Benefits of Clapping: ಆರತಿ ಮತ್ತು ಕೀರ್ತನೆ ವೇಳೆ ಜನರು ಏಕೆ ಚಪ್ಪಾಳೆ ತಟ್ಟುತ್ತಾರೆ? ಇಲ್ಲಿದೆ ಉತ್ತರ
ಆರತಿ ಅಥವಾ ಕೀರ್ತನೆಯ ಸಮಯದಲ್ಲಿ ಚಪ್ಪಾಳೆ ತಟ್ಟುವ ಪದ್ಧತಿ ಬಹಳ ಹಳೆಯದು. ಗ್ರಂಥಗಳ ಪ್ರಕಾರ ಕೀರ್ತನೆಯಲ್ಲಿ ಚಪ್ಪಾಳೆ ತಟ್ಟುವ ಅಭ್ಯಾಸವನ್ನು ಪ್ರಹ್ಲಾದ್ ದೇವ ಪ್ರಾರಂಭಿಸಿದರು. ಅವರು ದೇವರ ಪೂಜೆ ಮಾಡುವಾಗ ಜೋರಾಗಿ ನಾಮ ಸಂಕೀರ್ತನೆ ಮಾಡುತ್ತಿದ್ದರು. ಜೊತೆಗೆ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು.
ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ನಾವು ಎರಡೂ ಕೈಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟಿದಾಗ ಆತನ ಪಾಪಗಳು ಕೆಳಗೆ ಬೀಳುತ್ತವೆ ಅಂದರೆ ನಾಶವಾಗುತ್ತವೆ. ಹೀಗಾಗಿ ದೇವರ ಆರತಿ ಅಥವಾ ಕೀರ್ತನೆಯ ಸಮಯದಲ್ಲಿ ಚಪ್ಪಾಳೆ ತಟ್ಟುವುದು ಹೆಚ್ಚು ಮಹತ್ವದ್ದಾಗಿದೆ.

ಸನಾತನ ಧರ್ಮದ ಗ್ರಂಥಗಳಲ್ಲಿ ಸಂಕೀರ್ತನೆಗೆ ಹೆಚ್ಚಿನ ಶಕ್ತಿಯಿದೆ. ಹರಿನಾಮ ಸಂಕೀರ್ತನೆಯ ಮೂಲಕ ನಮ್ಮ ಕೈಯಲ್ಲಿರುವ ಗೆರೆಗಳು ಸಹ ಬದಲಾಗುತ್ತವೆ ಎಂದು ಬರೆಯಲಾಗಿದೆ. ನಾವು ಚಪ್ಪಾಳೆ ತಟ್ಟುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾತನಾಡಿದರೆ, ಆಕ್ಯುಪ್ರೆಶರ್ ಸಿದ್ಧಾಂತದ ಪ್ರಕಾರ, ಮಾನವನ ಕೈಗಳಲ್ಲಿ ದೇಹದ ಸಂಪೂರ್ಣ ಅಂಗಗಳ ಮೇಲೆ ಒತ್ತಡದ ಬಿಂದುಗಳಿವೆ.
ಅವುಗಳನ್ನು ಒತ್ತಿದಾಗ ರಕ್ತ ಮತ್ತು ಆಮ್ಲಜನಕದ ಹರಿವು ದೇಹದ ಭಾಗವನ್ನು ತಲುಪಲು ಸಾಧ್ಯವಾಗುತ್ತದೆ. ನಿಧಾನವಾಗಿ ದೇಹದ ಕೆಲ ರೋಗ ಗುಣವಾಗತೊಡಗುತ್ತವೆ. ಈ ಎಲ್ಲಾ ಒತ್ತಡದ ಬಿಂದುಗಳನ್ನು ಒತ್ತಲು ಸರಳವಾದ ಮಾರ್ಗವೆಂದರೆ ಚಪ್ಪಾಳೆ ಎಂದು ಹೇಳಲಾಗುತ್ತದೆ.
ಪೂಜೆಯಲ್ಲಿ ಚಪ್ಪಾಳೆ
ಪೂಜೆಯಲ್ಲಿ ಮೂರು ವಿಧದಲ್ಲಿ ಚಪ್ಪಾಳೆ ತಟ್ಟುತ್ತಾರೆ. ಬಲಗೈಯ ಎಲ್ಲಾ ನಾಲ್ಕು ಬೆರಳುಗಳನ್ನು ಎಡಗೈಯ ಅಂಗೈ ಮೇಲೆ ಬಲವಾಗಿ ಹೊಡೆದರೆ ಧ್ವನಿ ಜೋರಾಗಿ ಕೇಳಿ ಬರುತ್ತದೆ. ಈ ರೀತಿಯ ಚಪ್ಪಾಳೆಯಿಂದ ಶ್ವಾಸಕೋಶಗಳು, ಯಕೃತ್ತು, ಪಿತ್ತಕೋಶ, ಮೂತ್ರಪಿಂಡಗಳು, ಸಣ್ಣ ಕರುಳು ಮತ್ತು ದೊಡ್ಡ ಕರುಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಈ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಂಗೈ ಕೆಂಪಾಗುವವರೆಗೆ ಈ ರೀತಿಯ ಚಪ್ಪಾಳೆ ತಟ್ಟಬೇಕು.

ಇನ್ನೂ ಎರಡೂ ಕೈಗಳನ್ನು ನೇರವಾಗಿ ಕೂಡುವಂತೆ ಚಪ್ಪಾಳೆ ತಟ್ಟಲಾಗುತ್ತದೆ. ಜೊತೆಗೆ ಎಡಗೈನ ಎಲ್ಲಾ ನಾಲ್ಕು ಬೆರಳುಗಳನ್ನು ಬಲಗೈಯ ಅಂಗೈ ಮೇಲೆ ಬಲವಾಗಿ ಹೊಡೆಯಲಾಗುತ್ತದೆ. ಮಲಬದ್ಧತೆ, ಆಮ್ಲೀಯತೆ, ಮೂತ್ರ ಸೋಂಕು, ರಕ್ತಹೀನತೆ ಮತ್ತು ಉಸಿರಾಟದ ತೊಂದರೆಯಂತಹ ಕಾಯಿಲೆಗಳಲ್ಲಿ ಈ ರೀತಿಯ ಚಪ್ಪಾಳೆ ಪ್ರಯೋಜನಕಾರಿಯಾಗಿದೆ.
ಚಪ್ಪಾಳೆಯ ಆರೋಗ್ಯಕರ ಪ್ರಯೋಜನಗಳು
ಚಪ್ಪಾಳೆ ತಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜನಗೊಳಿಸುತ್ತದೆ. ಈ ಕ್ರಿಯೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುವುದು. ಬೆರಳಿನಲ್ಲಿ ಇರುವ ಶಕ್ತಿಯ ಚಕ್ರಗಳು ಕ್ರಿಯಾಶೀಲಗೊಳ್ಳುತ್ತವೆ. ದೇಹದಲ್ಲಿ ರಕ್ತ ಪರಿಚಲನೆಯು ವೃದ್ಧಿಯಾಗುವುದು. ವ್ಯಕ್ತಿ ಊಹಿಸಲಾಗದಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದು.
ಮಾನವನ ದೇಹವು ಹಲವಾರು ಶಕ್ತಿ ಬಿಂದುಗಳಿಂದ ಕೂಡಿದೆ. ಚಪ್ಪಾಳೆ ತಟ್ಟುವುದರಿಂದ ಅವು ಉತ್ತೇಜನಗೊಳ್ಳುತ್ತವೆ. ಎರಡು ಕೈಗಳನ್ನು ಸೇರಿಸಿ ಬಡಿದಾಗ 10 ರಿಂದ 15 ನಿಮಿಷಗಳಲ್ಲಿ ಚಕ್ರಗಳ ಮೂಲಕ ಶಕ್ತಿಗಳು ಹಾದುಹೋಗುತ್ತವೆ. ದೇಹದ ಶಕ್ತಿ ಕೇಂದ್ರಗಳು ಸಕ್ರಿಯಗೊಳ್ಳುತ್ತವೆ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳು ನೈಸರ್ಗಿಕವಾಗಿಯೇ ನಿವಾರಣೆಯಾಗುತ್ತವೆ. ಅಂತಹ ಒಂದು ವಿಶೇಷ ಶಕ್ತಿಯನ್ನು ಚಪ್ಪಾಳೆಯಿಂದ ದೊರೆಯುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.
ಚಪ್ಪಾಳೆ ತಟ್ಟುವುದರ ಲಾಭಗಳು
*ಮಾನಸಿಕ ಮತ್ತು ದೈಹಿಕ ಉತ್ತೇಜನ ದೊರೆಯುವುದು
*ಸಕಾರಾತ್ಮಕ ಭಾವನೆ ಮೂಡಿಸುವುದು
*ಸಂಪೂರ್ಣ ದೇಹವನ್ನು ಕ್ರಿಯಾಶೀಲ ಗೊಳಿಸುವುದು












Click it and Unblock the Notifications