ್ಯೋಗಿಗಳು ಕೂಡ ಸಹಜವಾಗಿ ಇಂತಹ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆಗೆ ತನ್ನ ಹೊಸ ಕಚೇರಿಯ ಮೊದಲ ದಿನವೇ ದೊಡ್ಡ ಅಚ್ಚರಿಯೊಂದು ಕಾದಿತ್ತು. ಅವರಿಗೆ ಸ್ವಾಗತ ಕಿಟ್ ಆಗಿ ಸಿಕ್ಕಿದ್ದು ಬೇರೇನೂ ಅಲ್ಲ, ಬದಲಾಗಿ ಒಂದು 'ಕಸದ ಚೀಲ' ಮೇಲ್ನೋಟಕ್ಕೆ ಇದು ತೀರಾ ವಿಚಿತ್ರವೆನಿಸಿದರೂ, ಈ ಉಡುಗೊರೆಯ ಹಿಂದಿರುವ ಪ್ರಾಯೋಗಿಕತೆ ಮತ್ತು ಸುಸ್ಥಿರತೆಯ ಪಾಠ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಶಿಷ್ಟ ಅನುಭವವನ್ನು ಮನೀಷಾ ದುಬೆ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಉದ್ಯೋಗದಾತರು ನೀಡಿದ ಈ ಸರಳ ಹಾಗೂ ಅನಿರೀಕ್ಷಿತ ಉಡುಗೊರೆಯ ಬಗ್ಗೆ ಅವರು ವಿವರವಾಗಿ ಬರೆದುಕೊಂಡಿದ್ದಾರೆ. "ನನ್ನ ಹೊಸ ಕಚೇರಿಯು ನನಗೆ ಸ್ವಾಗತ ಕಿಟ್ ಆಗಿ ಕಸದ ಚೀಲವನ್ನು ನೀಡಿದೆ. ನಾನೇನು ತಮಾಷೆ ಮಾಡುತ್ತಿಲ್ಲ, ಇದು ನೂರಕ್ಕೆ ನೂರು ನಿಜ," ಎಂದು ಮನೀಷಾ ತಮ್ಮ ಪೋಸ್ಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Garbage Bag

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಸುಸ್ಥಿರತೆ ಬಗ್ಗೆ ದೊಡ್ಡದಾಗಿ ಮಾತನಾಡುತ್ತವೆ. ಆದರೆ, ಕಾರ್ಯರೂಪಕ್ಕೆ ಬಂದಾಗ ಮತ್ತೆ ಅದೇ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮತ್ತು ಒಮ್ಮೆ ಬಳಸಿ ಬಿಸಾಡುವ ವಸ್ತುಗಳನ್ನೇ ಉಡುಗೊರೆಯಾಗಿ ನೀಡುತ್ತವೆ. ಈ ಬಗ್ಗೆಯೂ ಮನೀಷಾ ಗಮನ ಸೆಳೆದಿದ್ದಾರೆ. "ನನಗೆ ಯಾವುದೇ ಗಿಫ್ಟ್ ವೋಚರ್ ಸಿಗಲಿಲ್ಲ, ಯಾವುದೇ ವೆಲ್‌ನೆಸ್ ಕೂಪನ್ ಇರಲಿಲ್ಲ. ಎರಡು ಬಾರಿ ಬಳಸಿ ಮೂಲೆಯಲ್ಲಿಡುವ 'ವೆಲ್‌ಕಮ್ ಟು ದಿ ಟೀಮ್' ಮಗ್ ಕೂಡ ಇರಲಿಲ್ಲ. ಕೇವಲ ಒಂದು ಕಸದ ಚೀಲ ನನ್ನ ಡೆಸ್ಕ್ ಮೇಲೆ ನನಗಾಗಿ ಕಾಯುತ್ತಿತ್ತು," ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯವಾಗಿ ನೀಡುವ ಇತರೆ ಉಡುಗೊರೆಗಳಿಗಿಂತ ಈ ಕಸದ ಚೀಲವೇ ತನಗೆ ಅತಿ ಹೆಚ್ಚು ಉಪಯುಕ್ತವಾಯಿತು ಎಂದು ಮನೀಷಾ ಹೇಳಿದ್ದಾರೆ. ಅವರು ಇತ್ತೀಚೆಗಷ್ಟೇ ಹೊಸ ನಗರಕ್ಕೆ ಸ್ಥಳಾಂತರಗೊಂಡಿದ್ದು, ತಮ್ಮ ದಿನನಿತ್ಯದ ದಿನಚರಿಗೆ ಇನ್ನೂ ಹೊಂದಿಕೊಳ್ಳುತ್ತಿದ್ದರು. "ಹೊಸ ನಗರ, ಮನೆಗೆ ಸಹಾಯಕರ ಕೊರತೆ, ಸರಿಯಾದ ದಿನಚರಿ ಇಲ್ಲ, ನನ್ನ ವಸ್ತುಗಳನ್ನು ಇನ್ನೂ ಪೂರ್ಣವಾಗಿ ಜೋಡಿಸಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನನಗೆ ಸುವಾಸನೆ ಬೀರುವ ಕ್ಯಾಂಡಲ್‌ಗಿಂತ ಈ ಕಸದ ಚೀಲದ ಅಗತ್ಯವೇ ಹೆಚ್ಚಾಗಿತ್ತು," ಎಂದು ಅವರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಈ ಉಡುಗೊರೆಯು ಕಂಪನಿಯ ಸುಸ್ಥಿರತೆಯ ಮೌಲ್ಯಗಳಿಗೆ ತಕ್ಕಂತಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. "ಇದರಲ್ಲಿ ಯಾವುದೇ ಪ್ಲಾಸ್ಟಿಕ್ ಇಲ್ಲ, ಸೋರುವುದಿಲ್ಲ, ಹರಿದು ಹೋಗುವುದಿಲ್ಲ. ಪ್ರತಿ ಬಾರಿ ಕಸ ಹೊರಗೆ ಹಾಕುವಾಗಲೂ ನಾನೊಬ್ಬ ಕೆಟ್ಟ ವ್ಯಕ್ತಿ ಎಂಬ ಅಪರಾಧಿ ಮನೋಭಾವ ಮೂಡುವುದಿಲ್ಲ," ಎಂದಿದ್ದಾರೆ. ಇದನ್ನು ತಮಗೆ ಸಿಕ್ಕ "ಅತ್ಯಂತ ಆತ್ಮೀಯ ಹಾಗೂ ಪರಿಸರ ಸ್ನೇಹಿ ಸ್ವಾಗತ" ಎಂದು ಕರೆದಿರುವ ಮನೀಷಾ, ತನಗೆ ಪ್ರತಿ ತಿಂಗಳು ಇದನ್ನು ಪೂರೈಸಿದರೂ ಖುಷಿಯಿಂದ ಸ್ವೀಕರಿಸುವುದಾಗಿ ತಮಾಷೆಯಾಗಿ ಹೇಳಿದ್ದಾರೆ.

ನೆಟ್ಟಿಗರಿಂದ ಮೆಚ್ಚುಗೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪ್ರಾಯೋಗಿಕ ಐಡಿಯಾವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. "ನಾನು ಈ ಐಡಿಯಾವನ್ನು ಕಾಪಿ ಮಾಡುತ್ತಿದ್ದೇನೆ, ಎಚ್‌ಆರ್ (HR) ತಂಡಕ್ಕೆ ಅಭಿನಂದನೆಗಳು" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ಸುಸ್ಥಿರತೆಯನ್ನು ಕೇವಲ ಮಾರ್ಕೆಟಿಂಗ್ ತಂತ್ರವನ್ನಾಗಿ ಮಾಡದೆ, ಅದನ್ನು ಆಚರಣೆಗೆ ತಂದಿರುವುದು ನನಗೆ ತುಂಬಾ ಇಷ್ಟವಾಯಿತು" ಎಂದು ಬರೆದಿದ್ದಾರೆ. ಭಾಷಣಗಳನ್ನು ಬಿಟ್ಟು ನೇರವಾಗಿ ಸಮಸ್ಯೆಗೆ ಪರಿಹಾರ ಒದಗಿಸಿದ ಸ್ವಾಗತ ಕಿಟ್ ಇದಾಗಿದೆ ಎಂದು ಹಲವರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ, ಆರಂಭದಲ್ಲಿ ವಿಚಿತ್ರವೆನಿಸಿದ ಈ ಉಡುಗೊರೆ, ಇದೀಗ ಅನೇಕರಿಗೆ ಸ್ಫೂರ್ತಿಯಾಗಿದ್ದು, ಕಾರ್ಪೊರೇಟ್ ಉಡುಗೊರೆಗಳ ಪರಿಕಲ್ಪನೆಯನ್ನೇ ಬದಲಾಯಿಸುವ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+