Pomegranate: ಬೇಸಿಗೆಯ ದಾಹ ತಣಿಸುವ ದಾಳಿಂಬೆ..ಪ್ರಯೋಜನಗಳೇನು ಗೊತ್ತಾ?
ಬೇಸಿಗೆಯಲ್ಲಿ ಬಿಸಿಲ ಧಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲ್ ಆಗಿರುವುದರಿಂದ ಈ ಸಮಯದಲ್ಲಿ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕಾದ ಅನಿವಾರ್ಯತೆ ಇರುವುದರಿಂದ ಸ್ಪೈಸಿ ಆಹಾರಗಳ ಸೇವನೆ ಕಡಿಮೆ ಮಾಡಿ ಹಣ್ಣು ತರಕಾರಿಗಳ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಬಿಸಿಲ ಝಳಕ್ಕೆ ಹೊರಗೆ ಹೋದಾಗ ಅಥವಾ ಮನೆಯಲ್ಲಿದ್ದಾಗ ಬಾಯಾರಿಕೆಯಾಗುವುದು ಸಹಜ ಈ ವೇಳೆ ಎಳನೀರು ಅಥವಾ ಹಣ್ಣುಗಳಿಂದ ತಯಾರು ಮಾಡಿದ ಜ್ಯೂಸ್ ಸೇವಿಸುವುದು ಒಳ್ಳೆಯದು ಅದರಲ್ಲೂ ದಾಳಿಂಬೆ ಹಣ್ಣಿನ ಜ್ಯೂಸ್ ಇನ್ನಷ್ಟು ಹಿತಕಾರಿ. ಇದು ಬಾಯಾರಿಕೆ ತಡೆಯುವುದು ಮಾತ್ರವಲ್ಲದೆ, ದೇಹದ ಉಷ್ಣತೆಯನ್ನು ಸಮತೋಲನೆಯಲ್ಲಿಡುವ ಶಕ್ತಿಯನ್ನು ಹೊಂದಿದೆ.

ಹಣ್ಣುಗಳ ವಿಚಾರಕ್ಕೆ ಬಂದಾಗ ಕೆಲವು ಹಣ್ಣುಗಳು ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆಯಾದರೂ, ಮತ್ತೆ ಕೆಲವು ಹಣ್ಣುಗಳು ದುಬಾರಿಯಾಗಬಹುದು. ಆದರೂ ಅವುಗಳ ಆರೋಗ್ಯಕಾರಿ ಗುಣಗಳನ್ನು ಅರಿತು ಸೇವನೆ ಮಾಡಿದರೆ ಅದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ನೆರವಾಗುತ್ತದೆ.
ಮನುಷ್ಯನ ದೇಹಕ್ಕೆ ಪೋಷಕ ಶಕ್ತಿ
ಸಾಮಾನ್ಯವಾಗಿ ಎಲ್ಲ ಹಣ್ಣುಗಳಲ್ಲೂ ಮನುಷ್ಯನ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ಕೊಡುವ ಜೀವಸತ್ವಗಳಿರುತ್ತವೆ. ಆದರೂ ಬೇಸಿಗೆಯಲ್ಲಿ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಹಲವು ಪ್ರಯೋಜನಗಳಿವೆ. ಈ ದಾಳಿಂಬೆಯು ಹಣ್ಣುಗಳಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ಹಣ್ಣಾಗಿದ್ದು ನಾಲಿಗೆಗೆ ರುಚಿ ಮಾತ್ರವಲ್ಲದೆ ದೇಹಕ್ಕೆ ಶಕ್ತಿಕೊಡುವ ಗುಣವನ್ನು ಹೊಂದಿದೆ. ಹೀಗಾಗಿ ಇದನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ.

ದಾಳಿಂಬೆಯನ್ನು ಹಣ್ಣಿನ ರೂಪದಲ್ಲಿ ನೇರವಾಗಿ ಸೇವಿಸಬಹುದಲ್ಲದೆ, ಬೇರೆ ಬೇರೆ ತಿನಿಸಿನಲ್ಲಿಯೂ ಬಳಕೆ ಮಾಡಬಹುದಾಗಿದೆ. ಇನ್ನು ದಾಳಿಂಬೆಯನ್ನು ನಾವು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಏನೇನು ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ನೋಡಿದ್ದೇ ಆದರೆ ಇದರಲ್ಲಿ ಹಲವಷ್ಟು ಔಷಧೀಯ ಗುಣಗಳು ಇರುವುದು ಕಂಡು ಬಂದಿದ್ದು, ಅವು ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುವುದರೊಂದಿಗೆ ಆರೋಗ್ಯವಾಗಿಡಲು ಸಹಕಾರಿಯಾಗಿದೆ.
ಇಡೀ ಗಿಡವೇ ಔಷಧೀಯ ಗಣಿ
ಮಾರುಕಟ್ಟೆಯಲ್ಲಿ ದೊರೆಯುವ ದಾಳಿಂಬೆಗೆ ಬಹಳಷ್ಟು ಬೇಡಿಕೆಯಿದ್ದು, ಇದನ್ನು ಎಲ್ಲ ಕಡೆಗಳಲ್ಲಿ ಬೆಳೆಯುವುದು ಸಾಧ್ಯವಾಗದ ಮಾತು. ಸಮಶೀತೋಷ್ಣ ವಾತಾವರಣ ಶೀತವಲಯಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹಿಮಾಚಲಪ್ರದೇಶ, ಜಮ್ಮು ಇಲ್ಲಿನ ಕಾಡುಗಳಲ್ಲಿ ಕಾಡು ದಾಳಿಂಬೆಗಳು ಹೆಚ್ಚಾಗಿ ಕಂಡು ಬರುತ್ತವೆ.
ಈಗಾಗಲೇ ಹಲವು ರೈತರು ದಾಳಿಂಬೆ ಬೆಳೆದು ಬದುಕು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಹಲವು ತಳಿಗಳು ಬಂದಿವೆ. ಬಹಳಷ್ಟು ಕಡೆಗಳಲ್ಲಿ ತಮ್ಮ ಮನೆಯ ಹಿತ್ತಲಲ್ಲಿ ಗಿಡನೆಟ್ಟು ಬೆಳೆಸುವುದು ಕೂಡ ಕಾಣಸಿಗುತ್ತದೆ. ದಾಳಿಂಬೆ ವಾಣಿಜ್ಯಿಕವಾಗಿ ಆದಾಯ ತರುವುದನ್ನು ಆಚೆಗಿಟ್ಟು ಆರೋಗ್ಯದ ದೃಷ್ಠಿಯಿಂದ ಸಿಗುವ ಲಾಭವನ್ನು ಅರಿತರೆ ಮನೆ ಪಕ್ಕದಲ್ಲೊಂದು ಗಿಡನೆಡೋಣ ಎಂದೆನಿಸದಿರದು. ಕಾರಣ ಇದರ ಹಣ್ಣು ಮಾತ್ರವಲ್ಲದೆ, ಮರದ ಬೇರಿನಿಂದ ಹಿಡಿದು ತೊಗಟೆ, ಹೂ, ಬೀಜ ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದ್ದು ಬಹು ಉಪಯುಕ್ತವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ?
ನಮ್ಮ ಆರೋಗ್ಯಕ್ಕೆ ದಾಳಿಂಬೆ ಹೇಗೆ ಉಪಯುಕ್ತವಾಗಿದೆ? ಇದರಲ್ಲಿ ಏನೆಲ್ಲ ಔಷಧೀಯ ಗುಣಗಳಿವೆ ಎಂಬುದನ್ನು ನೋಡುವುದಾದರೆ ದೊಡ್ಡದೊಂದು ಪಟ್ಟಿಯೇ ಸಿಕ್ಕಿ ಬಿಡುತ್ತದೆ. ಅದರ ಬಗ್ಗೆ ನೋಡುವುದಾದರೆ, ದಾಳಿಂಬೆ ರಸವನ್ನು ಸೇವಿಸುವುದರಿಂದ ಅಮಶಂಕೆಯನ್ನು ತಡೆಯಬಹುದಾಗಿದೆ. ಗಿಡದ ತೊಗಟೆಯ ಕಷಾಯಕ್ಕೆ ಚಿಟಿಕೆ ಉಪ್ಪು ಬೆರೆಸಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.
ಗಿಡದ ಚಿಗುರು ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಅಗೆಯುವುದರಿಂದ ವಸಡಿನಿಂದ ರಕ್ತ ಬರುವುದನ್ನು ತಡೆಯಲು ಸಾಧ್ಯವಿದೆ. ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿ ಅದರೊಂದಿಗೆ ಸ್ವಲ್ಪ ಕರಿಮೆಣಸು, ಉಪ್ಪು ಬೆರೆಸಿ ನುಣ್ಣಗೆ ಪುಡಿ ಮಾಡಿ ಆ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ಹೊಳಪು ಬರುತ್ತದೆ. ಜತೆಗೆ ದೃಢತ್ವಕ್ಕೆ ಸಹಕಾರಿಯಾಗುತ್ತದೆ.
ದಾಹ ತಣಿಸುವಲ್ಲಿ ದಾಳಿಂಬೆ ರಾಮಬಾಣ
ದಾಳಿಂಬೆ ಹಣ್ಣು ಸೇವಿಸುವುದರಿಂದ ವಿಷಮ ಶೀತ ಜ್ವರ, ಅಸ್ತಮಾ, ಮಾನಸಿಕ ಒತ್ತಡ ಹಾಗೂ ನರಗಳ ದೌರ್ಬಲ್ಯದಿಂದ ಉಂಟಾಗುವ ತಲೆನೋವು ಕಡಿಮೆಯಾಗುತ್ತದೆ. ಇದು ಪಿತ್ತಶಮನ ಗುಣ ಹೊಂದಿದ್ದು, ಬಾಯಾರಿಕೆಯನ್ನು ನೀಗಿಸುವಲ್ಲಿ ಮತ್ತು ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ. ರಸದೊಂದಿಗೆ ಅಷ್ಟೇ ಪ್ರಮಾಣದ ಜೇನು ಬೆರೆಸಿ ಸೇವಿಸಿದ್ದೇ ಆದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಬೇಸಿಗೆಯಲ್ಲಿ ಆಗುವ ಬಾಯಾರಿಕೆ ತಡೆಗೆ ದಾಳಿಂಬೆ ರಸದಿಂದ ಮಾಡಿದ ಪಾನೀಯ ಉತ್ತಮವಾಗಿದ್ದು, ಬಾಯಾರಿಕೆ ನೀಗಿಸಿ ದೇಹವನ್ನು ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆಯ ಬೀಜದಲ್ಲಿ ಜಠರೋತ್ತೇಜಕ ಗುಣವಿದ್ದು, ಬೀಜದ ಪುಡಿಯೊಂದಿಗೆ ಸ್ವಲ್ಪ ಜೇನು ಸೇರಿಸಿ ಸೇವಿಸಿದರೆ ಅತಿಸಾರವನ್ನು ನಿಯಂತ್ರಿಸಬಹುದು.
ಮೂತ್ರದ ಕಲ್ಲು ಕರಗಿಸುವಲ್ಲಿ ಸಹಕಾರಿ
ಒಂದು ಚಮಚದಷ್ಟು ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ನಂತರ ಒಂದು ಲೋಟದ ತುಂಬಾ ಹುರುಳಿ ಕಾಳಿನ ಸೂಪ್ ನ್ನು ತೆಗೆದುಕೊಂಡು ಎರಡನ್ನು ಬೆರೆಸಿ ಕುಡಿಯುವುದರಿಂದ ಮೂತ್ರಕೋಶದ ಮತ್ತು ಮೂತ್ರ ಜನಕಾಂಗಗಳಲ್ಲಿ ಸಿಕ್ಕಿ ಹಾಕಿಕೊಂಡ ಕಲ್ಲುಗಳು ಕರಗುತ್ತವೆ ಎಂದು ಹೇಳಲಾಗಿದೆ.
ದಾಳಿಂಬೆ ಹಣ್ಣಿನ ಒಳಗಡೆ ರಸ ತುಂಬಿದ ಕೆಂಪು ಗುಲಾಬಿ ಹಳದಿ ಬಿಳಿಯ ಸಿಹಿ ಒಗರು ಹುಳಿ ರುಚಿಯ ತಿರುಳಿನ ಬೀಜಗಳನ್ನು ಒಣಗಿಸಿ ಅನಾರ್ ದಾನ್ ತಯಾರಿಸುತ್ತಾರೆ ಇದು ರುಚಿಕಾರಕ ಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಹೆಚ್ಚಾಗಿ ಅಡುಗೆಗಳಿಗೆ ಹುಳಿಯ ರುಚಿ ಕೊಡಲು ಬಳಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ದಾಳಿಂಬೆ ಆರೋಗ್ಯದ ದೃಷ್ಠಿಯಿಂದ ಹಲವು ರೀತಿಯಲ್ಲಿ ಉಪಕಾರಿಯಾಗಿದ್ದು, ಅದನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನವಾಗಿದೆ.
-
ವಾಸ್ತು ಪ್ರಕಾರ ಖಾಲಿ ಜಾಗ ಬಳಕೆ ಹೇಗೆ? ತಪ್ಪು ಮಾಡಿದರೆ ಕಷ್ಟಗಳು ಖಚಿತ -
ನಿಮ್ಮ ಮನೆಯ ವಾಸ್ತು ಸರಿಯಿದೆಯೇ? ಶಾಂತಿ ಮತ್ತು ಪ್ರಗತಿಗಾಗಿ ಇಲ್ಲಿವೆ ಪರಿಹಾರಗಳು -
Vastu Alert: ಹಳೆಯ ಬಾವಿ ಮೇಲೆ ಮನೆ ಕಟ್ಟಿದ್ರೆ ಏನಾಗುತ್ತದೆ? ಇಲ್ಲಿದೆ ವಾಸ್ತು ಸತ್ಯಗಳು -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ












Click it and Unblock the Notifications