ಬೇಸಿಗೆಯಲ್ಲಿ ನಿಂಬೆಹಣ್ಣಿನ ಜ್ಯೂಸ್ ಏಕೆ ಸೇವಿಸಬೇಕು ಗೊತ್ತಾ?
ತಲೆಸುಡುವ ಬಿಸಿಲಿಗೆ ಯಾವುದಾದರೊಂದು ತಣ್ಣಗಿನ ಜ್ಯೂಸ್ ಕುಡಿದು ದಾಹ ತಣಿಸಿಕೊಂಡು ಬಿಟ್ಟರೆ ಸಾಕಪ್ಪಾ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ಅದರಲ್ಲೂ ಇವತ್ತಿನ ದಿನಗಳಲ್ಲಿ ಹತ್ತಾರು ಬಗೆಯ ಜ್ಯೂಸ್ ಗಳು ಕೈಗೆಟುವಂತೆ ಇರುವುದರಿಂದ ನಾವು ದಾಹ ತಣಿಯಲು ಮತ್ತು ಬಾಯಿ ರುಚಿಗಾಗಿ ಹಲವು ಬಗೆಯ ಜ್ಯೂಸ್ ಗಳನ್ನು ಕುಡಿಯುತ್ತೇವೆಯೇ ವಿನಃ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿಯೇ ನಮಗೆ ಗೊತ್ತಿಲ್ಲದಂತೆ ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.
ಬೇಸಿಗೆಯಲ್ಲಿ ನಿಂಬೆಹಣ್ಣಿನ ಜ್ಯೂಸ್ ಕುಡಿಯಿರಿ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅವತ್ತಿನ ದಿನಗಳಲ್ಲಿ ಬೇಸಿಗೆಯ ದಿನಗಳಲ್ಲಿ ಯಾರಾದರೂ ಮನೆಗೆ ಬಂದರ ತಕ್ಷಣವೇ ಹಿತ್ತಲಿನಲ್ಲಿದ್ದ ನಿಂಬೆ ಗಿಡಗಳಿಂದ ಹಣ್ಣನ್ನು ತಂದು ಜ್ಯೂಸ್ ಮಾಡಿ ಕೊಡುತ್ತಿದ್ದರು. ಅವರು ನಿಂಬೆ ಹಣ್ಣನ್ನೇ ಏಕೆ ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದರು ಎಂದರೆ ಅದು ಕೇವಲ ನಮ್ಮ ದಾಹವನ್ನಷ್ಟೆ ತೀರಿಸುತ್ತಿರಲಿಲ್ಲ ಆರೋಗ್ಯವನ್ನು ಕಾಪಾಡುತ್ತಿತ್ತು ಎಂಬ ಕಾರಣಕ್ಕಾಗಿ.

ಇವತ್ತು ಮಾರುಕಟ್ಟೆಗೆ ಬಹಳ ಬಗೆಯ ಜ್ಯೂಸ್ ಗಳು ಬಂದಿವೆ. ಅವುಗಳನ್ನೇ ಜನರು ಕೂಡ ಇಷ್ಟಪಡುತ್ತಾರೆ. ಆದರೆ ಬೇಸಿಗೆಯ ದಿನಗಳಲ್ಲಿ ತಾಜಾ ಜ್ಯೂಸ್ ಗಳನ್ನು ಸೇವಿಸುವುದು ಒಳ್ಳೆಯದು. ಹೆಚ್ಚಿನವರು ಎಲ್ಲೆ ಹೋದರೂ ನಿಂಬೆ ಹಣ್ಣಿನ ಜ್ಯೂಸ್ ನ್ನೇ ಸೇವಿಸುತ್ತಾರೆ. ಏಕೆಂದರೆ ಅದರಲ್ಲಿರುವ ಆರೋಗ್ಯಕಾರಿ ಗುಣಗಳು ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂಬ ಸತ್ಯ ಅವರಿಗೆ ಗೊತ್ತಾಗಿದೆ.
ನಿಂಬೆಹಣ್ಣಿನ ಜ್ಯೂಸ್‌ನಿಂದ ಏನೆಲ್ಲಾ ಲಾಭ?
ಇಷ್ಟಕ್ಕೂ ಬೇಸಿಗೆಯಲ್ಲಿ ನಿಂಬೆಹಣ್ಣಿನ ಜ್ಯೂಸ್ ಸೇವಿಸುವುದರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನೋಡಿದ್ದೇ ಆದರೆ ಇದು ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಎಂದರೂ ತಪ್ಪಾಗಲಾರದು. ಬೇರೆಲ್ಲ ರೀತಿಯ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಬದಲಿಗೆ ನಿಂಬೆಹಣ್ಣಿನ ಜ್ಯೂಸ್ ಸೇವಿಸಿ ನೋಡಿ ಅದರ ಕರಾಮತ್ತು ಏನೆಂಬುದು ಗೊತ್ತಾಗಿ ಬಿಡುತ್ತದೆ. ನಿಂಬೆಹಣ್ಣಿನಲ್ಲಿ ದಾಹ ನೀಗಿಸುವ ಸಾಮರ್ಥ್ಯವಲ್ಲದೆ, ದೇಹಕ್ಕೆ ಪೋಷಕ ಶಕ್ತಿಯನ್ನು ಒದಗಿಸುವ ಪೋಷಕಾಂಶಗಳು ಕೂಡ ಇವೆ.

