Vastu Tips For Money: ಹಣದ ಸಮಸ್ಯೆಗಳಿಗೆ ಅಂತ್ಯ ಬೇಕೇ? ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ಲವಂಗ ಹಾಕಿ ಈ ಸ್ಥಳದಲ್ಲಿ ಇರಿಸಿ!
ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಪ್ರಮುಖ ಅಂಶವಾಗಿದೆ. ಉಪ್ಪಿಲ್ಲದೆ ಯಾವ ಊಟವೂ ಪೂರ್ಣವಾಗುವುದಿಲ್ಲ. ಆದರೆ ಈ ಉಪ್ಪು ವಾಸ್ತು ಶಾಸ್ತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪು ಮನೆಯಲ್ಲಿ ಸಂಚರಿಸುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ ಮನೆಯಲ್ಲಿ ವಾಸ್ತು ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಉಪ್ಪಿನ ನಂತರ ಲವಂಗವು ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ತೊಂದು ಅಂಶವಾಗಿದೆ. ಈ ಲವಂಗವು ಪರಿಮಳಯುಕ್ತವಾದ ಪದಾರ್ಥ. ಲಕ್ಷ್ಮಿ ದೇವಿಯು ಈ ಸಿಹಿ ವಾಸನೆಯ ವಸ್ತುಗಳಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
ಈ ಎರಡೂ ವಸ್ತುಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮನೆಯಲ್ಲಿನ ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತವೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಾಗಾದರೆ ಉಪ್ಪು ಮತ್ತು ಲವಂಕವನ್ನು ಬಳಸಿ ಹಣದ ಸಮಸ್ಯೆಗಳಿಗೆ ಅಂತ್ಯಗೊಳಿಸುವುದು ಹೇಗೆ ಎಂದು ತಿಳಿಯೋಣ.
ಉಪ್ಪು-ಲವಂಗ ಪರಿಹಾರ
ವಾಸ್ತು ಶಾಸ್ತ್ರದ ಪ್ರಕಾರ ಗಾಜಿನ ಬಟ್ಟಲಿಗೆ ಕಲ್ಲು ಉಪ್ಪನ್ನು ತುಂಬಿ ಅದರಲ್ಲಿ 4-5 ಲವಂಗ ಹಾಕಿ ಮನೆಯ ಯಾವುದೋ ಮೂಲೆಯಲ್ಲಿ ಇಡಿ. ಹೀಗೆ ಇಟ್ಟರೆ ಮನೆಯಲ್ಲಿ ಹೆಚ್ಚು ಹಣ ಸಂಗ್ರಹವಾಗಲು ಶುರುವಾಗುತ್ತದೆ ಮತ್ತು ಮನೆಯೂ ಸುಭಿಕ್ಷವಾಗಿರುತ್ತದೆ. ಮನೆಯಲ್ಲಿ ಹಣದ ಕೊರತೆಯಾದರೆ ಅದು ಕೂಡ ದೂರವಾಗುತ್ತದೆ. ಮಾತ್ರವಲ್ಲದೆ ಇದು ಮನೆಗೆ ಉತ್ತಮ ವಾಸನೆಯನ್ನು ನೀಡುತ್ತದೆ. ಇದರಿಂದ ಮನೆ ಶಾಂತ ಮತ್ತು ಸಂತೋಷದಿಂದ ಕೂಡಿರುತ್ತದೆ.

ಇದಲ್ಲದೆ, ನೀರಿಗೆ ಸ್ವಲ್ಪ ಉಪ್ಪು ಮತ್ತು ಲವಂಗವನ್ನು ಸೇರಿಸಿ ಆ ನೀರನ್ನು ಮನೆಯಾದ್ಯಂತ ಸಿಂಪಡಿಸಿ. ಹೀಗೆ ಸಿಂಪರಣೆ ಮಾಡಿದರೆ ಮನೆಯಲ್ಲಿ ಅದು ಸುವಾಸನೆ ಹರಡುತ್ತದೆ. ಹಾಗೆಯೇ ಮನೆಯ ಶೌಚಾಲಯದಲ್ಲಿ ವಾಸ್ತು ದೋಷವಿದ್ದಲ್ಲಿ ಗಾಜಿನ ಲೋಟದಲ್ಲಿ ಕಲ್ಲು ಉಪ್ಪನ್ನು ತುಂಬಿ ಅದನ್ನು ಯಾರೂ ಮುಟ್ಟದ ಜಾಗದಲ್ಲಿ ಇಟ್ಟು ಕೆಲವು ದಿನಗಳಿಗೊಮ್ಮೆ ಉಪ್ಪನ್ನು ಬದಲಾಯಿಸಿ. ಮನೆಯಲ್ಲಿ ಹಣದ ಸಮಸ್ಯೆ ಗಂಭೀರವಾಗಿದ್ದರೆ ಗಾಜಿನ ಬಟ್ಟಲಿಗೆ 2 ಚಮಚ ಕಲ್ಲು ಉಪ್ಪನ್ನು ಹಾಕಿ 4 ಲವಂಗವನ್ನು ಹಾಕಿ ಮನೆಯ ಮೂಲೆಯಲ್ಲಿ ಯಾರಿಗೂ ಕಾಣದಂತೆ ಇಡಿ. ಹೀಗೆ ಮಾಡಿದರೆ ಮನೆಯಲ್ಲಿನ ಹಣದ ಸಮಸ್ಯೆಗಳು ಮುಗಿದು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
ಕಲ್ಲು ಉಪ್ಪಿನಿಂದ ನಿಮ್ಮ ಮನೆಯ ಸ್ವಚ್ಛತೆ
ಮನೆಯನ್ನು ಸ್ವಚ್ಛಗೊಳಿಸುವಾಗ 1 ಚಮಚ ಕಲ್ಲು ಉಪ್ಪನ್ನು ನೀರಿಗೆ ಬೆರೆಸಿ ಆ ನೀರನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ವಾರಕ್ಕೊಮ್ಮೆ ಉಪ್ಪು ನೀರಿನಿಂದ ಮನೆಯನ್ನು ಶುಚಿಗೊಳಿಸಿದರೆ, ಮನೆಯಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು ದೂರವಾಗುತ್ತವೆ.
ಉಪ್ಪು ನೀರಿನ ಸ್ನಾನ
ನಿಮ್ಮ ಸುತ್ತ ನಕಾರಾತ್ಮಕ ಶಕ್ತಿಯ ಭಾವನೆ ಇದ್ದರೆ, ನಿಮ್ಮ ಸ್ನಾನದ ನೀರಿನಲ್ಲಿ 1 ಚಮಚ ಕಲ್ಲು ಉಪ್ಪನ್ನು ಸೇರಿಸಿ ಪ್ರತಿದಿನ ಸ್ನಾನ ಮಾಡಿ. ಹೀಗೆ ಕನಿಷ್ಠ 21 ದಿನಗಳ ಕಾಲ ನಿರಂತರವಾಗಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲಾ ಋಣಾತ್ಮಕ ಶಕ್ತಿಗಳು ಹೊರಹೋಗುತ್ತವೆ. ನೀವು ಉಲ್ಲಾಸವನ್ನು ಅನುಭವಿಸುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications