ಮದುವೆಯಾಗಿದ್ದರೂ ನೀವು ಒಂಟಿತನದಿಂದ ಬಳಲುತ್ತಿದ್ದೀರಾ? ಇದರಿಂದ ಹೊರಬರಲು ಇಲ್ಲಿವೆ ಸೂಕ್ತ ಪರಿಹಾರಗಳು
ಹಲವರು ವಿವಾಹವಾಗದಿದ್ದರೂ ಯಾರ ಜೊತೆಯೂ ಬೆರೆಯದೆ ಒಂಟಿಯಾಗಿಯೇ ಇರಲು ಬಯಸುತ್ತಾರೆ. ಇದೊಂದು ವರ್ಗವಾದರೆ, ಮತ್ತೊಂದು ವರ್ಗ ಮದುವರೆಯಾಗಿದ್ದರೂ ಕೂಡ ಒಂಟಿತನದಿಂದ ನರಳಾಡುತ್ತಿರುತ್ತಾರೆ. ಸಮಾಜದಲ್ಲಿ ಇಂತಹವರ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ ಇವರನ್ನು ಕಾಣುವ ರೀತಿಯೇ ಬೇರೆ ಆಗಿರುತ್ತದೆ. ನೀವು ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದೀರಾ. ಹಾಗಾದರೆ ಈ ಸಮಸ್ಯೆಯಿಂದ ತಪ್ಪಿಸಿಕೊಂಡು ನೀವು ಒಟ್ಟಿಗೆ ಸಂತೋಷಕರವಾಗಿರಲು ಇಲ್ಲಿವೆ ಪರಿಹಾರ ಮಾರ್ಗಗಳು.
ಒಂಟಿತನಕ್ಕ ಪ್ರಮುಖ ಕಾರಣಗಳಿವು?
* ಒಂಟಿತನವು ವ್ಯಕ್ತಿನಿಷ್ಠ ಮನಸ್ಸಿನ ಸ್ಥಿತಿಯಾಗಿದ್ದು, ಆದರೆ ಇಂತಹವರು ಇತರ ಜನರಿಂದ ಸಂಪರ್ಕ ಕಡಿತಗೊಂಡಿರುತ್ತಾರೆ ಅಥವಾ ಪ್ರತ್ಯೇಕವಾಗಿರುತ್ತಾರೆ. ಕೆಲವು ಸಮೀಕ್ಷೆಗಳ ಪ್ರಕಾರ, ಹಲವರು ವಿವಾಹಿತರಾಗಿದ್ದರೂ ಒಂಟಿಯಾಗಿರುವುದು ಸಾಮಾನ್ಯವಾಗಿಬಿಟ್ಟಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ವಿವಾಹಿತರಲ್ಲಿ ಸುಮಾರು 33% ಜನರು ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

* ಮದುವೆಯಾಗಿರುವ ಬಹುತೇಕರು ಸಂಗಾತಿಯಿಂದ ದೂರವಿರಲು ಹಲವು ವಿಷಯಗಳನ್ನು ಅನುಮಾನದ ದೃಷ್ಟಿಯಿಂದ ಕೆದಕುವುದು ಅಥವಾ ಅವರೊಂದಿಗಿನ ಸಂವಹನವನ್ನು ನಿಲ್ಲಿಸಲು ಸಮಾಜಿಕ ಜಾಲತಣಗಳ ಮೊರೆ ಹೋಗುವುದು ಹೆಚ್ಚಾಗಿಬಿಟ್ಟಿದೆ. ಇಂಥವರು ವಿರಳವಾಗಿ ಅಥವಾ ಎಂದಿಗೂ ಲೈಂಗಿಕತೆಗೆ ಒಳಗಾಗಿರುವುದಿಲ್ಲ. ಇವರ ಸಂಬಂಧವು ಭಾವನಾತ್ಮಕ ಅನ್ಯೋನ್ಯತೆಯ ಕೊರತೆಯಿಂದ ಕೂಡಿರುತ್ತದೆ.
* ಅಲ್ಲದೆ ದೈಹಿಕ ಅನ್ಯೋನ್ಯತೆಯ ಕೊರತೆಯನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ಅಂಶಗಳು ನಿಮ್ಮ ದಾಂಪತ್ಯದಲ್ಲಿ ಒಂಟಿತನದ ಭಾವನೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಇದು ಸಂಬಂಧದಲ್ಲಿ ಒಬ್ಬ (ಪತ್ನಿ ಅಥವಾ ಪತ್ನಿ) ವ್ಯಕ್ತಿಯ ಮೇಲೆ ಮಾತ್ರ ಪರಿಣಾಮ ಬೀರಬಹುದು.
* ನೀವು ಒಂಟಿತನವನ್ನು ಅನುಭವಿಸುತ್ತಿದ್ದರೆ ಇದರಿಂದ ತಪ್ಪಿಸಿಕೊಂಡು ಜೊತೆಯಾಗಿರಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ತುಂಬಾ ಜನ ಮದುವೆಯಾಗಿದ್ದರೂ ಸಹ ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
* ಕುಟುಂಬ ಮತ್ತು ಕೆಲಸದ ಒತ್ತಡದಿಂದಾಗಿ ವಿವಾಹಿತ ದಂಪತಿಗಳು ದೂರವಾಗುವುದಕ್ಕೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಮಕ್ಕಳನ್ನು ನೋಡಿಕೊಳ್ಳುವುದು, ಕೆಲಸ ಮಾಡುವುದು ಮತ್ತು ಇತರ ಜವಾಬ್ದಾರಿಗಳಿಂದ ತುಂಬಿರುವ ಬಿಡುವಿಲ್ಲದ ವೇಳಾಪಟ್ಟಿಗಳೊಂದಿಗೆ ಇಬ್ಬರೂ ಹೆಣಗಾಡುತ್ತಿರುವಾಗ ಇಂತಹ ಒಂಟಿತನಕ್ಕೆ ಕಾರಣವಾಗಬಹುದು.
ದಾಂಪತ್ಯ ಜೀವನ ಗಟ್ಟಿಯಾಗಿರಬೇಕೆ?
* ಇನ್ನು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳದರೆ ಒಂಟಿತನವನ್ನು ತಪ್ಪಿಸಬಹುದಾಗಿದೆ. ಇದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಒಂದು ಗಂಟೆಯಾದರೂ ಊಟ ಆದ ನಂತರ ಅಥವಾ ಬೇರೆ ಸಮಯದಲ್ಲಾದರೂ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಅಲ್ಲದೆ ಆಗಾಗ ಜೊತೆಗೆ ಪ್ರಮಾಣ ಬೆಳೆಸುವುದು, ವೈಯಕ್ತಿಕ ಯಾವುದೇ ವಿಚಾರವಾದರೂ ಹಂಚಿಕೊಂಡರೆ ಅನುಮಾನಕ್ಕೆ ಆಸ್ಪದವಿರುವುದಿಲ್ಲ. ಈ ಮೂಲಕ ದಾಂಪತ್ಯ ಮತ್ತಷ್ಟು ಗಟ್ಟಿಯಾದಂತಾಗುತ್ತದೆ.
* ನೀವು ಏನನ್ನು ಅನುಭವಿಸುತ್ತಿದ್ದೀರಿ ಮತ್ತು ಏಕೆ ಎಂದು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವ ಮೂಲಕ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂವಹನ ಮಾಡಲು ಪ್ರಯತ್ನಿಸಿ. ಇದರಿಂದ ಉತ್ತಮ ಭಾವನೆಗಳು, ಕಾಳಜಿ, ಆಸೆ ಹೀಗೆ ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಲು ಸಹಕಾರಿಯಾಗುತ್ತದೆ.
* ನೀವು ಸಂಗಾತಿಯಿಂದ ದೂರ ಸರಿದಿದ್ದೀರಾ? ತುಂಬಾ ಸಮಯವನ್ನು ಕೊಟ್ಟಿದ್ದೀರಾ? ನಿಮ್ಮ ನಡುವೆ ಬಗೆಹರಿಯದ ಯಾವುದಾದರೂ ಸಮಸ್ಯೆಗಳಿವೆಯೇ? ಎಂಬ ಅಂಶಗಳನ್ನು ಗಮನಹರಿಸಬೇಕಾಗುತ್ತದೆ. ನಿಮ್ಮ ಭಾವನೆಗಳೊಂದಿಗೆ ಪ್ರಾಮಾಣಿಕವಾಗಿರಲು ಪ್ರಯತ್ನಿಸಿ. ಇದರಿಂದ ನಿಮಗೆ ಇಬ್ಬರ ನಡುವೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆಯುತ್ತದೆ.
* ನಿಮ್ಮ ಸಂಗಾತಿಯೊಂದೊಗೆ ವೈಯಕ್ತಿಕ ಆಲೋಚನೆಗಳನ್ನು ಚರ್ಚಿಸಿ. ನಂತರ, ಅವುಗಳನ್ನು ಪರಿಹರಿಸಲು ನೀವು ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಬಹುದು. ಅಲ್ಲದೆ ಅವರೊಂದಿಗೆ ದೈಹಿಕವಾಗಿ ಸಂಪರ್ಕ ಭಾವನೆಯನ್ನು ಭಯಸಿದರೆ, ಟಿವಿ ನೋಡುವಾಗ ಕೈಗಳನ್ನು ಹಿಡಿದುಕೊಳ್ಳುವ ಮೂಲಕ ಅಥವಾ ರಾತ್ರಿ ವೇಳೆ ಅವರ ಭುಜದ ಮೇಲೆ ನಿಮ್ಮ ತಲೆಯನ್ನು ಇಟ್ಟು ವಿಶ್ರಾಂತಿ ನೀಡುವ ಮೂಲಕ ಒಂಟಿತನವನ್ನು ಹೋಗಲಾಡಿಸಬಹುದು.
* ಪ್ರತಿದಿನ ಮಾಡುವ ಸಣ್ಣಪುಟ್ಟ ಕೆಲಸಗಳಿಗೂ ಧನ್ಯವಾದ ಹೇಳುವ ಮೂಲಕ ಅಥವಾ ಅವರ ಕಠಿಣ ಪರಿಶ್ರಮ ಮತ್ತು ಸಾಧನೆಗಳ ಬಗ್ಗೆ ನೀವು ಎಷ್ಟು ಹೆಮ್ಮೆಪಡುತ್ತೀರಿ ಎಂದು ಅವರಿಗೆ ಹೇಳಬಹುದು. ಇನ್ನು ನಿಮ್ಮಿಬ್ಬರ ನಡುವೆ ಭಾವನಾತ್ಮಕವಾಗಿ ಸಂಪರ್ಕ ಕಡಿತಗೊಂಡಿದ್ದರೆ, ಸಂಜೆ ವೇಳೆ ವಾಕ್ ಮಾಡುವಾಗ ನೀವೇ ಈ ಬಗ್ಗೆ ಚರ್ಚೆ ಮಾಡುವುದು ಉತ್ತಮ.
* ಪ್ರತಿ ಭಾನುವಾರ ಸಮಯ ಕಳೆಯಲು ನಿರ್ಧರಿಸಬಹುದು. ಈ ವೇಳೆ ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗೆ ಹೋಗುವುದು, ಚಲನಚಿತ್ರವನ್ನು ನೋಡಿ ಅಥವಾ ವಾಕ್ ಹೋಗುವುದವನ್ನು ಮಾಡುತ್ತೀರಿ. ನೀವು ಭಾವನಾತ್ಮಕವಾಗಿ ಸಂಪರ್ಕ ಕಡಿತಗೊಂಡಿರುವಂತೆ ಭಾವಿಸುತ್ತಿದ್ದರೆ, ಬಹುಶಃ ನೀವಿಬ್ಬರೂ ಪರಸ್ಪರ ನಿಜವಾದ ಸಂಭಾಷಣೆಗಳನ್ನು ನಡೆಸುವುದರ ಮೇಲೆ ಕೇಂದ್ರೀಕರಿಸಲು ಪ್ರತಿ ರಾತ್ರಿ ಊಟದ ಸಮಯದಲ್ಲಿ ಫೋನ್‌ಗಳನ್ನು ದೂರ ಇಡಬೇಕಾಗುತ್ತದೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಯುವಕ, ಯುವತಿಯರು ಸೇರಿದಂತೆ ಮದುವೆಯಾದ ದಂಪತಿಗಳು ಕೂಡ ಹೆಚ್ಚಾಗಿ ಸಾಮಾಜಿಕ ಜಾಲತಾನಗಳಲ್ಲೇ ಸಮಯವನ್ನು ಕಳೆಯುತ್ತಾರೆ. ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯೆತೆಯೂ ಹೆಚ್ಚಿರುತ್ತದೆ. ಆದ್ದರಿಂದ ಯಾರೇ ಆಗಲಿ ಮೊಬೈಲ್, ಟ್ಯಾಬ್‌ಗಳ ಜೊತೆ ಕಾಲ ಕಳೆಯುವ ಬದಲು ಕುಟುಂಬದೊಟ್ಟಿಗೆ ಬೆರೆಯಲು ಪ್ರಯತ್ನಿಸಿ. ಇದರಿಂದ ದಂಬಂಧಗಳು ಗಟ್ಟಿಯಾಗುವುದಲ್ಲದೆ, ಆಲೋಚನೆಗಳು ಕೂಡ ಒಂದೇ ಆಗಿರುತ್ತವೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ











Click it and Unblock the Notifications