ಹಾಗಾದರೆ ನಿಂಬೆಹಣ್ಣಿನಲ್ಲಿ ಏನಿದೆ ಮತ್ತು ಅದು ಹೇಗೆ ನಮ್ಮ ಆರೋಗ್ಯಕ್ಕೆ ಸಹಕಾರಿ ಆಗಿದೆ ಎಂಬುದು ನೋಡಿದ್ದೇ ಆದರೆ ಇದರಲ್ಲಿ ಹಲವು ರೀತಿಯ ಆರೋಗ್ಯಕಾರಿ ಗುಣಗಳಿರುವುದು ತಿಳಿದು ಬರುತ್ತದೆ. ಅಷ್ಟೇ ಅಲ್ಲದೆ ವಿವಿಧ ರೋಗಗಳಿಗೆ ರಾಮಬಾಣವೂ ಹೌದು. ನಿಂಬೆ ಹಣ್ಣಿನ ರಸದಲ್ಲಿ ಪಚನಕ್ರಿಯೆ ಉತ್ತೇಜಿಸುವ ಮತ್ತು ದೇಹದ ಕೊಬ್ಬು ಕರಗಿಸುವ, ವಾಂತಿಯನ್ನು ನಿಯಂತ್ರಿಸುವ, ಹೀಗೆ ಹತ್ತು ಹಲವು ಗುಣಗಳಿವೆ. ಜತೆಗೆ ಕ್ರಿಮಿಗಳನ್ನು ನಾಶ ಮಾಡುವ ಶಕ್ತಿಯೂ ಇದೆ.
ನಿಂಬೆಹಣ್ಣಿನ ಜ್ಯೂಸ್‌ನಿಂದ ಬಳಲಿಕೆ ಮಾಯ
ಬಿಸಿಲಲ್ಲಿ ನಡೆದಾಡಿ, ಕೆಲಸ ಮಾಡಿ, ಸುಸ್ತಾಗಿದ್ದರೆ ನಿಂಬೆಹಣ್ಣಿನ ರಸದ ಪಾನಕ ಸೇವಿಸಿದರೆ ಬಳಲಿಕೆ ದೂರವಾಗುತ್ತದೆ. ಉರಿಮೂತ್ರದ ಸಮಸ್ಯೆಯಿಂದ ಬಳಲುವವರು ಒಂದು ಚಮಚ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಉರಿಮೂತ್ರದ ತೊಂದರೆ ಶಮನವಾಗುತ್ತದೆ. ಇದೆಲ್ಲದರ ನಡುವೆ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುವವರು ನಿಂಬೆ ರಸವನ್ನು ಸೀಗೆಕಾಯಿಪುಡಿಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಕಡಿಮೆಯಾಗುತ್ತದೆ. ಬರೀ ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಕೆಲವು ಸಮಯಗಳ ಬಳಿಕ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆಯಲ್ಲದೆ, ಉದುರುವುದು ಕಡಿಮೆಯಾಗುತ್ತದೆ.

ಅಜೀರ್ಣದ ಸಮಸ್ಯೆಯಿಂದ ಉಂಟಾಗುವ ಹುಳಿತೇಗು ಕಂಡು ಬಂದರೆ ದಿನಕ್ಕೆ ಎರಡು ಬಾರಿಯಂತೆ ಎರಡು ಚಮಚ ನಿಂಬೆರಸವನ್ನು ಸೇವಿಸಿ ನಿಯಂತ್ರಿಸಬಹುದಾಗಿದೆ. ಲೆಮನ್ ಟೀ ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ. ಮೂತ್ರವಿಸರ್ಜನೆ ಸುಲಭವಾಗಿ ಆಗಲು ಒಂದು ಲೋಟ ಎಳನೀರಿಗೆ ನಿಂಬೆ ರಸವನ್ನು ಬೆರೆಸಿ ಸೇವಿಸಬೇಕು. ನಿಂಬೆ ಹಣ್ಣಿನ ಸಿಪ್ಪೆಯನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ. ಚೇಳು ಕಡಿದ ಜಾಗಕ್ಕೆ ನಿಂಬೆ ರಸವನ್ನು ಹಾಕುವುದರಿಂದ ಉರಿ ಶಮನವಾಗಲು ಸಾಧ್ಯವಾಗುತ್ತದೆ.
ನಿಂಬೆ ಹಣ್ಣಿನ ಜ್ಯೂಸ್ ಮಾಡುವುದು ಸುಲಭ
ಒಂದು ಲೋಟ ಹಸುವಿನ ಹಾಲಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ನಿಂಬೆ ರಸದಲ್ಲಿ ಖನಿಜ, ಲವಣಗಳ ಸತ್ವ ಗುಣಗಳಿದ್ದು ರೋಗನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇಷ್ಟೆಲ್ಲ ಆರೋಗ್ಯ ಗುಣ ಹೊಂದಿರುವ ಬಗ್ಗೆ ತಿಳಿದ ಬಳಿಕ ನಿಂಬೆ ಜ್ಯೂಸ್ ಸೇವಿಸುವುದು ಒಳ್ಳೆಯದು ಎಂಬುದು ಎಲ್ಲರಿಗೂ ಮನದಟ್ಟಾಗುತ್ತದೆ.
ಇನ್ನೊಂದು ವಿಶೇಷತೆ ಏನೆಂದರೆ ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ತಯಾರಿಸುವ ವಿಧಾನವೂ ಸುಲಭದ್ದಾಗಿದೆ. ಕಡಿಮೆ ಅವಧಿಯಲ್ಲಿ ತಯಾರಿಸಬಹುದಾಗಿದೆ. ಹೊರಗೆ ಹೋದಾಗ ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆ ಜ್ಯೂಸ್ ಗಳನ್ನು ಕುಡಿಯಬೇಕಾಗಿ ಬರಬಹುದು. ಆದರೆ ಮನೆಯಲ್ಲಿದ್ದಾಗ ಸ್ವತಃ ತಾವೇ ನಿಂಬೆಹಣ್ಣಿನ ಜ್ಯೂಸ್ ತಯಾರಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications